ಲಿಂಬೆಯ ಮಾಯಾ ಜಾದೂಗೆ, 'ಸಲಾಂ' ಎನ್ನಲೇಬೇಕು ...

Posted By: Hemanth
Subscribe to Boldsky

ವರ್ಷದ ಹೆಚ್ಚಿನ ಋತುಗಳಲ್ಲಿ ಕಂಡುಬರುವಂತಹ ನಿಂಬೆಹಣ್ಣೆಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ.

ಸ್ವಲ್ಪ ಹುಳಿ ಸ್ವಭಾವ ಹೊಂದಿರುವ ಕಾರಣದಿಂದಾಗಿ ಹೆಚ್ಚಿನವರು ನಿಂಬೆಹಣ್ಣಿನ ರಸದಿಂದ ದೂರ ಉಳಿಯುತ್ತಾರೆ. ಇದರಲ್ಲಿ ವಿಟಮಿನ್ ಸಿ ಅಧಿಕ ಮಟ್ಟದಲ್ಲಿ ಇರುವ ಕಾರಣದಿಂದಾಗಿ ಇದನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಲಿಂಬೆಹಣ್ಣನ್ನು ತ್ವಚೆ ಮತ್ತು ಕೂದಲಿನ ಆರೈಕೆಯಲ್ಲಿ ಬಳಸಬಹುದು. ಇದನ್ನು ಯಾವ ರೀತಿಯಿಂದ ಕೂದಲು ಮತ್ತು ಚರ್ಮದ ಆರೈಕೆಯಲ್ಲಿ ಬಳಸಬಹುದು ಎಂದು ಈ ಲೇಖನವನ್ನು ಮುಂದಕ್ಕೆ ಓದುತ್ತಾ ತಿಳಿಯಿರಿ..... 

ನೈಸರ್ಗಿಕವಾಗಿ ಚರ್ಮದ ಬ್ಲೀಚಿಂಗ್

ನೈಸರ್ಗಿಕವಾಗಿ ಚರ್ಮದ ಬ್ಲೀಚಿಂಗ್

ಲಿಂಬೆಯಲ್ಲಿ ಸಮೃದ್ಧವಾಗಿರುವಂತಹ ವಿಟಮಿನ್ ಸಿ ಚರ್ಮವನ್ನು ನೈಸರ್ಗಿಕವಾಗಿ ಬಿಳಿಯಾಗಿಸುವುದು. ಇದರಲ್ಲಿ ಇರುವಂತಹ ನೈಸರ್ಗಿಕ ಬ್ಲೀಚಿಂಗ್ ಗುಣಗಳು ಚರ್ಮವನ್ನು ಬಿಳಿಯಾಗಿಸಲು ನೆರವಾಗುವುದು. ಇದರಿಂದ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುವುದು. ಮೊಣಕೈ, ಮೊಣಕಾಲು ಮತ್ತು ಬೇರೆ ಯಾವುದೇ ಕಲೆಗಳು ಇದ್ದರೆ ಆ ಜಾಗಕ್ಕೆ ನಿಂಬೆರಸವನ್ನು ಹಚ್ಚಿಕೊಳ್ಳಿ. ಒಳ್ಳೆಯ ಫಲಿತಾಂಶಕ್ಕಾಗಿ ಒಂದು ತಿಂಗಳ ಕಾಲ ನಿಂಬೆರಸ ಹಚ್ಚಿಕೊಳ್ಳಿ.

ಲಿಂಬೆ ರಸ ಬೆರೆಸಿದ ನೀರು, ಅದೇನು ಮಾಯೆ, ಅದೇನು ಜಾದೂ!

ಮೊಡವೆಗಳು

ಮೊಡವೆಗಳು

ನಿಂಬೆ ರಸದಿಂದ ಮೊಡವೆಗಳನ್ನು ತುಂಬಾ ಸುಲಭವಾಗಿ ತೆಗೆದುಹಾಕಬಹುದು. ನಿಂಬೆರಸದಲ್ಲಿ ಇರುವಂತಹ ಕೆಲವೊಂದು ಅಂಶಗಳು ಮೊಡವೆಗಳನ್ನು ತೆಗೆದುಹಾಕಿ ಕಾಂತಿಯುತ ಹಾಗೂ ನಯವಾದ ಚರ್ಮವನ್ನು ನೀಡುವುದು. ಒಂದು ತುಂಡು ನಿಂಬೆ ತೆಗೆದುಕೊಂಡು ಅದರ ಮೇಲೆ ಅಡುಗೆ ಸೋಡಾವನ್ನು ಸಿಂಪಡಿಸಿ. ಇದನ್ನು ಬಾಧಿತ ಪ್ರದೇಶಕ್ಕೆ ಮಸಾಜ್ ಮಾಡಿ. ಕಾಂತಿಯುತ ತ್ವಚೆ ಪಡೆಯಲು ನಿಯಮಿತವಾಗಿ ಇದನ್ನು ಬಳಸಿ.

ತ್ವಚೆಯನ್ನು ಶುಚಿಗೊಳಿಸುವುದು

ತ್ವಚೆಯನ್ನು ಶುಚಿಗೊಳಿಸುವುದು

ಲಿಂಬೆಯನ್ನು ಬಳಸಿಕೊಂಡು ತ್ವಚೆಯನ್ನು ಶುಚಿಗೊಳಿಸಬಹುದಾಗಿದೆ. ಲಿಂಬೆರಸರದಲ್ಲಿ ಉತ್ತಮ ಮಟ್ಟದ ಪ್ರೋಟೀನ್, ವಿಟಮಿನ್ ಮತ್ತು ಸಿಟ್ರಿಕ್ ಆಮ್ಲವು ಇರುವುದರಿಂದ ಇದು ಮುಖದಲ್ಲಿರುವ ಕೊಳೆ ಹಾಗೂ ಧೂಳನ್ನು ತೆಗೆದು ಹಾಕುವುದು. ತ್ವಚೆಯನ್ನು ಕಾಂತಿಯುತ ಹಾಗೂ ಸುಂದರವಾಗಿಡಲು ಇದು ಒಂದು ನೈಸರ್ಗಿಕ ಟೋನರ್ ನಂತೆ ಕೆಲಸ ಮಾಡುತ್ತದೆ. ಸ್ವಲ್ಪ ನಿಂಬೆರಸ ತೆಗೆದುಕೊಂಡು ಅದಕ್ಕೆ ಅಷ್ಟೇ ಪ್ರಮಾಣದ ನೀರು ಹಾಕಿಕೊಳ್ಳಿ. ಹತ್ತಿ ಉಂಡೆಯನ್ನು ಬಳಸಿಕೊಂಡು ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ.

ಲಿಂಬೆ ಸಿಪ್ಪೆ: ಸಂಧಿವಾತ ಸಮಸ್ಯೆಗೆ ಶಕ್ತಿಶಾಲಿ ಮನೆಮದ್ದು

ಅತಿಯಾದ ಹೊಳಪನ್ನು ತೆಗೆಯುವುದು

ಅತಿಯಾದ ಹೊಳಪನ್ನು ತೆಗೆಯುವುದು

ಮುಖದಲ್ಲಿ ಅತಿಯಾದ ಹೊಳಪು ಇದ್ದರೆ ಅದನ್ನು ತೆಗೆದುಹಾಕಲು ನಿಂಬೆಯು ನೆರವಾಗುವುದು. ಸ್ವಲ್ಪ ನಿಂಬೆರಸ ತೆಗೆದುಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮಸಾಜ್ ಮಾಡಿದ ಬಳಿಕ ಸ್ವಲ್ಪ ಸಮಯ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಎಣ್ಣೆಯಂಶವಿರುವ ತ್ವಚೆ ಹೊಂದಿರುವವರಿಗೆ ನಿಂಬೆಯು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಇದು ಮುಖದಲ್ಲಿನ ಅತಿಯಾದ ಎಣ್ಣೆಯನ್ನು ತೆಗೆದುಹಾಕುವುದು.

ಉಗುರು ಬಲಗೊಳ್ಳಲು

ಉಗುರು ಬಲಗೊಳ್ಳಲು

ಮಾರುಕಟ್ಟೆಯಲ್ಲಿ ಉಗುರು ಬಲಗೊಳಿಸುವಂತಹ ಹಲವಾರು ಉತ್ಪನ್ನಗಳು ಸಿಗುತ್ತದೆ. ಆದರೆ ನೈಸರ್ಗಿಕವಾಗಿರುವಂತಹ ನಿಂಬೆಯನ್ನು ಬಳಸಿಕೊಂಡು ಉಗುರನ್ನು ಬಲಗೊಳಿಸಬಹುದು. ಲಿಂಬೆರಸ ಮತ್ತು ಆಲಿವ್ ತೈಲವನ್ನು ಮಿಶ್ರಣ ಮಾಡಿಕೊಂಡು ಅದನ್ನು ಉಗುರುಗಳಿಗೆ ಹಚ್ಚಿಕೊಂಡರೆ ಉಗುರು ಆರೋಗ್ಯಕರ ಹಾಗೂ ಬಲವಾಗಿರುತ್ತದೆ. ಈ ಮಿಶ್ರಣವನ್ನು ಪ್ರತೀ ದಿನ ಉಗುರುಗಳಿಗೆ ಮಸಾಜ್ ಮಾಡಿದರೆ ಉಗುರುಗಳು ಬಲಗೊಳ್ಳುತ್ತದೆ ಮತ್ತು ನೈಸರ್ಗಿಕವಾಗಿ ತೇವಾಂಶವನ್ನು ಪಡೆಯುತ್ತದೆ. ಹಳದಿ ಹಾಗೂ ನಿಸ್ತೇಜ ಉಗುರುಗಳನ್ನು ನಿಂಬೆಯು ತಡೆಯುತ್ತದೆ.

ನುಣುಪಾದ ಕೂದಲಿಗೆ

ನುಣುಪಾದ ಕೂದಲಿಗೆ

ಕೂದಲಿಗೆ ಕಂಡೀಷನರ್ ಬಳಸುವವರು ಲಿಂಬೆರಸವನ್ನು ಬಳಸಬಹುದು. ಯಾಕೆಂದರೆ ಇದು ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ಕೂದಲು ತೊಳೆಯಲು ಶಿಖಾಕಾಯಿ ಬಳಸುತ್ತಾ ಇದ್ದರೆ ಕೂದಲಿಗೆ ಕೃತಕ ಕಂಡೀಷನರ್ ಅನ್ನು ಬಳಸಬೇಡಿ. ಕೂದಲನ್ನು ನುಣುಪು ಮಾಡಲು ಲಿಂಬೆರಸ ಬಳಸಿ. ಲಿಂಬೆರಸವು ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಲಿಂಬೆಗೆ ಸ್ವಲ್ಪ ಉಪ್ಪು ಹಾಕಿಕೊಂಡು ಅದನ್ನು ಮುಖಕ್ಕೆ ಉಜ್ಜಿಕೊಳ್ಳಿ. ಚರ್ಮದ ರಂಧ್ರದಲ್ಲಿನ ಎಲ್ಲಾ ಕೊಳೆ ಹೊರಬರುವುದು.

ಮನೆಮದ್ದು: ಲಿಂಬೆ ಹಣ್ಣಿನ ಸಿಪ್ಪೆ-ಎಷ್ಟು ಹೊಗಳಿದರೂ ಸಾಲದು!

For Quick Alerts
ALLOW NOTIFICATIONS
For Daily Alerts

    English summary

    Uses Of Lemon For Skin Care

    Before knowing about the uses of lemon for beauty purposes, let me tell you that the essential vitamins and proteins present in lemons can help to benefit your skin in more than one way. This inexpensive fruit is easily available in the market and also can be used regularly. Hence, it finds its use in several skin care and hair care routines.
    Story first published: Friday, June 2, 2017, 8:28 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more