For Quick Alerts
ALLOW NOTIFICATIONS  
For Daily Alerts

ಎಣ್ಣೆಯುಕ್ತ ಚರ್ಮದ ಸಮಸ್ಯೆಗೆ 'ಕಿತ್ತಳೆ ಸಿಪ್ಪೆ'ಯ ಫೇಸ್ ಪ್ಯಾಕ್

By Arshad
|

ಕಿತ್ತಳೆ ಲಿಂಬೆಯ ಪ್ರವರ್ಗಕ್ಕೆ ಸೇರಿದ ಹಣ್ಣಾಗಿದ್ದು ವಿಟಮಿನ್ ಸಿ ಯಿಂದ ಸಮೃದ್ದವಾಗಿದೆ ಹಾಗೂ ಇದರ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಕಿತ್ತಳೆಯ ಸೇವನೆಯಿಂದ ಲಭಿಸುವ ಪ್ರಯೋಜನಗಳ ಬಗ್ಗೆ ನಾವೆಲ್ಲಾ ಅರಿತೇ ಇದ್ದೇವೆ. ಆದರೆ ಇದರ ಸಿಪ್ಪೆ? ಸಾಮಾನ್ಯವಾಗಿ ನಾವೆಲ್ಲರೂ ಸಿಪ್ಪೆಯನ್ನು ಸುಲಿದ ಮರುಕ್ಷಣದಲ್ಲಿಯೇ ಕಸದ ಬುಟ್ಟಿಗೆಸೆದು ಬಿಡುತ್ತೇವೆ. ಆದರೆ ಈ ಸಿಪ್ಪೆಯೂ ಕೆಲವಾರು ಬಗೆಯಲ್ಲಿ, ವಿಶೇಷವಾಗಿ ತ್ವಚೆಗೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ ಎಂದು ನಾವು ನಾವು ಅರಿತಿಲ್ಲ.

Orange Peel Face Packs For Oily Skin

ಹಣ್ಣಿನಂತೆಯೇ ಸಿಪ್ಪೆಯಲ್ಲಿಯೂ ವಿಟಮಿನ್ ಸಿ ಯಥೇಚ್ಛವಾಗಿದ್ದು ಚರ್ಮದ ಬಣ್ಣವನ್ನು ಸಹಜವರ್ಣಕ್ಕೆ ತರಲು ಅತ್ಯುತ್ತಮವಾದ ಆಯ್ಕೆಯಾಗಿದೆ. ಇದರ ಸೂಕ್ಷ್ಮಜೀವಿ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಗುಣಗಳು ತ್ವಚೆಯಲ್ಲಿರುವ ಮೊಡವೆಗಳನ್ನು ನಿವಾರಿಸಲು, ತ್ವಚೆಯ ಉರಿಯೂತವನ್ನು ನಿವಾರಿಸಲು ನೆರವಾಗುತ್ತದೆ ಹಾಗೂ ವಿಶೇಷವಾಗಿ ತ್ವಚೆಯ ಆಳದಿಂದ ಕಲ್ಮಶಗಳನ್ನು ನಿವಾರಿಸಿ ಸ್ವಚ್ಛಗೊಳಿಸ ನೆರವಾಗುತ್ತದೆ. ಇದರ ಪ್ರಯೋಜನವನ್ನು ಪಡೆಯಲು ನಮಗೆ ಅರ್ಧ ದೊಡ್ಡಚಮಚ ಜೇನಿನ ಅಗತ್ಯವೂ ಇದೆ.

ಫೇಸ್ ಪ್ಯಾಕ್ ತಯಾರಿಕಾ ವಿಧಾನ

ಫೇಸ್ ಪ್ಯಾಕ್ ತಯಾರಿಕಾ ವಿಧಾನ

ಕಿತ್ತಳೆಯ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಮಾಡಿದ ಪುಡಿಯನ್ನು ಸಮಪ್ರಮಾಣದಲ್ಲಿ ಜೇನಿನೊಡಗೆ ಬೆರೆಸಿ. ಕೆಲವು ತೊಟ್ಟು ಲಿಂಬೆರಸವನ್ನೂ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖದ ಮೇಲೆ ತೆಳುವಾಗಿ ಹಚ್ಚಿ ಇಪ್ಪತ್ತು ನಿಮಿಷ ಒಣಗಲು ಬಿಡಿ, ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಈ ಪುಡಿಯಲ್ಲಿರುವ ಚರ್ಮದ ಆರೈಕೆ ನೀಡುವ ಗುಣದಿಂದಾಗಿಯೇ ಹಲವಾರು ಉತ್ಪನ್ನಗಳಲ್ಲಿ ಈ ಪುಡಿಯನ್ನು ಬಳಸಲಾಗುತ್ತದೆ. ಇಂದಿನ ಲೇಖನದಲ್ಲಿ ನಿಜವಾಗಿ ಇದು ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎಂಬುದನ್ನು ನೋಡೋಣ. ವಿಶೇಷವಾಗಿ ಎಣ್ಣೆಚರ್ಮಕ್ಕೆ ಯಾವ ಬಗೆಯ ಪ್ರಯೋಜನಗಳಿವೆ ಹಾಗೂ ಎಣ್ಣೆಚರ್ಮದವರಿಗೆ ಎದುರಾಗುವ ಮೊಡವೆ, ಕಪ್ಪು ತಲೆ, ಬಿಳಿತಲೆ ಮೊದಲಾದ, ಹಠಮಾರಿ ತೊಂದರೆಗಳನ್ನು ಈ ಮುಖಲೇಪದಿಂದ ಹೇಗೆ ನಿವಾರಿಸಬಹುದು ಎಂಬುದನ್ನು ನೋಡೋಣ:

ಕಿತ್ತಳೆ ಸಿಪ್ಪೆ ಮತ್ತು ಮೊಸರು:

ಕಿತ್ತಳೆ ಸಿಪ್ಪೆ ಮತ್ತು ಮೊಸರು:

ಒಂದು ವೇಳೆ ಸತ್ತ ಜೀವಕೋಶಗಳು ಹೊರಚರ್ಮಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದು ನಿವಾರಿಸುವುದು ಸುಲಭವಾಗಿರದಿದ್ದರೆ ಈ ವಿಧಾನ ಸೂಕ್ತವಾಗಿದೆ.

ಅಗತ್ಯವಿರುವ ಸಾಮಾಗ್ರಿಗಳು:

* ಒಂದು ದೊಡ್ಡ ಚಮಚ ಕಿತ್ತಳೆಸಿಪ್ಪೆಯ ಪುಡಿ

* ಎರಡು ದೊಡ್ಡ ಚಮಚ ಮೊಸರು (ಯಾವುದೇ ಕೃತಕ ರುಚಿ ಸೇರಿಸದ, ಅಪ್ಪಟ ಮೊಸರು ಮಾತ್ರ)

ವಿಧಾನ:

ಒಂದು ಬೋಗುಣಿಯಲ್ಲಿ ಎರಡೂ ಸಾಮಾಗ್ರಿಗಳನ್ನು ಬೆರೆಸಿ. ಈ ಮಿಶ್ರಣವನ್ನು ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖದ ಮೇಲೆ ತೆಳುವಾಗಿ ಹಚ್ಚಿ ಇಪ್ಪತ್ತು ನಿಮಿಷ ಒಣಗಲು ಬಿಡಿ, ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕಿತ್ತಳೆ ಸಿಪ್ಪೆ ಮತ್ತು ಅರಿಶಿನ

ಕಿತ್ತಳೆ ಸಿಪ್ಪೆ ಮತ್ತು ಅರಿಶಿನ

ಕಾಂತಿ ಕಳೆದುಕೊಂಡ ತ್ವಚೆಗೆ ಈ ವಿಧಾನ ಸೂಕ್ತವಾಗಿದೆ. ಅರಿಶಿನದಲ್ಲಿರುವ ಗುಣಪಡಿಸುವ ಗುಣ ತ್ವಚೆಗೆ ಎದುರಾಗಿರುವ ಯಾವುದೇ ಸೋಂಕು ಹಾಗೂ ಉರಿಯೂತದಿಂದ ರಕ್ಷಿಸುತ್ತದೆ ಹಾಗೂ ಈ ಮೂಲಕ ತ್ವಚೆಯನ್ನು ಸ್ವಚ್ಚಗೊಳಿಸುವ ಜೊತೆಗೇ ಕಾಂತಿಯನ್ನೂ ಹೆಚ್ಚಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

• ಒಂದು ದೊಡ್ಡ ಚಮಚ ಕಿತ್ತಳೆಸಿಪ್ಪೆಯ ಪುಡಿ

• ಚಿಟಿಕೆಯಷ್ಟು ಅರಿಶಿನ

* ಒಂದು ದೊಡ್ಡ ಚಮಚ ಜೇನು

ವಿಧಾನ

ಒಂದು ಬೋಗುಣಿಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಬೆರೆಸಿ. ಈ ಮಿಶ್ರಣವನ್ನು ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖದ ಮೇಲೆ ತೆಳುವಾಗಿ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ, ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಕಿತ್ತಳೆಸಿಪ್ಪೆ ಮತ್ತು ಚಂದನದ ಸ್ಕ್ರಬ್

ಕಿತ್ತಳೆಸಿಪ್ಪೆ ಮತ್ತು ಚಂದನದ ಸ್ಕ್ರಬ್

ಸತ್ತ ಜೀವಕೋಶಗಳನ್ನು ನಿವಾರಿಸಿ ತ್ವಚೆಯ ಸಹಜವರ್ಣ ಕಂಗೊಳಿಸಲು ಈ ವಿಧಾನ ಸೂಕ್ತವಾಗಿದೆ.

ಅಗತ್ಯವಿರುವ ಸಾಮಾಗ್ರಿಗಳು:

• ಒಂದು ದೊಡ್ಡ ಚಮಚ ಕಿತ್ತಳೆಸಿಪ್ಪೆಯ ಪುಡಿ

* ಒಂದು ದೊಡ್ಡ ಚಮಚ ಒಣ ಚಂದನದ ಪುಡಿ

* ಒಂದು ದೊಡ್ಡ ಚಮ ಅಕ್ರೋಟಿನ ಪುಡಿ

* ಗುಲಾಬಿ ನೀರು - ಅಗತ್ಯಕ್ಕೆ ತಕ್ಕಷ್ಟು

ವಿಧಾನ

ಒಂದು ಬೋಗುಣಿಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಬೆರೆಸಿ. ಈ ಲೇಪವನ್ನು ಮುಖ, ಕುತ್ತಿಗೆಯ ತ್ವಚೆಯ ಮೇಲೆ ವೃತ್ತಾಕಾರದಲ್ಲಿ ಹೆಚ್ಚಿನ ಒತ್ತಡವಿಲ್ಲದೇ ಬೆರಳಿನ ತುದಿಗಳಿಂದ ಮಸಾಜ್ ಮಾಡಿಕೊಳ್ಳುತ್ತಾ ಹಚ್ಚಿಕೊಳ್ಳಿ. ಬಳಿಕ ಸುಮಾರು ಐದರಿಂದ ಹತ್ತು ನಿಮಿಷ ಹಾಗೇ ಬಿಡಿ. ನಂತರ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಎರಡು ಬಾರಿ ಪುನರಾವರ್ತಿಸಿ.

ಕಿತ್ತಳೆ ಪುಡಿ, ಮುಲ್ತಾನಿ ಮಿಟ್ಟಿ ಮತ್ತು ಗುಲಾಬಿ ನೀರು

ಕಿತ್ತಳೆ ಪುಡಿ, ಮುಲ್ತಾನಿ ಮಿಟ್ಟಿ ಮತ್ತು ಗುಲಾಬಿ ನೀರು

ಒಂದು ವೇಳೆ ಮುಖದ ಮೇಲೆ ಕಪ್ಪುತಲೆ ಅಥವಾ ಬಿಳಿತಲೆಗಳು ವಿಪರೀತವಾಗಿದ್ದರೆ ಈ ವಿಧಾನ ಸೂಕ್ತವಾಗಿದೆ.

ಅಗತ್ಯವಿರುವ ಸಾಮಾಗ್ರಿಗಳು:

• ಒಂದು ದೊಡ್ಡ ಚಮಚ ಕಿತ್ತಳೆಸಿಪ್ಪೆಯ ಪುಡಿ

* ಒಂದು ದೊಡ್ಡಚಮಚ ಮುಲ್ತಾನಿ ಮಿಟ್ಟಿ (Fuller's Earth)

* ಗುಲಾಬಿ ನೀರು (ಅಗತ್ಯಕ್ಕೆ ತಕ್ಕಷ್ಟು)

ವಿಧಾನ

ಒಂದು ಬೋಗುಣಿಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಬೆರೆಸಿ. ಈಗತಾನೇ ತೊಳೆದುಕೊಂಡ ಮುಖಕ್ಕೆ ಈ ಲೇಪವನ್ನು ತೆಳುವಾಗಿ ಹೆಚ್ಚಿಕೊಂಡು ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ತೊಳೆದುಕೊಳ್ಳುವಾಗ ಬೆರಳುಗಳಿಂದ ಕೊಂಚವೇ ಒತ್ತಡದಿಂದ ಉಜ್ಜಿಕೊಳ್ಳುತ್ತಾ ಕಪ್ಪುತಲೆ ಅಥವಾ ಬಿಳಿತಲೆಗಳನ್ನು ನಿವಾರಿಸಲು ಯತ್ನಿಸಿ, ಇವು ಸುಲಭವಾಗಿ ಕಿತ್ತು ಬರುತ್ತವೆ.

ಕಿತ್ತಳೆ ಪುಡಿ ಮತ್ತು ಬಾದಾಮಿ ಎಣ್ಣೆ:

ಕಿತ್ತಳೆ ಪುಡಿ ಮತ್ತು ಬಾದಾಮಿ ಎಣ್ಣೆ:

ಎಣ್ಣೆಪಸೆ ವಿಪರೀತವಾಗಿದ್ದರೆ ಈ ವಿಧಾನ ಸೂಕ್ತವಾಗಿದೆ. ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು ಹಾಗೂ ತಾಜಾತನವನ್ನು ನೀಡಲು ಈ ವಿಧಾನವನ್ನು ಬಳಸಬಹುದು.

ಅಗತ್ಯವಿರುವ ಸಾಮಾಗ್ರಿಗಳು:

• ಒಂದು ದೊಡ್ಡ ಚಮಚ ಕಿತ್ತಳೆಸಿಪ್ಪೆಯ ಪುಡಿ

* ಕೆಲವು ಹನಿ ಬಾದಾಮಿ ಎಣ್ಣೆ:

ವಿಧಾನ:

ಒಂದು ಬೋಗುಣಿಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಬೆರೆಸಿ ದಪ್ಪನೆಯ ಲೇಪನವಾಗಿಸಿ. ಈ ಲೇಪನವನ್ನು ಬೆರಳುಗಳ ತುದಿಯಿಂದ ಕೊಂಚವೇ ಒತ್ತಡದಿಂದ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಸುಮಾರು ಹದಿನೈದು ನಿಮಿಷ ಹಾಗೇ ಬಿಟ್ತು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

English summary

Orange Peel Face Packs To Treat Oily Skin

Belonging to the category of citrus fruits, orange has numerous health benefits that we all are familiar with. But what about its peel? It's often something that we consider to be a waste. But did you know that it can work wonders on your skin? Rich in Vitamin C, orange peel is considered to be one of the best lightening agents. The antimicrobial and antibacterial properties of orange peels also help in getting rid of acne and inflammation on the skin. It also works as an excellent cleanser that deep cleans our skin.
X
Desktop Bottom Promotion