Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬ್ಯೂಟಿ ಟಿಪ್ಸ್: ಹೆಚ್ಚು ಹಣ್ಣಾದ ಬಾಳೆಹಣ್ಣಿನಿಂದ ಸೌಂದರ್ಯ ಚಿಕಿತ್ಸೆ!
ಬಾಳೆಹಣ್ಣು ತಿಂದರೆ ಅದರಿಂದ ದೇಹಕ್ಕೆ ಆಗುವಂತಹ ಆರೋಗ್ಯ ಲಾಭಗಳು ಅಪಾರ. ಇಂತಹ ಬಾಳೆಹಣ್ಣು ಹದವಾಗಿ ಹಣ್ಣಾಗಿದ್ದರೆ ತಿನ್ನಲು ರುಚಿ. ಅತಿಯಾಗಿ ಹಣ್ಣಾಗಿ ಕೊಳೆತಂತೆ ಕಾಣುವ ಬಾಳೆಹಣ್ಣನ್ನು ತಿನ್ನಲು ಯಾರು ಕೂಡ ಇಷ್ಟಪಡುವುದಿಲ್ಲ. ಇದನ್ನು ಹೆಚ್ಚಿನವರು ಕಸದ ಬುಟ್ಟಿಗೆ ಬಿಸಾಡುವರು. ಆದರೆ ಇತಹ ಹಣ್ಣುಗಳಿಂದ ನಿಮ್ಮ ಸೌಂದರ್ಯವು ವೃದ್ಧಿಯಾಗುವುದು ಎಂದರೆ ಆಗ ನೀವು ಕೂಡ ಇಂತಹ ಹಣ್ಣನ್ನು ಇನ್ನು ಮುಂದಕ್ಕೆ ಬಿಸಾಡಲಿಕ್ಕಿಲ್ಲ.
ಯಾಕೆಂದರೆ ಇದು ನಿಮ್ಮ ತ್ವಚೆಯನ್ನು ಯೌವನಯುತ ಹಾಗೂ ಕಾಂತಿಯುತವಾಗಿಸುವುದು. ಅತಿಯಾಗಿ ಹಣ್ಣಾಗಿರುವಂತಹ ಬಾಳೆಹಣ್ಣಿನಿಂದ ನಿಮ್ಮ ತ್ವಚೆಗೆ ಹಲವಾರು ರೀತಿಯ ಲಾಭಗಳು ಇವೆ. ಚರ್ಮವು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುವಲ್ಲಿ ಬಾಳೆಹಣ್ಣು ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿರುವ ಹಲವಾರು ರೀತಿಯ ವಿಟಮಿನ್ ಹಾಗೂ ಖನಿಜಾಂಶಗಳು ಚರ್ಮವನ್ನು ಪುನರ್ ನಿರ್ಮಿಸುವುದು ಮತ್ತು ಸರಿಪಡಿಸುವುದು.
ಬಾಳೆಹಣ್ಣನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ವಿಟಮಿನ್ ಹಾಗೂ ಖನಿಜಾಂಶಗಳು ಚರ್ಮಕ್ಕೆ ಲಭ್ಯವಾಗುವುದು. ಅತಿಯಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ಚರ್ಮದ ಪದರವನ್ನು ತುಂಬಾ ಸುಲಭವಾಗಿ ದಾಟಿಕೊಂಡು ಹೋಗಿ ಚರ್ಮಕ್ಕೆ ಬೇಗನೆ ಪೋಷಣೆ ನೀಡುವುದು. ಇದು ನೆರಿಗೆ ಹಾಗೂ ಕಲೆಗಳ ನಿವಾರಣೆ ಮಾಡುವುದು ಮತ್ತು ಚರ್ಮದ ರಂಧ್ರಗಳ ಗಾತ್ರ ಕುಗ್ಗಿಸುವುದು. ಯೌವನ ಮರಳಿ ಪಡೆದಂತೆ ಇರಲು ಹಾಗೂ ಕಾಂತಿಯುತ ಚರ್ಮಕ್ಕಾಗಿ ಹಣ್ಣಾದ ಬಾಳೆಹಣ್ಣು ಬಳಸುವುದು ಹೇಗೆ ಮತ್ತು ಅದರ ಲಾಭಗಳು ಏನು ಎಂದು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಇದು ಚರ್ಮ ಮತ್ತು ಕೂದಲಿಗೆ ತುಂಬಾ ಉಪಯುಕ್ತವಾಗಲಿದೆ...

ಎಣ್ಣೆಯುಕ್ತ ಚರ್ಮಕ್ಕೆ ಬಾಳೆಹಣ್ಣು
ಒಂದು ಹೆಚ್ಚು ಹಣ್ಣಾಗಿ ಬಾಳೆಹಣ್ಣನ್ನು ಮೂರು ಚಮಚ ಲಿಂಬೆರಸ ಜತೆ ಬೆರೆಸಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ. ಈ ವೇಳೆ ಮುಖದಲ್ಲಿರುವ ಜಿಡ್ಡಿನಾಂಶವನ್ನು ಬಾಳೆಹಣ್ಣು ತೆಗೆಯುವುದು.

ಒಣ ಹಾಗೂ ಒರಟು ಕೂದಲಿಗೆ
ಸರಿಯಾಗಿ ಹಣ್ಣಾಗಿರುವ ಒಂದು ಬಾಳೆಹಣ್ಣನ್ನು ಹಿಚುಕಿಕೊಳ್ಳಿ ಮತ್ತು ಅದಕ್ಕೆ ಅರ್ಧ ಕಪ್ ಮೊಸರು ಮತ್ತು ಒಂದು ಹಣ್ಣು ಅವಕಾಡೋ ಹಾಕಿ ಮಿಶ್ರಣ ಮಾಡಿ ಹೇರ್ ಮಾಸ್ಕ್ ಮಾಡಿ. ಈ ಮಾಸ್ಕ್ ನ್ನು ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಂಡು 15-20 ನಿಮಿಷ ಕಾಲ ಹಾಗೆ ಬಿಡಿ. ತಣ್ಣೀರಿನಿಂದ ಕೂದಲು ತೊಳೆಯಿರಿ. ಇದರಿಂದ ಕೂದಲು ತುಂಬಾ ನಯ ಹಾಗೂ ಹೊಳಪು ನೀಡುವುದು.

ನೈಸರ್ಗಿಕ ಮಾಯಿಶ್ಚರೈಸರ್
ಮುಖಕ್ಕೆ ಬಾಳೆಹಣ್ಣು ಒಳ್ಳೆಯ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುವುದು. ರಾಸಾಯನಿಕ ಹೊಂದಿರುವ ಕ್ರೀಮ್ ಬಳಸುವುದರಿಂದ ದೂರವಿದ್ದು, ಬಾಳೆಹಣ್ಣನ್ನು ಬಳಸಿಕೊಳ್ಳಿ. ಒಂದು ಹಣ್ಣು ಬಾಳೆಹಣ್ಣನ್ನು ಹಿಚುಕಿಕೊಳ್ಳಿ ಮತ್ತು ಇದನ್ನು ಮುಖಕ್ಕೆ ಹಚ್ಚಿ. ಹತ್ತು ನಿಮಿಷ ಹಾಗೆ ಬಿಡಿ ಮತ್ತು ಮಗುವಿನಂತಹ ತ್ವಚೆ ಪಡೆಯಲು ಮುಖ ತೊಳೆಯಿರಿ.

ಮುಖದಲ್ಲಿನ ನೆರಿಗೆಗೆ
ಹಣ್ಣು ಬಾಳೆಹಣ್ಣನ್ನು ಹಿಚುಕಿಕೊಳ್ಳಿ ಮತ್ತು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿ 15 ನಿಮಿಷ ಕಾಲ ಹಾಗೆ ಬಿಡಿ. ನೆರಿಗೆ ದೂರ ಮಾಡಲು ಇದನ್ನು ದಿನಕ್ಕೆ ಎರಡು ಸಲ ಬಳಸಿಕೊಳ್ಳಿ. ಇದನ್ನು ಬಿಸಿನೀರಿನಿಂದ ತೊಳೆದು ಒರೆಸಿಕೊಳ್ಳಿ.

ಸತ್ತ ಚರ್ಮ ನಿವಾರಿಸಲು ಬಾಳೆಹಣ್ಣು
ಒಂದು ಹಣ್ಣಾದ ಬಾಳೆಹಣ್ಣು, 3 ಚಮಚ ಓಟ್ಸ್ ಮತ್ತು ಮೂರು ಚಮಚ ಕೋಕಾ ಹುಡಿ ಹಾಕಿ ಮಿಶ್ರಣ ಮಾಡಿ. ಬಾಳೆಹಣ್ಣು, ಓಟ್ಸ್ ಮತ್ತು ಕೋಕಾ ಹಾಲಿನಿಂದ ಫೇಸ್ ಮಾಸ್ಕ್ ಮಾಡಿ. ಇದನ್ನು ಚರ್ಮಕ್ಕೆ ಹಚ್ಚಿಕೊಳ್ಳಿ ಮತ್ತು ಹತ್ತು ನಿಮಿಷ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಕಪ್ಪು ವೃತ್ತಗಳು
ಪ್ರತಿನಿತ್ಯ ಐದು ನಿಮಿಷ ಕಾಲ ಹಣ್ಣಾಗಿರುವ ಬಾಳೆಹಣ್ಣನ್ನು ಕಣ್ಣಿನ ಕೆಳಭಾಗದಲ್ಲಿ ಉಜ್ಜಿಕೊಳ್ಳುವುದರಿಂದ ಕಪ್ಪು ವೃತ್ತಗಳನ್ನು ನಿವಾರಿಸಬಹುದು. ಬಾಳೆಹಣ್ಣಿನಲ್ಲಿ ಇರುವಂತಹ ಕ್ಯಾಲ್ಸಿಯಂ ಕಪ್ಪು ವೃತ್ತಗಳ ವಿರುದ್ಧ ಹೋರಾಡಿ ಕಪ್ಪು ವೃತ್ತಗಳನ್ನು ಮಾಯ ಮಾಡುವುದು. ಇದು ಕಣ್ಣಿನ ಸುತ್ತಲು ಇರುವ ಕಲೆಗಳ ನಿವಾರಣೆಗೆ ಒಳ್ಳೆಯ ಮನೆಮದ್ದು.

ಒಡೆದ ಪಾದಗಳಿಗೆ
ಎರಡು ಹಣ್ಣು ಬಾಳೆಹಣ್ಣನ್ನು ಹಿಚುಕಿ ಮತ್ತು ಇದನ್ನು ಒಡೆದಿರುವ ಪಾದಗಳಿಗೆ ಹಚ್ಚಿಕೊಳ್ಳಿ. ಪಾದಗಳಿಗೆ ಬೆಳ್ಳಿ ಫಾಯಿಲ್ ಕಟ್ಟಿಕೊಂಡು ಒಂದು ಗಂಟೆ ಕಾಲ ಹಾಗೆ ಬಿಡಿ. ಮಲಗುವ ಮೊದಲು ಇದನ್ನು ನೀವು ಪ್ರತಿನಿತ್ಯ ಮಾಡಬಹುದು. ಒಡೆದ ಹಿಮ್ಮಡಿಗೆ ಶಮನ ನೀಡಲು ರಾತ್ರಿ ಹೀಗೆ ಮಾಡಿದರೆ ಒಳ್ಳೆಯದು.



Click it and Unblock the Notifications
