For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಮುಖದ ಸೌಂದರ್ಯ ಹೆಚ್ಚಿಸುವ ಸರಳ ಫೇಸ್ ಪ್ಯಾಕ್

By Hemanth
|

ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ವೈಪರಿತ್ಯದಿಂದಾಗಿ ಬೇಸಿಗೆಯಲ್ಲಿ ಹೊರಗಡೆ ಹೋಗುವುದೆಂದರೆ ಬೆಂಕಿಯ ಜ್ವಾಲೆಯ ಮಧ್ಯೆ ನಡೆದಾಡಿದಂತೆ. ಬಿಸಿಲಿನ ದಗೆಗೆ ಮೈಯು ಉರಿದು ಉರಿದು ಹೈರಾಣಾಗಿ ಹೋಗುವುದು. ಇದರಿಂದಾಗಿ ಚರ್ಮದಲ್ಲಿ ಬಿಸಿಲಿನಿಂದ ಸುಟ್ಟ ಗಾಯ ಹಾಗೂ ಕಪ್ಪು ಕಲೆಗಳು ಹಾಗೂ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು. ಕೆಲವೊಂದು ಸಲ ಅನಿವಾರ್ಯವಾಗಿ ಹೊರಗಡೆಹೋಗಲೇಬೇಕಾಗುತ್ತದೆ.

ಇಂತಹ ಸಮಯದಲ್ಲಿ ಮುಖ ಹಾಗೂ ಬಿಸಿಲು ತಾಕುವಂತಹ ಭಾಗಕ್ಕೆ ಸನ್ ಸ್ಕ್ರೀನ್ ಹಚ್ಚಿಕೊಂಡು ಹೋಗಬೇಕು. ಇಷ್ಟು ಮಾತ್ರವಲ್ಲದೆ ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಬೇಕು. ಬೇಸಿಗೆಯಲ್ಲಿ ಚರ್ಮಕ್ಕೆ ಹಿತಕಾರಿಯಾಗುವ ಮತ್ತು ತೇವಾಂಶ ನೀಡುವಂತಹ ಸೌಂದರ್ಯವರ್ಧಕ ಬಳಸಿದರೆ ಅತ್ಯುತ್ತಮ. ಬೋಲ್ಡ್ ಸ್ಕೈ ಕೆಲವೊಂದು ಸಾಮಗ್ರಿಗಳನ್ನು ಪಟ್ಟಿ ಮಾಡಿದೆ. ಇದನ್ನು ಬಳಸಿಕೊಂಡು ನೀವು ಬೇಸಿಗೆಯಲ್ಲಿ ಚರ್ಮದ ಆರೋಗ್ಯ ಹಾಗೂ ಸೌಂದರ್ಯ ಕಾಪಾಡಿಕೊಳ್ಳಬಹುದು....

ಸೌತೆಕಾಯಿ

ಸೌತೆಕಾಯಿ

ಬೇಸಿಗೆಯಲ್ಲಿ ಉಪಯೋಗಿಸಲೇಬೇಕಾದ ಸಾಮಗ್ರಿಯೆಂದರೆ ಅದು ಸೌತೆಕಾಯಿ. ಇದು ಬೇಸಿಗೆಯಲ್ಲಿ ಚರ್ಮಕ್ಕೆ ಹಿತ ನೀಡುವುದು. ಇದು ಬಿಸಿಲಿನಿಂದ ಸುಟ್ಟಿರುವುದಕ್ಕೆ ಶಮನ ನೀಡುವುದು ಮಾತ್ರವಲ್ಲದೆ ಚರ್ಮವು ತುಂಬಾ ತಾಜಾ ಮತ್ತು ಹೊಳೆಯುವಂತೆ ಮಾಡುವುದು.

ಬಳಸುವುದು ಹೇಗೆ

ಸೌತೆಕಾಯಿ ಜ್ಯೂಸ್ ನಿಂದ ಮುಖ ತೊಳೆಯಿರಿ ಅಥವಾ ದಿನನಿತ್ಯವು ಸೌತೆಕಾಯಿ ಪೇಸ್ಟ್ ಮಾಡಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಂಡರೆ ಚರ್ಮಕ್ಕೆ ಎಲ್ಲಾ ವಿಧದಿಂದಲೂ ಒಳ್ಳೆಯದು.

ವಿಚ್ ಹ್ಯಾಝೆಲ್

ವಿಚ್ ಹ್ಯಾಝೆಲ್

ನೈಸರ್ಗಿಕ ಸಂಕೋಚನ ಗುಣ ಹೊಂದಿರುವಂತಹ ಹ್ಯಾಝೆಲ್ ಬೇಸಿಗೆ ಕಾಲದಲ್ಲಿ ಚರ್ಮದಲ್ಲಿ ಮೂಡುವಂತಹ ಬೊಕ್ಕೆಗಳನ್ನು ನಿವಾರಿಸುವುದು.

ಬಳಸುವುದು ಹೇಗೆ

ವಿಚ್ ಹ್ಯಾಝೆಲ್ ನ ಕೆಲವು ಹನಿಯನ್ನು ರೋಸ್ ವಾಟರ್ ಜತೆಗೆ ಮಿಶ್ರಣ ಮಾಡಿ ಮತ್ತು ಈ ಮಿಶ್ರಣವನ್ನು ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ. ವಾರದಲ್ಲಿ ಒಂದು ಸಲ ಬಳಸಿದರೆ ಇದು ತುಂಬಾ ಪರಿಣಾಮಕಾರಿ.

ಕಲ್ಲಂಗಡಿ

ಕಲ್ಲಂಗಡಿ

ಶೇ.80ಕ್ಕಿಂತಲೂ ಹೆಚ್ಚು ನೀರಿನಾಂಶ ಹೊಂದಿರುವಂತಹ ಕಲ್ಲಂಗಡಿ ಹಣ್ಣು ಸಂಪೂರ್ಣ ಬೇಸಿಗೆ ಕಾಲದಲ್ಲಿ ನಿಮ್ಮ ಚರ್ಮಕ್ಕೆ ತೇವಾಂಶ ನೀಡುವುದು ಮತ್ತು ಕಾಂತಿಯುತವಾಗಿ ಕಾಣುವಂತೆ ಮಾಡುವುದು.

ಬಳಸುವ ವಿಧಾನ

ಒಂದು ತುಂಡು ಕಲ್ಲಂಗಡಿ ಹಣ್ಣನ್ನು ಮುಖಕ್ಕೆ ಉಜ್ಜಿಕೊಳ್ಳಿ. ಇದು 20 ನಿಮಿಷ ಕಾಲ ಇರಲಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.

ಕಿತ್ತಳೆ ಸಿಪ್ಪೆಯ ಹುಡಿ

ಕಿತ್ತಳೆ ಸಿಪ್ಪೆಯ ಹುಡಿ

ವಿಟಮಿನ್ ಸಿ ಅಧಿಕವಾಗಿರುವಂತಹ ಕಿತ್ತಳೆ ಸಿಪ್ಪೆಯ ಹುಡಿಯು ಕಲೆ ನಿವಾರಣೆ ಮತ್ತು ಚರ್ಮದ ಬಣ್ಣ ಮಾಸುವುದಕ್ಕೆ ತುಂಬಾ ಪರಿಣಾಮಕಾರಿ.

ಬಳಸುವ ವಿಧಾನ

ಕಿತ್ತಳೆ ಹಣ್ಣಿನ ಸಿಪ್ಪೆಯ ಹುಡಿಯನ್ನು ವಾರಕ್ಕೊಂದು ಸಲ ಫೇಸ್ ಮಾಸ್ಕ್ ಆಗಿ ಬಳಸಿಕೊಳ್ಳಿ. ಇದರಿಂದ ಬಿಸಿಲಿನಿಂದ ಆಗಿರುವ ಕಲೆ ಮಾಯವಾಗುವುದು ಮತ್ತು ಚರ್ಮ ಬಿಳಿಯಾಗುವುದು.

ಆರ್ಗನ್ ತೈಲ

ಆರ್ಗನ್ ತೈಲ

ವಿಟಮಿನ್ ಇ ಯಿಂದ ಸಮೃದ್ಧವಾಗಿರುವಂತಹ ಆರ್ಗನ್ ತೈಲವು ಚರ್ಮಕ್ಕೆ ಹಿತ ನೀಡುವ ಮತ್ತೊಂದು ಪರಿಣಾಮಕಾರಿ ಸಾಮಗ್ರಿ. ಇದು ಚರ್ಮದಲ್ಲಿ ಮಾಯಿಶ್ಚರೈಸರ್ ಉಳಿಯುವಂತೆ ಮತ್ತು ಬೇಸಿಗೆಯಲ್ಲಿ ತೇವಾಂಶ ಉಳಿಯುವಂತೆ ನೋಡಿಕೊಳ್ಳುವುದು.

ಬಳಸುವ ವಿಧಾನ

ಕೆಲವು ಹನಿ ಆರ್ಗಾನ್ ತೈಲ ಮತ್ತು ಆಲಿವ್ ತೈಲವನ್ನು ಜತೆ ಸೇರಿಸಿಕೊಂಡು ಚರ್ಮಕ್ಕೆ ಮಸಾಜ್ ಮಾಡಿದರೆ ಅದರಿಂದ ಉತ್ತಮ ಫಲಿತಾಂಶ ಪಡೆಯಬಹುದು.ಚರ್ಮದ ಸಮಸ್ಯೆ ನಿವಾರಣೆಗೆ ವಾರದಲ್ಲಿ ಒಂದು ಸಲ ಹೀಗೆ ಮಾಡಿ.

ಅಲೋವೆರಾ ಲೋಳೆ

ಅಲೋವೆರಾ ಲೋಳೆ

ಅಲೋವೆರಾ ಲೋಳೆ ಬಿಸಿಲಿನಿಂದ ಸುಟ್ಟ ಗಾಯಕ್ಕೆ ಶಮನ ನೀಡುವುದು ಮತ್ತು ಚರ್ಮದಲ್ಲಿ ತೇವಾಂಶವನ್ನು ತುಂಬಾ ಧನಾತ್ಮಕವಾಗಿ ಕಾಪಾಡಿಕೊಳ್ಳುವುದು.

ಬಳಸುವ ವಿಧಾನ

ತಾಜಾ ಅಲೋವೆರಾ ಲೋಳೆ ತೆಗೆದು ಅದನ್ನು ಸಂಪೂರ್ಣವಾಗಿ ಮುಖಕ್ಕೆ ಮಸಾಜ್ ಮಾಡಿ. ಇದರ ಬಳಿಕ ಸ್ನಾನ ಮಾಡಿ. ಅಲೋವೆರಾ ಲೋಳೆಯನ್ನು ಐಸ್ ಟ್ರೇಗೆ ಹಾಕಿಟ್ಟು ಬಳಿಕ ಅದನ್ನು ಮುಖಕ್ಕೆ ಉಜ್ಜಿ ಕೊಳ್ಳಬಹುದು. ದಿನನಿತ್ಯ ಹೀಗೆ ಮಾಡಿದರೆ ಫಲಿತಾಂಶ ಪಡೆಯಬಹುದು.

ರೋಸ್ ವಾಟರ್

ರೋಸ್ ವಾಟರ್

ರೋಸ್ ವಾಟರ್ ನ್ನು ಹಿಂದಿನಿಂದಲೂ ಸೌಂದರ್ಯವರ್ಧಕವಾಗಿ ಬಳಸಿಕೊಳ್ಳಲಾಗುತ್ತಿದ್ದು, ಬೇಸಿಗೆಯಲ್ಲಿ ಇದು ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಬಳಸುವ ವಿಧಾನ

ರೋಸ್ ವಾಟರ್ ನಲ್ಲಿ ಒಂದು ಹತ್ತಿ ಉಂಡೆ ಮುಳುಗಿಸಿ ಮತ್ತು ಇದನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. ಮಲಗುವ ಮೊದಲು ಹೀಗೆ ಮಾಡಿದರೆ ಮರುದಿನ ಕಾಂತಿಯುತ ಚರ್ಮವು ನಿಮ್ಮದಾಗುವುದು. ಚರ್ಮವು ತೇವಾಂಶದಿಂದ ಇರಲು ಮತ್ತು ಬೇಸಿಗೆಯ ಸಮಸ್ಯೆಯಿಂದ ದೂರವಿರಲು ಇದನ್ನು ಯಾವಾಗ ಬೇಕಿದ್ದರೂ ಬಳಸಬಹುದು.


English summary

Skin-soothing Ingredients You Should Be Using This Summer

Summer season is accompanied by soaring temperatures and scorching sun rays that can take a toll on your skin's health. From unsightly breakouts to blemishes and sunburn, there are tons of things that can make your skin suffer during this time of the year. While slathering sunscreen and staying well-hydrated are essential skin care tips for the summer season, there are other things too that you must do to make sure your skin stays problem-free at all times. we've compiled a list of such ingredients that can help you combat common summer skin woes. Make them a part of your summer beauty routine to flaunt gorgeous skin all summer long.
X
Desktop Bottom Promotion