Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಖದಲ್ಲಿ ಮೂಡುವ ನೆರಿಗೆಯ ಸಮಸ್ಯೆಗೆ-ಒಂದೆರಡು ಚಮಚ ಲಿಂಬೆ ರಸ ಸಾಕು!
ವಯಸ್ಸಾಗಿದೆ ಎಂದು ದೇಹವು ತೋರಿಸುವ ಲಕ್ಷಣವೇ ಅದು ನೆರಿಗೆ. ವಯಸ್ಸಾಗುವಾಗ ಕಂಡುಬರುವಂತಹ ಪ್ರಮುಖ ಲಕ್ಷಣಗಳಲ್ಲಿ ಇದು ಮುಖ್ಯವಾದದ್ದು. ಆದರೆ ಕೆಲವೊಮ್ಮೆ ಅಕಾಲಿಕವಾಗಿಯು ಮುಖದ ಮೇಲೆ ನೆರಿಗೆ ಮೂಡಲು ಆರಂಭವಾಗುವುದು. ಇದಕ್ಕೆ ಬೇರೆಯೇ ಆದ ಕಾರಣವಿದೆ. ಒತ್ತಡ, ಚರ್ಮದ ಆರೈಕೆ ಸರಿಯಾಗಿ ಮಾಡದೇ ಇರುವುದು, ಬಿಸಿಲಿಗೆ ಮೈಯೊಡ್ಡುವುದು, ನಿರ್ಜಲೀಕರಣ ಇತ್ಯಾದಿ.
ದೇಹದಲ್ಲಿ ಕಾಲಜನ ಉತ್ಪತ್ತಿಯ ಮೇಲೆ ಅಡ್ಡಿಯುಂಟಾದಾಗ ಅಥವಾ ಹಾನಿಯಾದಾಗ ನೆರಿಗೆ ಮೂಡುವುದು. ಈಲಾಸ್ಟಿನ್ ಫೈಬರ್ ಚರ್ಮವು ಜೋತು ಬೀಳುವಂತೆ ಮಾಡುವುದು. ಆದರೆ ನೆರಿಗೆ ನಿವಾರಣೆ ಮಾಡಿ ನೀವು ಹದಿಹರೆಯದವರಂತೆ ಕಾಣಲು ಬೋಲ್ಡ್ ಸ್ಕೈ ನಿಮಗಾಗಿ ಕೆಲವೊಂದು ಮನೆಮದ್ದುಗಳನ್ನು ಹೇಳಿಕೊಡಲಿದೆ. ಈ ಲೇಖನದಲ್ಲಿ ನಾವು ನಿಮಗೆ ಲಿಂಬೆಯಿಂದ ನೆರಿಗೆ ನಿವಾರಣೆ ಮಾಡುವ ಬಗ್ಗೆ ತಿಳಿಸಲಿದ್ದೇವೆ.

ಸಿಟ್ರಸ್ ಹಣ್ಣಾಗಿರುವಂತಹ ಲಿಂಬೆಯಲ್ಲಿ ವಿಟಮಿನ್ ಸಿ ಇದ್ದು, ಇದು ಕಾಲಜನ್ ಉತ್ಪತ್ತಿಯನ್ನು ವೃದ್ಧಿಸುವುದು ಮತ್ತು ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಣೆ ಮಾಡುವುದು. ನಿಯಮಿತವಾಗಿ ಲಿಂಬೆ ಬಳಸುವುದರಿಂದ ಚರ್ಮದ ರಂಧ್ರಗಳನ್ನು ಬಿಗಿಗೊಳಿಸಬಹುದು. ಇದರೊಂದಿಗೆ ಚರ್ಮದ ಬಣ್ಣವನ್ನು ಬಿಳಿಯಾಗಿಸುವುದು.
ನೆರಿಗೆ ನಿವಾರಣೆ ಮಾಡಲು ಲಿಂಬೆ ಬಳಸುವುದು ಹೇಗೆ ಎಂದು ತಿಳಿಯುವ.

ಲಿಂಬೆ ಮತ್ತು ಆಲಿವ್ ತೈಲ
ಬೇಕಾಗುವ ಸಾಮಗ್ರಿಗಳು
- 1 ಚಮಚ ಲಿಂಬೆರಸ
- 1 ಚಮಚ ಆಲಿವ್ ತೈಲ
- 1 ಚಮಚ ಲಿಂಬೆರಸ
- 1 ಚಮಚ ಜೇನುತುಪ್ಪ
- 2 ಚಮಚ ಲಿಂಬೆರಸ
- 1 ಚಮಚ ಸಕ್ಕರೆ
- 1 ಚಮಚ ಲಿಂಬೆರಸ
- 1 ಚಮಚ ಮೊಸರು
- 5 ಚಮಚ ಲಿಂಬೆರಸ
- 1 ಚಮಚ ಗ್ಲಿಸರಿನ್
- 1 ಚಮಚ ರೋಸ್ ವಾಟರ್
- 2-3 ಹನಿ ಲಿಂಬೆತೈಲ
- 1 ಚಮಚ ವಿಟಮಿನ್ ಇ ತೈಲ
- 1 ಚಮಚ ಬಾದಾಮಿ ತೈಲ
ತಯಾರಿಸುವ ವಿಧಾನ
ಶುದ್ಧವಾದ ಪಿಂಗಾಣಿಗೆ ಲಿಂಬೆರಸ ಹಾಕಿ. ಇದಕ್ಕೆ ಆಲಿವ್ ತೈಲ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೈಬೆರಳಿನಿಂದ ತೆಗೆದುಕೊಂಡು ಹಣೆ ಹಾಗೂ ಕಣ್ಣಿನ ಕೆಳಭಾಗಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ಇದು ಹಾಗೆ ಇರಲಿ ಮತ್ತು ಬಳಿಕ ತಣ್ಣೀರಿನಿಂದ ತೊಳೆಯಿರಿ. ಆಲಿವ್ ತೈಲದ ಬದಲು ಬಾದಾಮಿ ಎಣ್ಣೆ ಬಳಸಬಹುದು.

ಲಿಂಬೆ ಮತ್ತು ಜೇನುತುಪ್ಪ
ಬೇಕಾಗುವ ಸಾಮಗ್ರಿಗಳು
ತಯಾರಿಸುವ ವಿಧಾನ
ಜೇನುತುಪ್ಪ ಮತ್ತು ತಾಜಾ ಲಿಂಬೆರಸವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. 10 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ 2-3 ಸಲ ಇದನ್ನು ಬಳಸಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು.

ಲಿಂಬೆ ಮತ್ತು ಸಕ್ಕರೆ
ಬೇಕಾಗುವ ಸಾಮಗ್ರಿಗಳು
ವಿಧಾನ
ಇದು ಸ್ಕ್ರಬ್ ಇದ್ದಂತೆ. ಒಂದು ಪಿಂಗಾಣಿಯಲ್ಲಿ ಲಿಂಬೆರಸ ಮತ್ತು ಸಕ್ಕರೆ ಮಿಶ್ರಣ ಮಾಡಿಕೊಳ್ಳಿ. ಶುಚಿಗೊಳಿಸಿದ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ ಮತ್ತು 2-3 ನಿಮಿಷ ಕಾಲ ಬೆರಳಿನಿಂದ ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿಕೊಳ್ಳಿ. 15 ನಿಮಿಷ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ ಮೂರು ಸಲ ಹೀಗೆ ಮಾಡಿ.

ಲಿಂಬೆ ಮತ್ತು ಮೊಸರು
ಬೇಕಾಗುವ ಸಾಮಗ್ರಿಗಳು
ತಯಾರಿಸುವ ವಿಧಾನ
ಶುಚಿಯಾಗಿರುವಂತಹ ಪಿಂಗಾಣಿಯಲ್ಲಿ ಲಿಂಬೆರಸ ಮತ್ತು ಮೊಸರು ಹಾಕಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ನಿಧಾನವಾಗಿ ಕೆಲವು ನಿಮಿಷ ಕಾಲ ಮುಖಕ್ಕೆ ಮಸಾಜ್ ಮಾಡಿ. 30 ನಿಮಿಷ ಕಾಲ ಇದನ್ನು ಹಾಗೆ ಬಿಡಿ. 30 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಕೊನೆಯದಾಗಿ ತಣ್ಣೀರಿನಿಂದ ತೊಳೆಯಿರಿ. ವೇಗವಾಗಿ ಫಲಿತಾಂಶ ಪಡೆಯಲು ದಿನದಲ್ಲಿ ಮೂರು ಸಲ ಹೀಗೆ ಮಾಡಿ.

ಲಿಂಬೆ ಮತ್ತು ಗ್ಲಿಸರಿನ್
ಬೇಕಾಗುವ ಸಾಮಗ್ರಿಗಳು
ತಯಾರಿಸುವ ವಿಧಾನ
ಲಿಂಬೆರಸ, ಗ್ಲಿಸರಿನ್ ಮತ್ತು ರೋಶ್ ವಾಟರ್ ನ್ನು ಸ್ಪ್ರೇ ಬಾಟಲಿಗೆ ಹಾಕಿ ಮಿಶ್ರಣ ಮಾಡಿ. ನೀವು ಪ್ರತಿನಿತ್ಯ ಮಲಗುವ ಮೊದಲು ಈ ಮಿಶ್ರಣವನ್ನು ಮುಖಕ್ಕೆ ಸ್ಪ್ರೇ ಮಾಡಿಕೊಂಡು ಮಲಗಿ. ಮರುದಿನ ಬೆಳಗ್ಗೆ ಮುಖ ತೊಳೆಯಿರಿ. ಇದನ್ನು ನೀವು ರೆಫ್ರಿಜರೇಟರ್ ನಲ್ಲಿಡಬಹುದು ಮತ್ತು ನಿಮಗೆ ಬೇಕಾದಾಗ ಬಳಸಬಹುದು.

ಲಿಂಬೆ ಮತ್ತು ವಿಟಮಿನ್ ಇ ತೈಲ
ಬೇಕಾಗುವ ಸಾಮಗ್ರಿಗಳು
ತಯಾರಿಸುವ ವಿಧಾನ
ಲಿಂಬೆತೈಲ, ವಿಟಮಿನ್ ಇ ಮತ್ತು ಬಾದಾಮಿ ತೈಲವನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಕಣ್ಣಿನ ಕೆಳಭಾಗಕ್ಕೆ ಗಮನಹರಿಸಿ ಹಚ್ಚಿ ಮತ್ತು ಕೆಲವು ನಿಮಿಷ ಕಾಲ ನಯವಾಗಿ ಮಸಾಜ್ ಮಾಡಿ. ರಾತ್ರಿ ಮಲಗುವ ಮೊದಲು ನೀವು ಇದನ್ನು ಬಳಸಿಕೊಳ್ಳಿ.



Click it and Unblock the Notifications
