ಬೇಸಿಗೆಗೆ ತಯಾರಾಗಲು ಕೆಲವು ಮನೆಯಲ್ಲೇ ತಯಾರಿಸಿದ ಸ್ಕ್ರಬ್ ಗಳು

Posted By: Hemanth
Subscribe to Boldsky

ಬಿರುಬಿಸಿಲಿನೊಂದಿಗೆ ಕಲ್ಮಶಗಳು ಚರ್ಮವನ್ನು ಸುತ್ತುವರಿಯುವ ಕಾರಣದಿಂದ ಚರ್ಮದಲ್ಲಿ ಬೊಕ್ಕೆಗಳು, ನಿಸ್ತೇಜ ಚರ್ಮ ಮತ್ತು ಒಣಚರ್ಮ ಇತ್ಯಾದಿ ಸಮಸ್ಯೆಗಳು ಕಾಣಿಸುವುದು. ಇಂತಹ ಸಮಸ್ಯೆಗಳನ್ನು ತಪ್ಪಿಸಲು ಚರ್ಮವನ್ನು ತೇವಾಂಶದಿಂದ ಇಡಬೇಕು. ಇದಕ್ಕೆ ಮುಖ್ಯವಾಗಿ ವಾರದಲ್ಲಿ ಒಂದು ಸಲವಾದರೂ ಚರ್ಮದ ಸತ್ತ ಕೋಶ ತೆಗೆಯಬೇಕು.

ಮುಖದ ಸ್ಕ್ರಬ್ ಮಾಡುವುದರಿಂದ ಚರ್ಮಕ್ಕೆ ಪೋಷಣೆ ಸಿಗುವುದು. ಬೇಸಿಗೆಯಲ್ಲಿ ಸ್ನೇಹಿಯಾಗಿರುವ ಕೆಲವು ಸ್ಕ್ರಬ್‌ಗಳನ್ನು ತಿಳಿಸಲಾಗಿದೆ. ಇದನ್ನು ಬಳಸಿಕೊಳ್ಳಿ. ಈ ಸ್ಕ್ರಬ್‌ಗಳಲ್ಲಿ ಇರುವಂತಹ ಎಲ್ಲಾ ಸಾಮಗ್ರಿಗಳು ಪೋಷಕಾಂಶಗಳು ಹಾಗೂ ವಿಟಮಿನ್ ಗಳಿಂದ ತುಂಬಿದೆ. ವಾರದಲ್ಲಿ ಒಂದು ಸಲ ಈ ಸ್ಕ್ರಬ್ ಅನ್ನು ಬಳಸಿಕೊಂಡು ನಿಮ್ಮ ಚರ್ಮವನ್ನು ಬೇಸಿಗೆಗೆ ತಯಾರಾಗಿಟ್ಟುಕೊಳ್ಳಿ.

ಸೂಚನೆ: ಈ ಸ್ಕ್ರಬ್‌ಗಳನ್ನು ಬಳಸುವ ಮೊದಲು ನೀವು ಇದನ್ನು ದೇಹಕ್ಕೆ ಬೇರೆ ಭಾಗಕ್ಕೆ ಹಚ್ಚಿ ಪರೀಕ್ಷಿಸಿಕೊಳ್ಳಿ.

ಸ್ಕ್ರಬ್ 1: ಲ್ಯಾವೆಂಡರ್ ಸಾರಭೂತ ತೈಲ, ಓಟ್ ಮೀಲ್ ಮತ್ತು ಆಲಿವ್ ತೈಲ

ಸ್ಕ್ರಬ್ 1: ಲ್ಯಾವೆಂಡರ್ ಸಾರಭೂತ ತೈಲ, ಓಟ್ ಮೀಲ್ ಮತ್ತು ಆಲಿವ್ ತೈಲ

*ಒಂದು ಪಿಂಗಾಣಿಯಲ್ಲಿ ಒಂದು ಚಮಚ ಓಟ್ ಮೀಲ್, ಎರಡು ಚಮಚ ಆಲಿವ್ ತೈಲ ಮತ್ತು 3-4 ಹನಿ ಲ್ಯಾವೆಂಡರ್ ಸಾರಭೂತ ತೈಲ ಹಾಕಿ.

*ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

*ಒದ್ದೆ ಚರ್ಮದ ಮೇಲೆ ಇದನ್ನು ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ.

*5-10 ನಿಮಿಷ ಹಾಗೆ ಬಿಟ್ಟು ಬಳಿಕ ನೀರಿನಿಂದ ತೊಳೆಯಿರಿ.

ಕೋಮಲವಾದ ತ್ವಚೆಗಾಗಿ ಹಣ್ಣಿನ ಫೇಸ್ ಪ್ಯಾಕ್

ಸ್ಕ್ರಬ್ 2: ಕಿತ್ತಳೆ ಸಿಪ್ಪೆ ಹುಡಿ ಮತ್ತು ತೆಂಗಿನೆಣ್ಣೆ

ಸ್ಕ್ರಬ್ 2: ಕಿತ್ತಳೆ ಸಿಪ್ಪೆ ಹುಡಿ ಮತ್ತು ತೆಂಗಿನೆಣ್ಣೆ

*1/2 ಚಮಚ ಕಿತ್ತಳೆ ಸಿಪ್ಪೆ ಹುಡಿ ಮತ್ತು 1 ಚಮಚ ತೆಂಗಿನೆಣ್ಣೆ ಮಿಶ್ರಣ ಮಾಡಿ.

*ಸ್ವಲ್ಪ ಮುಖ ಒದ್ದೆ ಮಾಡಿಕೊಂಡ ಬಳಿಕ ಇದನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ.

*ತಣ್ಣೀರಿನಿಂದ ತೊಳೆಯುವ ಮೊದಲು ಕೆಲವು ನಿಮಿಷ ಕಾಲ ಹಾಗೆ ಮಸಾಜ್ ಮಾಡಿ.

*ಒಣಗಿದ ಬಳಿಕ ಟೋನರ್ ಹಚ್ಚಿಕೊಳ್ಳಲು ಮರೆಯಬೇಡಿ.

ಸ್ಕ್ರಬ್ 3: ಸಕ್ಕರೆ, ಲಿಂಬೆರಸ ಮತ್ತು ಗುಲಾಬಿ ಸಾರಭೂತ ಎಣ್ಣೆ

ಸ್ಕ್ರಬ್ 3: ಸಕ್ಕರೆ, ಲಿಂಬೆರಸ ಮತ್ತು ಗುಲಾಬಿ ಸಾರಭೂತ ಎಣ್ಣೆ

ಒಂದು ಪಿಂಗಾಣಿ ತೆಗೆದುಕೊಳ್ಳಿ. ಅದಕ್ಕೆ 1/2 ಚಮಚ ಸಕ್ಕರೆ, ಒಂದು ಚಮಚ ಲಿಂಬೆರಸ ಮತ್ತು 2-3 ಗುಲಾಬಿ ಸಾರಭೂತ ತೈಲ ಹಾಕಿ.

* ಎಲ್ಲವನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ.

*ಮುಖ ಪೂರ್ತಿ ಇದನ್ನು ಹಚ್ಚಿಕೊಳ್ಳಿ ಮತ್ತು ಕೆಲವು ನಿಮಿಷ ಕಾಲ ಸ್ಕ್ರಬ್ ಮಾಡಿ.

*ಉಗುರಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಸ್ಕ್ರಬ್ 4: ಅಕ್ಕಿಹಿಟ್ಟು, ಹಾಲು ಮತ್ತು ರೋಸ್ ವಾಟರ್

ಸ್ಕ್ರಬ್ 4: ಅಕ್ಕಿಹಿಟ್ಟು, ಹಾಲು ಮತ್ತು ರೋಸ್ ವಾಟರ್

* ಒಂದು ಚಮಚ ಅಕ್ಕಿಹಿಟ್ಟಿಗೆ 1/2 ಚಮಚ ಹಾಲು ಮತ್ತು ರೋಸ್ ವಾಟರ್ ಹಾಕಿ.

*ಇದನ್ನು ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿ ಕೆಲವು ನಿಮಿಷ ಸ್ಕ್ರಬ್ ಮಾಡಿ.

* ಒಮ್ಮೆ ಮಾಡಿದ ಬಳಿಕ ಅದನ್ನು ಒಣಗಲು ಬಿಡಿ.

* ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ.

ಸ್ಕ್ರಬ್ 5: ಕೋಕಾ ಹುಡಿ ಮತ್ತು ಜೇನುತುಪ್ಪ

ಸ್ಕ್ರಬ್ 5: ಕೋಕಾ ಹುಡಿ ಮತ್ತು ಜೇನುತುಪ್ಪ

*1/2 ಚಮಚ ಕೋಕಾ ಹುಡಿ ಮತ್ತು 1 ಚಮಚ ಜೇನುತುಪ್ಪವನ್ನು ಸರಿಯಾಗಿ ಬೆರೆಸಿಕೊಳ್ಳಿ.

* ಕೆಲವು ನಿಮಿಷ ಕಾಲ ಸ್ಕ್ರಬ್ ಮಾಡಿ ಬಳಿಕ ಕ್ಲೆನ್ಸರ್ ಮತ್ತು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

* ಚರ್ಮವು ಒಣಗಿದ ಬಳಿಕ ಟೋನರ್ ಹಚ್ಚಿ.

ಸ್ಕ್ರಬ್ 6: ಕಾಫಿ ಗ್ರೌಂಡ್ಸ್ ಮತ್ತು ಬಾದಾಮಿ ಎಣ್ಣೆ

ಸ್ಕ್ರಬ್ 6: ಕಾಫಿ ಗ್ರೌಂಡ್ಸ್ ಮತ್ತು ಬಾದಾಮಿ ಎಣ್ಣೆ

*1/2 ಚಮಚ ಕಾಫಿ ಗ್ರೌಂಡ್ಸ್ ಮತ್ತು ಒಂದು ಚಮಚ ಬಾದಾಮಿ ಎಣ್ಣೆ ಪಿಂಗಾಣಿಗೆ ಹಾಕಿ.

* ಒದ್ದೆ ಚರ್ಮಕ್ಕೆ ಇದನ್ನು ಹಚ್ಚಿಕೊಂಡು ಕೆಲವು ನಿಮಿಷ ಕಾಲ ಸ್ಕ್ರಬ್ ಮಾಡಿ.

*ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ.

ಸ್ಕ್ರಬ್ 7: ಬ್ರೌನ್ಸ್ ಶುಗರ್ ಮತ್ತು ಶಿಯಾ ಬೆಣ್ಣೆ

ಸ್ಕ್ರಬ್ 7: ಬ್ರೌನ್ಸ್ ಶುಗರ್ ಮತ್ತು ಶಿಯಾ ಬೆಣ್ಣೆ

*1/2 ಚಮಚ ಬ್ರೌನ್ ಶುಗರ್ ಮತ್ತು ಒಂದು ತುಂಡು ಶಿಯಾ ಬೆಣ್ಣೆ ಹಾಕಿ.

* ಇದನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು 5-10 ನಿಮಿಷ ಕಾಲ ಹಾಗೆ ಸ್ಕ್ರಬ್ ಮಾಡಿ.

*ಫೇಶ್ ವಾಶ್ ಮತ್ತು ಉಗುರುಬೆಚ್ಚಗಿನ ನೀರು ಬಳಸಿ ಮುಖ ತೊಳೆಯಿರಿ.

ಕಾಂತಿಯುತ ತ್ವಚೆಗಾಗಿ ಖರ್ಜೂರದ ಫೇಸ್ ಪ್ಯಾಕ್

English summary

homemade face scrubs to get your skin ready for summer

Here, we have listed the recipe for such summer-friendly face scrubs that can easily be made at home. The components used for whisking up these scrubs are all loaded with nutrients and vitamins that can prepare your skin for the summer season. Use any of the following face scrubs, on a weekly basis, to get your skin summer ready. Take a look at these scrubs here.
Story first published: Friday, March 2, 2018, 8:31 [IST]