ಫೇಸ್ ಕ್ರೀಮ್ ಬಿಟ್ಟುಬಿಡಿ-ನೈಸರ್ಗಿಕ ಫೇಸ್ ಪ್ಯಾಕ್ ಬಳಸಿ ನೋಡಿ

Posted By: Jaya
Subscribe to Boldsky

ಸುಂದರವಾಗಿ ಕಾಣಬೇಕೆಂಬ ಬಯಕೆ ಯಾರಿಗಿರುವುದಿಲ್ಲ ಹೇಳಿ. ಅದರಲ್ಲೂ ಯೌವನದಿಂದ ನಳನಳಿಸುವ ತ್ವಚೆಯನ್ನು ಪಡೆದುಕೊಳ್ಳಬೇಕೆಂಬ ಹಂಬಲ ಪ್ರತಿಯೊಬ್ಬ ಸ್ತ್ರೀಯ ಕನಸಾಗಿರುತ್ತದೆ. ಈ ಸೌಂದರ್ಯವು ನೈಸರ್ಗಿವಾಗಿ ಬರಬೇಕೆಂಬ ಬಯಕೆ ಹೆಚ್ಚಿನ ಹೆಂಗಳೆಯರ ಬಯಕೆಯಾಗಿರುತ್ತದೆ. ಏಕೆಂದರೆ ಈ ಬಗೆಯ ಸೌಂದರ್ಯವು ಚಿರಕಾಲ ಉಳಿಯುವಂತಿರುತ್ತದೆ.

ರಾಸಾಯನಿಕಗಳನ್ನು ಬಳಸಿ ನಿಮ್ಮ ಸೌಂದರ್ಯವನ್ನು ವರ್ಧಿಸಿಕೊಳ್ಳುವುದರಿಂದ ಅಪಾಯಗಳೇ ಹೆಚ್ಚು. ಹಾಗಿದ್ದರೆ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವ ಕೆಲವೊಂದು ನೈಸರ್ಗಿಕ ಮಾಸ್ಕ್‌ಗಳ ಪರಿಚಯವನ್ನು ನಾವಿಲ್ಲಿ ಮಾಡಿಕೊಡುತ್ತಿದ್ದೇವೆ. ಇದಕ್ಕಾಗಿ ನೀವು ಸ್ವಲ್ಪ ಸಮಯವನ್ನು ವಿನಿಯೋಗಿಸಲೇಬೇಕು. ಕಷ್ಟಪಟ್ಟರೆ ಮಾತ್ರ ನಿಮಗೆ ಅದ್ಭುತ ಸೌಂದರ್ಯವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈ ಫೇಸ್‌ಪ್ಯಾಕ್ ಅಥವಾ ಮಾಸ್ಕ್ ತಯಾರಿಸುವ ವಿಧಾನಗಳೇನು ಎಂಬುದನ್ನು ಅರಿತುಕೊಳ್ಳೋಣ...

ಬಾಳೆಹಣ್ಣು ಮತ್ತು ಕಿತ್ತಳೆ ಜ್ಯೂಸ್ ಮಾಸ್ಕ್

ಬಾಳೆಹಣ್ಣು ಬರಿಯ ಸೇವನೆಗೆ ಮಾತ್ರ ಯೋಗ್ಯವಾಗಿರುವುದಲ್ಲದೆ, ಪರಿಣಾಮಕಾರಿ ಮಾಯಿಶ್ಚರೈಸರ್ ಕೂಡ ಹೌದು. ಕಿತ್ತಳೆಯಲ್ಲಿ ವಿಟಮಿನ್ ಇ ಅಂಶವಿದ್ದು ಇದು ಮುಕ್ತ ರಾಡಿಕಲ್‌ಗಳನ್ನು ಕಡಿಮೆ ಮಾಡುತ್ತದೆ.

Banana

ಸಾಮಾಗ್ರಿಗಳು

1 ಬಾಳೆಹಣ್ಣು

1 ಚಮಚ ಕಿತ್ತಳೆ ರಸ

1 ಚಮಚ ಮೊಸರು

ಬಾಳೆಹಣ್ಣನ್ನು ಮ್ಯಾಶ್ ಮಾಡಿಕೊಳ್ಳಿ

ಇದಕ್ಕೆ ಕಿತ್ತಳೆ ರಸ ಮತ್ತು ಮೊಸರು ಸೇರಿಸಿ

ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ ಮತ್ತು 15-20 ನಿಮಿಷಗಳ ಕಾಲ ಕಾಯಿರಿ

ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಸೌತೆಕಾಯಿ ಮತ್ತು ಮೊಸರು ಮಾಸ್ಕ್

ಸೌತೆಕಾಯಿಯು ವಿಟಮಿನ್‌ಗಳಾದ ಬಿ 1, ಬಿ2, ಬಿ3, ಬಿ5, ಬಿ6, ಫೋಲಿಕ್ ಆಸಿಡ್, ವಿಟಮಿನ್ ಸಿ, ಕ್ಯಾಲ್ಶಿಯಂ, ಐರನ್, ಮೆಗ್ನೇಶಿಯಂ, ಫಾಸ್‌ಫರಸ್, ಪೊಟಾಶಿಯಂ, ಜಿಂಕ್ ಅನ್ನು ಒಳಗೊಂಡಿದೆ. ಇದು ತ್ವಚೆಯನ್ನು ಬಿಗಿಗೊಳಿಸಿ ತ್ವಚೆಯನ್ನು ಮೃದುವಾಗಿಸುತ್ತದೆ. ಮುಖ ಒಣಗುವಿಕೆ, ಸಿಪ್ಪೆ ಏಳುವುದು, ಬಿರುಕು ಬಿಡುವ ಸಮಸ್ಯೆಗಳಿಂದ ಸಂರಕ್ಷಿಸುತ್ತದೆ.

Curd

ಸಾಮಾಗ್ರಿಗಳು

*ಅರ್ಧದಷ್ಟು ಸೌತೆಕಾಯಿ

*ಅರ್ಧ ಕಪ್ ಗ್ರೀಕ್ ಮೊಸರು

*ಮುಷ್ಟಿಯಷ್ಟು ಪುದೀನಾ ಎಲೆಗಳು

ಪುದೀನಾ ಎಲೆಗಳೊಂದಿಗೆ ಸೌತೆಕಾಯಿಯನ್ನು ಅರೆದುಕೊಳ್ಳಿ

ಇದಕ್ಕೆ ಮೊಸರು ಸೇರಿಸಿಕೊಂಡು ಫ್ರಿಡ್ಜ್‌ನಲ್ಲಿ 15-20 ನಿಮಿಷಗಳ ಕಾಲ ಇರಿಸಿ.

ಅರ್ಧಗಂಟೆ ಈ ಮಿಶ್ರಣವನ್ನು ಮುಖದಲ್ಲಿರಿಸಿಕೊಂಡು ನಂತರ ತೊಳೆದುಕೊಳ್ಳಿ.

ಮೊಟ್ಟೆ ವೈಟ್ ಮಾಸ್ಕ್

ಮೊಟ್ಟೆಯ ಬಿಳಿ ಭಾಗವು ತ್ವಚೆಯನ್ನು ಇನ್ನಷ್ಟು ಕಾಂತಿಗೊಳಿಸುತ್ತದೆ, ಇದರಿಂದ ಗೆರೆಗಳು ಸುಕ್ಕುಗಳು ಮುಖದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಜೇನು ಆಂಟಿ ಬ್ಯಾಕ್ಟ್ರೀರಿಯಲ್ ಅಂಶಗಳನ್ನು ಒಳಗೊಂಡಿದೆ.

Skin glowing

ಸಾಮಾಗ್ರಿಗಳು

1- ಮೊಟ್ಟೆಯ ಬಿಳಿಭಾಗ

1- ಚಮಚ ತಾಜಾ ಲಿಂಬೆ ರಸ

ಅರ್ಧ ಚಮಚ ಜೇನು

ವಿಧಾನ

*ಮೇಲೆ ತಿಳಿಸಿರುವ ಎಲ್ಲಾ ಸಾಮಾಗ್ರಿಗಳನ್ನು ಬೌಲ್‌ನಲ್ಲಿ ಮಿಶ್ರ ಮಾಡಿಕೊಳ್ಳಿ.

*ಇದನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ಕಾಲ ಹಾಗೆಯೇ ಬಿಡಿ.

*ನಂತರ ತೊಳೆದುಕೊಳ್ಳಿ, ವ್ಯತ್ಯಾಸವನ್ನು ನೀವೇ ಗಮನಿಸಿ.

ಓಟ್‌ಮೀಲ್ ಮತ್ತು ಆಲೀವ್ ಆಯಿಲ್ ಮಾಸ್ಕ್

ಈ ಮಾಸ್ಕ್ ಸುಕ್ಕುಗಳನ್ನು ಮಾಯ ಮಾಡಿ ತ್ವಚೆಯನ್ನು ಬಿಗಿಗೊಳಿಸುತ್ತದೆ

ಸಾಮಾಗ್ರಿಗಳು

*2 ಚಮಚಗಳಷ್ಟು ಓಟ್‌ಮೀಲ್

*ಅರ್ಧ ಕಪ್ ಮಜ್ಜಿಗೆ

*1 ಕಪ್ ಎಕ್ಸ್ಟ್ರಾ ವರ್ಜಿನ್ ಆಲೀವ್ ಆಯಿಲ್

*1 ಚಮಚ ಬಾದಾಮಿ ಎಣ್ಣೆ

ವಿಧಾನ

ಓಟ್‌ಮೀಲ್ ಮತ್ತು ಮಜ್ಜಿಗೆಯನ್ನು ಮಿಶ್ರ ಮಾಡಿಕೊಂಡು ಮೈಕ್ರೋವೇವ್‌ನಲ್ಲಿ ಮಿಶ್ರಣ ಮೃದುವಾಗುವವರೆಗೆ ಬೆಚ್ಚಗೆ ಮಾಡಿಕೊಳ್ಳಿ.

ಈ ಮಿಶ್ರಣಕ್ಕೆ ಆಲೀವ್ ಆಯಿಲ್ ಮತ್ತು ಬಾದಾಮಿ ಎಣ್ಣೆಯನ್ನು ಸೇರಿಸಿ ಮತ್ತು 5-10 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.

ನಿಮ್ಮ ಮುಖವನ್ನು ಮೃದುವಾದ ಕ್ಲೆನ್ಸರ್‌ನಿಂದ ತೊಳೆದುಕೊಳ್ಳಿ ಮತ್ತು ಮುಖ, ಕುತ್ತಿಗೆಗೆ ಪ್ಯಾಕ್ ಹಚ್ಚಿಕೊಳ್ಳಿ.

ಇದನ್ನು 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ.

ತಣ್ಣೀರಿನಿಂದ ಮುಖವನ್ನು ತೊಳೆದುಕೊಂಡು ಒಣಗಲು ಬಿಡಿ.

ಆಲೂಗಡ್ಡೆ ಮತ್ತು ಸೇಬು ಮಾಸ್ಕ್

ಈ ಮಾಸ್ಕ್ ತ್ವಚೆಯ ಕಾಂತಿಯನ್ನು ವರ್ಧಿಸುತ್ತದೆ ಮತ್ತು ಫೇಶಿಯಲ್‌ ಲೈನ್‌ಗಳನ್ನು ಬಿಗಿಗೊಳಿಸುತ್ತದೆ. ಸನ್ ಬರ್ನ್ ಅನ್ನು ನಿವಾರಿಸುತ್ತದೆ.

ಸಾಮಾಗ್ರಿಗಳು

ಆಲೂಗಡ್ಡೆ - 2

2 ಚಮಚಗಳಷ್ಟು ಕತ್ತರಿಸಿದ ಸೇಬು

ವಿಧಾನ

*ಮೊದಲು ಆಲೂಗಡ್ಡೆಯನ್ನು ಕತ್ತರಿಸಿಕೊಳ್ಳಿ

*ಆಲೂಗಡ್ಡೆ, ಸೇಬನ್ನು ಹಾಕಿಕೊಂಡು ಮಿಕ್ಸರ್‌ನಲ್ಲಿ ಇದನ್ನು ರುಬ್ಬಿಕೊಳ್ಳಿ.

*ನಿಮ್ಮ ಮುಖಕ್ಕೆ ಈ ಮಾಸ್ಕ್ ಅನ್ನು ಹಚ್ಚಿಕೊಂಡು 20 ನಿಮಿಷ ಹಾಗೆಯೇ ಬಿಡಿ.

*ಮಾಸ್ಕ್ ಅನ್ನು ತೊಳೆದುಕೊಳ್ಳಿ ಮತ್ತು ಐಸ್ ಅನ್ನು ಮುಖಕ್ಕೆ ಹಚ್ಚಿಕೊಂಡು ಮಸಾಜ್ ಮಾಡಿ.

ಮೇಲೆ ತಿಳಿಸಿದ ಈ ಮಾಸ್ಕ್‌ಗಳಲ್ಲದೆ ನಿಮ್ಮ ತ್ವಚೆಯ ಕಾಂತಿಯನ್ನು ವರ್ಧಿಸುವ ಇನ್ನಷ್ಟು ನೈಸರ್ಗಿಕ ಉತ್ಪನ್ನಗಳಿದ್ದು ಅವುಗಳನ್ನು ಬಳಸಿಕೊಂಡು ನಿಮ್ಮ ತ್ವಚೆಯನ್ನು ಅತ್ಯದ್ಭುತಗೊಳಿಸಬಹುದಾಗಿದೆ. ಸ್ಯಾಟೀನ್ ತಲೆದಿಂಬು ಕವರ್‌ಗಳನ್ನು ಆದಷ್ಟು ಬಳಸಿ ಇದರಿಂದ ತ್ವಚೆಗೆ ಮೃದುತ್ವ ದೊರೆಯುತ್ತದೆ. ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸುವುದರಿಂದ ಕೂಡ ನಿಮ್ಮ ತ್ವಚೆಯನ್ನು ಕಾಂತಿಯುಕ್ತಗೊಳಿಸಬಹುದು ಹಾಗೂ ಯವ್ವೌನದಿಂದ ನಳನಳಿಸುವಂತೆ ಮಾಡಬಹುದು.

For Quick Alerts
ALLOW NOTIFICATIONS
For Daily Alerts

    English summary

    Want A Younger-looking Skin? Then, Try These Home Remedies!

    Although there are different procedures in the market to get rid of these signs, they are often expensive. A lot of people also hesitate to go under the knife for this purpose. But nature has an answer to all our woes. Here, in this article, we will tell you more about the natural remedies that will reduce the appearance of fine lines and tighten the skin naturally, all in the comfort of your home.
    Story first published: Friday, June 30, 2017, 23:33 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more