For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯಕ್ಕೆ 'ಟೊಮೆಟೊ ಹಣ್ಣಿನ' ಫೇಸ್ ಪ್ಯಾಕ್

By Hemanth
|

ನಮ್ಮ ಸುತ್ತಮುತ್ತಲು ಇರುವಂತಹ ಹಣ್ಣು ಹಾಗೂ ತರಕಾರಿಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಬಹುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಈ ರೀತಿ ತ್ವಚೆಯ ಆರೈಕೆ ಮಾಡಿದರೆ ಅದರಿಂದ ಯಾವುದೇ ಅಡ್ಡಪರಿಣಾಮಗಳು ಕೂಡ ನಮಗೆ ಆಗದು. ಆದರೆ ಸಾವಯವ ರೀತಿಯಲ್ಲಿ ಬೆಳೆಸಿದ ಹಣ್ಣು ಹಾಗೂ ತರಕಾರಿಗಳನ್ನು ಬಳಸಿದರೆ ತುಂಬಾ ಒಳ್ಳೆಯದು. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಹೇಳಲು ಹೊರಟಿರುವುದು ಟೊಮೆಟೊ ಬಗ್ಗೆ.

ಟೊಮೆಟೊ ಅತ್ತ ತರಕಾರಿಯೂ ಅಲ್ಲ, ಇತ್ತ ಹಣ್ಣು ಅಲ್ಲ ಎನ್ನುವಂತಹ ವಸ್ತು. ಟೊಮೆಟೊ ಬಳಸಿಕೊಂಡು ಹಲವಾರು ರೀತಿಯ ಅಡುಗೆ ತಯಾರಿಸುತ್ತೇವೆ. ಆದರೆ ಇದೇ ಟೊಮೆಟೊ ಬಳಸಿ ತ್ವಚೆಯ ಆರೈಕೆ ಮಾಡಬಹುದು ಎಂದು ನಿಮಗೆ ತಿಳಿದಿದೆಯಾ? ಹೌದು, ಟೊಮೆಟೊ ಬಳಸಿಕೊಂಡು ತ್ವಚೆಯನ್ನು ಒಳ್ಳೆಯ ರೀತಿಯಿಂದ ಆರೈಕೆ ಮಾಡಬಹುದು. ಇದರಲ್ಲಿರುವ ವಿಟಮಿನ್ ಸಿ, ಆ್ಯಂಟಿ ಆಕ್ಸಿಡೆಂಟ್ ಮತ್ತು ಪ್ರೋಟೀನ್ ಚರ್ಮಕ್ಕೆ ನೆರವು ನೀಡಲಿದೆ.

ಮುಖದ ಅಂದಕ್ಕೆ, ಟೊಮೆಟೊ-ಶ್ರೀಗಂಧದ ಫೇಸ್ ಪ್ಯಾಕ್

ಟೊಮೆಟೊದಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಇರುವ ಕಾರಣದಿಂದ, ತ್ವಚೆಯ ಮೇಲಿನ ವಯಸ್ಸಾಗುವ ಲಕ್ಷಣಗಳನ್ನು ಹೋಗಲಾಡಿಸುತ್ತದೆ. ಟೊಮೆಟೊವನ್ನು ಯಾವ ರೀತಿ ತ್ವಚೆಯ ಆರೈಕೆಯಲ್ಲಿ ಬಳಸಿಕೊಳ್ಳಬಹುದು ಎಂದು ಮುಂದಕ್ಕೆ ಓದುತ್ತಾ ತಿಳಿಯಿರಿ...

ಟೊಮೆಟೊ ಮತ್ತು ಜೇನುತುಪ್ಪದ ಮಾಸ್ಕ್

ಟೊಮೆಟೊ ಮತ್ತು ಜೇನುತುಪ್ಪದ ಮಾಸ್ಕ್

ಒಂದು ಟೊಮೆಟೊದ ತಿರುಳು ತೆಗೆದು ಅದಕ್ಕೆ ಎರಡು ಚಮಚ ಜೇನುತುಪ್ಪ, ಒಂದು ಚಮಚ ನಿಂಬೆರಸ ಸೇರಿಸಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು 10 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ನೀರಿನಿಂದ ತೊಳೆಯಿರಿ. ಟೊಮೆಟೊ ಮತ್ತು ಜೇನುತುಪ್ಪದ ಮಾಸ್ಕ್ ಒಣ ಚರ್ಮ ಇರುವವರಿಗೆ ತುಂಬಾ ಒಳ್ಳೆಯದು. ಟೊಮೆಟೊ ಮತ್ತು ಜೇನುತುಪ್ಪದಲ್ಲಿ ಇರುವಂತಹ ಪೋಷಕಾಂಶಗಳು ಚರ್ಮಕ್ಕೆ ಪೋಷಣೆ ನೀಡುತ್ತದೆ.

ಟೊಮೆಟೊ ಮತ್ತು ಅವಕಾಡೋ ಫೇಸ್ ಮಾಸ್ಕ್

ಟೊಮೆಟೊ ಮತ್ತು ಅವಕಾಡೋ ಫೇಸ್ ಮಾಸ್ಕ್

ಟೊಮೆಟೊ ಮತ್ತು ಅವಕಾಡೋ ಫೇಸ್ ಮಾಸ್ಕ್ ಒಣ ಚರ್ಮಕ್ಕೆ ತೇವಾಂಶ ನೀಡಲು ತುಂಬಾ ಉಪಯುಕ್ತ. ಒಂದು ಟೊಮೆಟೊದ ತಿರುಳು ತೆಗೆದು ಅದಕ್ಕೆ ಹಿಸುಕಿಕೊಂಡಿರುವ ಅವಕಾಡೋವನ್ನು ಸೇರಿಸಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪ್ರತೀದಿನ ಮುಖಕ್ಕೆ ಹಚ್ಚಿಕೊಂಡರೆ ಸುಂದರ ಹಾಗೂ ತೇವಾಂಶವಿರುವ ಚರ್ಮವು ನಿಮ್ಮದಾಗುವುದು.

ಟೊಮೆಟೊ ಮತ್ತು ಆಲಿವ್ ತೈಲದ ಫೇಸ್ ಮಾಸ್ಕ್

ಟೊಮೆಟೊ ಮತ್ತು ಆಲಿವ್ ತೈಲದ ಫೇಸ್ ಮಾಸ್ಕ್

ಯಾವಾಗಲೂ ಚರ್ಮದಲ್ಲಿ ಮೊಡವೆ ಕಾಣಿಸಿಕೊಳ್ಳುತ್ತಾ ಇದೆ ಎನ್ನುವವರಿಗೆ ಆಲಿವ್ ತೈಲ ಮತ್ತು ಟೊಮೆಟೊದ ಮಾಸ್ಕ್ ತುಂಬಾ ಒಳ್ಳೆಯದು. ಒಂದು ಟೊಮೆಟೊ ತೆಗೆದುಕೊಂಡು ಅದರ ತಿರುಳು ತೆಗೆಯಿರಿ. ಇದಕ್ಕೆ ಒಂದು ಚಮಚ ಆಲಿವ್ ತೈಲ ಮತ್ತು ಒಂದು ಚಮಚ ಜೋಜೋಬಾ ತೈಲ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಹದವಾದ ಪೇಸ್ಟ್ ಮಾಡಿಕೊಂಡ ಬಳಿಕ ಮುಖ ಹಾಗೂ ಕುತ್ತಿಗೆಗೆ ಹಚ್ಚಿ ಇದನ್ನು ಮುಚ್ಚಿಕೊಳ್ಳಿ. ಹತ್ತು ನಿಮಿಷ ಬಿಟ್ಟು ನೀರಿನಿಂದ ತೊಳೆಯರಿ.ಟೊಮೆಟೊ ಮತ್ತು ಆಲಿವ್ ತೈಲದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಚರ್ಮದಲ್ಲಿ ಮೊಡವೆ ಮೂಡುವುದನ್ನು ಕಡಿಮೆ ಮಾಡುವುದು.

ಟೊಮೆಟೊ ಮತ್ತು ಮೊಸರಿನ ಫೇಸ್ ಮಾಸ್ಕ್

ಟೊಮೆಟೊ ಮತ್ತು ಮೊಸರಿನ ಫೇಸ್ ಮಾಸ್ಕ್

ಚರ್ಮದ ಬಣ್ಣ ಉತ್ತಮಪಡಿಸಲು ಟೊಮೆಟೊ ಮತ್ತು ಮೊಸರಿನ ಮಾಸ್ಕ್ ತುಂಬಾ ಒಳ್ಳೆಯದು. ಒಂದು ಟೊಮೆಟೊ ತಿರುಳು ಮತ್ತು ಅದಕ್ಕೆ ಸ್ವಲ್ಪ ಮೊಸರು ಹಾಕಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ½ ಚಿಟಿಕೆ ಅರಶಿನ ಹಾಕಿ. ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಮುಖಕ್ಕೆ ಹಚ್ಚಿ. ನೈಸರ್ಗಿಕವಾಗಿ ಚರ್ಮ ಬಿಳಿಯಾಗಲು ಪ್ರತೀ ದಿನ ಇದನ್ನು ಬಳಸಿ.

ಟೊಮೆಟೊ ಮತ್ತು ಓಟ್ಸ್ ಮಾಸ್ಕ್

ಟೊಮೆಟೊ ಮತ್ತು ಓಟ್ಸ್ ಮಾಸ್ಕ್

ಮೊಡವೆ ಮತ್ತು ಚರ್ಮದಲ್ಲಿ ಮೂಡುವಂತಹ ಇತರ ಕೆಲವೊಂದು ಬೊಕ್ಕೆಗಳನ್ನು ನಿವಾರಣೆ ಮಾಡಲು ಟೊಮೆಟೊ ಮತ್ತು ಓಟ್ಸ್ ಫೇಸ್ ಮಾಸ್ಕ್ ತುಂಬಾ ಒಳ್ಳೆಯದು. ಈ ಫೇಸ್ ಮಾಸ್ಕ್ ಅನ್ನು ಪ್ರತಿನಿತ್ಯ ಬಳಸಿದರೆ ಕಪ್ಪು ಹಾಗೂ ಬಿಳಿ ಕಳೆಗಳು ನಿವಾರಣೆಯಾಗುವುದು. ಒಂದು ಟೊಮೆಟೊದ ತಿರುಳನ್ನು ತೆಗೆಯಿರಿ. ಇದಕ್ಕೆ ಒಂದು ಚಮಚ ಓಟ್ಸ್, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆರಸ ಬೆರೆಸಿ. ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ.

ಟೊಮೆಟೊ ಮತ್ತು ಅಲೋವೆರಾ ಫೇಸ್ ಮಾಸ್ಕ್

ಟೊಮೆಟೊ ಮತ್ತು ಅಲೋವೆರಾ ಫೇಸ್ ಮಾಸ್ಕ್

ಮುಖದಲ್ಲಿರುವಂತಹ ಕಪ್ಪು ವೃತ್ತಗಳು ಮತ್ತು ಕಪ್ಪು ಕಲೆಗಳನ್ನು ಹೋಗಲಾಡಿಸಲು ಟೊಮೆಟೊ ಮತ್ತು ಅಲೋವೆರಾದ ಫೇಸ್ ಮಾಸ್ಕ್ ತುಂಬಾ ಒಳ್ಳೆಯದು. ಸ್ವಲ್ಪ ಟೊಮೆಟೊ ತಿರುಳು ತೆಗೆದುಕೊಂಡು ಅದಕ್ಕೆ ಒಂದು ಚಮಚ ಅಲೋವೆರಾ ಲೋಳೆ ಹಾಕಿ. ಒಂದು ಚಮಚ ಜೇನುತುಪ್ಪವನ್ನು ಇದಕ್ಕೆ ಬೆರೆಸಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ದಪ್ಪಗಿನ ಪೇಸ್ಟ್ ಅನ್ನು ಮಾಸ್ಕ್ ಆಗಿ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಈ ಫೇಸ್ ಮಾಸ್ಕ್ ಕಿರಿಕಿರಿ ಹಾಗೂ ಉರಿಯೂತ ಉಂಟು ಮಾಡುವ ಚರ್ಮಕ್ಕೆ ಒಳ್ಳೆಯದು.

ಟೊಮೇಟೊ ಜ್ಯೂಸ್ ಮಿಸ್ ಮಾಡದೇ ದಿನಾ ಸೇವಿಸಿ!

English summary

Tomato Face Mask Recipes You Should Try At Home

Tomato is one among the staple fruits we can find in every Indian kitchen. This fruit is excellent for our skin and health due to a lot of nutrients and vitamins in it. You could prepare some of the best homemade tomato face pack recipes. Tomatoes are rich in antioxidants, Vitamin C and other proteins that benefit your skin in several ways. Well, here we mention to you some of the best tomato face mask recipes that you must try using at home, take a look.
X
Desktop Bottom Promotion