For Quick Alerts
ALLOW NOTIFICATIONS  
For Daily Alerts

ನಿತ್ಯ ಬಳಸುವ ಸಕ್ಕರೆ ಸೌಂದರ್ಯದ ಸುಧಾರಣೆಗೆ ಸಹಾಯ ಮಾಡುವುದು

|

ಸಕ್ಕರೆ ಅಂಟಿನಂತಹ ಗುಣವನ್ನು ಹೊಂದಿರುವ ಸಿಹಿ ವಸ್ತು. ಅನೇಕರು ಸಕ್ಕರೆಯಿಂದ ಆದಷ್ಟು ದೂರ ಇರಲು ಪ್ರಯತ್ನಿಸುತ್ತಾರೆ. ಕಾರಣ ಅದು ಆರೋಗ್ಯದ ಮೇಲೆ ಕೆಲವು ಋಣಾತ್ಮಕ ಪರಿಣಾಮ ಬೀರುವುದು ಎನ್ನುವ ಕಾರಣವಷ್ಟೆ. ಆದರೆ ದೂರ ಇರುವವರು ಸಹ ಆಂತರಿಕವಾಗಿ ಸಕ್ಕರೆಯನ್ನು ಹಾಗೂ ಅದರ ಸಿಹಿಯನ್ನು ಹೆಚ್ಚು ಇಷ್ಟಪಡುತ್ತಾರೆ. ನಾಲಿಗೆಯನ್ನು ಸಿಹಿ ಮಾಡುವ ಈ ಸಕ್ಕರೆಯಿಂದ ನಮ್ಮ ಸೌಂದರ್ಯದ ಆರೈಕೆಯನ್ನು ಮಾಡಬಹುದು. ನಾವು ಬಯಸುವ ಆಕರ್ಷಣೆ ಹಾಗೂ ಹೊಳಪನ್ನು ನೀಡುವುದು. ನೈಸರ್ಗಿಕವಾದ ಉತ್ಪನ್ನಗಳೊಂದಿಗೆ ತಯಾರಿಸುವ ಈ ಸ್ಕ್ರಬ್ ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮವನ್ನು ಉಂಟುಮಾಡದು.

ಹೌದು, ದ್ರವರೂಪಕ್ಕೆ ಪರಿವರ್ತಿಸಿದಾಗ ಅಂಟಾದ ಗುಣವನ್ನು ಹೊಂದುವ ಸಕ್ಕರೆಯನ್ನು ಕೆಲವು ನೈಸರ್ಗಿಕ ಉತ್ಪನ್ನ ಗಳೊಂದಿಗೆ ಬೆರೆಸಿ ಸ್ಕ್ರಬ್‍ಗಳನ್ನಾಗಿ ಬಳಸಬಹುದು. ಇದರಿಂದ ಚರ್ಮವನ್ನು ಆರೋಗ್ಯವಾಗಿ ಹಾಗೂ ಆಕರ್ಷವಾಗಿರುವಂತೆ ಮಾಡಬಹುದು. ಇದು ಚರ್ಮದ ಮೇಲಿರುವ ಕೊಳೆಯನ್ನು ನಿವಾರಿಸುವುದು. ಜೊತೆಗೆ ಸತ್ತ ಜೀವಕೋಶಗಳನ್ನು ತೆಗೆದು ಚರ್ಮವು ತೇವಾಂಶ ಹಾಗೂ ತಾಜಾತನದಿಂದ ಕೂಡಿರುವಂತೆ ಮಾಡುವುದು. ಹಾಗಾದರೆ ಸ್ಕ್ರಬ್ ತಯಾರಿಸುವ ವಿಧಾನ ಹಾಗೂ ಅದರ ಬಳಕೆಯ ವಿಧಾನದ ಬಗ್ಗೆ ತಿಳಿಯೋಣ ಬನ್ನಿ...

ಜೇನುತುಪ್ಪ, ನಿಂಬೆ ಮತ್ತು ಸಕ್ಕರೆ

ಜೇನುತುಪ್ಪ, ನಿಂಬೆ ಮತ್ತು ಸಕ್ಕರೆ

ಜೇನುತುಪ್ಪ ಮತ್ತು ನಿಂಬೆ ರಸವು ಚರ್ಮವನ್ನು ಹೊಳಪಿನಂತೆ ಕೂಡಿರುವಂತೆ ಮಾಡುತ್ತದೆ. ಜೊತೆಗೆ ತೇವಾಂಶದಿಂದ ಕಂಗೊಳಿಸುವಂತೆ ಮಾಡುವುದು.

- 3 ಚಮಚ ಜೇನುತುಪ್ಪ, 2 ಚಮಚ ನಿಂಬೆರಸ ಮತ್ತು 2 ಚಮಚ ಸಕ್ಕರೆಯನ್ನು ಸೇರಿಸಿ ಮಿಶ್ರಗೊಳಿಸಿ.

- ಈ ಮಿಶ್ರಣವನ್ನು ತಕ್ಷಣವೇ ಮುಖ ಹಾಗೂ ಪೀಡಿತ ಪ್ರದೇಶಗಳಿಗೆ ವೃತ್ತಾಕಾರದ ಚಲನೆಯಲ್ಲಿ ಅನ್ವಯಿಸಿ.

- 10 ನಿಮಿಷದ ಬಳಿಕ ಸೌಮ್ಯವಾದ ನೀರಿನಿಂದ ತೊಳೆಯಿರಿ.

- ವಾರದಲ್ಲಿ ಮೂರು ಬಾರಿ ಈ ಕ್ರಮವನ್ನು ಅನ್ವಯಿಸುವುದರಿಂದ ಅತ್ಯುತ್ತಮ ಪರಿಹಾರವನ್ನು ಕಂಡುಕೊಳ್ಳಬಹುದು.

ಬಾದಾಮಿ ಎಣ್ಣೆ ಮತ್ತು ಸಕ್ಕರೆ ಸ್ಕ್ರಬ್

ಬಾದಾಮಿ ಎಣ್ಣೆ ಮತ್ತು ಸಕ್ಕರೆ ಸ್ಕ್ರಬ್

ಬಾದಾಮಿ ಎಣ್ಣೆ ವಿಟಮಿನ್ "ಸಿ"ಯಿಂದ ಕೂಡಿರುತ್ತದೆ. ಆರೋಗ್ಯಕರವಾದ ಅಂಗಾಂಶಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುವುದು. ಚರ್ಮವನ್ನು ಪುನರ್ ಯೌವನಗೊಳಿಸುವಲ್ಲಿ ನೆರವಾಗುತ್ತದೆ.

- 1 ಟೇಬಲ್ ಚಮಚ ಸಕ್ಕರೆ ಮತ್ತು 2 ಟೇಬಲ್ ಚಮಚ ಬಾದಾಮಿ ಎಣ್ಣೆಯನ್ನು ಮಿಶ್ರಗೊಳಿಸಿ.

- ಮಿಶ್ರಣವನ್ನು ವೃತ್ತಾಕಾರದಲ್ಲಿ ಮುಖಕ್ಕೆ ಅನ್ವಯಿಸುವುದರ ಮೂಲಕ ಸ್ಕ್ರಬ್ ಮಾಡಿ.

- ಸ್ವಲ್ಪ ಸಮಯದ ನಂತರ ಸ್ವಚ್ಛ ನೀರಿನಿಂದ ತೊಳೆಯಿರಿ.

-ಉತ್ತಮ ಫಲಿತಾಂಶಕ್ಕೆ ಮೂರುವಾರ ನಿರಂತರವಾಗಿ ಈ ಕ್ರಮವನ್ನು ಅನ್ವಯಿಸಿ.

ಬಾಳೆಹಣ್ಣು ಮತ್ತು ಸಕ್ಕರೆಯ ಸ್ಕ್ರಬ್

ಬಾಳೆಹಣ್ಣು ಮತ್ತು ಸಕ್ಕರೆಯ ಸ್ಕ್ರಬ್

ಬಾಳೆಹಣ್ಣು ಚರ್ಮವನ್ನು ಆದ್ರತೆಯಿಂದ ಕೂಡಿರುವಂತೆ ಮಾಡಲು ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತದೆ. ಇದರಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಖನಿಜಗಳು ಹೇರಳವಾಗಿರುವುದರಿಂದ ಚರ್ಮವನ್ನು ಮೃದುವಾಗಿಸಿ, ಆರೋಗ್ಯದಿಂದ ಕೂಡಿರುವಂತೆ ಮಾಡುತ್ತದೆ.

- 2 ಟೇಬಲ್ ಚಮಚ ಸಕ್ಕರೆಯನ್ನು ಮೃದುವಾಗಿ ಹಣ್ಣಾದ ಬಾಳೆಹಣ್ಣಿನ ಪೇಸ್ಟ್‍ಗೆ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಸ್ಕ್ರಬ್ ಮಾಡಿ.

- 5 ನಿಮಿಷದ ಬಳಿಕ ಸ್ವಚ್ಛ ನೀರಿನಿಂದ ತೊಳೆಯಿರಿ.

- ಉತ್ತಮ ಫಲಿತಾಂಶಕ್ಕೆ ವಾರದಲ್ಲಿ 2 ಬಾರಿ ಈ ಕ್ರಮವನ್ನು ಅನ್ವಯಿಸಿ.

ತೆಂಗಿನ ಎಣ್ಣೆ ಮತ್ತು ಸಕ್ಕರೆ

ತೆಂಗಿನ ಎಣ್ಣೆ ಮತ್ತು ಸಕ್ಕರೆ

- ಒಂದು ಬೌಲ್ ಅಲ್ಲಿ 3 ಟೇಬಲ್ ಚಮಚ ತೆಂಗಿನ ಎಣ್ಣೆ, 2 ಟೇಬಲ್ ಚಮಚ ಜೇನುತುಪ್ಪ ಮತ್ತು 3 ಟೇಬಲ್ ಚಮಚ

ಸಕ್ಕರೆಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಸ್ಕ್ರಬ್ ಮಾಡಿ.

- ಸ್ವಲ್ಪ ಸಮಯದ ಬಳಿಕ ಸ್ವಚ್ಛ ನೀರಿನಿಂದ ತೊಳೆಯಿರಿ.

- ಉತ್ತಮ ಫಲಿತಾಂಶಕ್ಕೆ ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸಿ.

ಚಾಕೋಲೇಟ್ ಮತ್ತು ಸಕ್ಕರೆ

ಚಾಕೋಲೇಟ್ ಮತ್ತು ಸಕ್ಕರೆ

ಕೊಕೊ ಪುಡಿಯು ಚರ್ಮವನ್ನು ನೈಸರ್ಗಿಕವಾಗಿ ಹೊಳಪು ಮೂಡಿಸಲು ಸಹಾಯ ಮಾಡುವುದು. ಜೊತೆಗೆ ಅತ್ಯುತ್ತಮ ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಹಾನಿಗೊಳಗಾದ ಚರ್ಮವನ್ನು ಬಹು ಬೇಗ ಚೇತರಿಸಿಕೊಳ್ಳುವಂತೆ ಮಾಡುತ್ತದೆ.

- 2 ಟೇಬಲ್ ಚಮಚ ಸಕ್ಕರೆ, 1 ಚಮಚ ಕೊಕೊ ಪುಡಿ ಮತ್ತು 2 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಸ್ಕøಬ್ ಮಾಡಿ.

- 15 ನಿಮಿಷದ ಬಳಿಕ ಸ್ವಚ್ಛ ನೀರಿನಿಂದ ತೊಳೆಯಿರಿ.

- ಉತ್ತಮ ಫಲಿತಾಂಶಕ್ಕೆ ವಾರದಲ್ಲಿ 2 ಬಾರಿ ಈ ಕ್ರಮವನ್ನು ಅನ್ವಯಿಸಿ.

ಗ್ರೀನ್ ಟೀ ಮತ್ತು ಸಕ್ಕರೆ

ಗ್ರೀನ್ ಟೀ ಮತ್ತು ಸಕ್ಕರೆ

ಗ್ರೀನ್ ಟೀ ಅತ್ಯುತ್ತಮ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ಇದರಲ್ಲಿ ಕಿಣ್ವಗಳು ಹಾಗೂ ಅಮೈನೋ ಆಮ್ಲಗಳು ಅತ್ಯಧಿಕ ಪ್ರಮಾಣದಲ್ಲಿ ಇರುವುದರಿಂದ ಚರ್ಮವನ್ನು ಉತ್ತಮ ರೀತಿಯಲ್ಲಿ ಪೋಷಿಸುತ್ತದೆ.

- 2 ಟೇಬಲ್ ಚಮಚ ಗ್ರೀನ್ ಟೀ, 3-4 ಟೇಬಲ್ ಚಮಚ ಸಕ್ಕರೆ 2 ಟೇಬಲ್ ಚಮಚ ಜೇನುತುಪ್ಪ ಸೇರಿಸಿ, ಗ್ರೀನ್ ಟೀಯನ್ನು ತಯಾರಿಸಿ.

- ಸ್ವಲ್ಪ ಗ್ರೀನ್‍ಟೀ ತೆಗೆದುಕೊಂಡು ಅದಕ್ಕೆ ಪುನಃ 2 ಟೇಬಲ್ ಚಮಚ ಸಕ್ಕರೆ ಹಾಗೂ 2 ಟೇಬಲ್ ಚಮಚ ಜೇನುತುಪ್ಪವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಚೆನ್ನಾಗಿ ಸ್ಕ್ರಬ್ ಮಾಡಿ

- ಸ್ವಲ್ಪ ಸಮಯದ ಬಳಿಕ ಸ್ವಚ್ಛ ನೀರಿನಿಂದ ತೊಳೆಯಿರಿ.

- ಉತ್ತಮ ಫಲಿತಾಂಶಕ್ಕೆ ವಾರದಲ್ಲಿ 2 ಬಾರಿ ಈ ಕ್ರಮವನ್ನು ಅನ್ವಯಿಸಿ.

English summary

Homemade Sugar Scrubs For The Skin That You Must Try

Have you ever wondered how a sugar, a simple kitchen ingredient can do so much to our skin? One key factor that keeps our skin brighter, cleaner and healthier is exfoliation. Proper exfoliation of the skin can solve a number of skin issues that we face in our everyday life. And one of the best natural ingredients that can be used to exfoliate our skin is sugar. Sugar contains alpha-hydroxy acids that work to remove the dirt and dead skin cells clogging the pores on your skin. Let us take a look at the 7 easy homemade scrubs that you can incorporate in your daily routine to get a bright, healthier and cleaner-looking skin.
Story first published: Tuesday, March 13, 2018, 19:35 [IST]
X
Desktop Bottom Promotion