ಬ್ಯೂಟಿ ಟಿಪ್ಸ್: ಮುಖದ ಅಂದ ಹೆಚ್ಚಿಸುವ ಕ್ಯಾರೆಟ್ ಫೇಸ್ ಮಾಸ್ಕ್

Posted By: Divya pandith
Subscribe to Boldsky

ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವಂತಹ ತರಕಾರಿಗಳಲ್ಲಿ ಕ್ಯಾರೆಟ್ ಕೂಡ ಒಂದು. ಅತ್ಯುತ್ತಮ ಪೋಷಕಾಂಶಗಳನ್ನು ಒಳಗೊಂಡಿರುವ ಕ್ಯಾರೆಟ್ ಖನಿಜ, ಜೀವಸತ್ವ, ಬೀಟಾ-ಕ್ಯಾರೋಟಿನ್ ಹೊಂದಿರುವ ಆಂಟಿ ಆಕ್ಸಿಡೆಂಟ್‍ಗಳಿಂದ ಕೂಡಿದೆ. ಸಿಹಿತಿಂಡಿ, ವಿವಿಧ ಬಗೆಯ ಆಹಾರ ಪದಾರ್ಥಗಳು ಹಾಗೂ ಸಲಾಡ್‍ಗಳಲ್ಲಿ ಈ ತರಕಾರಿಯನ್ನು ಸೇರಿಸಬಹುದು. ಆಹಾರ ಪದಾರ್ಥಗಳಿಗೆ ಅತ್ಯುತ್ತಮ ರುಚಿಯನ್ನು ನೀಡಬಲ್ಲ ಈ ತರಕಾರಿ ಆರೋಗ್ಯದ ವಿಚಾರದಲ್ಲೂ ಅತ್ಯುತ್ತಮವಾದ ಆರೈಕೆಯನ್ನು ಮಾಡುವುದು.

ಚರ್ಮದ ಆರೋಗ್ಯವನ್ನು ಸದಾ ಕಾಪಾಡುವ ಅತ್ಯುತ್ತಮ ತರಕಾರಿ ಎಂದು ಹೇಳಲಾಗುತ್ತದೆ. ಚರ್ಮದ ಕಂದು ಕಲೆ, ಶುಷ್ಕ ಚರ್ಮ, ಉರಿಯೂತ, ಸೇರಿದಂತೆ ಇನ್ನೂ ಅನೇಕ ಚರ್ಮ ಸಂಬಂಧಿ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಇದರೊಂದಿಗೆ ಇನ್ನೂ ಕೆಲವು ನೈಸರ್ಗಿಕ ಉತ್ಪನ್ನಗಳನ್ನು ಸೇರಿಸುವುದರ ಮೂಲಕ ಚರ್ಮದ ಸೌಂದರ್ಯವನ್ನು ದ್ವಿಗುಣ ಗೊಳಿಸಬಹುದು. ನೀವು ನಿಮ್ಮ ತ್ವಚೆಯ ಆರೈಕೆಗೆ ಹೊಸ ಮಾರ್ಗವನ್ನು ಅರಸುತ್ತಿದ್ದೀರಿ ಎಂದಾದರೆ ಈ ಮುಂದೆ ನೀಡಿರುವ ಮಾರ್ಗಗಳು ನಿಮಗೆ ಉತ್ತಮ ಪರಿಹಾರ ನೀಡಲಬಲ್ಲವು.

ಹೊಳೆಯುವ ತ್ವಚೆಗಾಗಿ

ಹೊಳೆಯುವ ತ್ವಚೆಗಾಗಿ

ಕ್ಯಾರೆಟ್‍ನಲ್ಲಿರುವ ವಿಟಮಿನ್ ಸಿ ಹಾಗೂ ಉತ್ಕರ್ಷಣ ನಿರೋಧಕ ಗುಣಗಳು ಚರ್ಮವನ್ನು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ. ಅಲ್ಲದೆ ತ್ವಚೆಯನ್ನು ಮೃದು ಹಾಗೂ ಕೋಮಲವಾಗಿರಲು ಸಹಕರಿಸುವುದು.

- ಸ್ವಲ್ಪ ತುರಿದ ಕ್ಯಾರೆಟ್‌ನ ಜೊತೆ ಜೇನುತುಪ್ಪ ಬೆರೆಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 15 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

- ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನ್ವಯಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ಶುಷ್ಕ ತ್ವಚೆಗಾಗಿ

ಶುಷ್ಕ ತ್ವಚೆಗಾಗಿ

ಶುಷ್ಕ ತ್ವಚೆಯು ನಿಮ್ಮದಾಗಿದ್ದರೆ ಕ್ಯಾರೆಟ್ ಮತ್ತು ಸೌತೆಕಾಯಿ ಸಂಯೋಜನೆಯ ಆರೈಕೆ ವಿಧಾನ ಅತ್ಯುತ್ತಮ ಪರಿಣಾಮವನ್ನು ಬೀರುವುದು. ಇದು ತ್ವಚೆಯನ್ನು ತೇವದಿಂದ ಇರುವಂತೆ ಮಾಡುವುದು. ಜೊತೆಗೆ ವಯಸ್ಸಾದ ಕಳೆಯನ್ನು ಸಹ ಸುಲಭವಾಗಿ ನಿವಾರಿಸುವುದು.

ಸಲಕರಣೆ

- 2-3 ಟೇಬಲ್ ಚಮಚ ಕ್ಯಾರೆಟ್ ಜ್ಯೂಸ್

- 1 ಟೇಬಲ್ ಚಮಚ ಸೌತೆಕಾಯಿ ಪೇಸ್ಟ್

- 1 ಟೇಬಲ್ ಚಮಚ ಹುಳಿ ಕ್ರೀಮ್

ವಿಧಾನ:

ವಿಧಾನ:

- ಎಲ್ಲಾ ಸಲಕರಣೆಗಳನ್ನು ಒಟ್ಟಿಗೆ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 15 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

- ಹೀಗೆ ಮಾಡುವುದರಿಂದ ಚರ್ಮವು ತೇವದಿಂದ ಕೂಡಿರುವುದು ಹಾಗೂ ಶುಷ್ಕ ತ್ವಚೆಯ ಸಮಸ್ಯೆಯು ದೂರವಾಗುವುದು.

ಎಣ್ಣೆಯುಕ್ತ ತ್ವಚೆಗೆ

ಎಣ್ಣೆಯುಕ್ತ ತ್ವಚೆಗೆ

ಎಣ್ಣೆಯುಕ್ತ ತ್ವಚೆಯವರು ಚರ್ಮವನ್ನು ಆಗಾಗ ಶುಚಿಗೊಳಿಸುತ್ತಿರಬೇಕು. ಈ ಸಮಸ್ಯೆ ಹೊಂದಿರುವವರಿಗೆ ಈ ಮುಂದಿರುವ ವಿಧಾನ ಉಪಯುಕ್ತವಾಗುವುದು.

ಸಲಕರಣೆಗಳು:

- 3 ಟೇಬಲ್ ಚಮಚ ಕ್ಯಾರೆಟ್ ಜ್ಯೂಸ್

- 1 ಟೇಬಲ್ ಚಮಚ ಮಜ್ಜಿಗೆ

- 2 ಟೇಬಲ್ ಚಮಚ ಕಡ್ಲೇ ಹಿಟ್ಟು

- 1 ಟೇಬಲ್ ಚಮಚ ನಿಂಬೆ ರಸ.

ವಿಧಾನ:

ವಿಧಾನ:

- ಎಲ್ಲಾ ಸಲಕರಣೆಗಳನ್ನು ಒಟ್ಟಿಗೆ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 30 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

- ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ಎಣ್ಣೆಯುಕ್ತ ತ್ವಚೆಯು ಮಾಯವಾಗಿ, ಚರ್ಮವು ಯೌವನದಿಂದ ಕೂಡಿರುವಂತೆ ಆಗುವುದು.

ಟ್ಯಾನ್ ನಿವಾರಣೆಗೆ

ಟ್ಯಾನ್ ನಿವಾರಣೆಗೆ

ಸೂರ್ಯನ ಕಿರಣದಿಂದ ತ್ವಚೆಯು ಬಹುಬೇಗ ಕಂದುಬಣ್ಣವನ್ನು ಹೊಂದುವುದು ಜೊತೆಗೆ ಮಂಕಾದ ಕಾಂತಿಯಿಂದ ಕೂಡಿರುವುದು. ಇಂತಹ ಸಮಸ್ಯೆಗಳಿಂದ ಪಾರಾಗಲು ಸುಲಭ ಉಪಾಯ ಕ್ಯಾರೆಟ್ ಫೇಸ್ ಪ್ಯಾಕ್.

ಸಲಕರಣೆ:

- 1 ಟೇಬಲ್ ಚಮಚ ಕ್ಯಾರೆಟ್ ಜ್ಯೂಸ್

- 1 ಟೇಬಲ್ ಚಮಚ ಮೊಟ್ಟೆಯ ಬಿಳಿ ಭಾಗ

- 1 ಟೇಬಲ್ ಚಮಚ ಮೊಸರು

ವಿಧಾನ:

ವಿಧಾನ:

- ಎಲ್ಲಾ ಸಲಕರಣೆಗಳನ್ನು ಒಟ್ಟಿಗೆ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- 20 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

- ವಾರಕ್ಕೆ ಎರಡು ಬಾರಿ ಈ ಕ್ರಮವನ್ನು ಅನ್ವಯಿಸಿದರೆ ಉತ್ತಮ ಫಲಿತಾಂಶ ದೊರೆಯುವುದು.

ಕಲೆಗಳ ನಿವಾರಣೆಗೆ

ಕಲೆಗಳ ನಿವಾರಣೆಗೆ

ಮುಖದ ಕಳೆಯನ್ನು ತೆಗೆಯುವ ಕಲೆಯ ಸಮಸ್ಯೆಯ ನಿವಾರಣೆಗೆ ಕ್ಯಾರೆಟ್ ಮುಖವಾಡ ಅತ್ಯುತ್ತಮ ವಿಧಾನ.

ಸಲಕರಣೆ:

- ಸಿಪ್ಪೆ ತೆಗೆದು ಬೇಯಿಸಿರುವ ಕ್ಯಾರೆಟ್ ಎರಡು.

- 1 ಟೀಚಮಚ ನಿಂಬೆ ರಸ.

- 2 ಟೇಬಲ್ ಚಮಚ ಜೇನುತುಪ್ಪ.

- 1 ಟೇಬಲ್ ಚಮಚ ಆಲಿವ್ ಎಣ್ಣೆ.

ವಿಧಾನ:

ವಿಧಾನ:

- ಬೇಯಿಸಿಕೊಂಡ ಕ್ಯಾರೆಟ್ ಅನ್ನು ಪೇಸ್ಟ್ ಮಾಡಿ.

- ಕ್ಯಾರೆಟ್ ಪೇಸ್ಟ್ ಗೆ ನಿಂಬೆರಸ, ಜೇನುತುಪ್ಪ ಮತ್ತು ಆಲಿವ್ ಎಣ್ಣೆ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

- 30 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

- ನೀವು ಎಣ್ಣೆಯುಕ್ತ ತ್ವಚೆಯನ್ನು ಹೊಂದಿದ್ದರೆ ಆಲಿವ್ ಎಣ್ಣೆಯನ್ನು ಸೇರಿಸದಿರಿ.

- ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶ ದೊರೆಯುವುದು.

English summary

Benefits Of Carrot For Skin Care

We all have some common skin problems like skin tan, blemishes, dry skin, etc. For all these you have an all-in-one solution and that is, carrot. Being a common vegetable, it can be found in every household. So, the next time you go to the kitchen, don't forget to grab some and use it to pamper your skin. Now, you must be wondering how to use them. Do not worry. This article will give you a complete guide on the benefits of carrots for your skin and how you can use them in the form of packs and masks to get that beautiful and flawless skin.
Story first published: Saturday, March 24, 2018, 7:00 [IST]