Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಚುಮು ಚುಮು ಚಳಿಯಲ್ಲಿ ತ್ವಚೆಯ ಆರೈಕೆ ಹೇಗಿರಬೇಕು?
ಚಳಿಗಾಲದಲ್ಲಿ ನಿಮ್ಮ ತ್ವಚೆ ಮತ್ತು ಕೂದಲಿಗೆ ಹಾನಿಯುಂಟಾಗುವುದು ಹೆಚ್ಚು, ತಂಪು ವಾತಾವರಣವು ವಾತಾವರಣದಲ್ಲಿರುವ ಧೂಳಿನೊಂದಿಗೆ ಸೇರಿಕೊಂಡು ನಿಮ್ಮ ಕೂದಲು ಮತ್ತು ತ್ವಚೆಗೆ ಹಾನಿಯನ್ನುಂಟು ಮಾಡುತ್ತದೆ. ಅದರಲ್ಲೂ ತ್ವಚೆಯ ಮೇಲೆ ಚಳಿಗಾಲದ ಪರಿಣಾಮ ತುಸು ಹೆಚ್ಚೇ ಆಗಿದ್ದು, ಮುಖದ ಬಿರುಕುಗಳು, ಒಣ ತ್ವಚೆ, ತುರಿಕೆ, ಮೊದಲಾದ ಸಮಸ್ಯೆಗಳು ಕಾಡಬಹುದು. ಇದಕ್ಕಾಗಿ ತುಸು ಹೆಚ್ಚಿನ ಕಾಳಜಿಯನ್ನು ನೀವು ವಹಿಸಬೇಕಾಗುತ್ತದೆ.
ಚಳಿಗಾಲದ ತಣ್ಣನೆಯ ಹವೆಗೆ, ಮರುಗದಿರಲಿ ಸೌಂದರ್ಯ
ಚಳಿಗಾಲದ ಸಮಯದಲ್ಲಿ ನೀವು ತೊಡುವ ಉಡುಪುಗಳನ್ನು ಹೇಗೆ ಆಯ್ಕೆಮಾಡಿಕೊಳ್ಳುತ್ತೀರೋ, ಹೇಗೆ ಬದಲಾಯಿಸಿಕೊಳ್ಳುತ್ತೀರೋ ಅಂತೆಯೇ ತ್ವಚೆಯನ್ನು ಕಾಪಾಡಿಕೊಳ್ಳಬೇಕು. ಸೂಕ್ತ ಆರೈಕೆಯನ್ನು ಮಾಡಬೇಕು ಇಂದಿನ ನಮ್ಮ ಲೇಖನದಲ್ಲಿ ಚಳಿಗಾಲದಲ್ಲಿ ತ್ವಚೆಯ ಆರೈಕೆಯನ್ನು ಹೇಗೆ ಮಾಡುವುದು ಎಂಬುದರ ಕುರಿತು ಕೆಲವೊಂದು ಅಂಶಗಳನ್ನು ತಿಳಿಸಿಕೊಡುತ್ತಿದ್ದೇವೆ. ಅದೇನು ಎಂಬುದನ್ನು ನೋಡೋಣ...
ಉಗುರು ಬೆಚ್ಚನೆಯ ನೀರಿನಲ್ಲಿ ಮುಖ ತೊಳೆದುಕೊಳ್ಳಿ
ಚಳಿಗಾಲದ ಸಮಯದಲ್ಲಿ ನಿಮ್ಮ ತ್ವಚೆ ಆರೋಗ್ಯಕರವಾಗಿರಬೇಕಾದಲ್ಲಿ ನೀವು ಈ ವಿಧಾನವನ್ನು ಅಳವಡಿಸಿಕೊಳ್ಳಲೇಬೇಕು. ನಿಮ್ಮ ತ್ವಚೆಯನ್ನು ಉಗುರುಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳುವುದರಿಂದ ಮುಖಕ್ಕೆ ಬೆಚ್ಚನೆಯ ಅನುಭೂತಿಯನ್ನು ನೀಡಬಹುದು. ಹೆಚ್ಚು ಬಿಸಿಯಾದ ನೀರು ನಿಮ್ಮ ಮುಖದ ಶುಷ್ಕತೆಯನ್ನು ಇನ್ನಷ್ಟು ಗಾಢಗೊಳಿಸಬಹುದು. ಆದ್ದರಿಂದ ಉಗುರು ಬೆಚ್ಚನೆಯ ನೀರು ಇಲ್ಲವೇ ತಣ್ಣೀರನ್ನು ಮುಖ ತೊಳೆಯಲು ಬಳಸಿಕೊಳ್ಳಿ.
ಎಕ್ಸ್‌ಫೋಲಿಯೇಶನ್
ಚಳಿಗಾಲದ ಸಮಯದಲ್ಲಿ ಎಕ್ಸ್‌ಫೋಲಿಯೇಶನ್ ಮಾಡುವುದು ಉತ್ತಮವಾದುದು ಎಂಬುದು ತ್ವಚೆಯ ಪರಿಣಿತರ ಸಲಹೆಯಾಗಿದೆ. ಇದು ಮೃತಕೋಶಗಳನ್ನು ವಿಷಕಾರಿ ಅಂಶಗಳನ್ನು ತ್ವಚೆಯಿಂದ ದೂರಮಾಡುತ್ತದೆ. ವಾರಕ್ಕೊಮ್ಮೆ ಎಕ್ಸ್‌ಫೋಲಿಯೇಶನ್ ಮಾಡಿಕೊಳ್ಳುವುದನ್ನು ಮರೆಯದಿರಿ.
ನೊರೆಯಿಲ್ಲದ ಕ್ಲೆನ್ಸರ್ ಬಳಕೆ
ನೊರೆ ಇರುವ ಕ್ಲೆನ್ಸರ್‌ಗಳು ಬೇಸಿಗೆಗೆ ಉತ್ತಮವಾಗಿದೆ. ಚಳಿಗಾಲದಲ್ಲಿ ನೊರೆ ಇಲ್ಲದ ಕ್ಲೆನ್ಸರ್ ಆರೈಕೆಯನ್ನು ನಿಮ್ಮ ತ್ವಚೆಗೆ ಮಾಡಿಕೊಳ್ಳಿ. ಏಕೆಂದರೆ ಚಳಿಗಾಲದಲ್ಲಿ ನೊರೆ ಇರುವ ಕ್ಲೆನ್ಸರ್ ಬಳಸುವುದು ನಿಮ್ಮ ತ್ವಚೆಯ ಮಾಯಿಶ್ಚರೈಸರ್ ಅನ್ನು ಕಸಿದುಕೊಳ್ಳಬಹುದು ಅಂತೆಯೇ ತ್ವಚೆಯನ್ನು ಒಣಗಿಸಬಹುದು.
ಸನ್‌ಸ್ಕ್ರೀನ್ ಬಳಕೆ ಮಾಡಿ
ಚಳಿಗಾಲದಲ್ಲಿ ಸನ್‌ಸ್ಕ್ರೀನ್ ಬಳಕೆಯನ್ನು ಹೆಚ್ಚಿನ ಮಹಿಳೆಯರು ಮಾಡುವುದಿಲ್ಲ. ಈ ಸಮಯದಲ್ಲಿ ಕೂಡ ಸೂರ್ಯನ ಕಿರಣಗಳು ಪ್ರಬಲವಾಗಿರುತ್ತವೆ ಮತ್ತು ಇವುಗಳು ನಿಮ್ಮ ತ್ವಚೆಯ ಮೇಲೆ ಪ್ರತೀಕೂಲ ಪರಿಣಾಮವನ್ನು ಉಂಟುಮಾಡಬಲ್ಲುದು. ಹೊರಗೆ ಹೋಗುವುದಕ್ಕೆ ಮುಂಚೆ ಸನ್‌ಸ್ಕ್ರೀನ್ ಬಳಕೆ ಮಾಡುವುದನ್ನು ಮರೆಯದಿರಿ.
ಫೇಸ್‌ಪ್ಯಾಕ್
ಚಳಿಗಾದಲ್ಲಿ ಫೇಸ್ ಪ್ಯಾಕ್ ಅದ್ಭುತ ಪರಿಣಾಮವನ್ನು ಉಂಟುಮಾಡಬಲ್ಲುವು. ಇದು ಮುಖಕ್ಕೆ ಪೋಷಣೆಯನ್ನು ಮಾಡಿ ಹೆಚ್ಚು ಒಣಗುವುದರಿಂದ ತಡೆಯುತ್ತದೆ ಮತ್ತು ಒರಟಾಗಿಸುವುದಿಲ್ಲ. ಮನೆಯಲ್ಲೇ ಈ ಫೇಸ್‌ಪ್ಯಾಕ್‌ಗಳನ್ನು ನಿಮಗೆ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದಾಗಿದೆ. ಅವೊಕಾಡೊ, ಬಾಳೆಹಣ್ಣು, ಜೇನು ಮೊದಲಾದವುಗಳನ್ನು ಬಳಸಿ ಫೇಸ್‌ಪ್ಯಾಕ್ ತಯಾರಿಸಿಕೊಳ್ಳಿ.
ಹೆಚ್ಚು ನೀರು ಕುಡಿಯಿರಿ
ಚಳಿಗಾದಲ್ಲಿ ನೀರಿನ ಮಹತ್ವ ಅತಿ ಹೆಚ್ಚು ಮುಖ್ಯವಾಗಿದೆ. ಈ ಸಮಯದಲ್ಲಿ ತಂಪು ಗಾಳಿಯು ನಿಮ್ಮಲ್ಲಿರುವ ನೀರಿನ ಅಂಶವನ್ನು ಹೆಚ್ಚು ಖಾಲಿಯಾಗಿಸುತ್ತದೆ. ಆದ್ದರಿಂದ ಸಾಕಷ್ಟು ನೀರು ಕುಡಿದು ಡಿಹೈಡ್ರೇಶನ್ ಆಗುವುದನ್ನು ತಪ್ಪಿಸಿಕೊಳ್ಳಿ.
ವಿಟಮಿನ್ ಇ ಆಯಿಲ್ ಬಳಕೆ
ವಿಟಮಿನ್ ಇ ಆಯಿಲ್ ಅನ್ನು ತ್ವಚೆಗೆ ಬಳಸುವುದು ಮುಖಕ್ಕೆ ಪೋಷಣೆಯನ್ನುಂಟು ಮಾಡುತ್ತದೆ ಮತ್ತು ನ್ಯೂಟ್ರೀನ್ ಅಂಶಗಳನ್ನು ಪೂರೈಸುತ್ತದೆ. ವಾರದಲ್ಲೊಮ್ಮೆ ಈ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.
ರಾತ್ರಿ ಮಲಗುವ ಮುನ್ನ ತ್ವಚೆಯನ್ನು ಮಾಯಿಶ್ಚರೈಸ್ ಮಾಡಿ
ಮಾಯಿಶ್ಚರೈಸ್ ಮಾಡುವುದನ್ನು ನೀವು ಎಂದಿಗೂ ತಪ್ಪಿಸಬಾರದು. ರಾತ್ರಿ ಮಲಗುವ ಮುನ್ನ ತಪ್ಪದೆಯೇ ಮುಖಕ್ಕೆ ಮಾಯಿಶ್ಚರೈಸ್ ಮಾಡಿ. ಇದರಿಂದ ತ್ವಚೆ ಒಣಗುವುದಿಲ್ಲ ಮತ್ತು ಮರುದಿನ ಬೆಳಗ್ಗೆ ಮೃದುವಾದ ಹೊಳೆಯುವ ತ್ವಚೆಯನ್ನು ನೀವು ಪಡೆದುಕೊಳ್ಳುತ್ತೀರಿ.
ತುಪ್ಪ
ಭಾರತೀಯರ ಎಲ್ಲ ಮನೆಗಳಲ್ಲೂ ತುಪ್ಪ ಇದ್ದೇ ಇರುತ್ತದೆ. ನಿಮ್ಮ ಕೈಗಳ ಚರ್ಮಕ್ಕೆ ಒಳಗಿನಿಂದ ತೇವಾಂಶ ನೀಡುವ ಗುಣ ಇದರಲ್ಲಿದೆ. ಅಪ್ಪಟ ತುಪ್ಪದಿಂದ ನಿಮ್ಮ ಬೆರಳುಗಳು ಮತ್ತು ಕೈಗಳ ಚರ್ಮಕ್ಕೆ ತಿಕ್ಕಿ.ಹಚ್ಚಿರುವ ತುಪ್ಪವು ಪೂರ್ಣವಾಗಿ ಹೀರುವವರೆಗೆ ಕೈಗಳಿಗೆ ಮತ್ತು ಕೆನ್ನೆಗೆ ನಯವಾಗಿ ತಿಕ್ಕಿ. ಇದನ್ನು ಪ್ರತಿ ರಾತ್ರಿ ಅನುಸರಿಸಿ, ಬೆಳಗ್ಗೆಯಾಗುವಷ್ಟರಲ್ಲಿ ಕೈಗಳು ಮೃದುಗೊಂಡಿರುತ್ತವೆ.
ತೆಂಗಿನ ಎಣ್ಣೆ
ತುಪ್ಪವು ನಿಮಗೆ ಅಪ್ರಿಯವಾಗಿದ್ದರೆ, ತೆಂಗಿನ ಎಣ್ಣೆಯನ್ನು ಬಳಸಬಹುದು. ಇದು ನಿಮ್ಮ ಚರ್ಮಕ್ಕೆ ತೇವಾಂಶ ನೀಡಿ, ಸದಾಕಾಲ ಮೃದು ಮತ್ತು ನಾಜೂಕಾಗಿರುವಂತೆ ನೋಡಿಕೊಳ್ಳುತ್ತದೆ. ನಿಮ್ಮ ಕೈಗಳಿಗೆ ತೆಂಗಿನ ಎಣ್ಣೆಯಿಂದ ಪ್ರತಿ ರಾತ್ರಿ ತಿಕ್ಕಿಗೊಳ್ಳಿ. ಇದು ನಿಮ್ಮ ಚರ್ಮ ಒಡೆದು ಸುಲಿಯುವುದನ್ನು ನಿಯಂತ್ರಿಸಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ಓಟ್ ಮೀಲ್ ನಿಂದ ಸ್ನಾನ
ವಿಶೇಷವಾಗಿ ಚಳಿಗಾಲದಲ್ಲಿ ಚರ್ಮವು ಸುಲಿಯುವುದರಿಂದ ತುರಿಕೆ ಉಂಟಾಗಿ ನವೆಯು ಹೆಚ್ಚಾಗುತ್ತದೆ. ಓಟ್ಸ್ ಅನ್ನು ಬಿಸಿ ನೀರಿನೊಂದಿಗೆ ಬೆರೆಸಿ ಹಾಲಿನ ರೂಪ ಬಂದ ಮೇಲೆ, ಇದರ 2 ಕಪ್ ಮಿಶ್ರಣವನ್ನು ನಿಮ್ಮ ಸ್ನಾನದ ನೀರಿಗೆ ಬೆರೆಸಿಕೊಳ್ಳಿ. ಈ ನೀರಿನಲ್ಲಿ ನಿಮ್ಮ ಕೈಗಳು ಮತ್ತು ಪಾದವನ್ನು ಕನಿಷ್ಠ 15 ನಿಮಿಷಗಳ ಕಾಲ ಅದ್ದಿ. ಈ ಅಭ್ಯಾಸವನ್ನು ಕ್ರಮವಾಗಿ ಅನುಸರಿಸಿದರೆ ಚರ್ಮದ ತುರಿಕೆ ವಾಸಿಯಾಗಿ ಚರ್ಮ ಸುಲಿಯುವಿಕೆ ನಿವಾರಣೆಯಾಗುತ್ತದೆ.
ನೀರನ್ನು ಹೆಚ್ಚು ಕುಡಿಯಿರಿ
ಸಾಮಾನ್ಯವಾಗಿ ಚಳಿಗಾಲದಲ್ಲಿ ಕಡಿಮೆ ನೀರನ್ನು ಸೇವಿಸುತ್ತೇವೆ. ಇದರಿಂದ ಚರ್ಮದ ಸುಲಿಯುವಿಕೆಯು ಹೆಚ್ಚಾಗಿ ಚರ್ಮವು ಒರಟಾಗುದಲ್ಲದೆ ಒಣಗಲು ಪ್ರಾರಂಭಿಸುತ್ತದೆ. ಕನಿಷ್ಠ ಏಳರಿಂದ ಎಂಟು ಲೋಟ ನೀರನ್ನು ದಿನಕ್ಕೆ ಸೇವಿಸಲು ಮರೆಯದಿರಿ. ಇದಕ್ಕೆ ಅವಶ್ಯಕವಿದ್ದಲ್ಲಿ ನೀರನ್ನು ಆಗಾಗ ಕುಡಿಯಲು ನಿಮ್ಮ ಮೊಬೈಲ್ ನಲ್ಲಿ ಪ್ರತಿ ಗಂಟೆಗೊಮ್ಮೆ ಜ್ಞಾಪಕದ ಧ್ವನಿ ಬರುವಂತೆ ಯೋಜಿಸಿಕೊಳ್ಳಿ.
ಪೆಟ್ರೋಲಿಯಂ ಜೆಲ್ಲಿ
ಇದೊಂದು ರಕ್ಷಣಾತ್ಮಕ ವಿಧಾನ. ಇದನ್ನು ನಿಮ್ಮ ಕೈಗಳಿಗೆ ಮತ್ತು ಪಾದಗಳಿಗೆ ಮಲಗುವ ಮುನ್ನ ಹಚ್ಚಿಕೊಂಡು ಕೈಚೀಲ ಮತ್ತು ಕಾಲ್ಚೀಲ (ಸಾಕ್ಸ್)ವನ್ನು ಧರಿಸಿ ಮಲಗಿಕೊಳ್ಳಿ. ತೇವಾಂಶ ನೀಡುವಿಕೆಗೆ ಪೆಟ್ರೋಲಿಯಂ ಜೆಲ್ಲಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ದಿನ ಪೂರ್ತಿ ನಿಮ್ಮ ಚರ್ಮವು ಆರೋಗ್ಯವಾಗಿರುವಂತೆ ಕಾಪಾಡುತ್ತದೆ.