For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ತ್ವಚೆಗೆ ರಕ್ತಚಂದನದ ಆರೈಕೆ...

By Divya Pandit
|

ದೈನಂದಿನ ಜೀವನದಲ್ಲಿ ನಾವೆಲ್ಲರೂ ವಿವಿಧ ರೀತಿಯ ಚರ್ಮದ ಸಮಸ್ಯೆಯನ್ನು ಎದುರಿಸುತ್ತೇವೆ. ಒಣ ಚರ್ಮ, ಮೊಡವೆ, ಪಿಗ್ಮೆಂಟೇಶನ್, ತುರಿಕೆ ಉರಿಯೂತ ಸೇರಿದಂತೆ ವಿವಿಧ ತ್ವಚೆಯ ಸಮಸ್ಯೆಗಳು ಕಿರಿಕಿರಿಯನ್ನುಂಟುಮಾಡುತ್ತಲೇ ಇರುತ್ತವೆ. ಇವುಗಳ ನಿವಾರಣೆಗೆ ವಿವಿಧ ಆರೈಕೆಗೆ ಮೊರೆಹೋಗುತ್ತೇವೆ. ಇಲ್ಲವೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಬಗೆಯ ಕ್ರೀಮ್‍ಗಳನ್ನು ಉಪಯೋಗಿಸಿ ನೋಡುವುದರ ಮೂಲಕ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತೇವೆ.

ಕಡಿಮೆ ಬೆಲೆಯಲ್ಲಿ ಹಾಗೂ ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದ ಆರೈಕೆ ವಿಧಾನ ಎಂದರೆ ನೈಸರ್ಗಿಕ ಪರಿಹಾರಗಳು. ನೈಸರ್ಗಿಕವಾಗಿ ಸಿಗುವ ಅನೇಕ ಉತ್ಪನ್ನಗಳು ನಮ್ಮ ಆರೋಗ್ಯ ಹಾಗೂ ತ್ವಚೆಯ ಆರೈಕೆ ಮಾಡುವಲ್ಲಿ ಬಹು ಪರಿಣಾಮಾತ್ಮಕವಾಗಿ ಕಾರ್ಯ ನಿರ್ವಹಿಸುವುದು. ಅವುಗಳ ಸಂಯೋಗ ಹಾಗೂ ಯೋಗ್ಯ ರೀತಿಯಲ್ಲಿ ಬಳಸುವುದರ ಮೂಲಕ ಆಳವಾದ ಆರೈಕೆಯನ್ನು ಪಡೆದುಕೊಳ್ಳಬಹುದು. ಅಂತಹ ಒಂದು ಅತ್ಯುತ್ತಮ ಔಷಧೀಯ ಗುಣ ಹಾಗೂ ಚರ್ಮದ ಆರೈಕೆಗೆ ಯೋಗ್ಯವಾದ ನೈಸರ್ಗಿಕ ಘಟಕ ಎಂದರೆ ಕೆಂಪು ಶ್ರೀಗಂಧದ ಪುಡಿ.

how to use red sandalwood on skin

ಕೆಂಪು ಶ್ರೀಗಂಧದ ಬಳೆ ಮಾಡುವುದರ ಮೂಲಕ ತ್ವಚೆಯ ಆರೋಗ್ಯವನ್ನು ಹೇಗೆ ಕಾಪಾಡಬಹುದು? ಅದರೊಂದಿಗೆ ಯಾವೆಲ್ಲಾ ನೈಸರ್ಗಿಕ ಘಟಕವನ್ನು ಸೇರಿಸುವುದರಿಂದ ಅದರ ಶಕ್ತಿ ದ್ವಿಗುಣವಾಗುತ್ತದೆ? ಎನ್ನುವ ವಿವರಣೆಯನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ...

ಕೆಂಪು ಶ್ರೀಗಂಧ ಚರ್ಮದ ಮೇಲೆ ಹೇಗೆ ಪ್ರಾಭಾವ ಬೀರುವುದು?

ಕೆಂಪು ಶ್ರೀಗಂಧಕ್ಕೆ ರಕ್ತ ಚಂದನ ಎಂದು ಕರೆಯುತ್ತಾರೆ. ಇದರ ಮರವನ್ನು ಆಯುರ್ವೇದದಲ್ಲಿ ಅತ್ಯುತ್ತಮ ಔಷಧೀಯ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ. ಇದನ್ನು ನಮ್ಮ ಪೂರ್ವಜರು ನಿತ್ಯದ ಸೌಂದರ್ಯ ಆರೈಕೆಗೆ ಬಳಸುತ್ತಿದ್ದರು. ಇದನ್ನು ಗಣನೀಯವಾಗಿ ಬಳಸುವುದರಿಂದ ತ್ವಚೆಯ ಮೇಲಿರುವ ಪಿಗ್ಮೆಂಟೇಶನ್, ಮೊಡವೆ ಸೇರಿದಂತೆ ಇನ್ನಿತರ ಚರ್ಮ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತವೆ. ದೋಷ ರಹಿತ ಚರ್ಮಕ್ಕಾಗಿ ರಕ್ತ ಚಂದನ ಅಥವಾ ಕೆಂಪು ಶ್ರೀಗಂಧವನ್ನು ಹೇಗೆ ಬಳಸಬಹುದು ಎನ್ನುವುದು ತಿಳಿಯೋಣ ಬನ್ನಿ...

1. ಗುಲಾಬಿ ನೀರು ಮತ್ತು ಕೆಂಪು ಶ್ರೀಗಂಧ

ಸಾಮಾಗ್ರಿಗಳು
* 1 ಟೇಬಲ್ ಚಮಚ ಕೆಂಪು ಶ್ರೀಗಂಧದ ಪುಡಿ.
* 1 ಟೇಬಲ್ ಚಮಚ ಗುಲಾಬಿ ನೀರು.
* 1 ಟೇಬಲ್ ಚಮಚ ಜೇನುತುಪ್ಪ
* ಒಂದು ಚಿಟಕಿ ಅರಿಶಿನ

ವಿಧಾನ:
ಈ ಮುಖವಾಡವು ಚರ್ಮವನ್ನು ತಂಪಾಗಿಸಿ ತಾಜಾತನದಿಂದ ಕೂಡಿರುವಂತೆ ಮಾಡುವುದು.
*ಒಂದು ಬೌಲ್ ಅಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಮಿಶ್ರಗೊಳಿಸಿ
*ಅರಿಶಿನ ಅಲರ್ಜಿ ಇರುವವರು ಅರಿಶಿನವನ್ನು ಸೇರಿಸಬಾರದು
* ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯದ ವರೆಗೆ ಆರಲು ಬಿಡಿ
* ಸ್ವಲ್ಪ ಸಮಯದ ಬಳಿಕ ತಣ್ಣನೆಯ ನೀರಿನಿಂದ ಸ್ವಚ್ಛಗೊಳಿಸಿ
* ಉತ್ತಮ ಬದಲಾವಣೆಯನ್ನು ಗಮನಿಸುವ ತನಕವೂ ಈ ಕ್ರಮವನ್ನು ಅನ್ವಯಿಸಬಹುದು

2. ನಿಂಬೆ ರಸ ಮತ್ತು ಕೆಂಪು ಶ್ರೀಗಂಧ/ರಕ್ತ ಚಂದನ

ಪದಾರ್ಥಗಳು:
* 1 ಟೇಬಲ್ ಚಮಚ ಕೆಂಪು ಶ್ರೀಗಂಧದ ಪುಡಿ
* ಸ್ವಲ್ಪ ನಿಂಬೆ ರಸ

ವಿಧಾನ:
*ಎಣ್ಣೆ ತ್ವಚೆಯವರಿಗೆ ಈ ಮುಖವಾಡವು ಅತ್ಯುತ್ತಮ ಪರಿಹಾರವನ್ನು ನೀಡುವುದು. ಚರ್ಮದಲ್ಲಿರುವ ರಂಧ್ರಗಳನ್ನು ಬಿಗಿಗೊಳಿಸಿ ಆರೋಗ್ಯವನ್ನು ಕಾಪಾಡುವುದು.
*ಒಂದು ಬೌಲ್ ಅಲ್ಲಿ ಕೆಂಪು ಶ್ರೀಗಂಧದ ಪುಡಿ ಮತ್ತು ನಿಂಬೆ ರಸವನ್ನು ಸೇರಿಸಿ, ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ.
* ನಂತರ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯದ ವರೆಗೆ ಆರಲು ಬಿಡಿ.
*15-20 ನಿಮಿಷಗಳ ಬಳಿಕ ತಣ್ಣನೆಯ ನೀರಿನಲ್ಲಿ ತೊಳೆಯಿರಿ.
* ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ಚರ್ಮವು ಎಣ್ಣೆಮುಕ್ತವಾಗಿರುವುದು.

3. ಪಪ್ಪಾಯ ಮತ್ತು ಕೆಂಪು ಶ್ರೀಗಂಧದ ಪುಡಿ

ಪದಾರ್ಥಗಳು:
* ಟೀ ಚಮಚ ಶ್ರೀಗಂಧದ ಪುಡಿ.
* 1/2 ಹಣ್ಣಾದ ಪಪ್ಪಾಯ.

ವಿಧಾನ:
ಪಪ್ಪಾಯ ಮತ್ತು ಕೆಂಪು ಶ್ರೀಗಂಧದ ಪುಡಿಯು ಸತ್ತ ಜೀವಕೋಶಗಳನ್ನು ತೆಗೆಯುವುದು. ಜೊತೆಗೆ ಚರ್ಮವು ತಾಜಾ ಹಾಗೂ ಆರೋಗ್ಯಕರವಾಗಿ ಇರುವುದು.
* ಪಪ್ಪಾಯವನ್ನು ಸಣ್ಣಗೆ ಹಚ್ಚಿಕೊಂಡು, ಮೃದುವಾದ ಪೇಸ್ಟ್ ತಯಾರಿಸಿ.
* ಇನ್ನು ಪಪ್ಪಾಯದ ಪೇಸ್ಟ್ ಗೆ ಶ್ರೀಗಂಧದ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.
* ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯದ ವರೆಗೆ ಆರಲು ಬಿಡಿ.
* 20 ನಿಮಿಷಗಳ ಬಳಿಕ ತಣ್ಣನೆಯ ನೀರಿನಲ್ಲಿ ತೊಳೆಯಿರಿ.
* ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಮ್ಮೆ ಈ ಫೇಸ್ ಪ್ಯಾಕ್ ಅನ್ನು ಪ್ರಯತ್ನಿಸಿ

4. ಮೊಸರು, ಹಾಲು ಮತ್ತು ಕೆಂಪು ಶ್ರೀಗಂಧ

ಪದಾರ್ಥಗಳು:
2 ಟೇಬಲ್ ಚಮಚ ಕೆಂಪು ಶ್ರೀಗಂಧದ ಪುಡಿ
2 ಟೇಬಲ್ ಚಮಚ ಮೊಸರು
2 ಟೇಬಲ್ ಚಮಚ ಹಾಲು
1/2 ಟೇಬಲ್ ಚಮಚ ಅರಿಶಿನ

ವಿಧಾನ:
ಚರ್ಮದ ಮೇಲೆ ಕಲೆಗಳನ್ನು ಮತ್ತು ಪಿಗ್ಮೆಂಟೇಶನ್ ಕಲೆಯನ್ನು ತೆಗೆಯಲು ಈ ಸಂಯೋಜನೆಯ ಮಿಶ್ರಣವು ಸಹಾಯ ಮಾಡುವುದು.
* ಒಂದು ಬೌಲ್ ಅಲ್ಲಿ ಹಾಲು, ಮೊಸರು, ಅರಿಶಿನ ಹಾಗೂ ಶ್ರೀಗಂಧವನ್ನು ಸೇರಿಸಿ, ಮಿಶ್ರಗೊಳಿಸಿ.
*ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯದ ವರೆಗೆ ಆರಲು ಬಿಡಿ.
* 20 ನಿಮಿಷಗಳ ಬಳಿಕ ತಣ್ಣನೆಯ ನೀರಿನಲ್ಲಿ ತೊಳೆಯಿರಿ.
* ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ 1-2 ಬಾರಿ ಈ ಫೇಸ್ ಪ್ಯಾಕ್ ಅನ್ನು ಪ್ರಯತ್ನಿಸಿ

5. ಸೌತೆಕಾಯಿ ಮತ್ತು ಕೆಂಪು ಶ್ರೀಗಂಧ:

ಪದಾರ್ಥಗಳು:
1 ಟೇಬಲ್ ಚಮಚ ಕೆಂಪು ಶ್ರೀಗಂಧದ ಪುಡಿ
1/2 ಸೌತೆಕಾಯಿ.

ವಿಧಾನ
* ಸೌತೆಕಾಯಿಯನ್ನು ತುರಿದು, ರಸವನ್ನು ಬೇರ್ಪಡಿಸಿಕೊಳ್ಳಿ
* ಶ್ರೀಗಂಧದ ಪುಡಿ ಮತ್ತು ಸೌತೆಕಾಯಿ ರಸವನ್ನು ಸೇರಿಸಿ, ಮಿಶ್ರಗೊಳಿಸಿ
* ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯದ ವರೆಗೆ ಆರಲು ಬಿಡಿ
* 15 ನಿಮಿಷಗಳ ಬಳಿಕ ತಣ್ಣನೆಯ ನೀರಿನಲ್ಲಿ ತೊಳೆಯಿರಿ
* ಉತ್ತಮ ಫಲಿತಾಂಶಕ್ಕಾಗಿ ಗಣನೀಯವಾಗಿ ಈ ಫೇಸ್ ಪ್ಯಾಕ್ ಅನ್ನು ಪ್ರಯತ್ನಿಸಿ

English summary

HOW TO USE RED SANDALWOOD POWDER FOR FLAWLESS SKIN

We all face different types of skin issues in our everyday life. Some common issues like dry skin, acne or pimple scars, pigmentation etc., bother us to a great extent. As a result, we end up trying anything and everything which are available in the market that claim to solve these issues instantly. But nothing can beat natural remedies when it comes to safety and cost-effectiveness.
Story first published: Monday, July 30, 2018, 16:26 [IST]
X
Desktop Bottom Promotion