For Quick Alerts
ALLOW NOTIFICATIONS  
For Daily Alerts

ಬಿಳಿಯಾದ ತ್ವಚೆ ಪಡೆಯಲು ಆಲೂಗಡ್ಡೆ-ಕ್ಯಾರೆಟಿನ ಫೇಸ್ ಮಾಸ್ಕ್

By Sushma Charhra
|

ನಿಮ್ಮ ತ್ವಚೆಯ ಬಣ್ಣದಿಂದಾಗಿ ನೀವು ಹೆಚ್ಚು ಆರಾಮದಾಯಕವಾಗಿರಲು ಸಾಧ್ಯವಾಗುತ್ತದೆ. ಆದರೆ, ನೀವು ಹುಟ್ಟುವಾಗ ಬಿಳಿಯ ತ್ವಚೆಯನ್ನು ಹೊಂದಿದವರಾಗಿದ್ದು, ನಿಮ್ಮ ಹೊಳಪನ್ನು ಮತ್ತು ಆಕರ್ಷಣೆಯನ್ನು ದೈನಂದಿನ ಹಲವಾರು ಚಟುವಟಿಕೆಗಳಿಂದಾಗಿ ಕಳೆದುಕೊಂಡಿದ್ದರೆ, ಪುನಃ ನಿಮ್ಮ ಹೊಳಪಿನ ತ್ವಚೆಯನ್ನು ಪಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ತಿಳಿದುಕೊಳ್ಳುವುದು ಬಹಳ ಉಪಯೋಗಕಾರಿಯಾಗಿರುತ್ತದೆ. ಅದೂ ಕೂಡ ನೈಸರ್ಗಿಕ ವಿಧಾನವಾದರೆ ಮತ್ತೂ ಒಳ್ಳೆಯದು. ಬಿಳುಪಿನ ಮತ್ತು ಸುಂದರ ತ್ವಚೆಯಿಂದ ಎಲ್ಲರನ್ನೂ ಸೆಳೆಯುವಂತೆ ಮಾಡಲು ಯಾರು ತಾನೆ ಇಚ್ಛಿಸುವುದಿಲ್ಲ ಹೇಳಿ?ಆದರೆ ಅದು ಹೇಗೆ ಎಂಬ ಬಗ್ಗೆ ಮಾತ್ರ ಎಲ್ಲರಿಗೂ ತಿಳಿದಿರುವುದಿಲ್ಲ.

ಈ ರೀತಿ ತ್ವಚೆಯನ್ನು ತ್ವರಿತವಾಗಿ ಬಿಳುಪುಗೊಳಿಸುವ ಹಲವಾರು ರೀತಿಯ ಮುಖದ ಪ್ರೊಡಕ್ಟ್ ಗಳು ಲಭ್ಯವಿದ್ದರೂ ಕೂಡ ಅವುಗಳು ಚರ್ಮ ಮೇಲೆ ಮಾಡುವ ಪರಿಣಾಮಗಳ ಬಗ್ಗೆ ಯಾವುದೇ ಭರವಸೆ ಇಲ್ಲ. ಒಂದು ವೇಳೆ ನಿಮ್ಮದು ಸೂಕ್ಷ್ಮ ತ್ವಚೆಯಾಗಿದ್ದರೆ ಇನ್ನೂ ಕಷ್ಟವಾಗಬಹುದು. ಒಂದು ವೇಳೆ ನೀವು ಕೂಡ ಬಿಳಿಯಾದ ಹೊಳಪಿನ ತ್ವಚೆಯನ್ನು ನೈಸರ್ಗಿಕವಾಗಿ ಪಡೆಯಲು ಮಾರ್ಗಗಳನ್ನು ಹುಡುಕುತ್ತಿದ್ದರೆ, ಪರಿಹಾರವು ನೀವು ದಿನನಿತ್ಯ ಬಳಸುವ ಅಡುಗೆ ಮನೆ ಪದಾರ್ಥಗಳಲ್ಲೇ ಇದೆ. ಅದ್ಯಾವುದು ಅಂತ ಕೇಳ್ತಿದ್ದೀರಾ? ಹೇಳ್ತೀವಿ ಕೇಳಿ.

benefits for skin in kannada

ಆದರೆ ಅದಕ್ಕಿಂತ ಮುಂಚೆ ಇನ್ನೊಂದು ವಿಚಾರವನ್ನೂ ತಿಳಿಸುತ್ತವೆ.ಈ ಪದಾರ್ಥಗಳು ನಿಮಗೆ ಯಾವುದೇ ಅಡ್ಡ ಪರಿಣಾಮವನ್ನೂ ಉಂಟು ಮಾಡುವುದಿಲ್ಲ ಮತ್ತು ಎಲ್ಲಾ ರೀತಿಯ ತ್ವಚೆಯವರೂ ಕೂಡ ಬಳಕೆ ಮಾಡಬಹುದಾದ ಪದಾರ್ಥಗಳಾಗಿವೆ. ಈ ಲೇಖನದಲ್ಲಿ ನಾವು , ನೀವೇ ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ಆಲೂಗಡ್ಡೆ ಮತ್ತು ಕ್ಯಾರೇಟಿನ ಫೇಸ್ ಮಾಸ್ಕ್ ಬಗ್ಗೆ ತಿಳಿಸಿಕೊಡಲಿದ್ದೇವೆ ಮತ್ತು ಇದನ್ನು ಪ್ರತಿದಿನ ಬಳಕೆ ಮಾಡಿದರೆ ಬಿಳಿಯಾದ ತ್ವಚೆಯನ್ನು ಪಡೆಯಲು ನಿಮ್ಮ ಸಹಾಯಕ್ಕೆ ಬರುತ್ತದೆ.ಇದು ಒಂದು ಆಶ್ಚರ್ಯಕರವಾದ ಫೇಸ್ ಮಾಸ್ಕ್ ಆಗಿದೆ, ಯಾಕೆಂದರೆ ಇದು ನಿಮ್ಮ ಚರ್ಮದ ಆಂತರ್ಯದ ಪದರಗಳನ್ನು ತಲುಪಿ, ಹೊಳಪಿನ ತ್ವಚೆಗಾಗಿ ಈ ಮಾಸ್ಕ್ ನಿಮಗೆ ಬಹಳಷ್ಟು ಉಪಕಾರವನ್ನು ಮಾಡಲಿದೆ.

ಇದು ಉತ್ತಮವಾದ ಆಂಟಿ ಏಜಿಂಗ್ ಮಾಸ್ಕ್ ಕೂಡ ಹೌದು ಮತ್ತು ಅದೇ ಕಾರಣಕ್ಕೆ ನಿಮ್ಮ ಚರ್ಮವು ಯೌವನಾತ್ಮಕವಾಗಿ ಗೋಚರಿಸಲು ಇದು ಪ್ರಯೋಜನಕಾರಿಯಾಗಿದೆ. ಹಾಗಾದ್ರೆ ಈ ಮಾಸ್ಕ್ ತಯಾರಿಕೆ ಹೇಗೆ ಮತ್ತು ಏನೆಲ್ಲಾ ಬೇಕು ಎಂಬ ಸಂಪೂರ್ಣ ವಿವರವನ್ನು ತಿಳಿಯೋಣ. ಮುಂದೆ ಓದಿ.

ಬೇಕಾಗುವ ಸಾಮಗ್ರಿಗಳು:

  • 1 ಮಧ್ಯಮ ಗಾತ್ರದ ಕ್ಯಾರೆಟ್
  • 1 ಮಧ್ಯಮ ಗಾತ್ರದ ಆಲೂಗಡ್ಡೆ
  • 1 ಟೇಬಲ್ ಸ್ಪೂನ್ ರೋಸ್ ವಾಟರ್

ಮಾಡುವ ವಿಧಾನ ಹೇಗೆ:

• ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯಿರಿ ಮತ್ತು ಗ್ರೈಂಡ್ ಮಾಡಿ. ಕ್ಯಾರೆಟ್ ನ್ನು ಕೂಡ ಜೊತೆಗೆ ಸೇರಿಸಿ ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ ಮತ್ತು ಒಂದು ಬೌಲ್ ಗೆ ಹಾಕಿಕೊಳ್ಳಿ.

• ಈ ಪೇಸ್ಟಿಗೆ ರೋಸ್ ವಾಟರ್ ನ್ನು ಸೇರಿಸಿ ಮತ್ತು ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ.

ಹಚ್ಚಿಕೊಳ್ಳುವ ವಿಧಾನ ಹೇಗೆ?:

• ಸಮ ಪ್ರಮಾಣದಲ್ಲಿ ನಿಮ್ಮ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಈ ಪೇಸ್ಟನ್ನು ಹಚ್ಚಿಕೊಳ್ಳಿ.

• 20 ನಿಮಿಷ ಹಾಗೆಯೇ ಬಿಡಿ, ನಂತರ ಮಾಸ್ಕ್ ನ್ನು ತೊಳೆಯಿರಿ ಮತ್ತು ಒಣಗಲು ಬಿಡಿ.

. ಎಷ್ಟು ದಿನಗಳಿಗೊಮ್ಮೆ ಬಳಸಬಹುದು?

ಈ ಮಾಸ್ಕ್ ನಲ್ಲಿರುವ ಪದಾರ್ಥಗಳು ಪ್ರತಿ ದಿನ ಬಳಸುವುದಕ್ಕೂ ಯೋಗ್ಯವಾಗಿದೆ.

ಈ ಮಾಸ್ಕ್ ಹೇಗೆ ಕೆಲಸ ಮಾಡುತ್ತದೆ?:

ಚರ್ಮವನ್ನು ಬಿಳುಪು ಮಾಡುವುದನ್ನು ಹೊರತು ಪಡಿಸಿ, ಇದರಲ್ಲಿ ವಿಟಮಿನ್ ಎ ಅಂಶವೂ ಇದ್ದು, ಆಂಟಿ ಏಜಿಂಗ್ ಮಾಸ್ಕ್ ಆಗಿ ಕೂಡ ಇದು ವರ್ತಿಸುತ್ತದೆ.

ಹಾಗಾಗಿ, ಇದು ಚರ್ಮದಲ್ಲಿ ನೆರಿಗೆಗಳು ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಡಾರ್ಕ್ ಸರ್ಕಲ್ ಗಳನ್ನು ನಿವಾರಿಸಿ, ಚರ್ಮವು ಹೊಳೆಯುವಂತೆ ಮಾಡುತ್ತದೆ. ರೋಸ್ ವಾಟರ್ ಚರ್ಮವನ್ನು ಸ್ವಚ್ಛಗೊಳಿಸುವುದಕ್ಕೆ ಮತ್ತು ಚರ್ಮವನ್ನು ಟೋನ್ ಮಾಡುವುದಕ್ಕೆ ನೆರವಾಗುತ್ತದೆ.

ಈ ಮಾಸ್ಕ್ ನಲ್ಲಿ ಪ್ರಮುಖವಾಗಿ ನಾವೂ ಆಲೂಗಡ್ಡೆ, ಕ್ಯಾರೆಟ್ ಬಳಸುತ್ತೀವಿ. ಹಾಗಾಗಿ ಈ ಮಾಸ್ಕ್ ನಲ್ಲಿ ಬಳಸುವ ಎಲ್ಲಾ ಪದಾರ್ಥಗಳ ಪ್ರಯೋಜನಗಳ ಪಟ್ಟಿ ಇಲ್ಲಿದೆ ನೋಡಿ.

ತ್ವಚೆಗೆ ಆಲೂಗಡ್ಡೆ ಹೇಗೆ ಸಹಾಯ ಮಾಡುತ್ತದೆ?

• ಆಲೂಗಡ್ಡೆಯ ಫೇಸ್ ಮಾಸ್ಕ್ ಚರ್ಮವನ್ನು ತಿಳಿಗೊಳಿಸಲು ನೆರವಾಗುತ್ತದೆ. ಆಲೂಗಡ್ಡೆಯ ರಸವನ್ನು ನೈಸರ್ಗಿಕವಾಗಿ ಚರ್ಮವನ್ನು ಬಿಳುಪುಗೊಳಿಸಿಕೊಳ್ಳಲು ಬಳಕೆ ಮಾಡಬಹುದು, ಯಾಕೆಂದರೆ ಇದರಲ್ಲಿ ಕ್ಯಾಟೆಕೋಲೇಸ್ ಎಂಬ ಎನ್ಝೈಮ್ ಗಳು ಲಭ್ಯವಿರುತ್ತದೆ ಮತ್ತು ಇದರಲ್ಲಿ ನೈಸರ್ಗಿಕವಾಗಿ ಚರ್ಮವನ್ನು ಬ್ಲೀಚ್ ಮಾಡುವ ಗುಣವಿರುತ್ತದೆ.

• ಇದು ಮೊಡವೆ ಮತ್ತು ಬಿಳಿಯ ಕಲೆಗಳನ್ನು ತೆಗೆಯಲು ಸಹಕಾರಿಯಾಗಿದೆ. ನಿಮ್ಮ ದಿನನಿತ್ಯದ ಫೇಶಿಯಲ್ ನಲ್ಲಿ ಆಲೂಗಡ್ಡೆಯ ರಸವನ್ನು ಬಳಸಿದರೆ, ಮೊಡಲೆ ಮತ್ತು ಬಿಳಿಯ ಕಲೆಗಳನ್ನು ತೊಡೆದು ಹಾಕಿಕೊಳ್ಳಬಹುದು.

• ಬೇಗನೆ ವಯಸ್ಸಾಗುವಂತೆ ಮಾಡುವ ಎಲ್ಲಾ ಚಟುವಟಿಕೆಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಆಲೂಗಡ್ಡೆಗಿದೆ. ಇದರಲ್ಲಿ ಶ್ರೀಮಂತ ಆಂಟಿ ಆಕ್ಸಿಡೆಂಟ್ಗಳು ಮತ್ತು ವಿಟಮಿನ್ ಸಿ ಪ್ರಮಾಣವಿರುತ್ತದೆ ಮತ್ತು ಇದು ಚರ್ಮವು ಸುಕ್ಕು ಗಟ್ಟದಂತೆ ತಡೆಯುತ್ತದೆ.

• ಆಲೂಗಡ್ಡೆಯ ರಸವನ್ನು ಕಣ್ಣುಗಳ ಕೆಳಭಾಗದಲ್ಲಿ ಹಚ್ಚಿಕೊಳ್ಳುವುದರಿಂದ ಕಣ್ಣಿನ ಕಪ್ಪು ವರ್ತುಲ ನಿವಾರಣೆಯಾಗುತ್ತದೆ. ಕೇವಲ ಆಲೂಗಡ್ಡೆಯನ್ನು ಸಣ್ಣ ಹೋಳುಗಳನ್ನಾಗಿ ಮಾಡಿ, 20 ನಿಮಿಷ ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಂಡರೂ ಕೂಡ ಕಣ್ಣುಗಳಿಗೆ ತಂಪಾಗತ್ತದೆ ಮತ್ತು ಕಣ್ಣಿನ ಚರ್ಮ ಜೋತುಬಿದ್ದಂತಾಗುವಿಕೆ ಮತ್ತು ಕಪ್ಪು ವರ್ತುಲ ನಿವಾರಣೆ ಆಗುತ್ತದೆ.

• ನಿಮ್ಮ ಮುಖವನ್ನು ಸ್ವಚ್ಛ ಮಾಡುವುದು ಮಾತ್ರವಲ್ಲದೆ, ಆಲೂಗಡ್ಡೆಯು ನಿಮ್ಮ ಚರ್ಮದಲ್ಲಿ ಕುಳಿತಿರುವ ಹೆಚ್ಚಿನ ಜಿಡ್ಡಿನಂಶ ಮತ್ತು ಕೊಳೆಯನ್ನು ತೆಗೆಯುತ್ತದೆ. ನೀವಿದನ್ನು ಸೌತೆಕಾಯಿಯ ಜೊತೆ ಕೂಡ ಬ್ಲೆಂಡ್ ಮಾಡಿ ಬಳಸಬಹುದು. ಒಂದು ವೇಳೆ ನಿಮ್ಮದು ಶುಷ್ಕ ತ್ವಚೆಯಾಗಿದ್ದರೆ, ಮೊಸರಿನ ಜೊತೆ ಆಲೂಗಡ್ಡೆಯ ಮಿಕ್ಸ್ ಮಾಡಿ ಮಾಸ್ಕ್ ತಯಾರಿಸಿ ಬಳಸಿದರೆ, ಶುಷ್ಕ ತ್ವಚೆ ನಿವಾರಣೆಯಾಗುತ್ತದೆ.

• ಆಲೂಗಡ್ಡೆಯ ಮಾಸ್ಕ್ ನ್ನುಮುಖಕ್ಕೆ ಅಪ್ಲೈ ಮಾಡುವುದರಿಂದಾಗಿ, ಚರ್ಮವು ಹಾಳಾಗುವುದನ್ನು ತಡೆಯುತ್ತದೆ ಮತ್ತು ಪುನರ್ ಯೌವ್ವನಗೊಳ್ಳಲು ಇದು ಸಹಾಯ ಮಾಡುತ್ತದೆ ಅಂದರೆ ಚರ್ಮದ ಬೆಳವಣಿಗೆಗೆ ಇದು ಸಹಕಾರಿಯಾಗಿದೆ.

• ಸೂರ್ಯನ ಕಿರಣಗಳಿಂದಾಗುವ ಸಮಸ್ಯೆಗಳ ನಿವಾರಣೆಗೆ ಆಲೂಗಡ್ಡೆ ಉತ್ತಮ ಪರಿಹಾರವಾಗಿರುತ್ತದೆ. ನಿಮ್ಮಚರ್ಮದಲ್ಲಿ ಎಲ್ಲೆಲ್ಲಿ ಸೂರ್ಯನ ಕಿರಣಗಳಿಂದ ಚರ್ಮ ಹಾಳಾಗಿರುತ್ತದೆಯೂ ಅಲ್ಲಿ ಆಲೂಗಡ್ಡೆಯ ತಣ್ಣನೆಯ ತುಂಡುಗಳನ್ನ ಇಟ್ಟುಕೊಳ್ಳಿ. ಸುಮಾರು 20 ನಿಮಿಷ ಹಾಗೆಯೇ ಇರಲಿ ಮತ್ತು ನಂತರ ಅದನ್ನು ತೆಗೆಯಿರಿ. ಅಥವಾ ಆಲೂಗಡ್ಡೆಯ ರಸವನ್ನೂ ಕೂಡ ಬಳಕೆ ಮಾಡಬಹುದು.ಸನ್ ಬರ್ನ್ ತಡೆಯುವುದು ಮಾತ್ರವಲ್ಲ, ಚರ್ಮಕ್ಕೆ ಇದು ಕೂಲಿಂಗ್ ಏಜೆಂಟ್ ಆಗಿ ಕೂಡ ಕೆಲಸ ಮಾಡುತ್ತದೆ.

ಕ್ಯಾರೆಟ್ ಹೇಗೆ ನಿಮ್ಮ ಚರ್ಮಕ್ಕೆ ಸಹಾಯ ಮಾಡುತ್ತದೆ:

• ಕ್ಯಾರೆಟ್ ನಲ್ಲಿ ವಿಟಮಿನ್ ಎಂ ಅಂಶವಿದೆ ಮತ್ತು ಇದರಲ್ಲಿ ಹಲವಾರು ರೀತಿಯ ಆಂಟಿ ಆಕ್ಸಿಡೆಂಟ್ ಗಳಿದ್ದು ಇವು ಹಲವಾರು ರೀತಿಯ ಚರ್ಮದ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುತ್ತದೆ ಮತ್ತು ಚರ್ಮವನ್ನು ಆರೋಗ್ಯಯುತವಾಗಿ ಇಡಲು ನೆರವಿಗೆ ಬರುತ್ತದೆ. ಅಷ್ಟೇ ಅಲ್ಲ, ಕ್ಯಾರೆಟ್ ನಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಗಳು ಚರ್ಮಕ್ಕೆ ಅಗತ್ಯವಿರುವ ಹೊಳಪು ಮತ್ತು ಬಿಳುಪನ್ನು ನೀಡಲು ನೆರವಾಗುತ್ತದೆ.

• ಕ್ಯಾರೆಟ್ ಗಳನ್ನು ಸೇವಿಸುವುದು ಮತ್ತು ಮಾಸ್ಕ್ ರೀತಿಯಲ್ಲಿ ಚರ್ಮಕ್ಕೆ ಹಚ್ಚಿಕೊಳ್ಳುವುದನ್ನು ಮಾಡುವುದರಿಂದಾಗಿ, ಚರ್ಮದ ಕಲೆಗಳನ್ನು ತಡೆಯಲು ಇದು ಸಹಕಾರಿಯಾಗಿದೆ.

• ಕ್ಯಾರೆಟ್ ನಲ್ಲಿರುವ ಸಮೃದ್ಧವಾದ ವಿಟಮಿನ್ ಸಿ ಗಳಿಂದಾಗಿ, ಕೊಲಾಜಿನ್ ಉತ್ಪಾದನೆಗೆ ಸಹಕಾರಿಯಾಗಿದೆ ಮತ್ತು ಈ ಮೂಲಕ ಚರ್ಮದ ಸ್ಥಿತಿಸ್ಥಾಪಕತ್ವ ಗುಣವನ್ನು ವೃದ್ಧಿಸುವುದಕ್ಕೆ ನೆರವಾಗುತ್ತದೆ.ಇದು ಚರ್ಮದ ನೆರಿಗೆಗಳನ್ನು ತಡೆಯಲು ಮತ್ತು ಬೇಗನೆ ವಯಸ್ಸಾಗುವಿಕೆಯನ್ನು ನಿಯಂತ್ರಿಸುತ್ತದೆ. ಕ್ಯಾರೆಟ್ ಗಳು ಪಿಗ್ಮೆಂಟೇಷನ್ ನ್ನು ಕೂಡ ತಡೆಯುತ್ತದೆ ಮತ್ತು ಚರ್ಮದ ಬಣ್ಣವು ಎಲ್ಲಾ ಕಡೆಗಳಲ್ಲೂ ಒಂದೇ ಬಣ್ಣದಿಂದ ಕೂಡಿರುವಂತೆ ನೋಡಿಕೊಳ್ಳಲು ಸಹಕಾರಿಯಾಗಿದೆ.

•ಕ್ಯಾರೆಟ್ ನಲ್ಲಿರುವ ಬೀಟಾ ಕ್ಯಾರೋಟಿನ್ ಅಂಶದಿಂದಾಗಿ, ಇದು ಚರ್ಮದ ಸ್ನೇಹಿಯಾಗಿ ವರ್ತಿಸುತ್ತದೆ. ನೀವು ಕ್ಯಾರೆಟ್ ಸೇವಿಸಿದಾಗ, ಇದರಲ್ಲಿ ಪೋಷಕಾಂಶಗಳು ವಿಟಮಿನ್ ಎ ಆಗಿ ಬದಲಾಗುತ್ತದೆ ಮತ್ತು ಇದು ಚರ್ಮದ ಅಂಗಾಂಶಗಳನ್ನು ಸರಿಪಡಿಸಲು ನೆರವಾಗುತ್ತದೆ ಮತ್ತು ಸೂರ್ಯನ ಕಿರಣಗಳಿಂದಾಗುವ ಸಮಸ್ಯೆಯನ್ನು ತಡೆಯುತ್ತದೆ. ಕ್ಯಾರೆಟ್ ನ ನಿಯಮಿತ ಸೇವನೆಯು ನೈಸರ್ಗಿಕವಾಗಿ ಸೂರ್ಯ ಶಾಖದಿಂದಾಗುವ ಸಮಸ್ಯೆಯನ್ನು ನಿವಾರಿಸುವುದಕ್ಕೆ ಪ್ರಯೋಜನಕಾರಿಯಾಗಿದೆ.

•ಕ್ಯಾರೆಟ್ ನ್ನು ಬಳಸುವುದರಿಂದಾಗಿ ಚರ್ಮದ ಹಲವಾರು ರೀತಿಯ ಸಮಸ್ಯೆಗಳು ಆಕ್ನೆ, ಚರ್ಮರೋಗ, ದದ್ದುಗಳು ಇತ್ಯಾದಿಗಳಿಗೆ ಪರಿಹಾರ ನೀಡುತ್ತದೆ. ಇವೆಲ್ಲ ಸಮಸ್ಯೆಯು ವಿಟಮಿನ್ ಎ ಕೊರತೆಯಿಂದ ಉಂಟಾಗುತ್ತದೆ. ಉರಿಯೂತ, ಗಾಯಗಳು, ಚರ್ಮವನ್ನು ಕತ್ತರಿಸಿಕೊಂಡಿದ್ದರೆ, ಕ್ಯಾರೆಟೆ ಬಳಸುವುದರಿಂದಾಗಿ ಬೇಗನೆ ಗುಣವಾಗುತ್ತದೆ.

ಮಾಸ್ಕ್ ನಲ್ಲಿ ಬಳಸುವ ರೋಸ್ ವಾಟರ್ ನಿಂದ ನಿಮ್ಮ ಚರ್ಮಕ್ಕಾಗುವ ಲಾಭಗಳು :

ಈ ಮಾಸ್ಕ್ ನಲ್ಲಿ ರೋಸ್ ವಾಟರ್ ಬಳಕೆ ಮಾಡುವುದರಿಂದಾಗಿ ನಿಮಗೆ ಹಲವಾರು ರೀತಿಯ ಲಾಭಗಳಾಗುತ್ತದೆ.ಹೊಳಪಿನ ಮತ್ತು ಬಿಳುಪಿನ ತ್ವಚೆಯನ್ನು ನೀಡುವುದರ ಜೊತೆಗೆ ಮುಖದಲ್ಲಿರುವ ಕೂದಲಿನ ನಿವಾರಣೆ ಮತ್ತು ಮೊಡವೆಗಳನ್ನು ತಡೆಗಟ್ಟಲು ಕೂಡ ಇದು ಸಹಕಾರಿಯಾಗಿದೆ. ರೋಸ್ ವಾಟರ್ ನ್ನು ಈ ಮಾಸ್ಕ್ ನಲ್ಲಿ ಬಳಕೆ ಮಾಡುವುದರಿಂದಾಗಿ ನಿಮ್ಮ ಚರ್ಮವನ್ನು ಆರೋಗ್ಯಯುತವಾಗಿ ಇಡಲು ಸಾಧ್ಯವಿದೆ.

ಅಷ್ಟೇ ಅಲ್ಲದೆ, ಇದು ರಂಧ್ರಗಳನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮದ ಟೋನ್ ಹೆಚ್ಚಿಸುವುದಕ್ಕೂ ನೆರವಾಗುತ್ತದೆ, ರೋಸ್ ವಾಟರ್ ಮಾತ್ರವೇ ಚರ್ಮವನ್ನು ಹೊಳಪು ಮಾಡುವ ತಾಕತ್ತು ಹೊಂದಿರುವಾಗ ಅದರ ಜೊತೆಗೆ ಇದರಲ್ಲಿ ಇನ್ನು ಕೆಲವು ಚರ್ಮವನ್ನು ಬಿಳುಪುಗೊಳಿಸುವ ಪದಾರ್ಥಗಳು ಸೇರಿಕೊಂಡಾಗ ಚರ್ಮದ ಕಾಂಪ್ಲೆಕ್ಷನ್ ಮತ್ತಷ್ಟು ಅಧಿಕವಾಗುವುದರಲ್ಲಿ ಯಾವುದೇ ಅನುಮಾನ ಬೇಡ .

ಹಾಗಾಗಿ,ಇದರಲ್ಲಿ ಬಳಸಲಾದ ಎಲ್ಲಾ ಪದಾರ್ಥಗಳು ಕೂಡ ಚರ್ಮವನ್ನು ತಿಳಿಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದು, ನಾವು ಸಾಮಾನ್ಯವಾಗಿ ಎದುರಿಸುವ ಚರ್ಮದ ಸಮಸ್ಯೆಗಳ ವಿರುದ್ದ ಪರಿಹಾರವನ್ನು ನೀಡುತ್ತದೆ.ಬಹುಶ್ಯಃ ನಿಮಗೆ ಈಗ ಗೊತ್ತಾಗಿರಬಹುದು ಆಲೂಗಡ್ಡೆ ಮತ್ತು ಕ್ಯಾರೆಟ್ ಕೇವಲ ರುಚಿರುಚಿಯಾಗಿ ಸೇವಿಸುವುದಕ್ಕೆ ಮಾತ್ರವಲ್ಲ ಬದಲಾಗಿ ನಿಮ್ಮ ಚರ್ಮದ ಆರೋಗ್ಯಕ್ಕೂ ಕೂಡ ಬಹಳ ಉಪಯುಕ್ತವಾದುದ್ದಾಗಿದೆ.

English summary

DIY Potato & Carrot Face Mask For Fair Skin

In this article, we introduce you to a simple DIY Potato and Carrot Face Mask that can help you achieve a fair skin tone with regular application of the mask. It is an amazingly effective face mask, because while you are seeking to bring out the inner radiance of your skin, this mask does more for you. It is also a great anti-ageing mask, and therefore, gives your skin a youthful appearance too. So, let us check out how to prepare and use this mask.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more