For Quick Alerts
ALLOW NOTIFICATIONS  
For Daily Alerts

ಸೌಂದರ್ಯದ ವಿಷಯದಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ

By Hemanth
|

ಚರ್ಮದ ಸಮಸ್ಯೆಯಿಂದ ಹೊರತಾಗಿರುವವರು ಇಲ್ಲವೆನ್ನಬಹುದು. ಇಂದಿನ ದಿನಗಳಲ್ಲಿ ಅತಿಯಾದ ಕಲ್ಮಷ, ಧೂಳು ಮತ್ತು ಸೂರ್ಯನ ಬಿಸಿಲಿಗೆ ಅತಿಯಾಗಿ ಮೈಯೊಡ್ಡುವ ಕಾರಣದಿಂದ ಮೊಡವೆ, ಕಲೆ, ಬೊಕ್ಕೆಗಳು ಇತ್ಯಾದಿ ಸಮಸ್ಯೆ ಕಾಣಿಸಿಕೊಳ್ಳುವುದು. ಅನುವಂಶೀಯತೆ ಮತ್ತು ಹಾರ್ಮೋನು ಅಸಮತೋಲನದಿಂದಲೂ ಹೀಗೆ ಆಗುವುದಿದೆ. ಇದಕ್ಕಾಗಿ ಹಲವಾರು ರೀತಿಯ ಮನೆಮದ್ದುಗಳು ಕ್ರೀಮ್ ಗಳನ್ನು ಬಳಸುತ್ತೀರಿ.

ಆದರೆ ಮೊಡವೆ ಹಾಗೂ ಇತರ ಸಮಸ್ಯೆಗಳು ನಿಮ್ಮಿಂದಾಗಿ ಬಂದಿರುವುದು ಎಂದು ನಿಮ್ಮ ಅರಿವಿಗೆ ಬಂದಿರುವುದಿಲ್ಲ. ಹೌದು, ತ್ವಚೆಯ ಆರೈಕೆಯಲ್ಲಿ ಮಾಡುವಂತಹ ಕೆಲವೊಂದು ತಪ್ಪುಗಳಿಂದಾಗಿ ಚರ್ಮಕ್ಕೆ ಹಾನಿ ಉಂಟಾಗುವುದು. ಚರ್ಮದ ಆರೈಕೆಯಲ್ಲಿ ಮಾಡುವಂತಹ ತಪ್ಪುಗಳು ನಿಮಗೆ ದೀರ್ಘ ಸಮಯಕ್ಕೆ ತೊಂದರೆ ಉಂಟು ಮಾಡಬಹುದು. ಈ ಸಾಮಾನ್ಯ ತಪ್ಪುಗಳು ಯಾವುದು ಎಂದು ನೀವು ಲೇಖನದ ಮೂಲಕ ತಿಳಿದುಕೊಳ್ಳಿ....

ಮೊಡವೆಗಳನ್ನು ಒಡೆಯುವುದು

ಮೊಡವೆಗಳನ್ನು ಒಡೆಯುವುದು

ಮುಖದಲ್ಲಿ ಮೊಡವೆ ಕಂಡ ತಕ್ಷಣ ನಮ್ಮ ಕೈಯು ಅದರೆಡೆ ಹೋಗಿ ಅದನ್ನು ಒಡೆದು ಹಾಕುವುದು ಪ್ರತಿಯೊಬ್ಬರು ಮಾಡುವಂತಹ ಸಾಮಾನ್ಯ ಪ್ರಕ್ರಿಯೆ. ಆದರೆ ಇದು ದೊಡ್ಡ ಸಮಸ್ಯೆ ಉಂಟು ಮಾಡಲಿದೆ. ಯಾಕೆಂದರೆ ನೀವು ಮೊಡವೆಗಳನ್ನು ಒಡೆದಾಗ ಅದು ಮೊದಲ ಸಲ ಮಾಯವಾಗಬಹುದು. ಆದರೆ ಕಪ್ಪು ಕಲೆಗಳು ಮತ್ತು ಗುರುತನ್ನು ಚರ್ಮದಲ್ಲಿ ಹಾಗೆ ಬಿಡುವುದು. ಇದರಿಂದ ಮುಂದಿನ ಸಲ ಮೊಡವೆ ಒಡೆಯುವ ಮೊದಲು ಎಚ್ಚರ.

ಮೊಡವೆಗಳನ್ನು ಒಡೆಯುವುದು

ಮೊಡವೆಗಳನ್ನು ಒಡೆಯುವುದು

ದಿನಪೂರ್ತಿ ಕೆಲಸ ಮಾಡಿ ಬಳಲಿರುವ ಕಾರಣದಿಂದ ರಾತ್ರಿ ಮನೆಗೆ ಬಂದು ಊಟ ಮಾಡಿ ಮಲಗಿಬಿಡುತ್ತೇವೆ. ಆದರ ಮುಖಕ್ಕೆ ಹಾಕಿರುವ ಮೇಕಪ್ ಹಾಗೆ ಇರುವುದು. ಮೇಕಪ್ ನಿಂದ ಮುಖದಲ್ಲಿ ಹೆಚ್ಚಿನ ಎಣ್ಣೆ ಉತ್ಪತ್ತಿಯಾಗುವುದು ಮತ್ತು ಇದರಿಂದ ಚರ್ಮದಲ್ಲಿ ಜಿಡ್ಡಿನಿಂದ ಕೂಡಿರುವುದು. ಇದರಿಂದ ಚರ್ಮದಲ್ಲಿ ಉರಿಯೂತ ಉಂಟಾಗಿ ಅದರಿಂದ ಮೊಡವೆಗಳು ಕಾಣಿಸಿಕೊಳ್ಳಬಹುದು. ಇದರಿಂದ ಮಲಗುವ ಮೊದಲು ಮೇಕಪ್ ತೆಗೆಯಲು ಮರೆಯಬೇಡಿ.

ಸರಿಯಾಗಿ ನೀರು ಕುಡಿಯದೆ ಇರುವುದು

ಸರಿಯಾಗಿ ನೀರು ಕುಡಿಯದೆ ಇರುವುದು

ನಮ್ಮ ದೇಹವನ್ನು ತೇವಾಂಶ ಮತ್ತು ಮೊಶ್ಚಿರೈಸ್ ಆಗಿಡಲು ನೀರು ಅತೀ ಅಗತ್ಯ. ನಿರ್ಜಲೀಕರಣಗೊಂಡಿರುವ ಚರ್ಮವು ತುಂಬಾ ನಿಸ್ತೇಜ, ನೆರಿಗೆ ಮೂಡುವ ಮತ್ತು ಮೊಡವೆ ಉಂಟುಮಾಡುವುದು. ಇದರಿಂದಾಗಿ ಒಣ ಚರ್ಮ ಮತ್ತು ನೆರಿಗೆ ಮೂಡುವ ಚರ್ಮ ತಡೆಯಲು ನೀವು ಆದಷ್ಟು ನೀರು ಸೇವಿಸಿ ಚರ್ಮವನ್ನು ತೇವಾಂಶದಿಂದ ಇಡಿ.

ಅತಿಯಾಗಿ ಕಿತ್ತುಹಾಕುವುದು

ಅತಿಯಾಗಿ ಕಿತ್ತುಹಾಕುವುದು

ಸ್ಕ್ರಬ್ ಮಾಡುವುದರಿಂದ ಸತ್ತ ಚರ್ಮಗಳನ್ನು ತೆಗೆದುಹಾಕಿ ಅದರಿಂದ ನಮ್ಮ ಚರ್ಮವು ಸುಂದರ ಹಾಗೂ ಕಾಂತಿಯುತವಾಗಿ ಕಾಣುವುದು. ಆದರೆ ಅತಿಯಾಗಿ ಸ್ಕ್ರಬ್ ಮಾಡುವುದರಿಂದ ಚರ್ಮಕ್ಕೆ ಹಾನಿಯಾಗಬಹುದು. ವಾರದಲ್ಲಿ ಒಂದು ಅಥವಾ ಎರಡು ಸಲ ಮಾತ್ರ ಸ್ಕ್ರಬ್ ಮಾಡಿ. ಇದಕ್ಕಾಗಿ ಮನೆಯಲ್ಲೇ ತಯಾರಿಸಿದ ಸ್ಕ್ರಬ್ ಬಳಸಿ. ಸಕ್ಕರೆ ಸ್ಕ್ರಬ್ ಒಳ್ಳೆಯದು.

ಹೇಗೆ ಮಾಡುವುದು

ಹೇಗೆ ಮಾಡುವುದು

ಇದು ತುಂಬಾ ಸುಲಭವಾದ ಸ್ಕ್ರಬ್ ತಯಾರಿ. ಇದಕ್ಕಾಗಿ ಒಂದು ಚಮಚ ಸಕ್ಕರೆ, 1-2 ಚಮಚ ಲಿಂಬೆರಸ ಅಥವಾ ಕಿತ್ತಳೆ ರಸ ತೆಗೆದುಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ವೃತ್ತಾಕಾರದಲ್ಲಿ ಮುಖದ ಮೇಲೆ ಸ್ಕ್ರಬ್ ಮಾಡಿ. ತಣ್ಣೀರಿನಿಂದ ಮುಖ ತೊಳೆಯಿರಿ. ವಾರದಲ್ಲಿ ಒಂದು ಸಲ ಹೀಗೆ ಮಾಡಿ.

ಸರಿಯಾಗಿ ನಿದ್ರೆ ಮಾಡದೇ ಇರುವುದು

ಸರಿಯಾಗಿ ನಿದ್ರೆ ಮಾಡದೇ ಇರುವುದು

ರಾತ್ರಿಯಿಡಿ ನಿದ್ರೆ ಬಿಡುವವರು ಇದನ್ನು ಗಮನಿಸಬೇಕು. ಸರಿಯಾಗಿ ನಿದ್ರೆ ಮಾಡದೆ ಇದ್ದರೆ ಆಗ ಚರ್ಮಕ್ಕೆ ಸರಿಯಾಗಿ ವಿಶ್ರಾಂತಿ ಪಡೆಯಲು ಸಮಯ ಸಿಗುವುದಿಲ್ಲ. ನಿದ್ರೆ ಸರಿಯಾಗಿರದೆ ಇದ್ದರೆ ಆಗ ಚರ್ಮದ ರಂಧ್ರಗಳು ಮುಚ್ಚಿ ಹೋಗುವುದು. ಇದರಿಂದಾಗಿ ಮೊಡವೆಗಳು ಮೂಡುವುದು. ಇದರಿಂದ ನೀವು ದಿನದಲ್ಲಿ 7-8 ಗಂಟೆ ಸರಿಯಾಗಿ ನಿದ್ರೆ ಮಾಡಿ.

ಸ್ವಚ್ಛವಿಲ್ಲದ ಕನ್ನಡಕಗಳನ್ನು ಧರಿಸುವುದು

ಸ್ವಚ್ಛವಿಲ್ಲದ ಕನ್ನಡಕಗಳನ್ನು ಧರಿಸುವುದು

ನೀವು ಕನ್ನಡಕ ಧರಿಸುತ್ತಾ ಇದ್ದರೆ ಅದು ಸ್ವಚ್ಛವಾಗಿರಬೇಕೆಂದು ನೆನಪಿಟ್ಟುಕೊಳ್ಳಿ. ಅದು ಸ್ವಚ್ಛವಾಗಿಲ್ಲದೆ ಇದ್ದರೆ ಧೂಳು ಮತ್ತು ಬ್ಯಾಕ್ಟೀರಿಯಾಗಳು ಚರ್ಮದಲ್ಲಿ ನಿಂತು ಮೊಡವೆ ಹಾಗೂ ಬೊಕ್ಕೆಗಳೂ ಮೂಡುವುದು. ಇದರಿಂದ ಚರ್ಮವನ್ನು ಅಪಾಯಕ್ಕೆ ಒಡ್ಡಬೇಡಿ. ಕನ್ನಡಕ ಧರಿಸುವ ಮೊದಲುಕೆಲವು ನಿಮಿಷ ಅದನ್ನು ಸ್ವಚ್ಛಗೊಳಿಸಿ.

ಸನ್ ಸ್ಕ್ರೀನ್ ಬಳಸದೆ ಇರುವುದು

ಸನ್ ಸ್ಕ್ರೀನ್ ಬಳಸದೆ ಇರುವುದು

ಸೂರ್ಯನ ಕಿರಣಗಳು ಎಷ್ಟು ಅಪಾಯಕಾರಿ ಎಂದು ತಿಳಿದಿದ್ದರೂ ನಾವು ತುಂಬಾ ನಿರ್ಲಕ್ಷ್ಯ ವಹಿಸುತ್ತೇವೆ. ನಿಮ್ಮ ದೈನಂದಿನ ಸೌಂದರ್ಯವರ್ಧಕಗಳಲ್ಲಿ ನೀವು ಸನ್ ಸ್ಕ್ರೀನ್ ಬಳಸಿಕೊಳ್ಳಿ. ಇದರಿಂದ ಮುಂದಿನ ಸಲ ನೀವು ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಬಳಸುವುದನ್ನು ಮರೆಯಬೇಡಿ.

English summary

Skincare mistakes you had no idea you were making

We all face several skin-related issues in our everyday life. This can be regarding dry skin, tan, acne or pimple scars and the list goes on. These are very common issues among us. Some reasons for this can be hereditary or genetic issues, hormonal imbalance or even environmental factors like pollution, overexposure to sun, etc. here are some common mistakes many people make when it comes to their skin that they should definitely keep in mind.
X
Desktop Bottom Promotion