Just In
Don't Miss
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- News
ಕೇಂದ್ರ ಸರ್ಕಾರ ಎನ್ಐಎ ನೋಟಿಸ್ ಮೂಲಕ ಕಿರುಕುಳ ನೀಡುತ್ತಿದೆ:ರೈತರ ಆರೋಪ
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತ್ವರಿತವಾಗಿ ಮೊಡವೆ ಹಾಗೂ ಮೊಡವೆಯಿಂದಾಗುವ ಕಲೆಗಳನ್ನು ಮಾಯ ಮಾಡೋ ಮನೆಮದ್ದುಗಳು
ಮುಖದಲ್ಲಿ ಮೊಡವೆಗಳು ಕಾಣಿಸಿಕೊಂಡರೆ ಅದಕ್ಕಿಂತ ಕೆಟ್ಟ ಅನುಭವ ಬೇರೊಂದಿಲ್ಲ. ಮುಖದಲ್ಲಿ ಮೊಡವೆಗಳು ಮೂಡಿದ ಬಳಿಕ ಅದರ ನಿವಾರಣೆಗೆ ಹಲವಾರು ರೀತಿಯ ಮದ್ದುಗಳನ್ನು ಬಳಸುತ್ತೇವೆ. ಇದು ಆಯುರ್ವೇದ ಅಥವಾ ಬೇರೆ ಯಾವುದೇ ಇರಲಿ. ಈ ಔಷಧಿಗಳಿಂದ ಮುಖದಲ್ಲಿನ ಮೊಡವೆಗಳು ಮಾಯವಾಗಬಹುದು. ಆದರೆ ಮೊಡವೆಗಳ ಕಲೆಗಳು ಮಾತ್ರ ಹಾಗೆ ಉಳಿದುಕೊಳ್ಳುತ್ತದೆ. ಇದು ನಿಮ್ಮ ಸೌಂದರ್ಯವನ್ನು ಮತ್ತಷ್ಟು ಕೆಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಆದರೆ ಈ ಕಲೆಗಳನ್ನು ನಿವಾರಣೆ ಮಾಡಲು ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ಕ್ರೀಮ್‌ಗಳನ್ನು ಬಳಸಿ ನೋಡಿದರೂ ನಿಮಗೆ ಯಾವುದೇ ಪ್ರಯೋಜನವಾಗಿರಲಿಕ್ಕಿಲ್ಲ. ಇದಕ್ಕಾಗಿ ಕೆಲವೊಂದು ಆಯುರ್ವೇದಿಕ್ ಔಷಧಿಗಳು ಮುಖದಲ್ಲಿರುವ ಮೊಡವೆ ಹಾಗೂ ಮೊಡವೆ ಯಿಂದಾಗುವ ಕಲೆಗಳನ್ನು ನಿವಾರಣೆ ಮಾಡಿ ಚರ್ಮಕ್ಕೆ ಯಾವುದೇ ಅಡ್ಡ ಪರಿಣಾಮವಾಗದಂತೆ ನೋಡಿಕೊಳ್ಳುತ್ತದೆ. ಇದು ಯಾವುದೆಂದು ನೀವು ತಿಳಿದುಕೊಳ್ಳಿ....

ಅರಿಶಿನ ಮತ್ತು ತುಳಸಿ ಎಲೆಗಳು
ಒಂದು ಅರಿಶಿನದ ಕೊಂಬು, ಸ್ವಲ್ಪ ತುಳಸಿ ಎಲೆ ಮತ್ತು ಕರ್ಪೂರ ತೆಗೆದುಕೊಳ್ಳಿ. ನೀರಿನಲ್ಲಿ ಅರಶಿನ ಕೊಂಬಿನ ಪೇಸ್ಟ್ ಮಾಡಿಕೊಳ್ಳಿ ಮತ್ತು ಇದಕ್ಕೆ ರುಬ್ಬಿಕೊಂಡು ತುಳಸಿ ಎಲೆ ಮತ್ತು ಒಂದು ಕರ್ಪೂರದ ಹುಡಿ ಹಾಕಿ. ರಾತ್ರಿ ಮಲಗುವಾಗ ಇದನ್ನು ಮುಖಕ್ಕೆ ಹಚ್ಚಿಕೊಂಡು ಬೆಳಿಗ್ಗೆ ಎದ್ದಾಗ ತೊಳೆಯಿರಿ.

ಅಲೋವೆರಾ ಜೆಲ್ ಮತ್ತು ಅರಿಶಿನ ಹುಡಿ
ಒಂದು ಚಮಚ ಅಲೋವೆರಾ ಜೆಲ್ ಮತ್ತು ಒಂದು ಚಮಚ ಅರಶಿನ ಹುಡಿ ಹಾಕಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ರಾತ್ರಿಯಿಡಿ ಹಾಗೆ ಬಿಡಿ. ಬೆಳಿಗ್ಗೆ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ. ಅರಿಶಿನ ಹುಡಿಯು ನಂಜುನಿರೋಧಕ ಮತ್ತು ಮೊಡವೆಗಳನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಅಲೋವೆರಾ ಮೊಶ್ಚಿರೈಸರ್ ಆಗಿ ಕೆಲಸ ಮಾಡುತ್ತದೆ.

ಕಡಲೆಹಿಟ್ಟು-ತುಳಸಿ ಎಲೆ
ಕಡಲೆಹಿಟ್ಟು-ತುಳಸಿ ಎಲೆಯ ಪೇಸ್ಟ್ ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ. ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ಹಾಲು ಮತ್ತು ತಾಜಾ ನಿಂಬೆ ರಸ
ಕಾಯಿಸಿದ ಹಾಲಿಗೆ ತಾಜಾ ನಿಂಬೆ ರಸ ಬೆರೆಸಿ ಒಣಗಿದ ಚರ್ಮಕ್ಕೆ ಫೇಷಿಯಲ್ ರೀತಿಯಲ್ಲಿ ಬಳಸಬಹುದು. ಇದರಿಂದ ಕಪ್ಪು ಕಲೆಗಳು ಮತ್ತು ಮೊಡವೆಗಳು ಹೋಗುತ್ತವೆ. ತಾಜಾ ನಿಂಬೆ ರಸಕ್ಕೆ 2-3 ಹನಿ ಹಾಲು ಹಾಕಿ ಬೆರೆಸಿಕೊಳ್ಳಬೇಕು. ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಈ ಮಿಶ್ರಣದಲ್ಲಿ ಅದನ್ನು ಅದ್ದಿ ಮೊಡವೆ ಇರುವ ಜಾಗಕ್ಕೆ ಅದನ್ನು ಹಚ್ಚಬೇಕು. ಸ್ವಲ್ಪ ಸಮಯದ ನಂತರ ತುಸು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು.

ತುಳಸಿ ಎಲೆ ಮತ್ತು ಕರ್ಪೂರ ಸ್ವಲ್ಪ ಬೆಣ್ಣೆಯಲ್ಲಿ ಹುಡಿ ಮಾಡಿದ
ಸ್ವಲ್ಪ ಕರ್ಪೂರವನ್ನು ಹಾಕಿಕೊಳ್ಳಿ. ತುಳಸಿ ಎಲೆಗಳನ್ನು ಸರಿಯಾಗಿ ರುಬ್ಬಿಕೊಂಡು ಇದಕ್ಕೆ ಸೇರಿಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮೊಡವೆಗಳು ಇರುವಂತಹ ಜಾಗಕ್ಕೆ ಹಚ್ಚಿಕೊಳ್ಳಿ. ರಾತ್ರಿ ಮುಖಕ್ಕೆ ಹಚ್ಚಿಕೊಂಡು ಮಲಗಿ ಬೆಳಿಗ್ಗೆ ಎದ್ದು ಮುಖ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ನಾಲ್ಕರಿಂದ ಐದು ಸಲ ಇದನ್ನು ಪ್ರಯತ್ನಿಸಿ.

ಮೊಡವೆ ಕಲೆಗಳನ್ನು ನಿವಾರಿಸಲು ಮನೆಮದ್ದುಗಳು
ಗಂಧ(ಚಂದನ) ಹಾಗೂ ರೋಸ್ ವಾಟರ್ ಆಯುರ್ವೇದದ ಹಲವಾರು ಔಷಧಿಗಳಲ್ಲಿ ಗಂಧವನ್ನು ಬಳಸಿರುವುದನ್ನು ನಾವು ನೋಡಿರುತ್ತೇವೆ. ಶಮನಕಾರಿ ಹಾಗೂ ತಂಪಾಗಿಸುವ ಗುಣವನ್ನು ಹೊಂದಿರುವಂತಹ ಗಂಧವು ತುಂಬಾ ಪರಿಣಾಮಕಾರಿಯಾಗಿದೆ. ಇದು ಕಲೆಗಳನ್ನು ನಿವಾರಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಲಿದೆ. ಚಂದನಕ್ಕೆ ರೋಸ್ ವಾಟರ್ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ರಾತ್ರಿ ಮಲಗುವ ಮೊದಲು ಇದನ್ನು ಮೊಡವೆಗಳ ಕಲೆಗಳು ಇರುವ ಜಾಗಕ್ಕೆ ಹಚ್ಚಿಕೊಳ್ಳಿ. ಬೆಳಿಗ್ಗೆ ಎದ್ದ ಬಳಿಕ ನೀರಿನಿಂದ ತೊಳೆಯಿರಿ. ಪ್ರತೀ ದಿನ ಇದನ್ನು ಬಳಸಿದರೆ ಕಾಂತಿಯುತ ತ್ವಚೆಯನ್ನು ಪಡೆಯಬಹುದು

ಬೇವು
ಭಾರತೀಯರು ಹೆಚ್ಚಾಗಿ ಬೇವಿನ ಮರಗಳನ್ನು ಬೆಳೆಸಿರುವುದು ಯಾಕೆಂದು ನೀವು ಯಾವತ್ತಾದರೂ ಯೋಚಿಸಿದ್ದೀರಾ? ಇದರಲ್ಲಿರುವ ಔಷಧೀಯ ಗುಣಗಳಿಂದಾಗಿ ಬೇವಿನ ಮರಗಳನ್ನು ಪ್ರತಿಯೊಂದು ಕಡೆಗಳಲ್ಲೂ ಬೆಳೆಸಲಾಗಿದೆ. ಬೇವಿನ ಎಲೆಗಳಲ್ಲಿ ಇರುವಂತಹ ಔಷಧೀಯ ಗುಣಗಳು ಮೊಡವೆ ಹಾಗು ಮೊಡವೆಯ ಕಲೆಗಳನ್ನು ದೂರವಿಡುವುದು. ಬೇವಿನ ಎಲೆಗಳಿಗೆ ನೀರನ್ನು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಹಾಲ ಹಾಗೆ ಬಿಡಿ. ಇದು ಒಣಗಿದ ಬಳಿಕ ನೀರು ಹಾಕಿ ತೊಳೆಯಿರಿ. ನಿತ್ಯವೂ ನೀವು ಬಳಸಿದಾಗ ಫಲಿತಾಂಶವನ್ನು ಪಡೆಯಬಹುದು.

ಅಕ್ಕಿ ನೀರು
ಬೇಯಿಸಿದ ಅಕ್ಕಿ ನೀರು (ಗಂಜಿ) ಯನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಈ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಈ ನೀರಿನಲ್ಲಿರುವ ನೈಸರ್ಗಿಕ ಗುಣಗಳು ಮುಖದ ಸಮಸ್ಯೆಗಳನ್ನು ಹೋಗಲಾಡಿಸಿ ತ್ವಚೆಯನ್ನು ಕಾಂತಿಯುಕ್ತ ಮತ್ತು ಮೃದುವಾಗಿಸುತ್ತದೆ.

ಕಾಫಿ ಹುಡಿ
ಒಂದು ಪಾತ್ರೆಗೆ ಸ್ವಲ್ಪ ಕಾಫಿ ಹುಡಿಯನ್ನು ಹಾಕಿ. ಇದಕ್ಕೆ ಬೇಕಾದಷ್ಟು ನೀರು ಸೇರಿಸಿ ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ಮುಖದಲ್ಲಿ ಮೂಡಿರುವ ಮೊಡವೆ ಕಲೆಗಳ ಮೇಲೆ ಈ ಪೇಸ್ಟ್ ಅನ್ನು ಹಚ್ಚಿಕೊಂಡು, ಸುಮಾರು 15 ನಿಮಿಷ ಇದನ್ನು ಒಣಗಲು ಬಿಡಿ ನಂತರ ತಣ್ಣಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ಅಡುಗೆ ಮನೆಯ ಸಾಮಾಗ್ರಿ ನಿಮ್ಮ ತ್ವಚೆಯ ಸಮಸ್ಯೆಗೆ ಉತ್ತಮ ಪರಿಹಾರಕವಾಗಿ ಬಂದೊದಗಿದ್ದನ್ನು ನೀವೇ ನೋಡಿ.