ಮುಖದ ಅಂದವನ್ನು ಹೆಚ್ಚಿಸುವ 'ಸೌತೆಕಾಯಿ' ಫೇಸ್ ಪ್ಯಾಕ್!

By: Jaya subramanya
Subscribe to Boldsky

ಸೌತೆಕಾಯಿ ಅಂದರೆ ರುಚಿಯಾದ ಕೋಸಂಬರಿ ನೆನಪಾಗುತ್ತದೆ. ಹೌದು ನಮ್ಮ ಎಲ್ಲಾ ಹಬ್ಬದ ಸಂಭ್ರಮಗಳಿಗೆ ಹಾಗೂ ಸಮಾರಂಭಗಳಲ್ಲಿ ಊಟಕ್ಕೆ ಸೌತೆಕಾಯಿಯನ್ನು ಖಂಡಿತವಾಗಿಯೂ ಬಳಸುತ್ತಾರೆ. ಕೋಸಂಬರಿಗೆ ಸೌತೆಕಾಯಿ ಇದ್ದರೇನೆ ಹೆಚ್ಚು ರುಚಿಕರ. ಹೀಗೆ ಅನೇಕ ಊಟದ ವಿಧಾನಗಳಲ್ಲಿ ಸೌತೆಕಾಯಿಯನ್ನು ದಿನನಿತ್ಯ ಬಳಸಲಾಗುತ್ತಿದೆ. ನಿಮ್ಮ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲು ಬಳಸುವ ತರಕಾರಿಗಳಲ್ಲಿ ಸೌತೆಕಾಯಿ ಮುಂಚೂಣಿಯಲ್ಲಿದೆ.  ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!

ಇದಕ್ಕೆ ಪರ್ಯಾಯವೆಂಬಂತೆ, ಸೇವಿಸುವುದರ ಜೊತೆಗೆ ಮುಖದ ಕಾಂತಿಯನ್ನೂ ಹೆಚ್ಚಿಸಬಹುದೆಂದು ನೀವು ನಂಬುತ್ತೀರಾ? ಸೌತೆಕಾಯಿ ನಿಮ್ಮ ದೇಹದ ಆರೋಗ್ಯಕ್ಕೆ ಮಾತ್ರ ಉಪಯೋಗಿಯೆಂದು ಹಲವರು ತಿಳಿದಿದ್ದಾರೆ. ಆದರೆ ಅದರಿಂದ ಮುಖದ ತ್ವಚೆಯ ಅಂದವನ್ನು ಹೆಚ್ಚಿಸಲೂ ಸಹ ಬಳಸುತ್ತಾರೆಂದು ಸಾಕಷ್ಟು ಜನರಿಗೆ ತಿಳಿದಿಲ್ಲ.  ಸೌತೆಕಾಯಿ: ಆರೋಗ್ಯಕ್ಕೂ ಸೈ, ಸೌಂದರ್ಯದ ವಿಷಯದಲ್ಲೂ ಜೈ!

ಸೌತೆಕಾಯಿಯನ್ನು ಮುಖದ ಮೇಲೆ ಹಚ್ಚುವುದರಿಂದ ತ್ವಚೆಯು ಕಾಂತಿಯುತವಾಗುವುದಲ್ಲದೇ ನೈಸರ್ಗಿಕವಾಗಿ ಸುಂದರವಾಗಿ ಕಾಣುತ್ತದೆ. ಇದರಲ್ಲಿ ಪೌಷ್ಠಿಕಾಂಶ ಸತ್ವಗಳು ಹೇರಳವಾಗಿದ್ದು, ಅದರಲ್ಲಿರುವ ಪ್ರತಿಯೊಂದು ವಿಟಮಿನ್, ಚರ್ಮದ ಆರೈಕೆಗೆ ಅತ್ಯಂತ ಪರಿಣಾಮಕಾರಿ, ಮುಂದೆ ಓದಿ... 

 ಸೌತೆಕಾಯಿಯ ಫೇಸ್ ಪ್ಯಾಕ್

ಸೌತೆಕಾಯಿಯ ಫೇಸ್ ಪ್ಯಾಕ್

ಸೌತೆಕಾಯಿಯ ಫೇಸ್ ಪ್ಯಾಕ್ ಅನ್ನು ತಯಾರಿಸಿಕೊಂಡು, ವಾರಕ್ಕೆ ಎರಡು ಬಾರಿ ತ್ವಚೆಯ ಮೇಲೆ ಹಚ್ಚಿಕೊಂಡರೆ, ಚರ್ಮದ ಚಿಕ್ಕ ಚಿಕ್ಕ ರಂಧ್ರಗಳನ್ನು ಪೂರ್ಣವಾಗಿ ಸ್ವಚ್ಛಗೊಳ್ಳುತ್ತದೆ. ಅದರ ರಸವು ತ್ವಚೆಯನ್ನು ಕಾಂತಿಯುತಗೊಳಿಸಿ ಕೋಮಲತೆಯನ್ನು ನೀಡುತ್ತದೆ. ನೀವು ಸೌತೆಕಾಯಿಯ ಫೇಸ್ ಪ್ಯಾಕ್ ಪದ್ಧತಿಯನ್ನು ಅನುಸರಿಸುತ್ತಿದ್ದರೆ, ವಾರಕ್ಕೆ 2 ರಿಂದ 3 ಬಾರಿ ಹಚ್ಚಿಕೊಂಡರೆ ಉತ್ತಮ ಹಾಗೂ ಶೀಘ್ರವಾದ ಫಲಿತಾಂಶ ದೊರೆಯುತ್ತದೆ

ಸೌತೆಕಾಯಿ ಸ್ಕಿನ್ ಟೋನರ್

ಸೌತೆಕಾಯಿ ಸ್ಕಿನ್ ಟೋನರ್

ಅರ್ಧ ತುಂಡರಿಸಿದ ಸೌತೆಕಾಯಿಯನ್ನು ಹಿಸುಕಿ ಎರಡು ಚಮಚದಷ್ಟು ನೀರಿನೊಂದಿಗೆ ಮಿಶ್ರ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ತ್ವಚೆಗೆ ಹಚ್ಚಿಕೊಳ್ಳಿ. ಇದರಿಂದ ತಾಜಾ ತ್ವಚೆ ಕಾಂತಿಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ತಂಪಾದ ಬಾಡಿ ಸ್ಪ್ರೇ

ತಂಪಾದ ಬಾಡಿ ಸ್ಪ್ರೇ

ಅತಿ ದೀರ್ಘ ಸಮಯದವರೆಗೆ ನೀವು ಬಿಸಿಲಿನಲ್ಲಿ ಅಡ್ಡಾಡುತ್ತಿದ್ದೀರಿ ಎಂದಾದಲ್ಲಿ ಈ ಬಾಡಿ ಸ್ಪ್ರೇ ನಿಮಗೆ ಸಹಕಾರಿ ಎಂದೆನಿಸಿದೆ. ಈ ಸ್ಪ್ರೇ ತಯಾರಿಸಲು ಸೌತೆಕಾಯಿಯನ್ನು ಚೆನ್ನಾಗಿ ಬ್ಲೆಂಡ್ ಮಾಡಿ ಅದನ್ನು ಅರ್ಧ ಕಪ್‌ನಷ್ಟು ಗ್ರೀನ್ ಟಿಯಲ್ಲಿ ಬೆರೆಸಿ. ಇದಕ್ಕೆ ಒಂದು ಚಮಚದಷ್ಟು ಅಲೊವೇರಾ ಜೆಲ್ ಅನ್ನು ಮಿಶ್ರ ಮಾಡಿ. ಅಂತೆಯೇ ರೋಸ್ ಎಸನ್ಶಿಯಲ್ ಆಯಿಲ್ ಸೇರಿಸಿ. ಇದೆಲ್ಲವನ್ನೂ ಸ್ಪ್ರೇ ಬಾಟಲಿಗೆ ಹಾಕಿ ನಂತರ ಚೆನ್ನಾಗಿ ಶೇಕ್ ಮಾಡಿಕೊಳ್ಳಿ.

ಬ್ಲ್ಯೂಬೆರ್ರಿ, ಓಟ್ ಮತ್ತು ಸೌತೆಕಾಯಿ ಮಾಸ್ಕ್

ಬ್ಲ್ಯೂಬೆರ್ರಿ, ಓಟ್ ಮತ್ತು ಸೌತೆಕಾಯಿ ಮಾಸ್ಕ್

ಅರ್ಧ ಸೌತೆಕಾಯಿಯನ್ನು ಬ್ಲೆಂಡ್ ಮಾಡಿ ಇದಕ್ಕೆ ಎರಡು ಚಮಚದಷ್ಟು ಓಟ್ಸ್ ಸೇರಿಸಿ ಮತ್ತು ಮುಷ್ಟಿಯಷ್ಟು ಬ್ಲ್ಯೂಬೆರ್ರಿಯನ್ನು ಮಿಶ್ರ ಮಾಡಿಕೊಳ್ಳಿ ನುಣ್ಣನೆಯ ಪೇಸ್ಟ್ ಸಿದ್ಧಪಡಿಸಿ. ನಿಮ್ಮ ಮುಖಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ ನಂತರ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದನ್ನು ತೊಳೆದುಕೊಳ್ಳಿ.

ಪಿಗ್ಮೆಂಟೇಶನ್ ನಿವಾರಣೆಗೆ

ಪಿಗ್ಮೆಂಟೇಶನ್ ನಿವಾರಣೆಗೆ

ಅರ್ಧ ಸೌತೆಕಾಯಿಯನ್ನು ಬ್ಲೆಂಡ್ ಮಾಡಿ ಇದಕ್ಕೆ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಅಂತೆಯೇ ರೋಸ್‌ಮೇರಿ ಎಸನ್ಶಿಯಲ್ ಆಯಿಲ್ ಮಿಶ್ರ ಮಾಡಿ ನಂತರ ಪೇಸ್ಟ್ ತಯಾರಿಸಿ. ನಿಮ್ಮ ಮುಖಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ 15 ನಿಮಿಷಗಳ ಕಾಲ ನಿರೀಕ್ಷಿಸಿ. ಈ ಸೌತೆಕಾಯಿ ಪ್ಯಾಕ್ ಕಪ್ಪು ಕಲೆಗಳು ಪಿಗ್ಮೆಂಟೇಶನ್ ಮತ್ತು ಮುಖದ ಹೊಳಪನ್ನು ಪುನಃ ತರುತ್ತದೆ.

 ಕಾಲಿನ ಸೌಂದರ್ಯಕ್ಕಾಗಿ ಸೌತೆಕಾಯಿ

ಕಾಲಿನ ಸೌಂದರ್ಯಕ್ಕಾಗಿ ಸೌತೆಕಾಯಿ

ಈ ಪ್ಯಾಕ್ ನಿಮ್ಮ ಕಾಲನ್ನು ಮೃದು ಮತ್ತು ಬಿಳಿಯಾಗಿಸುತ್ತದೆ. ಒಂದು ಸೌತೆಕಾಯಿಯನ್ನು ಬ್ಲೆಂಡ್ ಮಾಡಿ ಇದಕ್ಕೆ ಎರಡು ಚಮಚ ಆಲೀವ್ ಆಯಿಲ್ ಸೇರಿಸಿ ಮತ್ತು ಎರಡು ಚಮಚ ಲಿಂಬೆ ರಸವನ್ನು ಮಿಶ್ರ ಮಾಡಿ. ಇದನ್ನು ಬೆಚ್ಚಗೆ ಮಾಡಿಕೊಳ್ಳಿ ಮತ್ತು ದೊಡ್ಡ ಪಾತ್ರೆಗೆ ಹಾಕಿ. ನಂತರ ನಿಮ್ಮ ಕಾಲುಗಳನ್ನು ಇದರಲ್ಲಿ 15 ನಿಮಿಷಗಳ ಕಾಲ ಇಡಿ.

ಸೀಳು ಕೂದಲಿಗಾಗಿ ಸೌತೆಕಾಯಿ ಹೇರ್ ಮಾಸ್ಕ್

ಸೀಳು ಕೂದಲಿಗಾಗಿ ಸೌತೆಕಾಯಿ ಹೇರ್ ಮಾಸ್ಕ್

ಸೌತೆಕಾಯಿ ಹೇರ್ ಮಾಸ್ಕ್ ಸೀಳು ಕೂದಲುಗಳನ್ನು ನಿವಾರಣೆ ಮಾಡಲು ಸಹಕಾರಿ ಎಂದೆನಿಸಿದೆ. ಒಂದು ಮೊಟ್ಟೆ, ತುರಿದ ಸೌತೆಕಾಯಿ ಮತ್ತು 1/4 ಕಪ್ ತೆಂಗಿನೆಣ್ಣೆಯನ್ನು ತೆಗೆದುಕೊಳ್ಳಿ ಮಿಶ್ರ ಮಾಡಿಕೊಳ್ಳಿ. ಇದನ್ನು ನಿಮ್ಮ ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಳ್ಳಿ. 30 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ಕೂದಲನ್ನು ತೊಳೆದುಕೊಳ್ಳಿ.

 
English summary

Ways To Use Cucumber For Beauty

Cucumber is well known for its skin benefiting properties, but most probably you may only know about keeping its slices over closed eyes to soothe them.
Please Wait while comments are loading...
Subscribe Newsletter