ಆಕರ್ಷಕ ತ್ವಚೆಯನ್ನು ಪಡೆಯಲು ಅಲೋವೆರಾ ಜೆಲ್ ಬಳಕೆ ಮಾಡಿ

Posted By: Divya pandit Pandit
Subscribe to Boldsky

ಮುಖದ ಕ್ಲೆನ್ಸರ್ ಎನ್ನುವುದು ಚರ್ಮದ ಆರೈಕೆಯ ಒಂದು ಉತ್ಪನ್ನ ಎನ್ನಬಹುದು. ಇದರ ಉಪಯೋಗಿಸಿ ಚರ್ಮದ ಆಕರ್ಷಣೆಯನ್ನು ದ್ವಿಗುಣಗೊಳಿಸಬಹುದು. ಇದು ಚರ್ಮದ ಮೇಲೆ ಹಾಗೂ ರಂಧ್ರದ ಒಳಗೆ ಸಂಗ್ರಹವಾದ ಕೊಳಕನ್ನು ತೆಗೆದುಹಾಕುತ್ತದೆ. ಜೊತೆಗೆ ಚರ್ಮವು ತಾಜಾ ಮತ್ತು ಉಲ್ಲಾಸದ ನೋಟದಿಂದ ಕೂಡಿರುತ್ತದೆ.

ಇತ್ತೀಚಿನ ದಿನಗಳಲ್ಲಿ ವ್ಯಾಪಾರೋದ್ಯಮದ ದೃಷ್ಟಿಯಿಂದ ಕ್ಲೆನ್ಸರ್‍ಗಳಲ್ಲಿ ರಾಸಾಯನಿಕ ಉತ್ಪನ್ನಗಳನ್ನು ಬಳಕೆ ಮಾಡಲಾಗುತ್ತಿದೆ. ಇಂತಹ ಉತ್ಪನ್ನಗಳಿಂದ ಮುಖದ ಆರೈಕೆ ಮಾಡಿದರೆ ತ್ವಚೆಯಲ್ಲಿ ಆಕರ್ಷಣೆ ಕಂಡುಬಂದರೂ ಇನ್ನಿತರ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿ ಆದಷ್ಟು ನೈಸರ್ಗಿಕ ಉತ್ಪನ್ನಗಳ ಬಳಕೆ ಮಾಡುವುದು ಉತ್ತಮ. ಅಂತಹ ಅತ್ಯುತ್ತಮ ಪರಿಣಾಮವನ್ನು ನೀಡಬಹುದಾದ ನೈಸರ್ಗಿಕ ಉತ್ಪನ್ನವೆಂದರೆ ಅಲೋವೆರಾ.

Alovera

ಅಲೋವೆರಾ ವಿಟಮಿನ್ ಇ ಯೊಂದಿಗೆ ಸಮೃದ್ಧವಾಗಿದೆ. ಇದರೊಂದಿಗೆ ಇನ್ನಿತರ ನೈಸರ್ಗಿಕ ಘಟಕಗಳ ಸಂಯೋಜನೆ ಮಾಡಿದರೆ ಇದರ ಶಕ್ತಿಯು ದ್ವಿಗುಣವಾಗುವುದು. ನಿಮಗೂ ಈ ಹೊಸ ಆರೈಕೆಯ ಪದ್ಧತಿ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಗುಲಾಬಿ ನೀರು ಮತ್ತು ಅಲೋವೆರಾ ಜೆಲ್

- 1 ಟೇಬಲ್ ಚಮಚ ಅಲೋವೆರಾ ಜೆಲ್ ಗೆ 2 ಟೀಚಮಚ ಗುಲಾಬಿ ನೀರನ್ನು ಸೇರಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ ಮಸಾಜ್ ಮಾಡಿ.

- ಬಳಿಕ ಶುದ್ಧವಾದ ನೀರಿನಿಂದ ಸ್ವಚ್ಛಗೊಳಿಸಿ.

- ತೆಳುವಾಗಿ ಟೋನ್ ಅನ್ವಯಿಸಿ.

- ಗಣನೀಯವಾಗಿ ಇದನ್ನು ಅನ್ವಯಿಸುವುದರಿಂದ ಚರ್ಮವನ್ನು ಉತ್ತಮ ಆರೋಗ್ಯದಿಂದ ಇರುವಂತೆ ಮಾಡುವುದು.

rose water

ಅಲೋವೆರಾ ಜೆಲ್ ಮತ್ತು ತೆಂಗಿನಕಾಯಿ ನೀರು

- 2 ಟೀಚಮಚ ಅಲೋವೆರಾ ಜೆಲ್ ಮತ್ತು 1 ಟೇಬಲ್ ಚಮಚ ತೆಂಗಿನಕಾಯಿ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ.

- ಉತ್ಸಾಹ ವಿಲ್ಲದ ನೀರಿನಿಂದ ಸ್ವಚ್ಛಗೊಳಿಸಿ.

- ಈ ಕ್ರಮವನ್ನು ಅನ್ವಯಿಸುವುದರಿಂದ ತ್ವಚೆಯನ್ನು ಆಕರ್ಷಣೆಯಿಂದ ಹಾಗೂ ತಾಜಾತನದಿಂದ ಕೂಡಿರುವಂತೆ ಕಾಣುವುದು.

ಅಲೋವೆರಾ ಜೆಲ್ ಮತ್ತು ಟೊಮ್ಯಾಟೋ ರಸ

- 2-3 ಟೀಚಮಚ ಅಲೋವೆರಾ ಜೆಲ್ ಮತ್ತು 1 ಟೀಚಮಚ ಟೊಮ್ಯಾಟೋ ರಸ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಅನ್ವಯಿಸಿ, ಸ್ವಲ್ಪ ಸಮಯ ಮಸಾಜ್ ಮಾಡಿ.

- ಉತ್ಸಾಹ ವಿಲ್ಲದ ನೀರಿನಿಂದ ಸ್ವಚ್ಛಗೊಳಿಸಿ.

- ತ್ವಚೆ ಒಣಗಿರುವಂತೆ ಆದರೆ ಮೃದುವಾಗಿ ಮಾಯ್ಚುರೈಸ್ ಕ್ರೀಮ್ ಅನ್ವಯಿಸಿ.

- ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ತ್ವಚೆಯಲ್ಲಿರುವ ಕೊಳೆಗಳು ನಿರ್ಮೂಲನೆಗೊಂಡು ಹೊಳಪಿನಿಂದ ಕೂಡಿರುವಂತೆ ಮಾಡುವುದು.

Oats

ಅಲೋವೆರಾ ಜೆಲ್ ಮತ್ತು ಓಟ್ಸ್

- 2-3 ಟೀಚಮಚ ಅಲೋವೆರಾ ಜೆಲ್ ಮತ್ತು 1/2 ಟೀಚಮಚ ಓಟ್ಸ್ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಅನ್ವಯಿಸಿ, ಮಸಾಜ್ ಮಾಡಿ.

- ಉತ್ಸಾಹ ವಿಲ್ಲದ ನೀರಿನಿಂದ ಸ್ವಚ್ಛಗೊಳಿಸಿ.

- ಬಳಿಕ ಮೃದುವಾಗಿ ಮಾಯ್ಚುರೈಸ್ ಕ್ರೀಮ್ ಅನ್ನು ಅನ್ವಯಿಸಿ.

- ವಾರದಲ್ಲಿ 3-4 ಬಾರಿ ಈ ಕ್ರಮವನ್ನು ಅನ್ವಯಿಸುವುದರಿಂದ ತ್ವಚೆ ಮೃದು ಹಾಗೂ ನಯವಾಗಿರುವುದು.

milk

ಅಲೋವೆರಾ ಜೆಲ್ ಮತ್ತು ಹಾಲು

- 2 ಟೀಚಮಚ ಅಲೋವೆರಾ ಜೆಲ್ ಮತ್ತು 1 ಟೀಚಮಚ ಹಾಲನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಅನ್ವಯಿಸಿ, ಸ್ವಲ್ಪ ಸಮಯ ಮಸಾಜ್ ಮಾಡಿ.

- ಉತ್ಸಾಹ ವಿಲ್ಲದ ನೀರಿನಿಂದ ಸ್ವಚ್ಛಗೊಳಿಸಿ.

- ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ತ್ವಚೆ ಶುದ್ಧ ಹಾಗೂ ಪ್ರಕಾಶಮಾನವಾಗಿ ಕಾಣುವುದು.

Green tea

ಅಲೋವೆರಾ ಜೆಲ್ ಮತ್ತು ಗ್ರೀನ್ ಟೀ

- 1 ಟೇಬಲ್ ಚಮಚ ಅಲೋವೆರಾ ಜೆಲ್ ಮತ್ತು 2 ಟೀಚಮಚ ಸಿಹಿರಹಿತವಾದ ಗ್ರೀನ್ ಟೀ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಆದ್ರ್ರ ಮುಖಕ್ಕೆ ಅನ್ವಯಿಸಿ, ಸ್ವಲ್ಪ ಸಮಯ ಮಸಾಜ್ ಮಾಡಿ.

- ಉತ್ಸಾಹ ವಿಲ್ಲದ ನೀರಿನಿಂದ ಸ್ವಚ್ಛಗೊಳಿಸಿ.

- ಬಳಿಕ ಮೃದುವಾಗಿ ಮಾಯಿಶ್ಚರೈಸ್ ಕ್ರೀಮ್ ಅನ್ನು ಅನ್ವಯಿಸಿ.

- ಗಣನೀಯವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ತ್ವಚೆ ಶುದ್ಧ ಹಾಗೂ ಒಡಕಿನಿಂದ ಮುಕ್ತಿ ಹೊಂದುವುದು.

English summary

All-natural Aloe Vera Facial Cleanser Recipes For Flawless Skin

A face cleanser is a widely used skin care product that is essential for maintaining clear skin. And, facial cleansing is something that should be done at least twice a day. Cleansing is a crucial part of the skin care routine. It removes dirt and impurities from the skin pores whilst giving the skin a fresh and refreshed appearance. Here, we’ve listed some of the aloe vera facial cleanser recipes that can help you achieve a flawless skin.