For Quick Alerts
ALLOW NOTIFICATIONS  
For Daily Alerts

  ತ್ವಚೆಯನ್ನು ಹೊಳಪಿನಿಂದ ಕೂಡಿರುವಂತೆ ಮಾಡುವ ಸುಲಭ ಮನೆ ಮದ್ದುಗಳು

  By Divya Pandith
  |

  ತ್ವಚೆಯು ಹೊಳಪು ಹಾಗೂ ಕಾಂತಿಯಿಂದ ಕೂಡಿರಬೇಕು. ಸಮೂಹದ ನಡುವೆ ನಮ್ಮ ತ್ವಚೆಯು ಹೆಚ್ಚು ಆಕರ್ಷಕವಾಗಿ ಕಾಣಬೇಕು ಎನ್ನುವ ಆಸೆ ಎಲ್ಲರಲ್ಲೂ ಸಾಮಾನ್ಯವಾಗಿ ಇರುತ್ತದೆ. ಆದರೆ ಮಾಲಿನ್ಯ, ಅನುಚಿತ ಆರೈಕೆ ವಿಧಾನ, ಆಹಾರ ಕ್ರಮ ಹಾಗೂ ಆನುವಂಶಿಕ ಕಾರಣಗಳಿಂದ ಚರ್ಮವು ಅನೇಕ ಬಗೆಯ ಹಾನಿಗಳಿಗೆ ತುತ್ತಾಗಿರುತ್ತವೆ. ಮಂಕಾದ ತ್ವಚೆಯಿಂದ ಆಕರ್ಷಣೆಯ ಗುಣಮಟ್ಟವು ಕುಗ್ಗಿರುತ್ತವೆ. ಇವುಗಳ ಸುಧಾರಣೆಗಾಗಿ ರಾಸಾಯನಿಕ ಪದಾರ್ಥಗಳಿಂದ ಕೂಡಿರುವ ಉತ್ಪನ್ನಗಳಿಂದ ಆರೈಕೆ ಮಾಡಿದರೆ ಸ್ವಲ್ಪ ಸಮಯದ ವರೆಗೆ ಮಾತ್ರ ಆರೋಗ್ಯದಿಂದ ಕೂಡಿರುವಂತೆ ಕಾಣುವುದು. ಪುನಃ ಮಂಕಾದ ತ್ವಚೆಯನ್ನು ಪಡೆದುಕೊಳ್ಳುವುದು.

  ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಉತ್ತಮ ಗುಣಗಳಿಂದ ಚರ್ಮದ ಆರೈಕೆ ಮಾಡುವ ಕೆಲವು ವಿಧಾನಗಳು ಹೆಚ್ಚು ಹೊಳಪು ಹಾಗೂ ಕಾಂತಿಯಿಂದ ಕೂಡಿರುವುದು. ನೀವು ನಿಮ್ಮ ತ್ವಚೆಯ ಆರೋಗ್ಯವನ್ನು ಮನೆಯಲ್ಲಿಯೇ ಮಾಡುವ ಹಂಬಲದಲ್ಲಿದ್ದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ.

  ಅಕ್ಕಿ ಹಿಟ್ಟು ಮತ್ತು ಹಾಲು

  ಅಕ್ಕಿ ಹಿಟ್ಟು ಮತ್ತು ಹಾಲು

  ಅಕ್ಕಿ ಹಿಟ್ಟು ಚರ್ಮವನ್ನು ಶಮನಗೊಳಿಸಲು, ಹೊಳಪು ಮತ್ತು ಮೃದುವಾಗಿ ಕಾಣುವಂತೆ ಮಾಡುತ್ತದೆ. ಇದು ಚರ್ಮವನ್ನು ಬಿಳುಪಾಗಿರಿಸುತ್ತದೆ.

  ಬೇಕಾಗುವ ಸಾಮಾಗ್ರಿ:

  3 ಟೇಬಲ್ ಚಮಚ ಅಕ್ಕಿ ಹಿಟ್ಟು

  2-3 ಟೇಬಲ್ ಚಮಚ ಹಾಲು.

  ವಿಧಾನ:

  - 3 ಟೇಬಲ್ ಚಮಚ ಅಕ್ಕಿ ಹಿಟ್ಟು ಹಾಗೂ 2-3 ಟೇಬಲ್ ಚಮಚ ಹಾಲನ್ನು ಸೇರಿಸಿ, ಮಿಶ್ರಗೊಳಿಸಿ.

  - ಪೇಸ್ಟ್ ಅನ್ನು ಮುಖಕ್ಕೆ ಅನ್ವಯಿಸಿ.

  - 20-30 ಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

  - ಉತ್ತಮ ಫಲಿತಾಂಶಗಳಿಗೆ ವಾರದಲ್ಲಿ ಮೂರು ಬಾರಿ ಅನ್ವಯಿಸಿ.

  ಆಲೂಗಡ್ಡೆ ರಸ

  ಆಲೂಗಡ್ಡೆ ರಸ

  ಆಲೂಗಡ್ಡೆ ಉತ್ಕರ್ಷಣ ನಿರೋಧಕ ಗುಣಗಳನ್ನು ಒಳಗೊಂಡಿದೆ. ಇದು ಚರ್ಮವನ್ನು ಆರೋಗ್ಯವಾಗಿರುವಂತೆ ಮಾಡುವುದಲ್ಲದೆ ಬಿಳುಪಿನಿಂದ ಕೂಡಿರುವಂತೆ ಮಾಡುವುದು.

  ಬೇಕಾಗುವ ಸಾಮಾಗ್ರಿ:

  ಆಲೂಗಡ್ಡೆ

  ವಿಧಾನ:

  - ಆಲೂಗಡ್ಡೆಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.

  - ಹೆಚ್ಚಿಕೊಂಡ ಆಲೂಗಡ್ಡೆಯನ್ನು ಹಿಂಡಿ ರಸವನ್ನು ತೆಗೆಯಿರಿ.

  - ರಸವನ್ನು ಹತ್ತಿ ಉಂಡೆಯಿಂದ ಅದ್ದಿ ಮುಖಕ್ಕೆ ಅನ್ವಯಿಸಿ.

  - 15-20 ನಿಮಿಷಗಳ ಕಾಲ ಆರಲು ಬಿಡಿ.

  - ಬಳಿಕ ಸಾಮಾನ್ಯ ನೀರಿನಿಂದ ತೊಳೆದು, ಮಾಯ್ಚುರೈಸ್ ಕ್ರೀಮ್ ಅನ್ವಯಿಸಿ.

  - ಉತ್ತಮ ಫಲಿತಾಂಶಕ್ಕೆ ವಾರದಲ್ಲಿ ಮೂರು ಬಾರಿ ಅನ್ವಯಿಸಿ.

  ಅಡುಗೆ ಸೂಡಾ ಸ್ಕ್ರಬ್

  ಅಡುಗೆ ಸೂಡಾ ಸ್ಕ್ರಬ್

  ಸತ್ತ ಕೋಶಗಳನ್ನು ನಿವಾರಿಸಲು ಹಾಗೂ ಬ್ಯಾಕ್ಟೀರಿಯಾಗಳ ನಿರ್ಮೂಲ ಮಾಡಲು ಅಡುಗೆ ಸೋಡಾ ಅತ್ಯುತ್ತಮ ರೀತಿಯಲ್ಲಿ ಸಹಾಯ ಮಾಡುತ್ತದೆ. ಇದರಿಂದ ಚರ್ಮವು ಹೊಳೆಯಲು ಮತ್ತು ಸ್ಪಷ್ಟವಾಗುವಂತೆ ಮಾಡುತ್ತದೆ.

  ಬೇಕಾಗುವ ಸಾಮಾಗ್ರಿ:

  ಅಡುಗೆ ಸೋಡಾ 2 ಟೇಬಲ್ ಚಮಚ

  ವಿಧಾನ:

  - ಒಂದು ಬಟ್ಟಲಲ್ಲಿ ಅಡುಗೆ ಸೋಡಾ ಮತ್ತು 1 ಚಮಚ ನೀರನ್ನು ಮಿಶ್ರಮಾಡಿ.

  -ಮಿಶ್ರಣವನ್ನು ವೃತ್ತಾಕಾರದ ರೀತಿಯಲ್ಲಿ ಅನ್ವಯಿಸಿ, ಮಸಾಜ್ ಮಾಡಿ.

  - ಸ್ವಲ್ಪ ಸಮಯದ ನಂತರ ನೀರಿನಿಂದ ಸ್ವಚ್ಛಗೊಳಿಸಿ.

  -ಉತ್ತಮ ಫಲಿತಾಂಶ ಪಡೆಯಲು 2 ವಾರಗಳ ಕಾಲ ನಿರಂತರವಾಗಿ ಈ ಕ್ರಮವನ್ನು ಅನ್ವಯಿಸಿ.

  ಮೊಸರಿನ ಪ್ಯಾಕ್

  ಮೊಸರಿನ ಪ್ಯಾಕ್

  ಮೊಸರು ಚರ್ಮದಲ್ಲಿರುವ ಕೊಳೆಯನ್ನು ನಿವಾರಿಸಿ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.

  ಬೇಕಾಗುವ ಸಾಮಾಗ್ರಿ:

  ಮೊಸರು 2 ಟೇಬಲ್ ಚಮಚ

  ಜೇನುತುಪ್ಪ 1 ಚಮಚ

  ವಿಧಾನ:

  - ಒಂದು ಬಟ್ಟಲಲ್ಲಿ 2 ಟೇಬಲ್ ಚಮಚ ಮೊಸರು ಮತ್ತು 1 ಚಮಚ ಜೇನುತುಪ್ಪ ಸೇರಿಸಿ, ಮಿಶ್ರಮಾಡಿ.

  - ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

  - 20 ನಿಮಿಷಗಳಕಾಲ ಆರಲು ಬಿಡಿ.

  - ಬಳಿಕ ತಣ್ಣೀರಿನಿಂದ ಸ್ವಚ್ಛಗೊಳಿಸಿ.

  -ಉತ್ತಮ ಫಲಿತಾಂಶ ಪಡೆಯಲು ನಿತ್ಯವೂ ಈ ಕ್ರಮವನ್ನು ಅನ್ವಯಿಸಿ.

  ಓಟ್‍ಮೀಲ್ ಫೇಸ್ ಪ್ಯಾಕ್

  ಓಟ್‍ಮೀಲ್ ಫೇಸ್ ಪ್ಯಾಕ್

  ಓಟ್‍ಮೀಲ್ ಚರ್ಮವನ್ನು ಅತ್ಯುತ್ತಮ ರೀತಿಯಲ್ಲಿ ಆರೈಕೆ ಮಾಡುವುದು. ಇದು ಚರ್ಮವನ್ನು ಮೃದು ಹಾಗೂ ಪ್ರಕಾಶಮಾನವಾಗಿರುವಂತೆ ಮಾಡುತ್ತದೆ.

  ಬೇಕಾಗುವ ಸಾಮಾಗ್ರಿ:

  3 ಟೇಬಲ್ ಚಮಚ ಓಟ್‍ಮೀಲ್

  2-3 ಟೇಬಲ್ ಚಮಚ ಗುಲಾಬಿ ನೀರು

  ವಿಧಾನ:

  - ಓಟ್ಸ್ ಅನ್ನು ಬ್ಲೆಂಡರ್ ಅಲ್ಲಿ ರುಬ್ಬಿ ಪುಡಿಮಾಡಿಕೊಳ್ಳಿ.

  - ಪುಡಿಯನ್ನು ಗುಲಾಬಿ ನೀರಿನೊಂದಿಗೆ ಸೇರಿಸಿ, ಮಿಶ್ರಗೊಳಿಸಿ.

  - ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

  - 15 ನಿಮಿಷಗಳಕಾಲ ಆರಲು ಬಿಡಿ.

  - ಬಳಿಕ ತಣ್ಣೀರಿನಿಂದ ಸ್ವಚ್ಛಗೊಳಿಸಿ.

  - ಉತ್ತಮ ಫಲಿತಾಂಶಕ್ಕೆ ವಾರದಲ್ಲಿ ಎರಡು ಬಾರಿ ಅನ್ವಯಿಸಿ.

  English summary

  DIY Natural Skin-whitening Home Remedies

  In order to have that perfect skin, we tend to do chemical treatments or use various products. This in most cases will further lead to harming our skin more. However, it is better to look for solutions that are natural which would benefit us in the long run.Here are five best easy and instant skin-whitening home remedies that you can try for that brighter, softer and perfect skin.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more