ಬೇಸಿಗೆಯ ಬಿಸಿಗೆ ತಂಪು ತಂಪು ಕೂಲ್ ಕೂಲ್ 'ಸೌತೆಕಾಯಿ' ಫೇಸ್ ಪ್ಯಾಕ್!

Posted By: Hemanth
Subscribe to Boldsky

ಬೇಸಿಗೆ ಬಂತೆಂದರೆ ಅದು ದೇಹವನ್ನು ದಣಿಯುವಂತೆ ಮಾಡಿ ತುಂಬಾ ಆಯಾಸ ನೀಡುವುದು. ಇಂತಹ ಸಮಯದಲ್ಲಿ ಹಲವಾರು ರೀತಿಯಿಂದ ದೇಹವನ್ನು ತಣಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ನಮಗೆ ಸಿಗುವುದು ಸೌತೆಕಾಯಿ. ಇದು ಬೇಸಿಗೆಯಲ್ಲಿ ದೇಹಕ್ಕೆ ಶಮನ ನೀಡುವಂತಹ ತರಕಾರಿ. ಇದನ್ನು ತಿಂದರೆ ದೇಹಕ್ಕೆ ನೀರಿನಾಂಶ ಸಿಗುವುದು ಮಾತ್ರವಲ್ಲದೆ, ಆರಾಮವಾಗುವುದು. ಆದರೆ ಸೌತೆಕಾಯಿ ತಿನ್ನುವಾಗ ಇದರಿಂದ ದೇಹದ ಸೌಂದರ್ಯ ಕೂಡ ಹೆಚ್ಚಿಸಬಹುದು ಎಂದು ಯಾವತ್ತಾದರೂ ಯೋಚನೆ ಮಾಡಿದ್ದೀರಾ? ಇಲ್ಲ ತಾನೇ? ಹಾಗಾದರೆ ಇನ್ನು ಮುಂದೆ ಸೌತೆಕಾಯಿಯನ್ನು ನಿಮ್ಮ ಸೌಂದರ್ಯವರ್ಧಕವಾಗಿಯೂ ಬಳಸಿಕೊಳ್ಳಿ.

ಸೌತೆಕಾಯಿಯನ್ನು ಮಾಸ್ಕ್ ಮತ್ತು ಪ್ಯಾಕ್ ರೂಪದಲ್ಲಿ ಬಳಸಿಕೊಂಡು ಚರ್ಮವು ತುಂಬಾ ಸುಂದರ ಹಾಗೂ ಯೌವನಯುತವಾಗಿ ಕಾಣುವಂತೆ ಮಾಡುವುದು. ಕಲೆಗಳು, ಕಪ್ಪು ವೃತ್ತಗಳು, ಒಣಚರ್ಮ ಇತ್ಯಾದಿಗಳು ಇದು ಪರಿಣಾಮಕಾರಿ. ಸೌತೆಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಹಾಗೂ ಕೆಲವೊಂದು ಖನಿಜಾಂಶಗಳು ಇರುವುದೇ ಇದು ಚರ್ಮದ ಆರೈಕೆಗೆ ನೆರವಾಗಲು ಕಾರಣವಾಗಿದೆ. ಸೌತೆಕಾಯಿ ಪ್ರತಿಯೊಂದು ಮನೆಯ ಅಡುಗೆಮನೆಯಲ್ಲಿ ಸಿಗುವ ಕಾರಣ ಮುಂದೆ ನೀವು ಇದನ್ನು ಚರ್ಮದ ಆರೈಕೆಗೆ ಬಳಸಿಕೊಳ್ಳಿ.

ಸೌತೆಕಾಯಿಯನ್ನು ಯಾವ ರೀತಿ ಬಳಸಿಕೊಳ್ಳುವುದು ಎನ್ನುವ ಬಗ್ಗೆ ನಿಮಗೆ ಚಿಂತೆಯಾಗುತ್ತಿದೆಯಾ? ಹಾಗಾದರೆ ಈ ಲೇಖನ ಓದಿಕೊಂಡ ಬಳಿಕ ನಿಮ್ಮ ಚಿಂತೆ ದೂರವಾಗುವುದು ಖಚಿತ.....

ಕಾಂತಿಯುತ ಚರ್ಮಕ್ಕೆ

ಕಾಂತಿಯುತ ಚರ್ಮಕ್ಕೆ

ಸೌತೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಇದೆ. ಇದು ಚರ್ಮದ ಕಾಂತಿ ಕಾಪಾಡುವುದು. ಸೌತೆಕಾಯಿ ತಿನ್ನುವುದರಿಂದ ಚರ್ಮವು ಆರೋಗ್ಯ ಮತ್ತು ಸುಂದರವಾಗಿರುವುದು. ಚರ್ಮದ ಕಾಂತಿಗೆ ಎಷ್ಟು ಸೌತೆಕಾಯಿ ನಾವು ಬಳಸಬಹುದು ಎನ್ನುವುದನ್ನು ಇಲ್ಲಿ ನೋಡುವ.

ಇದಕ್ಕೆ ತುರಿದ ಸೌತೆಕಾಯಿಯೊಂದಿಗೆ ಸ್ವಲ್ಪ ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಡಿ ಮತ್ತು ತೊಳೆಯಿರಿ. ಬಳಿಕ ಇದು ಒಣಗಲಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಹೀಗೆ ಮಾಡಿ.

ಒಣಚರ್ಮಕ್ಕೆ

ಒಣಚರ್ಮಕ್ಕೆ

ನಿಮ್ಮದು ಒಣಚರ್ಮವಾಗಿದ್ದರೆ ಆಗ ಈ ಫೇಸ್ ಮಾಸ್ಕ್ ನಿಮಗೆ ನೆರವಾಗುವುದು. ಇದನ್ನು ವಯಸ್ಸಾಗುವ ಲಕ್ಷಣ ತಡೆಗಟ್ಟುವ ಮಾಸ್ಕ್ ಆಗಿಯೂ ಬಳಸಿಕೊಳ್ಳಬಹುದು.

ಬೇಕಾಗುವ ಸಾಮಗ್ರಿಗಳು

2-3 ಚಮಚ ಸೌತೆಕಾಯಿ ರಸ

1 ಚಮಚ ಹಾಲಿನ ಕೆನೆ

ಬಳಸುವ ವಿಧಾನ

ಬಳಸುವ ವಿಧಾನ

ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಮ್ಮ ಕುತ್ತಿಗೆ ಮತ್ತು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಹಾಗೆ ಬಿಡಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ಮಾಸ್ಕ್ ನಿಂದ ಚರ್ಮವು ತುಂಬಾ ನಯ ಹಾಗೂ ತೇವಾಂಶ ಪಡೆಯುವುದು. ಇದರಿಂದಾಗಿ ಒಣ ಚರ್ಮವು ಮಾಯವಾಗುವುದು.

ಎಣ್ಣೆಯುಕ್ತ ಚರ್ಮಕ್ಕಾಗಿ

ಎಣ್ಣೆಯುಕ್ತ ಚರ್ಮಕ್ಕಾಗಿ

ಈ ಮಾಸ್ಕ್ ಚರ್ಮವನ್ನು ನಯ ಹಾಗೂ ಶುದ್ಧವಾಗಿಡುವುದು. ಎಣ್ಣೆಯಂಶವಿರುವ ಚರ್ಮವು ಮೊಡವೆಗಳಿಗೆ ಆಹ್ವಾನ ನೀಡುವುದು. ಇದು ಮುಖದ ಮೇಲೆ ಇರುವಂತಹ ಹೆಚ್ಚುವರಿ ಎಣ್ಣೆಯಂಶವನ್ನು ತೆಗೆದುಹಾಕುವುದು.

ಬೇಕಾಗುವ ಸಾಮಗ್ರಿಗಳು

3 ಚಮಚ ಸೌತೆಕಾಯಿ ರಸ

1 ಚಮಚ ಮಜ್ಜಿಗೆ

2 ಚಮಚ ಕಡಲೆಹಿಟ್ಟು

1 ಚಮಚ ಲಿಂಬೆರಸ

ಬಳಸುವ ವಿಧಾನ

ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ಜತೆಯಾಗಿಸಿಕೊಂಡು ಪೇಸ್ಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ಹಗುರಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಒಣಗಲು ಬಿಡಿ. ಇದು ಎಣ್ಣೆಯುಕ್ತ ಚರ್ಮಕ್ಕೆ ತುಂಬಾ ಒಳ್ಳೆಯದು ಮತ್ತು ಚರ್ಮವು ಯೌವನಭರಿತವಾಗಿ ಕಾಣುವಂತೆ ಮಾಡುವುದು.

ಬಿಸಿಲಿನಿಂದ ಆದ ಕಲೆ ತೆಗೆಯಲು

ಬಿಸಿಲಿನಿಂದ ಆದ ಕಲೆ ತೆಗೆಯಲು

ಈ ಮಾಸ್ಕ್ ಬಿಸಿಲಿನಿಂದ ಆಗಿರುವ ಕಲೆ ತೆಗೆದು ಚರ್ಮಕ್ಕೆ ಪೋಷಣೆ ನೀಡುವುದು. ಸತ್ತ ಚರ್ಮದ ಪರಿಣಾಮ ಕಲೆಗಳು ಮೂಡುವುದು. ಈ ಪ್ಯಾಕ್ ಸತ್ತ ಚರ್ಮವನ್ನು ತೆಗೆದುಹಾಕಿ, ಚರ್ಮವು ಹೊಳೆಯುವಂತೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ಸೌತೆಕಾಯಿ ರಸ

1 ಚಮಚ ಮೊಟ್ಟೆಯ ಬಿಳಿ ಲೋಳೆ

1 ಚಮಚ ಮೊಸರು

ಬಳಸುವ ವಿಧಾನ

ಬಳಸುವ ವಿಧಾನ

ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷ ಹಾಗೆ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಮಾಸ್ಕ್ ಮುಖಕ್ಕೆ ನೈಸರ್ಗಿಕ ಕಾಂತಿ ನೀಡುವುದು. ವಾರದಲ್ಲಿ ಎರಡು ಸಲ ಈ ಮಾಸ್ಕ್ ಬಳಸಿ.

ಕಲೆ ನಿವಾರಿಸಲು

ಕಲೆ ನಿವಾರಿಸಲು

ನಿಯಮಿತವಾಗಿ ಈ ಮಾಸ್ಕ್ ಬಳಸಿಕೊಂಡರೆ ಅದರಿಂದ ಕಲೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕಬಹುದು.

ಬೇಕಾಗುವ ಸಾಮಗ್ರಿಗಳು

ಎರಡು ಚಮಚ ಸೌತೆಕಾಯಿ ರಸ

1 ಚಮಚ ಲಿಂಬೆರಸ

2 ಚಮಚ ಜೇನುತುಪ್ಪ

1 ಚಮಚ ಆಲಿವ್ ಎಣ್ಣೆ

ಬಳಸುವ ವಿಧಾನ

ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ತೊಳೆದುಕೊಂಡು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಮತ್ತು 30 ನಿಮಿಷ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆದು ಒಣಗಲು ಬಿಡಿ. ಚರ್ಮ ಎಣ್ಣೆಯುಕ್ತವಾಗಿದ್ದರೆ ಆಲಿವ್ ತೈಲ ಬಳಸಬೇಡಿ.

English summary

Benefits Of Cucumber For Skin Care

Cucumbers are packed with antioxidants and cucumbers contain some important minerals and other vitamins. Cucumbers can be used in the form of masks and packs to gain a young and beautiful skin. It can be used with ingredients like honey, cucumber, yogurt, etc., to treat several skin-related issues. We all have some common skin problems like skin tan,Cucumbers are packed with antioxidants and cucumbers contain some important minerals and other vitamins. Cucumbers can be used in the form of masks and packs to gain a young and beautiful skin. It can be used with ingredients like honey, cucumber, yogurt, etc., to treat several skin-related issues. We all have some common skin problems like skin tan,