For Quick Alerts
ALLOW NOTIFICATIONS  
For Daily Alerts

  ತಕ್ಷಣಕ್ಕೆ ಹೊಳಪಿನ ತ್ವಚೆ ನೀಡುವ ಚಾಕಲೇಟ್ ಫೇಸ್ ಮಾಸ್ಕ್

  By Sushma Charhra
  |

  ಯಾವಾಗ ನೀವು ಚಾಕಲೇಟ್ ಅನ್ನೋ ಪದ ಕೇಳುತ್ತೀರೋ ಆಗ ಎಷ್ಟು ಖುಷಿ ಪಡುತ್ತೀರಿ ಅಲ್ವಾ? ಯಾವಾಗ ನೀವು ತುಂಬಾ ಕೆಟ್ಟ ಮೂಡ್ ನಲ್ಲಿ ಇರುತ್ತೀರೋ ಅಥವಾ ನಿಮ್ಮ ಹಾರ್ಮೋನುಗಳು ವಿಚಿತ್ರವಾಗಿ ವರ್ತಿಸುತ್ತಿರೋ ಆಗ ಒಂದು ಬಾರ್ ಚಾಕಲೇಟ್ ಸೇವಿಸಿದರೆ ಎಷ್ಟು ಬೇಗನೆ ರಿಫ್ರೆಶ್ ಆಗಿ ಉತ್ತಮ ಮೂಡ್ ಗೆ ಬರುತ್ತೀರಿ ಅಲ್ವಾ? ಆದರೆ ಒಂದು ವೇಳೆ ನೀವು ಚಾಕಲೇಟನ್ನು ನಿಮ್ಮ ಮುಖಕ್ಕೆ ಬಳಸಿದರೆ ಏನಾಗುತ್ತೆ? ಇದು ನಿಜಕ್ಕೂ ನಿಮ್ಮನ್ನು ಫಳಫಳ ಹೊಳೆಯುವಂತೆ ಮಾಡಿ, ತುಂಬಾ ಸುಂದರವಾಗಿ ಕಾಣುವಂತೆ ಮಾಡುತ್ತದೆ ಎಂದರೆ ನಂಬುತ್ತೀರಾ?

  ಕೇವಲ ಚಾಕಲೇಟ್ ತಿನ್ನುವುದು ಮಾತ್ರ ದೇಹಕ್ಕೆ ಹಿತ ಅಂದುಕೊಳ್ಳಬೇಡಿ (ಡಾರ್ಕ್ ಚಾಕಲೇಟ್ ಅದರಲ್ಲಿ ಹೆಚ್ಚಿನ ಶೇಕಡಾ ಕೋಕೋ ಇರುತ್ತದೆ) . ಯಾವಾಗ ನೀವು ನಿಮ್ಮ ಚರ್ಮಕ್ಕೆ ಇದನ್ನು ಬಳಸುತ್ತೀರೋ ಆಗ ಕೂಡಲೇ ಒಂದು ವ್ಯತ್ಯಾಸವನ್ನು ಗಮನಿಸಲು ಸಾಧ್ಯವಾಗುತ್ತೆ. ನಿಮಗೆ ಸಾಫ್ಟ್ ಆದ, ಸ್ಮೂತ್ ಆದ ಮತ್ತು ಹೊಳೆಯುವ ತ್ವಚೆ ಪಡೆಯಲು ಇದು ನೆರವು ನೀಡುತ್ತೆ.

  Chocolate face pack

  ಚಾಕಲೇಟ್ ನಲ್ಲಿ ಹಲವು ರೀತಿಯ ನ್ಯೂಟ್ರಿಯಂಟ್ಸ್ ಗಳಿದ್ದು ಇವು ನಿಮ್ಮ ಚರ್ಮದ ಫ್ರೀ ರ್ಯಾಡಿಕಲ್ ಗಳ ವಿರುದ್ದ ಸೆಣಸುತ್ತೆ ಮತ್ತು ಚರ್ಮವನ್ನು ಹೈಡ್ರೇಟ್ ಮಾಡುತ್ತೆ. ಅಷ್ಟೇ ಯಾಕೆ ನಿಮ್ಮ ಮುಖದಲ್ಲಿರುವ ಕಲೆಗಳನ್ನು ತೊಡೆದು ಹಾಕಿ, ಕಾಲಾಜಿನ್ ಉತ್ಪತ್ತಿಯನ್ನು ಉತ್ತೇಜಿಸುತ್ತದೆ. ಡಾರ್ಕ್ ಅಥವಾ ಬಿಟರ್ ಚಾಕಲೇಟ್ ನಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳಿದ್ದು, ಇವು ಚರ್ಮಕ್ಕೆ ಟನ್ ಗಟ್ಟಲೆ ಲಾಭಗಳನ್ನು ತಂದುಕೊಡಬಲ್ಲವು.. ಉದಾಹರಣೆಗೆ ನೆರಿಗೆಗಳನ್ನು ಕಡಿಮೆ ಮಾಡುವುದು, ಚರ್ಮವನ್ನು ತೇವಗೊಳಿಸುವುದು, ಕಿರಿಕಿರಿಯ ಚರ್ಮಕ್ಕೆ ಮುಕ್ತಿ ನೀಡುವುದು, ಚರ್ಮದಲ್ಲಿ ರಕ್ತ ಸಂಚಾರವನ್ನು ಅಧಿಕಗೊಳಿಸುವುದು ಹೀಗೆ ಹಲವಾರು.

  ಇತ್ತೀಚಿನ ದಿನಗಳನ್ನು ಚಾಕಲೇಟನ್ನು ಒಳಗೊಂಡಿರುವು ಸೌಂದರ್ಯ ಸಾಧನಗಳನ್ನು ಹುಡುಕುವುದು ಬಹಳ ಸುಲಭ. ಫೇಸ್ ಮಾಸ್ಕ್, ಸೋಪುಗಳು, ಬಾಡಿ ಲೋಷನ್, ಎಕ್ಸ್ ಫ್ಲಾಯಿಟರ್ಸ್, ಹೀಗೆ ರೀತಿಯಲ್ಲಿ ಅವು ಲಭ್ಯವಾಗುತ್ತೆ. ಮತ್ತು ಯಾವುದೇ ಅನುಮಾನ ಬೇಡ ಈ ವಸ್ತುಗಳು ಉತ್ತ ರೀತಿಯಲ್ಲೇ ಇರುತ್ತೆ. ಆದರೆ ಯಾವತ್ತಾದ್ರೂ ನೀವು ಮನೆಯಲ್ಲೇ ಸಿಪ್ಪೆ ತೆಗೆಯುವಂತೆ ಮಾಡುವ ಚಾಕಲೇಟ್ ಫೇಸ್ ಮಾಸ್ಕ್ ಅನ್ನು ತಯಾರಿಸಿಕೊಂಡು ಬಳಸಿದ್ದೀರಾ?..ಇದುವರಗೂ ನಿಮ್ಮ ಉತ್ತರ ಇಲ್ಲ ಎಂದಾದರೆ, ನೀವು ಸರಿಯಾದ ಲೇಖನವನ್ನೇ ಓದುತ್ತಿದ್ದೀರಿ. ಇವತ್ತು ನಾವಿಲ್ಲಿ ಚಾಕಲೇಟ್ ಫೇಸ್ ಮಾಸ್ಕ್ ಬಗ್ಗೆ ತಿಳಿಸಿಕೊಡಲಿದ್ದೇವೆ ಮತ್ತು ಅದರಿಂದಾಗುವ ಲಾಭಗಳ ವಿವರವನ್ನೂ ನೀಡಲಿದ್ದೇವೆ...ಮುಂದೆ ಓದಿ....

  ಚಾಕಲೇಟ್ ಫೇಸ್ ಮಾಸ್ಕ್

  ಚಾಕಲೇಟ್ ನ ಮಾಸ್ಕ್ ತಯಾರಿಸಿಕೊಳ್ಳಬೇಕಾದರೆ, ನಮಗೆ 3 ವಸ್ತುಗಳ ಅಗತ್ಯವಿರುತ್ತದೆ ಅದುವೇ ಕೋಕೋ ಪೌಡರ್, ಬ್ರೌನ್ ಶುಗರ್ ಮತ್ತು ಜೇನುತುಪ್ಪ.

  ಬೇಕಾಗುವ ಸಾಮಗ್ರಿಗಳು:

  • 1/3rd ಕಪ್ ನಷ್ಟು ಸ್ವೀಟ್ ಆಗಿರದ ಕೋಕೋ ಪೌಡರ್

  • 2 ಟೇಬಲ್ ಸ್ಪೂನ್ ಬ್ರೌನ್ ಶುಗರ್

  • ¼th ಕಪ್ ನೈಸರ್ಗಿಕ ಜೇನುತುಪ್ಪ

  ಮಾಡುವ ವಿಧಾನ:

  • ಒಂದು ಬೌಲ್ ತೆಗೆದುಕೊಳ್ಳಿ ಮತ್ತು ಅದಕ್ಕೆ 1/3rd ಕಪ್ ನಷ್ಟು ಸಿಹಿಯಾಗಿರದ ಕೋಕೋ ಪೌಡರ್ ನ್ನು ಸೇರಿಸಿ, 2 ಟೇಬಲ್ ಸ್ಪೂನ್ ಬ್ರೌನ್ ಶುಗರ್ ನ್ನು ಸೇರಿಸಿ, ಮತ್ತು ¼th ನಷ್ಟು ನೈಸರ್ಗಿಕವಾಗಿ ಪಡೆದ ಜೇನುತುಪ್ಪವನ್ನು ಹಾಕಿಕೊಳ್ಳಿ .ಎಲ್ಲವನ್ನೂ ಸರಿಯಾಗಿ ಮಿಕ್ಸ್ ಮಾಡಿ.

  • ಈಗ, ನಿಮ್ಮ ಕುತ್ತಿಗೆ ಮತ್ತು ಮುಖದ ಭಾಗಕ್ಕೆ ಈ ಮಿಶ್ರಣವನ್ನು ಸಮನಾಗಿ ಅಪ್ಲೈ ಮಾಡಿ

  • ನಿಮ್ಮ ಮುಖದಲ್ಲಿ ಈ ಮಿಶ್ರಣ ಒಣಗುವ ತನಕ ಹಾಗೆಯೇ ಇರಲಿ

  • ಒಮ್ಮೆ ಇದು ಒಣಗಿದ ನಂತರ, ಸಿಪ್ಪೆ ಒಚ್ಚಿ ತೆಗೆಯುವಂತೆ ಈ ಮಾಸ್ಕ್ ನ್ನು ನಿಮ್ಮ ಮುಖದಿಂದ ತೆಗೆಯಿರಿ . ನೀರಿನಿಂದ ಮುಖ ತೊಳೆಯುವಾಗ ಹದವಾಗಿ ನಿಮ್ಮ ಮುಖವನ್ನು ಮಸಾಜ್ ಮಾಡಿ..

  • ಸಿಪ್ಪೆತೆಗೆಯುವಂತೆ ಆಗುವ ಈ ಮಾಸ್ಕ್ ನ್ನು ವಾರಕ್ಕೆ ಒಮ್ಮೆ ಬಳಸಿ ನೋಡಿ. ಹೊಳೆಯುವ ತ್ವಚೆ ನಿಮ್ಮದಾಗುತ್ತೆ.

  *ಬ್ರೌನ್ ಶುಗರ್ ನಿಂದಾಗುವ ಲಾಭಗಳು:

  .ಬ್ರೌನ್ ಶುಗರ್ ನಿಂದಾಗಿ ಹಲವಾರು ಲಾಭಗಳಿವೆ. ಇದನ್ನು ಒಂದು ಸೌಂದರ್ಯವರ್ಧಕವಾಗಿಯೂ ಕೂಡ ಬಳಕೆ ಮಾಡಬಹುದು.

  . ಬ್ರೌನ್ ಶುಗರ್ ನಿಮ್ಮ ಚರ್ಮಕ್ಕೆ ಹಲವು ಲಾಭಗಳನ್ನು ತಂದುಕೊಡಲಿದ್ದು ಪ್ರಮುಖವಾಗಿ ಚರ್ಮದ ಸತ್ತ ಚರ್ಮದ ಜೀವಕೋಶಗಳನ್ನು ಚರ್ಮದಿಂದ ಹೊರ ತೆಗೆಯಲು ನೆರವು ನೀಡುತ್ತದೆ., ಹಾಗಾಗಿ ಸ್ವಚ್ಛವಾದ ಮತ್ತು ತಾಜಾವಾದ ಚರ್ಮವನ್ನು ಪಡೆಯಲು ನೆರವಾಗುತ್ತದೆ.

  *ಜೇನುತುಪ್ಪದಿಂದಾಗುವ ಲಾಭಗಳು

  . ಜೇನುತುಪ್ಪವು ನಂಜುನಿರೋಧಕ ಮತ್ತು ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೊಂದಿದ್ದು, ಹಾಳಾಗಿರುವ ಚರ್ಮದ ಜೀವಕೋಶಗಳನ್ನು ಸರಿಪಡಿಸಲು ನೆರವು ನೀಡುತ್ತದೆ

  . ಇದೊಂದು ನೈಸರ್ಗಿಕ ವಾಗಿ ನಿಮ್ಮ ಚರ್ಮದಲ್ಲಿ ತೇವಾಂಶವನ್ನು ಕಾಪಾಡಲು ನೆರವು ನೀಡುವ ಅಧ್ಬುತ ವಸ್ತುವಾಗಿದ್ದು, ಯಾವಾಗಲೂ ಚರ್ಮವು ತೇವಾಂಶದಿಂದ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತೆ.

  . ಶುಷ್ಕವಾಗಿರುವ ಮತ್ತು ಕಳೆಗುಂದಿದ ಚರ್ಮವನ್ನು ಪುನಃ ಸರಿಪಡಿಸಲು ಜೇನುತುಪ್ಪವನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದು ಬಹಳ ಒಳ್ಳೆಯದು.

  . ಎಣ್ಣೆ ತ್ವಚೆಯನ್ನು ಹೊಂದಿರುವವರು, ಇದನ್ನು ಬಳಸುವುದರಿಂದಾಗಿ ಜೇನುತುಪ್ಪವು ಅವರ ಚರ್ಮದಲ್ಲಿ ಬ್ಯಾಕ್ಟೀರಿಯಾಗಳಿಂದ ಸೃಷ್ಟಿಯಾದ ಆಕ್ನೆ ಸಮಸ್ಯೆಯನ್ನು ನಿವಾರಿಸಿ,ಚರ್ಮಕ್ಕೆ ಹೊಳಪು ಮತ್ತು ಕಾಂತಿ ಬರುವಂತೆ ಮಾಡುವ ತಾಕತ್ತನ್ನು ಇದು ಹೊಂದಿದೆ.

  + ಚಾಕಲೇಟ್ ನಿಂದಾಗುವ ಲಾಭಗಳು

  ಡಾರ್ಕ್ ಚಾಕಲೇಟ್ ನಿಂದ ಹಲವಾರು ಆರೋಗ್ಯ ಲಾಭಗಳಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆಗೊಳಿಸುತ್ತೆ,ಎಸ್ಜಿಮಾ ಸಮಸ್ಯೆಯನ್ನು ನಿವಾರಿಸುತ್ತೆ, ಜೀವಕೋಶಗಳ ಬೆಳವಣಿಗೆಯನ್ನುಹೆಚ್ಚಿಸುತ್ತೆ, ಹೃದಯದ ಆರೋಗ್ಯ ಕಾಪಾಡುತ್ತೆ, ರಕ್ತ ಸಂಚಾರವನ್ನು ಅಧಿಕಗೊಳಿಸುತ್ತೆ, ಒತ್ತಡ ನೀಡುವ ಹಾರ್ಮೋನುಗಳನ್ನು ನಿಯಂತ್ರಿಸುತ್ತೆ ಇತ್ಯಾದಿಗಳು... ಇದಿಷ್ಟೇ ಅಲ್ಲದೆ, ಇದು ನಿಮಗೆ ಆರೋಗ್ಯಕಾರಿಯಾದ ಮತ್ತು ಹೊಳೆಯುವ ಚರ್ಮವನ್ನೂ ನೀಡುತ್ತೆ.

  ಹಾಗಾದ್ರೆ ಚಾಕಲೇಟ್ ನಿಂದ ಚರ್ಮಕ್ಕೆ ಆಗುವ 6 ಆರೋಗ್ಯಕಾರಿ ಲಾಭಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ. ನೋಡಿ.

  1.ಚರ್ಮವನ್ನು ಹೈಡ್ರೇಟ್ ಮಾಡುತ್ತದೆ

  ಹೆಚ್ಚಿನ ಆಂಟಿ ಆಕ್ಸಿಡೆಂಟ್ ಗುಣಗಳು ಮತ್ತು ವಿಟಮಿನ್ ಸಿ ಅಂಶವು ಚಾಕಲೇಟ್ ನಲ್ಲಿರುವುದರಿಂದಾಗಿ ಚರ್ಮವು ತೇವಾಂಶದಿಂದ ಕೂಡಿದ್ದು ಹೈಡ್ರೇಟ್ ಆಗಿರುತ್ತದೆ. ಹಾಗಾಗಿ, ಒಂದು ವೇಳೆ ನಿಮ್ಮ ಚರ್ಮ ಒರಟಾಗಿ ಮತ್ತು ಶುಷ್ಕವಾಗಿದ್ದರೆ, ಚಾಕಲೇಟನ್ನು ನಿಮ್ಮ ಸಮಸ್ಯೆಯ ನಿವಾರಣೆಗೆ ಬಳಕೆ ಮಾಡಿ.

  2. ಇದು ನೈಸರ್ಗಿಕವಾದ ಮಾಯ್ಚರೈಸರ್ ಆಗಿದೆ:

  ಕೋಕೋ ಬೀಜಗಳು ಆಲಿಕ್ ಆಸಿಡ್ ನ ಅಂಶದಿಂದ ಶ್ರೀಮಂತವಾಗಿರುತ್ತದೆ. ಅಷ್ಟೇ ಅಲ್ಲ ಪಾಲ್ಮಟಿಕ್ ಆಸಿಡ್ ಮತ್ತು ಸ್ಟಿರಿಯಾರಿಕ್ ಆಸಿಡ್, a.k.a ಫ್ಯಾಟಿ ಆಸಿಡ್, ಗಳು ಇದ್ದು ಇವು ನಿಮ್ಮ ಚರ್ಮವನ್ನು ಮಾಯ್ಚರೈಸ್ ಆಗಿರುವಂತೆ ನೋಡಿಕೊಳ್ಳುತ್ತದೆ. ಒಂದು ವೇಳೆ ನಿಮಗೆ ಶುಷ್ಕವಾದ, ಒರಟಾದ ಮತ್ತು ಕಳೆಗುಂದಿದ ಚರ್ಮವಿದ್ದರೆ, ಕೋಕೋ ಬೀಜಗಳು ನಿಮ್ಮ ಚರ್ಮಕ್ಕೆ ಬಹಳ ಒಳ್ಳೆಯದು.

  3. ಚರ್ಮಕ್ಕೆ ಹಾನಿಯಾಗುವುದರಿಂದ ತಪ್ಪಿಸುತ್ತದೆ:

  ಸೂರ್ಯನ ನೇರಳಾತೀತ ಕಿರಣಗಳು ಹಲವು ರೀತಿಯ ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತೆ ಉದಾಹರಣೆಗೆ ನೆರಿಗೆಗಳು, ಚರ್ಮದಲ್ಲಿ ಗೆರೆಗಳು, ವಯಸ್ಸಿನ ಕಲೆಗಳು ಇತ್ಯಾದಿ.. ಹಾಗಾಗಿ ಚಾಕಲೇಟ್ ನಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳಿದೆ ಮತ್ತು ಇದು ಚರ್ಮಕ್ಕೆ ಫ್ರೀ ರ್ಯಾಡಿಕಲ್ ಗಳ ಸಹಾಯದಿಂದ ಆಗುವ ಹಾನಿಯನ್ನು ಇದು ನಿವಾರಿಸುತ್ತದೆ. ಚಾಕಲೇಟ್ ಗಳು ಫ್ಲೇವನಾಯ್ಡ್ಸ್ ಅಂಶಗಳನ್ನು ಒಳಗೊಂಡಿರುತ್ತದೆ ಮತ್ತು ಸೂರ್ಯನ ನೇರಳಾತೀತ ಕಿರಣಗಳಿಂದ ಆಗುವ ಸಮಸ್ಯೆಗೆ ಒಂದು ಪ್ರೊಟೆಕ್ಟಿವ್ ಲೇಯರ್ ನಂತೆ ಇದು ವರ್ತಿಸುತ್ತದೆ.

  4. ಚರ್ಮದ ಕಿರಿಕಿರಿಯನ್ನು ತಗ್ಗಿಸುತ್ತದೆ:

  ಚಾಕಲೇಟ್ ನಲ್ಲಿ ಆಂಟಿ- ಇನ್ಲಮೇಟರಿ ಗುಣಗಳಿದೆ ಮತ್ತು ಇದು ಚರ್ಮಕ್ಕೆ ಬಹಳ ಉಪಕಾರಿಯಾಗಿದೆ. ಹಾಗಾಗಿ ಒಂದು ವೇಳೆ ನಿಮ್ಮ ಚರ್ಮದಲ್ಲಿ ಉರಿ ಅಥವಾ ಚರ್ಮವು ಕೆಂಪಗಾಗಿರುವ ಲಕ್ಷಣಗಳು ಕಂಡುಬಂದಲ್ಲಿ ಚಾಕಲೇಟ್ ನಿಮಗೆ ಈ ಸಮಸ್ಯೆಯಿಂದ ಪರಿಹಾರ ನೀಡುತ್ತೆ. ಹಾಗಾಗಿ ಯಾರು ಸೂಕ್ಷ್ಮ ಚರ್ಮವನ್ನು ಹೊಂದಿರುತ್ತಾರೋ ಅವರಿಗೆ ಇದು ಬಹಳ ಉಪಕಾರಿ.

  5 . ಒತ್ತಡದ ವಿರುದ್ಧ ಹೋರಾಡುತ್ತದೆ:

  ಒತ್ತಡವು ಬೇಗನೆ ಚರ್ಮವನ್ನು ವಯಸ್ಸಾದಂತೆ ಕಾಣುವು ಹಾಗೆ ಮಾಡುವುದರ ಪ್ರಮುಖ ಕಾರಣವಾಗಿದೆ ಮತ್ತು ಬೇಗನೆ ನೆರಿಗೆಗಳು ಚರ್ಮದಲ್ಲಿ ಕಾಣಿಸುವಂತೆ ಮಾಡಿ ಬಿಡುತ್ತದೆ. ಹಾಗಾಗಿ ಆಂಟಿ ಆಕ್ಸಿಡೆಂಟ್ ಗುಣಗಳಿರುವ ಚಾಕಲೇಟನ್ನು ಬಳಕೆ ಮಾಡಿ, ಆ ಮೂಲಕ ನಿಮ್ಮ ಒತ್ತಡದ ಲೆವೆಲ್ ನ್ನು ಕಡಿಮೆ ಮಾಡಿಕೊಳ್ಳಿ ಮತ್ತು ಚರ್ಮವನ್ನು ಹೊಳೆಯುವಂತೆ, ಮತ್ತು ತಾಜಾವಾಗಿರುವಂತೆ ನೋಡಿಕೊಳ್ಳಿ.

  6. ಚರ್ಮವನ್ನು ಸ್ವಚ್ಛಗೊಳಿಸುತ್ತದೆ ಮತ್ತು ನಿರ್ವಿಷಗೊಳಿಸುತ್ತದೆ:

  ಚಾಕಲೇಟ್ ನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಚರ್ಮವನ್ನು ನಿರ್ವಿಷಗೊಳಿಸಿ ಹೊಳೆಯುವಂತೆ ಮಾಡುತ್ತೆ ಮತ್ತು ಚರ್ಮವನ್ನು ಸ್ವಚ್ಛಗೊಳಿಸುತ್ತೆ. ಚಾಕಲೇಟ್ ಯಾವಾಗ ಕೆಫಿನ್ ಜೊತೆ ಸಮ್ಮಿಶ್ರಣಗೊಳ್ಳುತ್ತೋ ಆಗ ಇದು ಎಕ್ಸ್ ಫ್ಲಾಯಿಟರ್ ನಂತೆ ವರ್ತಿಸುತ್ತೆ. ಹಾಗಾಗಿ ಇದು ಚರ್ಮದ ಸತ್ತ ಜೀವಕೋಶಗಳ ನಿವಾರಣೆಗೆ ನೆರವು ನೀಡುತ್ತೆ ಮತ್ತು ಹೊಸ ಜೀವಕೋಶಗಳು ಹುಟ್ಟಲು ಕಾರಣವಾಗುತ್ತೆ.ಹಾಗಾಗಿ ಮುಂದಿನ ಬಾರಿ ನೀವು ಚರ್ಮದ ಸಮಸ್ಯೆ ಎದುರಿಸಿದಾಗ ಈ ಚಾಕಲೇಟ್ ಸಿಪ್ಪೆ ತೆಗೆಯುವಂತ ಫೇಸ್ ಮಾಸ್ಕ್ ಅನ್ನು ಬಳಕೆ ಮಾಡಿ ಮತ್ತು ತಕ್ಷಣವೇ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ.

  English summary

  Chocolate Peel Off Face Mask For An Instant Glow

  When you hear the word "Chocolate," you associate it with "Indulgence." When you're feeling low or when your hormones are acting weird, take a bar of chocolate and you will automatically feel good. But what if you use it on your face? It will definitely make you feel drop-dead gorgeous! Not only is eating chocolate good for the body (dark chocolate that has a high percentage of cocoa) but when applied to the skin, you will immediately see the difference. You'll have a softer, smooth and glowing skin.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more