ನೈಸರ್ಗಿಕ ಸೌಂದರ್ಯ ಸೇವೆ - ಮನೆಯಲ್ಲಿಯೇ ಮಾಡಿ, ಹಣ ಉಳಿಸಿ

Posted By: Arshad
Subscribe to Boldsky

ಸೌಂದರ್ಯ ಆರೈಕೆಯ ಸೇವೆಯನ್ನು ಪಡೆಯಲು ನೀವು ಹೆಚ್ಚಾಗಿ ಸೌಂದರ್ಯಮಳಿಗೆಗಳನ್ನೇ ಆಶ್ರಯಿಸಿದ್ದು ಇದಕ್ಕಾಗಿ ಬಹಳವೇ ಹಣವನ್ನು ವೆಚ್ಚ ಮಾಡುತ್ತಿದ್ದೀರೇ? ಈ ಮೊತ್ತ ನಿಮ್ಮ ಮಾಸಿಕ ಖರ್ಚಿನ ದೊಡ್ಡ ಭಾಗವನ್ನು ಕಬಳಿಸುತ್ತಿದೆಯೇ? ಈ ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾದರೆ ಈ ಲೇಖನ ನಿಮಗಾಗಿಯೇ ಇದೆ.

ಇಂದು ಬೋಲ್ಡ್ ಸ್ಕೈ ತಂಡ ಮನೆಯಲ್ಲಿಯೇ ನಿರ್ವಹಿಸಬಹುದಾದ ಕೆಲವು ಸೌಂದರ್ಯ ವಿಧಾನಗಳನ್ನು ಪ್ರಸ್ತುತಪಡಿಸುತ್ತಿದ್ದು ಇದನ್ನು ನೀವೇ ಸ್ವತಃ ಮನೆಯಲ್ಲಿಯೇ ನಿರ್ವಹಿಸಿ ಯಾವುದೇ ವೃತ್ತಿಪರ ಸೇವೆಗೂ ಕಡಿಮೆಯಿಲ್ಲದ ಆರೈಕೆ ಪಡೆಯಬಹುದು. ಇದರಿಂದ ಸೌಂದರ್ಯ ಮಳಿಗೆಗಳಿಗೆ ಆಗಾಗ ಭೇಟಿ ನೀಡಿ ಸಮಯ ಮತ್ತು ಹಣವನ್ನು ವೃಥಾ ಖರ್ಚು ಮಾಡುವುದನ್ನು ತಡೆಗಟ್ಟಬಹುದು.

ವೃತ್ತಿಪರ ಮಳಿಗೆಗಳಿಗೆ ಭೇಟಿ ನೀಡಲು ಹೆಚ್ಚಿನವರು ನೀಡುವ ಮೊದಲ ಕಾರಣವೆಂದರೆ ಇಲ್ಲಿ ಅಗತ್ಯವಿರುವ ಎಲ್ಲಾ ಪ್ರಸಾದನಗಳು ಮತ್ತು ಪರಿಕರಗಳು ಇವೆ ಹಾಗೂ ಇವುಗಳ ಬಗ್ಗೆ ವೃತ್ತಿಪರರಿಗೇ ಹೆಚ್ಚು ತಿಳಿದಿರುತ್ತದೆ, ಇವರ ಮೂಲಕ ಅತ್ಯುತ್ತಮ ಸೇವೆ ಪಡೆಯಬಹುದು ಎಂದೇ ಆಗಿದೆ. ವಾಸ್ತವದಲ್ಲಿ ಯಾವುದೇ ವೃತ್ತಿಪರ ಸೇವೆಗೂ ಕಡಿಮೆಯಿಲ್ಲದ ಸೇವೆ ಪಡೆಯಲು ನಿಮಗೆ ಕೆಲವೇ ಪ್ರಸಾಧನಗಳನ್ನು ಅಂಗಡಿಯಿಂದ ಕೊಂಡು ತರುವ ಅಗತ್ಯವಿದ್ದು ಇವುಗಳು ಹೆಚ್ಚು ಸುರಕ್ಷಿತವಾಗಿವೆ ಹಾಗೂ ಈಗಾಗಲೇ ಸಾವಿರಾರು ಮಹಿಳೆಯರು ಈ ವಿಧಾನವನ್ನು ಅನುಸರಿಸಿ ತೃಪ್ತಿ ಕಂಡುಕೊಂಡಿದ್ದಾರೆ.

ತ್ವಚೆಯ ಸೌಂದರ್ಯಕ್ಕಾಗಿ ಫೇಶಿಯಲ್ ಮಸಾಜ್‌

ಪಾದೋಪಚಾರ (ಪೆಡಿಕ್ಯೂರ್) ದಿಂದ ಹಿಡಿದು ತಲೆಗೂದಲ ಅರೈಕೆಯವರೆಗೂ ನೀವು ಮನೆಯಲ್ಲಿಯೇ ಹಲವಾರು ವಿಧಾನಗಳನ್ನು ಅನುಸರಿಸಬಹುದು ಹಾಗೂ ನಿಮ್ಮದೇ ಸಮಯದಲ್ಲಿ ಹಾಗೂ ನಿಮ್ಮದೇ ಅನುಕೂಲದಲ್ಲಿ ನಿರ್ವಹಿಸಬಹುದು. ಬನ್ನಿ, ಈ ವಿಧಾನಗಳು ಯಾವುವು ಎಂದು ನೋಡೋಣ...

ಫೇಶಿಯಲ್

ಫೇಶಿಯಲ್

ಇತ್ತೀಚಿನವರೆಗೂ ಫೇಶಿಯಲ್ ಅಥವಾ ಮುಖದ ತ್ವಚೆಗೆ ಅಗತ್ಯವಿರುವ ಸೌಂದರ್ಯಸೇವೆಯನ್ನು ಕೇವಲ ವೃತ್ತಿಪರರು ಮಾತ್ರವೇ ಮಾಡಲು ಸಾಧ್ಯ ಎಂಬ ನಂಬಿಕೆ ಇತ್ತು. ಆದರೆ ಇಂದು ಈ ಸೇವೆಗೆ ಅಗತ್ಯವಿರುವ ಎಲ್ಲಾ ಪ್ರಸಾದನಗಳು ಸೌಂದರ್ಯ ಮಳಿಗೆಗಳಲ್ಲಿ ಲಭ್ಯವಿವೆ ಹಾಗೂ ವೃತ್ತಿಪರರು ಒದಗಿಸುವ ಸೇವೆಯನ್ನು ನೀವೇ ಸ್ವತಃ ಪಡೆಯಬಹುದು. ಅಲ್ಲದೇ ಅಂಗಡಿಗಳಲ್ಲಿ ದೊರಕುವ ಈ ಪ್ರಸಾದನಗಳ ಬೆಲೆಯೂ ಸೌಂದರ್ಯಮಳಿಗೆಯಲ್ಲಿ ಸಿಗುವುದಕ್ಕಿಂತಲೂ ಅಗ್ಗವೇ ಇರುತ್ತವೆ ಹಾಗೂ ಒಮ್ಮೆ ತಂದ ಪ್ರಸಾದನಗಳನ್ನು ಹಲವಾರು ದಿನಗಳವರೆಗೆ ಬಳಸಬಹುದಾದುದರಿಂದ ಪ್ರತಿಬಾರಿಯ ಫೇಶಿಯಲ್ ಗೆ ನೀಡಬೇಕಾದ ಹಣವೂ ಕಡಿಮೆಯೇ ಆಗುತ್ತದೆ.

ನಖೋಪಚಾರ (ಮ್ಯಾನಿಕ್ಯೂರ್)

ನಖೋಪಚಾರ (ಮ್ಯಾನಿಕ್ಯೂರ್)

ಈ ಉಪಚಾರ ಕೊಂಚ ಸೂಕ್ಷ್ಮವಾಗಿದ್ದು ಉಗುರು ಮತ್ತು ಉಗುರುಗಳ ಬುಡವನ್ನು ಸ್ವಚ್ಛಗೊಳಿಸುವ ಮತ್ತು ಅಗತ್ಯ ಆರೈಕೆ ನೀಡುವ ಚಿಕಿತ್ಸೆಯೂ ಆಗಿದೆ. ಈ ವಿಧಾನವನ್ನು ಕೊಂಚ ಸಾವಧಾನವಾಗಿ ಕಲಿಯಬೇಕಾಗುತ್ತದೆ. ಆಗ ಸೌಂದರ್ಯ ಮಳಿಗೆಗಳಿಗೆ ಭಾರೀ ಹಣ ವಿನಿಯೋಗಿಸುವ ಬದಲು ನೀವೇ ಮನೆಯಲ್ಲಿ ನಿರ್ವಹಿಸಬಹುದು. ನಿಯಮಿತವಾಗಿ ಈ ಉಪಚಾರವನ್ನು ಪಡೆದುಕೊಳ್ಳುವ ಮೂಲಕ ಉಗುರುಗಳ ಬುಡದಲ್ಲಿ ಸತ್ತ ಜೀವಕೋಶಗಳು ಹಾಗೂ ಕೊಳೆತುಂಬಿಕೊಂಡು ರಕ್ತ ಸಂಚಾರಕ್ಕೆ ಅಡ್ದಿಯುಂಟುಮಾಡುವುದರಿಂದ ತಡೆಗಟ್ಟಬಹುದು ಹಾಗೂ ಆರೋಗ್ಯಕರ ಉಗುರುಗಳ ಬೆಳವಣಿಗೆಯನ್ನು ಪಡೆಯಬಹುದು.

ಪಾದೋಪಚಾರ (ಪೆಡಿಕ್ಯೂರ್)

ಪಾದೋಪಚಾರ (ಪೆಡಿಕ್ಯೂರ್)

ಮನೆಯಲ್ಲಿಯೇ ಸುಲಭವಾಗಿ ನಿರ್ವಹಿಸಬಹುದಾದ ಇದು ಇನ್ನೊಂದು ಉಪಚಾರವಾಗಿದೆ. ಇದಕ್ಕೆ ಬೇಕಾದ ಪರಿಕರಗಳೂ ಮನೆಯಲ್ಲಿಯೇ ಇರುವ ಕಾರಣ ಹೆಚ್ಚಿನ ಹಣ ಖರ್ಚು ಮಾಡುವ ಅಗತ್ಯವೇ ಇಲ್ಲ. ಮನೆಯಲ್ಲಿಯೇ ಈ ಉಪಚಾರವನ್ನು ಸ್ವತಃ ಪಡೆದುಕೊಳ್ಳಿ ಹಾಗೂ ಪಾದಗಳ ಸತ್ತ ಜೀವಕೋಶಗಳನ್ನು ಹಾಗೂ ಕೊಳೆಯನ್ನು ಕೆರೆದು ನಿವಾರಿಸಿ.

 ತಲೆಗೂದಲಿಗೆ ಬಿಸಿಯೆಣ್ಣೆಯ ಉಪಚಾರ

ತಲೆಗೂದಲಿಗೆ ಬಿಸಿಯೆಣ್ಣೆಯ ಉಪಚಾರ

ತಲೆಗೂದಲಿಗೆ ಬಿಸಿ ಎಣ್ಣೆ ಅದ್ಭುತವಾದ ಆರೈಕೆಯನ್ನು ಒದಗಿಸುತ್ತದೆ. ಇದು ಕೂದಲನ್ನು ಬುಡದಿಂದ ಪೋಷಿಸುತ್ತದೆ ಹಾಗೂ ತನ್ಮೂಲಕ ಕೂದಲ ಕಾಂತಿ ಮತ್ತು ಸೊಬಗನ್ನು ಹೆಚ್ಚಿಸುತ್ತದೆ. ಈ ಉಪಚಾರವನ್ನು ವೃತ್ತಿಪರರಿಂದ ಪಡೆಯುವುದು ತೀರಾ ದುಬಾರಿ ಹಾಗೂ ಬಹಳ ಹೆಚ್ಚೇ ಸಮಯ ಹಿಡಿಯುತ್ತದೆ. ಬದಲಿಗೆ ಈ ಸೇವೆಯನ್ನು ನೀವೇ ನಿಮ್ಮ ನೆಚ್ಚಿನ ಎಣ್ನೆಯನ್ನು ಬಿಸಿ ಮಾಡಿಕೊಂಡು ಪಡೆಯಬಹುದು.

 ಸತ್ತ ಜೀವಕೋಶಗಳ ನಿವಾರಣೆ (Exfoliation)

ಸತ್ತ ಜೀವಕೋಶಗಳ ನಿವಾರಣೆ (Exfoliation)

ನಮ್ಮ ಚರ್ಮದ ಹೊರಪದರದ ಜೀವಕೋಶಗಳು ಸತತವಾಗಿ ಸಾಯುತ್ತಿರುತ್ತವೆ ಹಾಗೂ ಇವು ಒಣಗಿ ಪದರದಂತೆ ಚರ್ಮದ ಹೊರಪದರಕ್ಕೆ ಅಂಟಿಕೊಂಡಿರುತ್ತವೆ. ಇವನ್ನು ನಿವಾರಿಸಲು ಕೊಂಚ ಆರೈಕೆಯ ಅಗತ್ಯವಿದೆ. ವೃತ್ತಿಪರರು ತ್ವಚೆಯನ್ನು ಒರಟಾಗಿ ಉಜ್ಜುವ ಅಥವಾ ಸಿಪ್ಪೆಯಂತೆ ಸುಲಿಯುವ ವಿಧಾನವನ್ನು ಅನುಸರಿಸುತ್ತಾರೆ. ಇದಕ್ಕಾಗಿ ಭಾರೀ ಬೆಲೆಯನ್ನೂ ವಿಧಿಸುತ್ತಾರೆ. ಆದರೆ ಇದಕ್ಕೂ ಉತ್ತಮವಾದ ಮತ್ತು ಅತಿ ಅಗ್ಗವಾದ ಆರೈಕೆಯನ್ನು ಸ್ವತಃ ಮನೆಯಲ್ಲಿ ಪಡೆಯಬಹುದು. ನಿಮ್ಮದೇ ಆದ ದ್ರವವನ್ನು ತಯಾರಿಸಿಕೊಳ್ಳಬಹುದು (ಉದಾಹರಣೆಗೆ ಕಾಫಿಪುಡಿ+ಸಕ್ಕರೆ+ಕೊಬ್ಬರಿಎಣ್ಣೆ) ಅಥವಾ ಉತ್ತಮ ಗುಣಮಟ್ಟದ ಪ್ರಸಾದನವನ್ನು ಅಂಗಡಿಯಿಂದ ಕೊಂಡೂ ತರಬಹುದು. ಈ ಮೂಲಕ ಭಾರೀ ಖರ್ಚಿನಿಂದ ತಪ್ಪಿಸಿಕೊಳ್ಳಬಹುದು.

 ಕೂದಲಿಗೆ ಬಿಸಿಗಾಳಿಯ ಸ್ಪರ್ಷ (Blowout)

ಕೂದಲಿಗೆ ಬಿಸಿಗಾಳಿಯ ಸ್ಪರ್ಷ (Blowout)

ಬ್ಲೋ ಔಟ್ ಎಂದೇ ಹೆಚ್ಚು ಜನಪ್ರಿಯವಾಗಿರುವ ಈ ವಿಧಾನದಲ್ಲಿ ಬಿಸಿಗಾಳಿಯಲ್ಲಿ ಒದ್ದೆ ಕೂದಲನ್ನು ತ್ವರಿತವಾಗಿ ಒಣಗಿಸಿ ಮನಸ್ಸಿಗೆ ಒಪ್ಪುವ ವಿನ್ಯಾಸವನ್ನು ರೂಪಿಸಿಕೊಳ್ಳಬಹುದು. ವೃತ್ತಿಪರರು ಇದಕ್ಕೂ ಭಾರೀ ಬೆಲೆಯನ್ನು ವಿಧಿಸುತ್ತಾರೆ. ಆದರೆ ಸುಲಭಬೆಲೆಯಲ್ಲಿ ದೊರಕುವ ಹೇರ್ ಡ್ರೈಯರ್ ಒಂದನ್ನು ಖರೀದಿಸಿದರೆ ನಿಮ್ಮ ಮನಸ್ಸಿಗೊಪ್ಪುವ ಕೇಶವಿನ್ಯಾಸವನ್ನು ನೀವೇ ಮನೆಯಲ್ಲಿ ರೂಪಿಸಿಕೊಂಡು ಸಂಭ್ರಮಿಸಬಹುದು.

ಅನಗತ್ಯ ರೋಮ ನಿವಾರಣೆ (Waxing)

ಅನಗತ್ಯ ರೋಮ ನಿವಾರಣೆ (Waxing)

ಅನಗತ್ಯ ರೋಮ ನಿವಾರಣೆಗೆ ವೃತ್ತಿಪರರ ಸೇವೆ ಪಡೆಯಲು ನಿತ್ಯವೂ ಸಾವಿರಾರು ಮಹಿಳೆಯರು ನಿಯಮಿತವಾಗಿ ಮಳಿಗೆಗಳಿಗೆ ನುಗ್ಗುತ್ತಾರೆ. ಏಕೆಂದರೆ ಈ ವಿಧಾನದಲ್ಲಿ ಕೌಶಲ್ಯದ ಅಗತ್ಯವಿರುವ ಕಾರಣ ವೃತ್ತಿಪರರೇ ಇದನ್ನು ಮಾಡಬಹುದು ಎಂದು ನಾವೆಲ್ಲಾ ನಂಬಿದ್ದೇವೆ. ಆದರೆ ಇಂದು ಈ ಕೆಲಸವನ್ನು ಸುಲಭವಾಗಿ ನಿರ್ವಹಿಸುವ ಪ್ರಸಾದನಗಳು ಹಾಗೂ ಕೂದಲನ್ನು ಎಳೆಯಲು ಅಗತ್ಯವಿರುವ ಪಟ್ಟಿಗಳು ಸುಲಭಬೆಲೆಗೆ ಲಭ್ಯವಿದೆ ಹಾಗೂ ನೀವೇ ಮನೆಯಲ್ಲಿ ಸುಲಭವಾಗಿ ನಿರ್ವಹಿಸಿಕೊಳ್ಳಬಹುದು. ಬದಲಿಗೆ ನೀವೇ ನಿಮ್ಮ ಸ್ವತಃ ವ್ಯಾಕ್ಸಿಂಗ್ ಪ್ರಸಾದನವನ್ನು ತಯಾರಿಸಿ ಕೊಳ್ಳಬಹುದು.

ಕೂದಲಿಗೆ ಹಚ್ಚು ಬಣ್ಣ (Dyeing Your Hair)

ಕೂದಲಿಗೆ ಹಚ್ಚು ಬಣ್ಣ (Dyeing Your Hair)

ಕೂದಲಿಗೆ ಬಣ್ಣ ಹಚ್ಚಿಕೊಳ್ಳುವ ಸೇವೆಗೆ ವೃತ್ತಿಪರರು ದೊಡ್ಡ ಮೊತ್ತವನ್ನೇ ವಿಧಿಸುತ್ತಾರೆ. ಇಂದು ಈ ಸೇವೆಗೆ ಸರಿಸಮನಾದ ಆರೈಕೆಯನ್ನು ಮನೆಯಲ್ಲಿಯೇ ಪಡೆಯಲು ಸಾಧ್ಯ. ಸಿದ್ದ ರೂಪದಲ್ಲಿ ಬಳಸಲು ಸಾಧ್ಯವಿರುವ ಪ್ರಸಾದನಗಳು ನೀವು ಊಹಿಸದೇ ಇರುವಷ್ಟು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿವೆ ಹಾಗೂ ಇವುಗಳನ್ನು ಬಳಸಿ ಮನೆಯಲ್ಲಿಯೇ ನಿಮ್ಮ ಇಷ್ಟದ ಬಣ್ಣವನ್ನು ಸುರಕ್ಷಿತವಾಗಿ ಹಚ್ಚಿಕೊಳ್ಳಬಹುದು.

ಮುಖಕ್ಕೆ ಹಬೆಯ ಆರೈಕೆ (Steam Facial)

ಮುಖಕ್ಕೆ ಹಬೆಯ ಆರೈಕೆ (Steam Facial)

ಮುಖದ ತ್ವಚೆ ಅತಿ ಸೂಕ್ಷ್ಮವಾಗಿದ್ದು ಈ ತ್ವಚೆಯಲ್ಲಿರುವ ಸೂಕ್ಷ್ಮರಂಧ್ರಗಳಲ್ಲಿ ಸಿಲುಕಿರುವ ಕೊಳೆಯನ್ನು ಹೊರತೆಗೆಯಲು ಹಬೆಯ ಚಿಕಿತ್ಸೆಗಿಂತ ಪರಿಣಾಮಕಾರಿಯಾದ ವಿಧಾನ ಇನ್ನೊಂದಿಲ್ಲ. ಇದಕ್ಕಾಗಿ ಸಾಮಾನ್ಯ ಹಬೆಯಂತ್ರ ಮತ್ತು ದಪ್ಪ ಟವೆಲ್ ಇಷ್ಟೇ ಸಾಕು. ಇವೆರಡೂ ಒಮ್ಮೆ ಮಾಡಬಹುದಾಗಿರುವ ಬಂಡಾವಾಳದಂತಿದ್ದು ವರ್ಷವಿಡೀ ಇನ್ನೇನೂ ಖರ್ಚು ಮಾಡದೇ ವೃತ್ತಿಪರರ ಬಳಿ ಪಡೆಯುವಷ್ಟೇ ಉತ್ತಮವಾದ ಸೇವೆಯನ್ನು ಮನೆಯಲ್ಲಿಯೇ ಪಡೆಯಬಹುದು ಹಾಗೂ ಇದಕ್ಕಾಗಿ ಖರ್ಚು ಮಾಡಬೇಕಿದ ಹಣ ಮತ್ತು ಅಲ್ಲಿ ಹೋಗಿ ಬರಲು ವಿನಿಯೋಗಿಸುವ ಸಮಯ ಎರಡನ್ನೂ ಉಳಿಸಬಹುದು.

English summary

Beauty Treatments You Can Do At Home

Do you often end up splurging big money at a spa or a beauty salon? Does that take a toll on your monthly expenditure? If you answered yes to the aforementioned questions, then do read on, as today at Boldsky, we've curated a list of beauty treatments that you can do at home. There is no need to visit a salon and spend big bucks on getting those treatments done.