ಬೇಸಿಗೆಯ ಬಿಸಿಗೆ ತಂಪು-ತಂಪು ನೀಡುವ ಫೇಸ್ ಪ್ಯಾಕ್

Posted By: Hemanth
Subscribe to Boldsky

ಬೇಸಿಗೆ ಬಂತೆಂದರೆ ಸಾಕು, ಮೈಯೆಲ್ಲಾ ಬೆವರು, ಬಿಸಿಲಿನ ತಾಪ. ಇದರೊಂದಿಗೆ ಧೂಳು ಇತ್ಯಾದಿಗಳು ಬಂದು ಬೆವರಿನೊಂದಿಗೆ ಸೇರಿ ಚರ್ಮಕ್ಕೆ ಅಂಟಿಕೊಳ್ಳುವುದು. ಇದರಿಂದ ಬೇಸಿಗೆಯಲ್ಲಿ ತ್ವಚೆಯ ಆರೈಕೆ ಮಾಡುವುದು ತುಂಬಾ ಕಠಿಣ ಕೆಲಸ. ಬೇಸಿಗೆಯಲ್ಲಿ ಚರ್ಮವು ತುಂಬಾ ನಿಸ್ತೇಜ, ಒಣ ಮತ್ತು ಜೀವವಿಲ್ಲದಂತೆ ಕಾಣಿಸಬಹುದು. ಬೇಸಿಗೆಯಲ್ಲಿ ಚರ್ಮದ ಆರೈಕೆ ಮಾಡುವುದು ಅತೀ ಅಗತ್ಯ.

ಸುಂದರ ಹಾಗೂ ಕಾಂತಿಯುತ ಚರ್ಮ ಪಡೆಯಲು ಕೆಲವೊಂದು ಮನೆಯಲ್ಲೇ ತಯಾರಿಸುವ ಫೇಸ್ ಪ್ಯಾಕ್ ಗಳನ್ನು ಬಳಸಿಕೊಂಡರೆ ಅದರಿಂದ ದೇಹಕ್ಕೂ ಒಳ್ಳೆಯದು. ಬೇಸಿಗೆಯಲ್ಲಿ ಮನೆಯಲ್ಲೇ ತಯಾರಿಸಿಕೊಂಡು ತ್ವಚೆಯ ಆರೋಗ್ಯ ಕಾಪಾಡುವ ಫೇಸ್ ಪ್ಯಾಕ್ ಗಳ ಬಗ್ಗೆ ನಿಮಗೆ ಬೋಲ್ಡ್ ಸ್ಕೈ ಹೇಳಿಕೊಡಲಿದೆ....

ಲಿಂಬೆ ಫೇಸ್ ಪ್ಯಾಕ್

ಲಿಂಬೆ ಫೇಸ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು

1 ಚಮಚ ಲಿಂಬೆರಸ

1 ಚಮಚ ಜೇನುತುಪ್ಪ

1 ಮೊಟ್ಟೆಯ ಬಿಳಿಭಾಗ

ತಯಾರಿಸುವುದು ಹೇಗೆ

ಮೊಟ್ಟೆಯಿಂದ ಅದರ ಬಿಳಿ ಭಾಗ ಪ್ರತ್ಯೇಕಿಸಿ. ಇದಕ್ಕೆ ಒಂದು ಚಮಚ ಲಿಂಬೆ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ ಮತ್ತು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆಯಿರಿ. ಲಿಂಬೆ ಮತ್ತು ಜೇನಿನಲ್ಲಿ ಕಿತ್ತುಹಾಕುವಂತಹ ಗುಣಗಳು ಇವೆ. ಇದು ಚರ್ಮವನ್ನು ಬಿಳಿ ಹಾಗೂ ಕಾಂತಿಯುತವಾಗಿಸುವುದು.

ಕುಂಬಳಕಾಯಿ ಫೇಸ್ ಪ್ಯಾಕ್

ಕುಂಬಳಕಾಯಿ ಫೇಸ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು

1/4 ಕಪ್ ಕುಂಬಳಕಾಯಿ ತಿರುಳು

1 ಚಮಚ ಜೇನುತುಪ್ಪ

1 ಮೊಟ್ಟೆ

1 ಚಮಚ ಬಾದಾಮಿ ಹಾಲು(ಬೇಕಿದ್ದರೆ)

1 ಚಮಚ ಆ್ಯಪಲ್ ಸೀಡರ್ ವಿನೇಗರ್

ತಯಾರಿಸುವ ವಿಧಾನ

1/4 ಕಪ್ ಕುಂಬಳಕಾಯಿ ತಿರುಳು ಮತ್ತು ಒಂದು ಮೊಟ್ಟೆಯ ಬಿಳಿ ಭಾಗ ಮಿಶ್ರಣ ಮಾಡಿ. ಇದನ್ನು ಜತೆಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಜೇನುತುಪ್ಪ, ಬಾದಾಮಿ ಹಾಲು ಮತ್ತು ಆ್ಯಪಲ್ ಸೀಡರ್ ವಿನೇಗರ್ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷ ಬಳಿಕ ತಣ್ಣೀರಿನಿಂದ ತೊಳೆಯಿರಿ. ಬಳಿಕ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.

ಪುದೀನಾ ಮತ್ತು ಅರಿಶಿನದ ಫೇಸ್ ಮಾಸ್ಕ್

ಪುದೀನಾ ಮತ್ತು ಅರಿಶಿನದ ಫೇಸ್ ಮಾಸ್ಕ್

ಬೇಕಾಗುವ ಸಾಮಗ್ರಿಗಳು

6-6 ಪುದೀನಾ ಎಲೆಗಳು

1 ಚಮಚ ಅರಶಿನ ಹುಡಿ

ತಯಾರಿಸುವ ವಿಧಾನ

ಪುದೀನಾ ಎಲೆಗಳು ಮತ್ತು ಒಂದು ಚಿಟಿಕೆ ಅರಶಿನ ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಉಗುರುಬೆಚ್ಚಗಿನ ನೀರು ಹಾಕಿ ತೆಳು ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಂಡು 10-15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಪುದೀನಾ ಮತ್ತು ಅರಶಿನದಲ್ಲಿ ನಂಜು ನಿರೋಧಕಗಳಿವೆ. ಇದು ಮೊಡವೆ ನಿವಾರಿಸುವುದು ಮತ್ತು ಚರ್ಮವು ನಯ ಹಾಗೂ ಬಿಳಿಯಾಗುವುದು.

ಮೊಸರು ಮತ್ತು ಕಡಲೆಹಿಟ್ಟಿನ ಫೇಸ್ ಮಾಸ್ಕ್

ಮೊಸರು ಮತ್ತು ಕಡಲೆಹಿಟ್ಟಿನ ಫೇಸ್ ಮಾಸ್ಕ್

ಬೇಕಾಗುವ ಸಾಮಗ್ರಿಗಳು

4 ಚಮಚ ಮೊಸರು

2 ಚಮಚ ಕಡಲೆಹಿಟ್ಟು

ತಯಾರಿಸುವ ವಿಧಾನ

ಒಂದು ಪಿಂಗಾಣಿಗೆ ಮೊಸರು ಮತ್ತು ಕಡಲೆಹಿಟ್ಟು ಹಾಕಿ ಕಲಸಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ದಪ್ಪಗಿನ ಪೇಸ್ಟ್ ಮಾಡಿ. ನಿಮಗೆ ಬೇಕಿದ್ದರೆ ಚಿಟಿಕೆ ಅರಶಿನ ಹಾಕಬಹುದು. ಇದು ನಿಮ್ಮ ಆಯ್ಕೆಗೆ ಬಿಟ್ಟದ್ದು.15-20 ನಿಮಿಷ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಇದು ಮುಖದಲ್ಲಿ ಕಲೆ ಬರದಂತೆ ತಡೆಯುವುದು.

ಬಾಳೆಹಣ್ಣಿನ ಫೇಸ್ ಮಾಸ್ಕ್

ಬಾಳೆಹಣ್ಣಿನ ಫೇಸ್ ಮಾಸ್ಕ್

ಬೇಕಾಗುವ ಸಾಮಗ್ರಿಗಳು

1/2 ಕಪ್ ಹಿಚುಕಿದ ಬಾಳೆಹಣ್ಣು

1 ಚಮಚ ಜೇನುತುಪ್ಪ

ತಯಾರಿಸುವ ವಿಧಾನ

1/2 ಕಪ್ ಹಿಚುಕಿದ ಬಾಳೆಹಣ್ಣನ್ನು ಒಂದು ಪಿಂಗಾಣಿಗೆ ಹಾಕಿ. ಇದಕ್ಕೆ 1 ಚಮಚ ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಚರ್ಮಕ್ಕೆ ಹಚ್ಚಿಕೊಂಡು ಒಣಗಲು ಬಿಡಿ. ಇದು ಒಣಗಿದ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಚರ್ಮಕ್ಕೆ ತೇವಾಂಶ ಸಿಗುವುದು ಮತ್ತು ಒಣಗುವುದನ್ನು ತಡೆಯುವುದು.

ಟೊಮೆಟೋ ಹಣ್ಣಿನ ಫೇಸ್ ಪ್ಯಾಕ್

ಟೊಮೆಟೋ ಹಣ್ಣಿನ ಫೇಸ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು

1/4 ಕಪ್ ತಿರುಳು

1 ಚಮಚ ಜೇನುತುಪ್ಪ

ತಯಾರಿಸುವ ವಿಧಾನ

ಒಂದು ಪಿಂಗಾಣಿಗೆ ಟೊಮೆಟೋ ಹಾಕಿ ಮತ್ತು ಅದಕ್ಕೆ ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. 20 ನಿಮಿಷ ಬಿಟ್ಟು ಅಥವಾ ಒಣಗಿದ ಬಳಿಕ ತೊಳೆಯಿರಿ. ಟೊಮೆಟೋ ಸತ್ತ ಚರ್ಮದ ಕೋಶ ತೆಗೆಯುವುದು ಮತ್ತು ಕಲೆಗಳು ಬರದಂತೆ ತಡೆಯುವುದು.

ಹಾಲು ಮತ್ತು ಜೇನಿನ ಪ್ಯಾಕ್

ಹಾಲು ಮತ್ತು ಜೇನಿನ ಪ್ಯಾಕ್

ಬೇಕಾಗುವ ಸಾಮಗ್ರಿಗಳು

1 ಚಮಚ ಹಾಲು

1 ಚಮಚ ಜೇನುತುಪ್ಪ

ತಯಾರಿಸುವ ವಿಧಾನ

ಹಾಲು ಮತ್ತು ಜೇನುತುಪ್ಪವನ್ನು ಒಂದು ಪಿಂಗಾಣಿಯಲ್ಲಿ ಮಿಶ್ರಣ ಮಾಡಿ. ಹಸಿ ಹಾಲಿನ ಬದಲಿಗೆ ಹಾಲಿನ ಹುಡಿ ಹಾಕಬಹುದು. ಈ ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಮುಖ ತೊಳೆದ ಬಳಿಕ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.

ಸೌತೆಕಾಯಿ ಫೇಸ್ ಮಾಸ್ಕ್

ಸೌತೆಕಾಯಿ ಫೇಸ್ ಮಾಸ್ಕ್

ಬೇಕಾಗುವ ಸಾಮಗ್ರಿಗಳು

1/2 ಸೌತೆಕಾಯಿ

1 ಚಮಚ ಸಕ್ಕರೆ

ತಯಾರಿಸುವ ವಿಧಾನ

ಸೌತೆಕಾಯಿಯನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ. ಈ ಪೇಸ್ಟ್ ಗೆ ಒಂದು ಚಮಚ ಸಕ್ಕರೆ ಹಾಕಿ. ಈ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 10 ನಿಮಿಷ ಕಾಲ ಹಾಗೆ ಬಿಡಿ. ತಣ್ಣೀರಿನಿಂದ ತೊಳೆದು ಒಣಗಲು ಬಿಡಿ. ಈ ಮಾಸ್ಕ್ ತಯಾರಿಸಿಕೊಂಡು ನೀವು ಫ್ರಿಡ್ಜ್ ನಲ್ಲಿ ಇಡಬಹುದು.

English summary

DIY Face Packs That You Should Try This Summer

Worried of taking care of your skin under the scorching sun? Summer time is the crucial season where your skin needs a proper care. Summer can make your skin look dull, dry and lifeless. It can lead to early signs of ageing to appear sooner on the skin. Therefore, it's important to take care of your skin this season, to maintain that beautiful and glowing skin of yours. And what's better than using home remedies to take care of your skin? Here are some awesome homemade face packs that you should try this summer season.