For Quick Alerts
ALLOW NOTIFICATIONS  
For Daily Alerts

  ಬರೀ ಒಂದೇ ದಿನಗಳಲ್ಲಿ ಮೊಡವೆಯ ಸಮಸ್ಯೆಯನ್ನು ಮಾಯ ಮಾಡೋ ಮನೆಮದ್ದುಗಳು

  By Deepu
  |

  ಮೊಡವೆಗಳು ಎಂದರೆ ಸಾಕು ಹದಿಹರೆಯದ ವಯಸ್ಕರು ಏನೋ ದೆವ್ವದ ಸಮಾಚಾರ ಕೇಳಿದಂತೆ ತಿರುಗಿ ನೋಡುತ್ತಾರೆ. ಮೊಡವೆಗಳು ನಮ್ಮ ಸೌಂದರ್ಯದ ಪಾಲಿಗೆ ಶತ್ರುಗಳು. ತ್ವಚೆಯಲ್ಲಿ ಕಾಣಿಸಿಕೊಳ್ಳುವ ಬೇಡದ ಅತಿಥಿಗಳು. ಮೊಡವೆ ಇಂತಹವರಿಗೆ ಬರುತ್ತದೆ ಎಂದು ಹೇಳಲಾಗದು. ಆದರೂ ಎಲ್ಲರಿಗೂ ಒಂದಲ್ಲ ಒಂದು ಕಾಲದಲ್ಲಿ ಮೊಡವೆ ಕಾಟ ಕೊಟ್ಟೇ ಇರುತ್ತದೆ.

  ಮೊಡವೆಗಳು ಹೆಚ್ಚಿನ ಮಹಿಳೆಯರು ಮತ್ತು ಹುಡುಗಿಯರಲ್ಲಿ ಕಳವಳವನ್ನು ಉಂಟುಮಾಡುವಂತಹ ಸಮಸ್ಯೆಯಾಗಿರುತ್ತದೆ. ಇದಕ್ಕೆ ಪುರುಷರೂ ಹೊರತಲ್ಲ ಆನೇಕ ಪುರುಷರು ಸಹ ಈ ಮೊಡವೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಈ ಗುರುತುಗಳನ್ನು ತೆಗೆಯಲು ಮತ್ತು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸ್ವಲ್ಪ ಸಮಯದ ಅವಶ್ಯಕತೆ ಬೇಕಾಗುತ್ತದೆ.

  ಅದರಲ್ಲೂ ಹುಡುಗಿಯರು ತಮ್ಮ ಮೊಡವೆಯುಕ್ತ ಮುಖವನ್ನು ಇತರರಿಗೆ ತೋರಿಸಲು ಮುಜುಗರ ಪಡುತ್ತಾರೆ. ಇನ್ನು ವಿಶೇಷ ಸಂದರ್ಭಗಳಲ್ಲಿ ಮತ್ತು ಸಮಾರಂಭಗಳಲ್ಲಿ ಈ ಮುಜುಗರ ಅವರನ್ನು ಇನ್ನಷ್ಟು ಕಾಡುತ್ತದೆ. ಮೊಡವೆಗಳನ್ನು ಹೋಗಲಾಡಿಸಲು ಕ್ರೀಮ್ ಗಳನ್ನು ಔಷಧಿಗಳನ್ನು ಬಳಸುವುದು ಒಳ್ಳೆಯದಲ್ಲ. ಈ ಕ್ರೀಮ್ ಗಳನ್ನು ಕೇವಲ ಒಂದೆರಡು ವಾರಗಳ ಮಟ್ಟಿಗೆ ಬಳಸಬಹುದು.ಇದನ್ನು ದೀರ್ಘಕಾಲದವರಗೆ ಬಳಸಿದರೆ ಅದು ಅನೇಕ ಅಡ್ದ ಪರಿಣಾಮಗಳಿಗೆ ಕಾರಣವಾಗುತ್ತದೆ. ಅಲ್ಲದೆ ಚಿಕಿತ್ಸೆಯ ನಂತರವೂ ಮೊಡವೆಗಳು ಮರುಕಳಿಸುವ ಸಾಧ್ಯತೆ ಇರುತ್ತದೆ. ಅದ್ದರಿಂದ ಈ ಸಮಸ್ಯೆಯನ್ನು ಪರಿಹರಿಸಲು ನೈಸರ್ಗಿಕ ವಿಧಾನವನ್ನು ಆರಿಸಿಕೊಳ್ಳುವುದು ಉತ್ತಮ ಮಾರ್ಗವಾಗಿರುತ್ತದೆ. ಬನ್ನಿ ಮೊಡವೆಗಳನ್ನು ಹೋಗಲಾಡಿಸಲು ಇರುವ ಕೆಲವು ಮನೆಯ ಮದ್ದುಗಳ ಬಗ್ಗೆ ಇಂದು ತಿಳಿದುಕೊಳ್ಳೋಣ....

  ಅರಿಶಿನ ಮತ್ತು ತುಳಸಿ ಎಲೆಗಳು

  ಅರಿಶಿನ ಮತ್ತು ತುಳಸಿ ಎಲೆಗಳು

  ಒಂದು ಅರಿಶಿನದ ಕೊಂಬು, ಸ್ವಲ್ಪ ತುಳಸಿ ಎಲೆ ಮತ್ತು ಕರ್ಪೂರ ತೆಗೆದುಕೊಳ್ಳಿ. ನೀರಿನಲ್ಲಿ ಅರಶಿನ ಕೊಂಬಿನ ಪೇಸ್ಟ್ ಮಾಡಿಕೊಳ್ಳಿ ಮತ್ತು ಇದಕ್ಕೆ ರುಬ್ಬಿಕೊಂಡು ತುಳಸಿ ಎಲೆ ಮತ್ತು ಒಂದು ಕರ್ಪೂರದ ಹುಡಿ ಹಾಕಿ. ರಾತ್ರಿ ಮಲಗುವಾಗ ಇದನ್ನು ಮುಖಕ್ಕೆ ಹಚ್ಚಿಕೊಂಡು ಬೆಳಿಗ್ಗೆ ಎದ್ದಾಗ ತೊಳೆಯಿರಿ.

  ಕಡಲೆಹಿಟ್ಟು-ತುಳಸಿ ಎಲೆ

  ಕಡಲೆಹಿಟ್ಟು-ತುಳಸಿ ಎಲೆ

  ಕಡಲೆಹಿಟ್ಟು-ತುಳಸಿ ಎಲೆಯ ಪೇಸ್ಟ್ ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ. ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

  ಹಾಲು ಮತ್ತು ತಾಜಾ ನಿಂಬೆ ರಸ

  ಹಾಲು ಮತ್ತು ತಾಜಾ ನಿಂಬೆ ರಸ

  ಕಾಯಿಸಿದ ಹಾಲಿಗೆ ತಾಜಾ ನಿಂಬೆ ರಸ ಬೆರೆಸಿ ಒಣಗಿದ ಚರ್ಮಕ್ಕೆ ಫೇಷಿಯಲ್ ರೀತಿಯಲ್ಲಿ ಬಳಸಬಹುದು. ಇದರಿಂದ ಕಪ್ಪು ಕಲೆಗಳು ಮತ್ತು ಮೊಡವೆಗಳು ಹೋಗುತ್ತವೆ. ತಾಜಾ ನಿಂಬೆ ರಸಕ್ಕೆ 2-3 ಹನಿ ಹಾಲು ಹಾಕಿ ಬೆರೆಸಿಕೊಳ್ಳಬೇಕು. ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಈ ಮಿಶ್ರಣದಲ್ಲಿ ಅದನ್ನು ಅದ್ದಿ ಮೊಡವೆ ಇರುವ ಜಾಗಕ್ಕೆ ಅದನ್ನು ಹಚ್ಚಬೇಕು. ಸ್ವಲ್ಪ ಸಮಯದ ನಂತರ ತುಸು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು.

  ಬೇವು

  ಬೇವು

  ಭಾರತೀಯರು ಹೆಚ್ಚಾಗಿ ಬೇವಿನ ಮರಗಳನ್ನು ಬೆಳೆಸಿರುವುದು ಯಾಕೆಂದು ನೀವು ಯಾವತ್ತಾದರೂ ಯೋಚಿಸಿದ್ದೀರಾ? ಇದರಲ್ಲಿರುವ ಔಷಧೀಯ ಗುಣಗಳಿಂದಾಗಿ ಬೇವಿನ ಮರಗಳನ್ನು ಪ್ರತಿಯೊಂದು ಕಡೆಗಳಲ್ಲೂ ಬೆಳೆಸಲಾಗಿದೆ. ಬೇವಿನ ಎಲೆಗಳಲ್ಲಿ ಇರುವಂತಹ ಔಷಧೀಯ ಗುಣಗಳು ಮೊಡವೆ ಹಾಗು ಮೊಡವೆಯ ಕಲೆಗಳನ್ನು ದೂರವಿಡುವುದು. ಬೇವಿನ ಎಲೆಗಳಿಗೆ ನೀರನ್ನು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಹಾಲ ಹಾಗೆ ಬಿಡಿ. ಇದು ಒಣಗಿದ ಬಳಿಕ ನೀರು ಹಾಕಿ ತೊಳೆಯಿರಿ. ನಿತ್ಯವೂ ನೀವು ಬಳಸಿದಾಗ ಫಲಿತಾಂಶವನ್ನು ಪಡೆಯಬಹುದು.

  ಅಕ್ಕಿ ನೀರು

  ಅಕ್ಕಿ ನೀರು

  ಬೇಯಿಸಿದ ಅಕ್ಕಿ ನೀರು (ಗಂಜಿ) ಯನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಈ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಈ ನೀರಿನಲ್ಲಿರುವ ನೈಸರ್ಗಿಕ ಗುಣಗಳು ಮುಖದ ಸಮಸ್ಯೆಗಳನ್ನು ಹೋಗಲಾಡಿಸಿ ತ್ವಚೆಯನ್ನು ಕಾಂತಿಯುಕ್ತ ಮತ್ತು ಮೃದುವಾಗಿಸುತ್ತದೆ.

  ಟೊಮೇಟೊ

  ಟೊಮೇಟೊ

  ಟೊಮೇಟೊನಲ್ಲಿ ಉತ್ಕರ್ಷಣ ನಿರೋಧಕ (antioxidant) ಸತ್ವಗಳು ಹೇರಳವಾಗಿದ್ದು, ಇದು ನಿಮ್ಮ ಚರ್ಮವನ್ನು ಮೃದುಗೊಳಿಸಲು ಹೆಚ್ಚು ಸಹಕಾರಿ. ಮೊಡವೆಗಳನ್ನು ಹೋಗಲಾಡಿಸಲು ಇದೂ ಸಹ ಒಂದು ಉತ್ತಮ ವಿಧಾನವಾಗಿದ್ದು ಇದರಿಂದ ಚರ್ಮದ ಸೋಂಕಿನ ಸಮಸ್ಯೆಗಳು ಕಡಿಮೆಯಾಗುತ್ತದೆ. ದಿನಕ್ಕೆ ಎರಡು ಬಾರಿ ಟೊಮೆಟೋ ಹೋಳಿನ ರಸ ಅಥವಾ ಅದರೊಳಗಿನ ಅಂಶದಿಂದ ನಯವಾಗಿ ಮೊಡವೆಗಳಿಗೆ ತಿಕ್ಕಿದರೆ ಕಲೆಗಳು ವಾಸಿಯಾಗುತ್ತದೆ.

  ಶ್ರೀಗಂಧ

  ಶ್ರೀಗಂಧ

  ಆಯುರ್ವೇದದ ಪ್ರಕಾರ ಶ್ರೀಗಂಧ ಅಥವಾ ಚಂದನ ಚರ್ಮಕ್ಕೆ ಹೆಚ್ಚು ತಂಪಾಗಿಸಲು ಮತ್ತು ಮೃದುಗೊಳಿಸಲು ಪರಿಣಾಮಕಾರಿ ಸಾಧನವಾಗಿದ್ದು, ಚರ್ಮದ ತೊಂದರೆಯ ನಿವಾರಕವೆಂದೆನಿಸಿದೆ.

  ಸಲಹೆ: ಕೆಲವು ಗಂಟೆಗಳ ಕಾಲ ಚಂದನವನ್ನು ನೀರಿನಲ್ಲಿ ಅದ್ದಿಡಿ. ನಂತರ ಅದನ್ನು ಒಣಗಿಸಿ ಮರುಉಪಯೋಗಿಸಲು ಶೇಖರಿಸಿಡಿ. ಹತ್ತಿಯ ಸಹಾಯದಿಂದ ಈ ನೀರನ್ನು ನಿಧಾನವಾಗಿ ಮೊಡವೆಯ ಕಲೆಗಳ ಜಾಗಕ್ಕೆ ನಯವಾಗಿ ಹಚ್ಚಿಕೊಳ್ಳಿ. ಈ ಪ್ರಕ್ರಿಯೆಯನ್ನು ಒಂದು ವಾರ ಕಾಲ ಪ್ರತಿದಿನ ಅನುಸರಿಸಿ. ವಾರ ಕಳೆದಂತೆ ನಿಮಗೆ ಮೊಡವೆ ಕಲೆಯಲ್ಲಿ ವ್ಯತ್ಯಾಸ ಕಂಡುಬಂದು ನಿಮ್ಮ ತ್ವಚೆಯ ಅಂದ ಇಮ್ಮಡಿಯಾಗುತ್ತದೆ. ಪರ್ಯಾಯವಾಗಿ, ರೋಸ್ ವಾಟರ್ ಸಹಾಯದಿಂದ ಚಂದನದ ಚೆಕ್ಕೆಯನ್ನು ಒಂದು ಮರದ ತುಂಡಿನ ಮೇಲೆ ಚೆನ್ನಾಗಿ ತಿಕ್ಕಿ ಪೇಸ್ಟ್ ಆಗುವಂತೆ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಮೊಡವೆ ಕಲೆಯ ಮೇಲೆ ಹಚ್ಚಿ ಒಂದು ರಾತ್ರಿ ಹಾಗೆಯೇ ಬಿಡಿ. ಬೆಳಗ್ಗೆ ಎದ್ದ ಕೂಡಲೇ ತಣ್ಣನೆಯ ನೀರಿನಿಂದ ಸ್ವಚ್ಛಗೊಳಿಸಿ. ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ.

   ಪಪ್ಪಾಯಿ ಮ್ಯಾಜಿಕ್

  ಪಪ್ಪಾಯಿ ಮ್ಯಾಜಿಕ್

  ಇಂದು ಮಾರುಕಟ್ಟೆಯಲ್ಲಿ ಸಿಗುವ ತ್ವಚೆಗೆ ಸಂಬಂಧಿಸಿದ ಹೆಚ್ಚಿನ ಉತ್ಪನ್ನಗಳಲ್ಲಿ ಪಪ್ಪಾಯಿ ಅಂಶ ಒಳಗೊಂಡಿರುತ್ತದೆ. ಮೊಡವೆಗಳಿಗೆ ಇದು ಒಳ್ಳೆಯ ಮದ್ದು. ಪಪ್ಪಾಯಿಯನ್ನು ಪೇಸ್ಟ್ ಮಾಡಿ ಅದನ್ನು ತ್ವಚೆ ಹಚ್ಚಿ. ಇದನ್ನು 15-20 ನಿಮಿಷಗಳವರೆಗೆ ಹಾಗೆ ಬಿಡಿ. ಬಳಿಕ ಬಿಸಿ ನೀರಿನಿಂದ ಮುಖ ತೊಳೆಯಿರಿ. ಮೊಡವೆಗಳಿಗೆ ಇದು ಒಳ್ಳೆಯ ವಿಧಾನ.

  ಬಾಳೆಹಣ್ಣು

  ಬಾಳೆಹಣ್ಣು

  ನೀವು ಬಾಳೆಹಣ್ಣು ಪ್ರಿಯರಾಗಿದ್ದರೆ ಅದರ ಸಿಪ್ಪೆಯನ್ನು ನಿಮ್ಮ ಚರ್ಮದ ಮೇಲೆ ಇಡಿ. ಇದು ಮೊಡವೆಗೆ ಒಳ್ಳೆಯ ಮದ್ದು. ಬಾಳೆಹಣ್ಣಿನ್ನು ತಿಂದು ಅದರ ಸಿಪ್ಪೆಯನ್ನು ನಿಮ್ಮ ಮುಖಕ್ಕೆ ಉಜ್ಜಿ. ಮುಖಕ್ಕೆ ಉಜ್ಜಿದ ಬಳಿಕ ಸುಮಾರು 30 ನಿಮಿಷಗಳ ಕಾಲ ಅದು ಹಾಗೆ ಇರಲಿ. ಇದರ ಬಳಿಕ ತೊಳೆಯಿರಿ.

  ಸಾಸಿವೆ ಮತ್ತು ಜೇನುತುಪ್ಪ

  ಸಾಸಿವೆ ಮತ್ತು ಜೇನುತುಪ್ಪ

  ಸಾಸಿವೆಯಲ್ಲಿ ಸಲಿಸ್ಯಲಿಕ್ ಎನ್ನುವ ಆಮ್ಲವು ಇರುವ ಕಾರಣದಿಂದಾಗಿ ಇದು ಸೋಂಕು ಹಾಗೂ ಮೊಡವೆಗಳನ್ನು ನಿವಾರಣೆ ಮಾಡುತ್ತದೆ. ಸಾಸಿವೆಯು ಮೊಡವೆಗಳಿಗೆ ಅತ್ಯುತ್ತಮ ಔಷಧಿಯಾಗಿದೆ. ¼ ಚಮಚ ಸಾಸಿವೆ ಹುಡಿ ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು 15 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.

  ಮೊಟ್ಟೆಲೋಳೆಯ ಮಾಸ್ಕ್

  ಮೊಟ್ಟೆಲೋಳೆಯ ಮಾಸ್ಕ್

  ಮೊಟ್ಟೆಯಲ್ಲಿ ಒಂದು ಬೆರಳು ಹೋಗುವಷ್ಟು ಜಾಗ ಮಾಡಿಕೊಂಡು ಅದರೊಳಗೆ ಬೆರಳು ಹಾಕಿ. ಬೆರಳಿನಲ್ಲಿ ಬರುವಂತಹ ಮೊಟ್ಟೆಯ ಬಿಳಿ ಲೋಳೆಯನ್ನು ಮೊಡವೆಗಳಿಗೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷ ಕಾಲ ಹಾಗೆ ಬಿಟ್ಟು ಬಿಡಿ. ಮೊಟ್ಟೆಯ ಬಿಳಿ ಲೋಳೆ ಹಚ್ಚಿಕೊಳ್ಳುವ ಮೊದಲು ಮೊಡವೆಗಳಿಗೆ ಲಿಂಬೆರಸವನ್ನು ಹಾಕಿಕೊಳ್ಳಿ. ಇದು ಒಳ್ಳೆಯ ಶಮನಕಾರಿ ಗುಣವನ್ನು ಹೊಂದಿದೆ.

  English summary

  effective remedies To Remove Pimples In One Day At Home

  These ayurvedic remedies help to get rid of those stubborn pimple marks, have a look ... Effective Ayurvedic Remedies To Remove Pimple Marks
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more