For Quick Alerts
ALLOW NOTIFICATIONS  
For Daily Alerts

ಮೂಗಿನ ಮೇಲಿರುವ ಕಪ್ಪು ಕಲೆಗಳ ನಿವಾರಣೆಗೆ ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

|

ಮೂಗಿನ ಮೇಲಿನ ಕಪ್ಪು ಕಲೆಗಳು ನಿಜಕ್ಕೂ ಕಿರಿಕಿರಿಯನ್ನುಂಟು ಮಾಡುತ್ತಿರುತ್ತವೆ. ನೀವು ಸಾರ್ವಜನಿಕವಾಗಿ ಗೋಚರಿಸಿಕೊಂಡಾಗ ಈ ಕಲೆಗಳು ನಿಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿಬಿಡುತ್ತವೆ. ಕೆನ್ನೆ, ಗಲ್ಲ ಹಾಗೂ ಸಾಮಾನ್ಯವಾಗಿ ಮೂಗಿನಲ್ಲಿ ಕಪ್ಪು ಕಲೆಗಳು ಕಂಡುಬರುತ್ತವೆ. ಈ ಸ್ಥಳಗಳು ತುಂಬಾ ಸಣ್ಣದಾಗಿರುವುದರಿಂದ ತ್ವಚೆಯ ಪದರ ಇದನ್ನು ಆವರಿಸಿಕೊಂಡಿರುವುದಿಲ್ಲ. ಸೂರ್ಯನ ಬಿಸಿಲಿಗೆ ಒಡ್ಡಿಕೊಂಡಿರುವುದು ಮತ್ತು ಧೂಳು ಮಾಲಿನ್ಯದಿಂದಾಗಿ ಈ ಕಪ್ಪು ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಹಾರ್ಮೋನ್ ಅಂಶಗಳಿಂದ ಕೂಡ ಈ ಕಲೆಗಳು ತ್ವಚೆಯ ಮೇಲೆ ಪರಿಣಾಮ ಬೀರುತ್ತವೆ. ತ್ವಚೆಯಲ್ಲಿ ಇವುಗಳು ಗಾಢವಾಗಿ ಸಂಗ್ರಹವಾಗುವುದರಿಂದ ಮುಖದ ಕಾಂತಿಯನ್ನು ಇವು ಕುಂದಿಸುತ್ತವೆ.

ಇವುಗಳನ್ನು ನಿವಾರಣೆ ಮಾಡುವುದಕ್ಕಾಗಿ ನೀವು ಎಕ್ಸ್‌ಫೋಲಿಯೇಶನ್ ಅನ್ನು ಮಾಡಬಹುದಾಗಿದೆ. ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಈ ಕ್ರಿಯೆಯನ್ನು ಮಾಡಿ. ಅಂದರೆ ನೈಸರ್ಗಿಕ ಅಂಶಗಳನ್ನು ಬಳಸಿಕೊಂಡು ಕಪ್ಪು ಕಲೆಗಳಿರುವ ಭಾಗದಲ್ಲಿ ಮಸಾಜ್ ಮಾಡುವ ಕ್ರಮವಾಗಿದೆ ಎಕ್ಸ್‌ಫೋಲಿಯೇಶನ್. ಅಡುಗೆ ಮನೆಯಲ್ಲೇ ದೊರೆಯುವ ವಸ್ತುಗಳನ್ನು ಬಳಸಿ ಈ ಎಕ್ಸ್‌ಫೋಲಿಯೇಶನ್ ಅನ್ನು ನಿಮಗೆ ನಡೆಸಬಹುದಾಗಿದೆ. ಹಾಗಿದ್ದರೆ ಆ ವಸ್ತುಗಳನ್ನು ಬಳಸಿಕೊಂಡು ಎಕ್ಸ್‌ಫೋಲಿಯೇಶನ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ....

1. ಮೊಟ್ಟೆಯ ಬಿಳಿ ಭಾಗ

1. ಮೊಟ್ಟೆಯ ಬಿಳಿ ಭಾಗ

ಮೊಟ್ಟೆಯಲ್ಲಿರುವ ನ್ಯೂಟ್ರೀನ್ ಅಂಶಗಳು ಮೃತಕೋಶಗಳನ್ನು ನಿವಾರಿಸುವಲ್ಲಿ ಸಿದ್ಧಹಸ್ತವಾಗಿದೆ. ಇದು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.

ಸಾಮಾಗ್ರಿಗಳು:

*2 ಮೊಟ್ಟೆಗಳು

*ಇದನ್ನು ಮಾಡುವ ಬಗೆ:

*. 2 ಮೊಟ್ಟೆಗಳಿಂದ ಮೊಟ್ಟೆಯ ಬಿಳಿ ಭಾಗವನ್ನು ಪ್ರತ್ಯೇಕಿಸಿ

*. ಇದನ್ನು ಚೆನ್ನಾಗಿ ಗೊಟಾಯಿಸಿಕೊಳ್ಳಿ. ಮೃದು ಮಿಶ್ರಣ ಸಿದ್ಧಪಡಿಸಿ

*. ಕಿಚನ್ ಪೇಪರ್ ತೆಗೆದುಕೊಂಡು ನಿಮ್ಮ ಮುಖಕ್ಕೆ ಹಚ್ಚಿ

*. ಬ್ರಶ್ ಬಳಸಿ ಮೊಟ್ಟೆಯ ಬಿಳಿ ಭಾಗವನ್ನು ಹಚ್ಚಿಕೊಳ್ಳಿ

*. ಇದು ಮೂಗಿನಲ್ಲಿ ಹಾಗೆಯೇ ಇರಲಿ

*. ಇದು ಒಣಗಿದ ನಂತರ ಪೇಪರ್‌ನಿಂದ ಒರೆಸಿಕೊಳ್ಳಿ

*. ನಿಮ್ಮ ಮೂಗಿನಲ್ಲಿ ಬದಲಾವಣೆ ಕಾಣುವವರೆಗೆ ಇದನ್ನು ಮಾಡಿ

2. ಸಕ್ಕರೆ ಮತ್ತು ಲಿಂಬೆ ರಸ

2. ಸಕ್ಕರೆ ಮತ್ತು ಲಿಂಬೆ ರಸ

ನಿಮ್ಮ ತ್ವಚೆಗೆ ಇದು ಅತ್ಯುತ್ತಮ ಎಕ್ಸ್‌ಫೋಲಿಯೇಟ್ ಎಂದೆನಿಸಿದ್ದು ಇದು ಮೃತಕೋಶವನ್ನು ಸುಲಭವಾಗಿ ನಿವಾರಿಸುತ್ತದೆ. ತ್ವಚೆಯಲ್ಲಿರುವ ವಿಷಕಾರಿ ಅಂಶಗಳನ್ನು ಇದು ನಿವಾರಿಸುತ್ತದೆ.

ಸಾಮಾಗ್ರಿಗಳು

* 1 ಚಮಚ ಸಕ್ಕರೆ

*. 2-3 ಚಮಚ ಲಿಂಬೆ ರಸ

ಮಾಡುವ ವಿಧಾನ

*. ಒಂದು ಪಾತ್ರೆಯಲ್ಲಿ ಒಂದು ಚಮಚ ಸಕ್ಕರೆಯನ್ನು ತೆಗೆದುಕೊಳ್ಳಿ

*. ಲಿಂಬೆಯನ್ನು ಕತ್ತರಿಸಿಕೊಂಡು ಇದಕ್ಕೆ ಲಿಂಬೆ ರಸ ಮಿಶ್ರ ಮಾಡಿ ಮತ್ತು ಎರಡನ್ನೂ ಸಮ್ಮಿಶ್ರಗೊಳಿಸಿ

*. ನಿಮ್ಮ ಮೂಗಿಗೆ ಇದನ್ನು ಹಚ್ಚಿಕೊಳ್ಳಿ ಮತ್ತು ವೃತ್ತಾಕಾರವಾಗಿ ಮಸಾಜ್ ಮಾಡಿ

*. 10 ನಿಮಿಷ ಕಾಯಿರಿ ನಂತರ ತಣ್ಣೀರಿನಿಂದ ಮೂಗನ್ನು ತೊಳೆದುಕೊಳ್ಳಿ

*. ವಾರಕ್ಕೆ 2-3 ಬಾರಿ ಹೀಗೆ ಮಾಡಿ ಮತ್ತು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.

3.ಹಾಲು ಮತ್ತು ಜಿಲೆಟಿನ್ ಮಾಸ್ಕ್

3.ಹಾಲು ಮತ್ತು ಜಿಲೆಟಿನ್ ಮಾಸ್ಕ್

ತ್ವಚೆಯ ಸಂರಕ್ಷಕವಾಗಿ ಇದು ಕೆಲಸ ಮಾಡುತ್ತದೆ.

ಸಾಮಾಗ್ರಿಗಳು

*1 ಚಮಚ ಹಾಲು

*1 ಚಮಚ ಜಿಲೆಟಿನ್

ಮಾಡುವ ವಿಧಾನ

*. ಒಂದು ಪಾತ್ರೆಯಲ್ಲಿ ಸುವಾಸನೆ ರಹಿತವಾದ ಜಿಲೆಟಿನ್ ಪೌಡರ್ ಅನ್ನು ತೆಗೆದುಕೊಳ್ಳಿ

*. ಇದಕ್ಕೆ ಹಾಲನ್ನು ಸೇರಿಸಿ ಮತ್ತು ಎರಡನ್ನೂ ಚೆನ್ನಾಗಿ ಮಿಶ್ರ ಮಾಡಿ

*. ಈ ಮಿಶ್ರಣವನ್ನು ಕೆಲವು ಸೆಕೆಂಡ್‌ಗಳವರೆಗೆ ಬಿಸಿ ಮಾಡಿ

*. ಈ ಮಿಶ್ರಣ ತುಂಬಾ ಬಿಸಿ ಇರದೇ ಇದ್ದಾಗ, ನಿಮ್ಮ ಮೂಗಿಗೆ ಬ್ರಶ್‌ನ ಸಹಾಯದಿಂದ ಈ ಮಿಶ್ರಣವನ್ನು ಹಚ್ಚಿಕೊಳ್ಳಿ.

*. 15 ನಿಮಿಷ ಹಾಗೆಯೇ ಬಿಡಿ ಮತ್ತು ನಿಮ್ಮ ಬೆರಳಿನಿಂದ ಅದನ್ನು ತೆಗೆಯಿರಿ

*. ನಂತರ ತಣ್ಣೀರಿನಿಂದ ಇದನ್ನು ತೊಳೆದುಕೊಳ್ಳಿ ಇದು ತ್ವಚೆಯ ರಂಧ್ರಗಳನ್ನು ತೆರೆಯಲು ಸಹಕಾರಿಯಾಗಿದೆ.

4. ಜೇನು ಮತ್ತು ಅನನಾಸು ಮಾಸ್ಕ್

4. ಜೇನು ಮತ್ತು ಅನನಾಸು ಮಾಸ್ಕ್

ತ್ವಚೆಯಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ನಿವಾರಿಸು ಈ ಮಾಸ್ಕ್ ಸಹಾಯ ಮಾಡುತ್ತದೆ ಮತ್ತು ಹೈಡ್ರೇಟ್ ಮಾಡುತ್ತದೆ.

ಸಾಮಾಗ್ರಿಗಳು

*1 ಕಪ್ ಪೈನಾಪಲ್ ರಸ

*2 ಚಮಚ ಜೇನು

ಮಾಡುವ ವಿಧಾನ:

*. ಅನನಾಸು ಅನ್ನು ಸಣ್ಣ ತುಂಡುಗಳನ್ನಾಗಿ ಕಟ್ ಮಾಡಿ ಅವುಗಳನ್ನು ಬ್ಲೆಂಡ್ ಮಾಡಿ

*. ರಸವನ್ನು ಬಸಿದು ಅದನ್ನು ಬೌಲ್‌ಗೆ ಹಾಕಿ

*. ಇದಕ್ಕೆ 2 ಚಮಚ ಜೇನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ

*. ನಿಮ್ಮ ಮುಖಕ್ಕೆ ಈ ಮಾಸ್ಕ್ ಹಚ್ಚಿ ಮತ್ತು 20 ನಿಮಿಷ ಕಾಯಿರಿ

*. 20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿದ ಒದ್ದೆ ಬಟ್ಟೆಯಿಂದ ಮುಖವನ್ನು ಒರೆಸಿಕೊಳ್ಳಿ

5. ಟೊಮೇಟೊ ಮತ್ತು ಉಪ್ಪು

5. ಟೊಮೇಟೊ ಮತ್ತು ಉಪ್ಪು

ಟೊಮೇಟೊದಲ್ಲಿರುವ ಉತ್ಕರ್ಷಣ ನಿರೋಧಿ ಅಂಶವು ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ.

ಸಾಮಾಗ್ರಿಗಳು

*1 ಚಮಚ ಉಪ್ಪು

*2 ಚಮಚ ಟೊಮೇಟೊ ರಸ

ಮಾಡುವ ವಿಧಾನ:

* ಟೊಮೇಟೊವನ್ನು ಬ್ಲೆಂಡ್ ಮಾಡಿಕೊಂಡು ಪ್ಯೂರಿ ಹೊರತೆಗೆಯಿರಿ

*ಇದಕ್ಕೆ 1 ಚಮಚ ಉಪ್ಪು ಹಾಕಿ ಮತ್ತು ಚೆನ್ನಾಗಿ ಮಿಶ್ರ ಮಾಡಿ

* ನಿಮ್ಮ ಮೂಗಿಗೆ ಈ ಮಿಶ್ರಣವನ್ನು ಹಚ್ಚಿ ಮತ್ತು ವೃತ್ತಾಕಾರವಾಗಿ ಮಸಾಜ್ ಮಾಡಿ

* ಇದನ್ನು 5-10 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮೂಗನ್ನು ತೊಳೆದುಕೊಳ್ಳಿ.

6. ಹಸಿ ಆಲೂಗಡ್ಡೆ

6. ಹಸಿ ಆಲೂಗಡ್ಡೆ

ಹಸಿ ಆಲೂಗಡ್ಡೆ ಮೊಡವೆಗಳಿಗೆ ಉತ್ತಮವಾದ ಆರೈಕೆಯಾಗಿದೆ. ಬ್ಲ್ಯಾಕ್ ಹೆಡ್ ನಿವಾರಣೆಗೂ ಈ ಆಲುಗಡ್ಡೆಯನ್ನು ಬಳಸಬಹುದು. ಆಲುಗಡ್ಡೆಯ ತೆಳುವಾದ ಬಿಲ್ಲೆಯನ್ನು ಕತ್ತರಿಸಿಕೊಂಡು ಬ್ಲ್ಯಾಕ್ ಹೆಡ್ ಇರುವಲ್ಲಿ ಸ್ವಲ್ಪ ಒತ್ತಡದಲ್ಲಿ ಕೊಂಚ ಸಮಯ ಉಜ್ಜಬೇಕು. ಸ್ವಲ್ಪ ಸಮಯ ಬಿಟ್ಟು ದಟ್ಟನೆಯ ಟವಲ್ ಉಪಯೋಗಿಸಿ ಒಣಗಿದ ಆಲುಗಡ್ಡೆಯ ರಸವನ್ನು ಒರೆಸಿ ತೆಗೆಯಬೇಕು. ಇದು ಬ್ಲ್ಯಾಕ್‌ಹೆಡ್‌ಗಳನ್ನು ತನ್ನೊಂದಿಗೆ ಸೆಳೆದುಕೊಂಡು ಬರುತ್ತದೆ. ತಣ್ಣನೆಯ ನೀರಿನಲ್ಲಿ ಬಳಿಕ ಮುಖ ತೊಳೆದುಕೊಳ್ಳಬೇಕು.

7. ಹಲ್ಲುಜ್ಜುವ ಪೇಸ್ಟ್ ಅಥವಾ ಟೂಥ್ ಪೇಸ್ಟ್

7. ಹಲ್ಲುಜ್ಜುವ ಪೇಸ್ಟ್ ಅಥವಾ ಟೂಥ್ ಪೇಸ್ಟ್

ಟೂಥ್ ಪೇಸ್ಟ್ ಸಹಾ ಬ್ಲ್ಯಾಕ್ ಹೆಡ್ ನಿವಾರಣೆಗೆ ಸಹಕಾರಿಯಾಗಿದೆ. ಇದಕ್ಕೆ ಪುದಿನಾಯುಕ್ತ ಪೇಸ್ಟ್ ಉತ್ತಮ. ಬ್ಲ್ಯಾಕ್ ಹೆಡ್ ಗಳಿರುವಲ್ಲಿ ದಪ್ಪನಾಗಿ ಹಚ್ಚಿ ಒಣಗಿ ಗಟ್ಟಿಯಾಗಲು ಬಿಡಬೇಕು. ಬಳಿಕ ನಿಧಾನವಾಗಿ ಕೆಳಗಿನಿಂದ ಮೇಲಕ್ಕೆ ಸಿಪ್ಪೆಯಂತೆ ಸುಲಿಯುತ್ತಾ ಬರಬೇಕು. ಇದರೊಂದಿಗೆ ಬ್ಲ್ಯಾಕ್ ಹೆಡ್‌ಗಳು ಬುಡಸಹಿತ ಕಿತ್ತು ಬರುತ್ತವೆ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಬೇಕು.

8. ಅಡುಗೆ ಸೋಡಾ

8. ಅಡುಗೆ ಸೋಡಾ

ಎರಡು ದೊಡ್ಡಚಮಚ ನೀರಿಗೆ ಒಂದು ದೊಡ್ಡಚಮಚ ಅಡುಗೆ ಸೋಡಾ ಸೇರಿಸಿ ದ್ರಾವಣವನ್ನು ತಯಾರಿಸಿ. ಈ ದ್ರಾವಣವನ್ನು ಬ್ಲ್ಯಾಕ್ ಹೆಡ್‌ಗಳ ಮೇಲೆ ದಪ್ಪನಾಗಿ ಹಚ್ಚಿಕೊಳ್ಳಿ. ಹಚ್ಚುವಿಕೆ ಕೆಳಗಿನಿಂದ ಮೇಲಕ್ಕೆ ವೃತ್ತಾಕಾರದಲ್ಲಿರಲಿ. ಸುಮಾರು ಮೂರರಿಂದ ಐದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಒಂದು ವೇಳೆ ಹಚ್ಚುವಾಗ ಉರಿ ಎನಿಸಿದರೆ ತಕ್ಷಣ ನಿಲ್ಲಿಸಿ ಬಿಡಿ, ಕೆಲವರಿಗೆ ಅಡುಗೆ ಸೋಡಾ ಅಲರ್ಜಿ ತರಿಸುತ್ತದೆ.

English summary

How To Remove Blackheads On Nose

Blackheads are one of the skin problems that can be irritating. These dark marks can affect our self confidence to appear in a public gathering. Blackheads generally appear on the chin, cheeks, etc. However, it commonly appears on the nose. These are small spots that do not have a layer of skin covered over it. Continuous exposure to the sun and other environmental factors like pollution make these zits black. Sometimes, hormonal factors also can be a cause for this. Due to these factors it causes dead skin cells to accumulate on the skin that makes the skin look dull.
X
Desktop Bottom Promotion