ಬರೀ ಎರಡು ವಾರದಲ್ಲಿಯೇ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಿ!!

Posted By: Deepu
Subscribe to Boldsky

ಸುಂದರವಾಗಿ ಕಾಣುಲು ನಿತ್ಯವೂ ಬಳಸುವ ಮೇಕಪ್, ಧೂಳು, ಮಾಲಿನ್ಯದ ಗಾಳಿ, ಸೂರ್ಯನ ಕಿರಣ, ಅನುಚಿತ ಆಹಾರ ಕ್ರಮ, ಆರೈಕೆ ಮಾಡದಿರುವುದು ಹೀಗೆ ಅನೇಕ ಕಾರಣಗಳಿಂದ ಚರ್ಮವು ಬಹುಬೇಗ ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತದೆ. ಹದಗೆಟ್ಟಿರುವ ಚರ್ಮದ ಆರೋಗ್ಯದ ಕುರಿತು ಸೂಕ್ತ ರೀತಿಯ ಆರೈಕೆ ಮಾಡದೆ ಹೋದರೆ ಬಹುಬೇಗ ವಯಸ್ಸಾದ ಚಿಹ್ನೆಗಳು ಕಾಳಿಸಿಕೊಳ್ಳುತ್ತವೆ. ಇದರೊಟ್ಟಿಗೆ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಸಮಸ್ಯೆ ಅಥವಾ ಅನಾರೋಗ್ಯದಿಂದ ಕೂಡಿರುವ ಚರ್ಮಕ್ಕೆ ವಿಟಮಿನ್ ಹಾಗೂ ಪೋಷಕಾಂಶಗಳಿಂದ ಕೂಡಿದ ಆರೈಕೆಯನ್ನು ಮಾಡಬೇಕಾಗುವುದು.

ಆದರೆ ಅಧಿಕ ಜನರು ದೋಷವನ್ನು ಮರೆಮಾಚಲು ಇನ್ನಷ್ಟು ರಾಸಾಯನಿಕ ಪದಾರ್ಥಗಳಿಂದ ಕೂಡಿರುವ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆಯೇ ಹೊರತು ಆರೋಗ್ಯಕರವಾಗಿ ಇರದು. ನೀವು ಜಿಡ್ಡಿನ ಸಮಸ್ಯೆ, ಸುಕ್ಕು, ಕಪ್ಪು ಕಲೆ, ಒಣ ತ್ವಚೆ, ತುರಿಕೆ, ಮೊಡವೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ನೀವು ಬಳಲುತ್ತಿದ್ದೀರಿ, ಸೂಕ್ತ ಆರೈಕೆ ಕ್ರಮದ ಹುಡುಕಾಟದಲ್ಲಿದ್ದೀರಿ ಎಂದಾದರೆ ನಿಮಗಾಗಿ ಬೋಲ್ಡ್ ಸ್ಕೈ ಕೆಲವು ಬಗೆಯ ನೈಸರ್ಗಿಕ ಉತ್ಪನ್ನಗಳ ಆರೈಕೆ ವಿಧಾನವನ್ನು ವಿವರಿಸಿದೆ ನೋಡಿ...

 ಮೂಲಂಗಿ

ಮೂಲಂಗಿ

- ಮೂರು ಸಣ್ಣ ಮೂಲಂಗಿಯನ್ನು ಅರ್ಧಗಂಟೆಗಳ ಕಾಲ ಬೇಯಿಸಿ.

- ಬೇಯಿಸಿದ ನೀರನ್ನು ತಣ್ಣಗಾಗಲು ಬಿಡಿ.

- ಬಳಿಕ ತಣ್ಣಗಾದ ನೀರನ್ನು ಮುಖಕ್ಕೆ ಅನ್ವಯಿಸಿ.

- ಸ್ವಲ್ಪ ಸಮಯದ ನಂತರ ಸ್ವಚ್ಛವಾದ ನೀರಿನಿಂದ ತೊಳೆಯಿರಿ.

- ಈ ಕ್ರಮವನ್ನು ಗಣನೀಯವಾಗಿ ಬಳಸಿದರೆ ತ್ವಚೆಯು ಬಿಳುಪನ್ನು ಪಡೆದುಕೊಳ್ಳುತ್ತದೆ. ಅಲ್ಲದೆ ಮುಖದಲ್ಲಿರುವ ಕಲೆಯನ್ನು ತೆಗೆಯುವುದು.

ಕಿತ್ತಳೆ

ಕಿತ್ತಳೆ

- ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿಗೆ ಒಣಗಿಸಿ. ಸಂಪೂರ್ಣವಾಗಿ ಒಣಗಿದ ಮೇಲೆ, ಮಿಕ್ಸಿಯಲ್ಲಿ ರುಬ್ಬಿ ಪುಡಿಮಾಡಿ.

- 3 ಟೇಬಲ್ ಚಮಚ ಪುಡಿಗೆ ಹಾಲನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ.

- ಪೇಸ್ಟ್ ಅನ್ನು ಮುಖಕ್ಕೆ ಅನ್ವಯಿಸಿ, 15 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ತಣ್ಣನೆಯ ನೀರಿನಲ್ಲಿ ಸ್ವಚ್ಛಗೊಳಿಸಿ.

- ಉತ್ತಮ ಫಲಿತಾಂಶಕ್ಕೆ ಗಣನೀಯವಾಗಿ ಅನ್ವಯಿಸಿ.

ಜೀರಿಗೆ

ಜೀರಿಗೆ

- ಸ್ವಲ್ಪ ಜೀರಿಗೆಯನ್ನು ನೀರಿನಲ್ಲಿ ಬೆರೆಸಿ, ಅರ್ಧ ಗಂಟೆಗಳ ಕಾಲ ಕುದಿಸಿ.

- ಕುದಿಸಿದ ನೀರು ತಣ್ಣಗಾದ ಮೇಲೆ ಮುಖಕ್ಕೆ ಅನ್ವಯಿಸಿ.

- ಬಳಿಕ ತಣ್ಣನೆಯ ನೀರಿನಲ್ಲಿ ಸ್ವಚ್ಛಗೊಳಿಸಿ.

- ಅತ್ಯಂತ ಸರಳ ವಿಧಾನವಾದ ಈ ಮನೆ ಆರೈಕೆಯು ತ್ವಚೆಯನ್ನು ಹೆಚ್ಚು ಹೊಳಪು ಹಾಗೂ ಆರೋಗ್ಯದಿಂದ ಕೂಡಿರುವಂತೆ ಮಾಡುತ್ತದೆ.

ಕಡ್ಲೇ ಹಿಟ್ಟು

ಕಡ್ಲೇ ಹಿಟ್ಟು

- 3 ಟೇಬಲ್ ಚಮಚ ಕಟ್ಲೆ ಹಿಟ್ಟು, 2 ಟೇಬಲ್ ಚಮಚ ಹಾಲು ಮತ್ತು 1 ಟೇಬಲ್ ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಮತ್ತು ಕತ್ತಿಗೆ ಲೇಪಿಸಿ, 20 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ತಣ್ಣನೆಯ ನೀರಿನಲ್ಲಿ ಸ್ವಚ್ಛಗೊಳಿಸಿ.

- ಈ ಕ್ರಮವನ್ನು ಗಣನೀಯವಾಗಿ ಬಳಸಿದರೆ ತ್ವಚೆಯು ಬಿಳುಪನ್ನು ಪಡೆದು ಕೊಳ್ಳುತ್ತದೆ ಹಾಗೂ ಆರೋಗ್ಯದಿಂದ ಕೂಡಿರುತ್ತದೆ.

ಮುಲ್ತಾನಿ ಮಿಟ್ಟಿ ಹಾಗೂ ಶ್ರೀಗಂಧದ ಪುಡಿ

ಮುಲ್ತಾನಿ ಮಿಟ್ಟಿ ಹಾಗೂ ಶ್ರೀಗಂಧದ ಪುಡಿ

- 1 ಟೇಬಲ್ ಚಮಚ ಮುಲ್ತಾನಿ ಮಣ್ಣು, 3 ಟೇಬಲ್ ಚಮಚ ಗುಲಾಬಿ ನೀರು ಮತ್ತು 1 ಟೇಬಲ್ ಚಮಚ ಶ್ರೀಗಂಧದ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಮತ್ತು ಕತ್ತಿಗೆ ಲೇಪಿಸಿ, 15 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ತಣ್ಣನೆಯ ನೀರಿನಲ್ಲಿ ಸ್ವಚ್ಛಗೊಳಿಸಿ.

- ಉತ್ತಮ ಫಲಿತಾಂಶಕ್ಕೆ ಗಣನೀಯವಾಗಿ ಅನ್ವಯಿಸಿ.

ಬಾದಾಮಿ

ಬಾದಾಮಿ

- ಒಂದು ಹಿಡಿ ಬಾದಾಮಿಯನ್ನು ರಾತ್ರಿ ನೆನೆಯಿಡಿ. ಮುಂಜಾನೆ ಸ್ವಲ್ಪ ಹಾಲನ್ನು ಬೆರೆಸಿ, ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ.

- ಮಿಶ್ರಣದ ಪೇಸ್ಟ್ ಅನ್ನು ಮುಖಕ್ಕೆ ಮತ್ತು ಕತ್ತಿಗೆ ಲೇಪಿಸಿ, ಮೃದುವಾಗಿ ಮಸಾಜ್ ಮಾಡಿ.

- ಸ್ವಲ್ಪ ಸಮಯದ ಬಳಿಕ ತಣ್ಣನೆಯ ನೀರಿನಲ್ಲಿ ಸ್ವಚ್ಛಗೊಳಿಸಿ.

- ಈ ಕ್ರಮವನ್ನು ಅನ್ವಯಿಸುವುದರಿಂದ ಚರ್ಮದ ಮೇಲಿರುವ ಕಲೆಗಳು ಹಾಗೂ ಅನೇಕ ಸಮಸ್ಯೆಗಳು ನಿವಾರಣೆ ಹೊಂದುವವು.

ಹಾಲಿನ ಕೆನೆ

ಹಾಲಿನ ಕೆನೆ

- ಮುಖಕ್ಕೆ ಸ್ವಲ್ಪ ಹಾಲಿನ ಕೆನೆಯನ್ನು ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ.

- ಪ್ರತಿದಿನ ಮಲಗುವ ಮುನ್ನ ಈ ಕ್ರಮವನ್ನು ಅನ್ವಯಿಸಿ.

- ಈ ಪರಿಯಿಂದ ಚರ್ಮವು ತೇವದಿಂದ ಕೂಡಿರುತ್ತದೆ. ಸುಕ್ಕುಗಳನ್ನು ನಿವಾರಿಸಿ, ಆರೋಗ್ಯವಾಗಿರುವಂತೆ ಮಾಡುವುದು.

ಬೀಟ್ರೂಟ್ ಫೇಸ್ ಪ್ಯಾಕ್

ಬೀಟ್ರೂಟ್ ಫೇಸ್ ಪ್ಯಾಕ್

- ಒಂದಿಷ್ಟು ಬೀಟ್ರೂಟ್ ಚೂರನ್ನು ತೆಗೆದುಕೊಂಡು, ಚಮಚದ ಸಹಾದಿಂದ ಜಜ್ಜಿ ಪೇಸ್ಟ್ ಪಾಡಿ.

- ಬೀಟ್ರೂಟ್ ಪೇಸ್ಟ್‍ಗೆ 2 ಟೀಚಮಚ ಆಲಿವ್ ಎಣ್ಣೆ ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ.

- 20 ನಿಮಿಷಗಳ ಕಾಲ ಮುಖದ ಮೇಲೆ ಆರಲು ಬಿಡಿ.

- ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ತಿಂಗಳಿಗೆ ಮೂರು ಬಾರಿ ಈ ಕ್ರಮವನ್ನು ಅನ್ವಯಿಸುವುದರಿಂದ ಕಾಂತಿಯುತ ಚರ್ಮವನ್ನು ಪಡೆದುಕೊಳ್ಳಬಹುದು.

ಬಟಾಣಿ ಫೇಸ್ ಪ್ಯಾಕ್

ಬಟಾಣಿ ಫೇಸ್ ಪ್ಯಾಕ್

- 6-7 ಬಟಾಣಿಯ ಪೇಸ್ಟ್ ಗೆ 1 ಟೀ ಚಮಚ ನಿಂಬೆ ರಸ, 1/2 ಟೀ ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಮಿಶ್ರಗೊಳಿಸಿ.

- ನಿಧಾನವಾಗಿ ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ.

- 15 ನಿಮಿಷಗಳ ಕಾಲ ಮುಖದ ಮೇಲೆ ಆರಲು ಬಿಡಿ.

- ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ತಾಜಾ ಮತ್ತು ಕಾಂತಿಯುತ ಚರ್ಮವನ್ನು ಪಡೆಯಲು ತಿಂಗಳಿಗೊಮ್ಮೆ ಈ ಮಿಶ್ರಣವನ್ನು ಅನ್ವಯಿಸಿ.

ಖರ್ಜೂರದ ಫೇಸ್ ಪ್ಯಾಕ್

ಖರ್ಜೂರದ ಫೇಸ್ ಪ್ಯಾಕ್

ಮುಖದಲ್ಲಿ ಧೂಳು ಕೂತು ಮುಖ ಆಯಿಲಿ ಆಗೋದು, ಬೆಳಿಗ್ಗೆ ಫ್ರೆಶ್ ಆಗಿ ಹೋಗಿದ್ರೂ ಕೂಡ ಸಂಜೆ ಅನ್ನೋಷ್ಟರಲ್ಲಿ ಮುಖದ ಕಾಂತಿ ಕಳೆಗುಂದಿ ಬೋರಿಂಗ್ ಫೇಸ್ ಅನ್ನಿಸುವ ತ್ವಚೆ ನಿಮ್ಮದಾಗಿದ್ರೆ ಖಂಡಿತ ನೀವು ಈ ಫೇಸ್ ಪ್ಯಾಕ್ ಟ್ರೈ ಮಾಡಲೇಬೇಕು. ಮೊದಲು ಆರರಿಂದ ಏಳು ಖರ್ಜೂರದ ಬೀಜವನ್ನು ತೆಗೆದುಕೊಳ್ಳಿ,. ಹೊರಗಿನ ಧೂಳಿನಿಂದ ಹೇಗೆ ನಿಮ್ಮ ಮುಖದಲ್ಲಿ ಕೊಳೆ ಕೂರುತ್ತೋ ಹಾಗೆಯೇ ಖರ್ಜೂರದ ಹಣ್ಣಿನಲ್ಲಿ ಕೊಳೆ ಕೂರುವ ಸಾಧ್ಯತೆ ಇರುತ್ತೆ, ಹಾಗಾಗಿ ಮೊದಲು ಖರ್ಜೂರನ್ನು ನೀರಿನಲ್ಲಿ ಸ್ವಲ್ಪ ಸ್ವಚ್ಛಗೊಳಿಸಿ ಆದ್ರೆ ಖರ್ಜೂರದ ಮೇಲ್ಬಾಗದ ಚರ್ಮ ಕಿತ್ತುಹೋಗದಂತೆ ನೋಡಿಕೊಳ್ಳಿ. ನಂತ್ರ ಸ್ವಚ್ಛಗೊಳಿಸಿದ ಖರ್ಜೂರವನ್ನು ಹಾಲಿನಲ್ಲಿ ಮುಳುಗಿಸಿ ಇಡಿ. ನೀವು ಎಲ್ಲಾ ಖರ್ಜೂರವೂ ಮುಳುಗುವಷ್ಟು ಹಾಲನ್ನು ತೆಗೆದುಕೊಳ್ಳಬೇಕು.

ಖರ್ಜೂರದ ಫೇಸ್ ಪ್ಯಾಕ್

ಖರ್ಜೂರದ ಫೇಸ್ ಪ್ಯಾಕ್

ಸುಮಾರು ಒಂದು ಗಂಟೆ ನೆನಸಿದ್ರೆ ಹಾಲಿನಲ್ಲಿ ಖರ್ಜೂರ ಬೆರೆತು ಸ್ಮೂತ್ ಆಗಿರುತ್ತೆ. ನಂತ್ರ ಅವೆರಡರ ಮಿಶ್ರಣದ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಗೆ ನಾಲ್ಕರಿಂದ ಐದು ಸ್ಪೂನ್ ಗೋಧಿಹಿಟ್ಟನ್ನು ಸೇರಿಸಿ ಗಟ್ಟಿಯಾಗಿ ಕಲಸಿ ಪೇಸ್ಟ್ ರೆಡಿ ಮಾಡಿ. ಈ ಪೇಸ್ಟನ್ನು ಮುಖಕ್ಕೆ ಅಪ್ಲೈ ಮಾಡ್ಕೊಳ್ಳಿ. ಸುಮಾರು ಅರ್ಥಗಂಟೆ ಮುಖದಲ್ಲಿ ಹಾಗೆಯೇ ಇರಲಿ. ಈ ಫೇಸ್ ಪ್ಯಾಕ್ ಒಂದು ರೀತಿಯ ಸ್ಕ್ರಬ್ ರೀತಿಯೂ ಕೆಲ್ಸ ಮಾಡುತ್ತೆ. ಹಾಗಾಗಿ ಆಗಾಗ ಸ್ವಲ್ಪ ಮಸಾಜ್ ಕೂಡ ಮಾಡ್ಕೊಳ್ಳಿ. ಟ್ಯಾನ್ ತೆಗೆದುಹಾಕಲು ಕೂಡ ಈ ಫೇಸ್ ಪ್ಯಾಕ್ ನೆರವಾಗಲಿದೆ. ನಂತ್ರ ತಣ್ಣನೆಯ ನೀರಿನಿಂದ ಮುಖವನ್ನು ವಾಷ್ ಮಾಡಿ.ರಿಸಲ್ಟ್ ಏನು ಅನ್ನೋದನ್ನು ನೀವೇ ಗಮನಿಸಿಕೊಳ್ಳಬಹುದು. ಟ್ರೈ ಮಾಡಿ ನೋಡಿ.

English summary

How to Make Skin Glow in Just two weeks!

You cherish to see that flawless skin that most people have. You can also get a beautiful and young skin at home by using simple home remedies. Natural ingredients are proven to be the best for your skin as they contain many vitamins that are needed for your skin to stop the signs of ageing.