ಬ್ಯೂಟಿ ಟಿಪ್ಸ್: ರಾತ್ರಿ ಬೆಳಗಾಗುವುದರೊಳಗೆ ಸೌಂದರ್ಯ ವೃದ್ಧಿ!

By: Hemanth
Subscribe to Boldsky

ನಿದ್ರೆಯೆನ್ನುವುದು ನಮಗೆ ದೇವರು ಕೊಟ್ಟಿರುವ ವರ. ದಿನದ ಆಯಾಸವನ್ನು ನೀಗಿಸಲು ಬೇಕಾಗುವ ವಿಶ್ರಾಂತಿಯೇ ನಿದ್ರೆ. ನಿದ್ರೆ ಸರಿಯಾಗಿದ್ದರೆ ಮಾತ್ರ ಆರೋಗ್ಯವು ಚೆನ್ನಾಗಿರುವುದು. ನಿದ್ರೆಯಲ್ಲಿರುವ ನಮ್ಮ ದೇಹವು ದುರಸ್ತಿಯಾಗುತ್ತಾ ಪುನಶ್ಚೇತನಗೊಳ್ಳುವುದು. ಪ್ರತಿಯೊಂದು ಅಂಗವು ದುರಸ್ತಿಯಾಗುತ್ತಾ ಇರುವುದು. ಇದರಲ್ಲಿ ಚರ್ಮವು ಒಂದಾಗಿದೆ.

ನಿದ್ರಿಸುವಾಗ ಚರ್ಮವು ದುರಸ್ತಿಯಾಗಿ ಪುನಶ್ಚೇತಗೊಳ್ಳುವುದು. ದಿನನಿತ್ಯ ಸುಮಾರು ಎಂಟು ಗಂಟೆಗಳ ನಿದ್ರೆ ಬೀಳದೆ ಇದ್ದರೆ ಅದರ ಪರಿಣಾಮ ಚರ್ಮದ ಮೇಲೆ ಕೂಡ ಆಗುವುದು. ಸರಿಯಾಗಿ ನಿದ್ರೆ ಮಾಡದೆ ಇರುವವರಲ್ಲಿ ನಿಸ್ತೇಜ ಮತ್ತು ಜೋತು ಬಿದ್ದಂತಹ ಚರ್ಮ ಕಾಣಿಸಿಕೊಳ್ಳುವುದು. ಮಲಗುವ ಮೊದಲು ಕೆಲವು ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ಅದರಿಂದ ತುಂಬಾ ಒಳ್ಳೆಯದು.

ಸುಂದರವಾಗಿ ಕಾಣಬೇಕೇ? ಇಲ್ಲಿದೆ ನೋಡಿ ಸಿಂಪಲ್ ಬ್ಯೂಟಿ ಟಿಪ್ಸ್

ಇದರಿಂದ ಚರ್ಮವು ದುರಸ್ತಿಯಾಗಿ ಪುನಶ್ಚೇತನಗೊಂಡು ಮರುದಿನ ಬೆಳಿಗ್ಗೆ ಕಾಂತಿಯನ್ನು ಪಡೆಯುವುದು. ರಾತ್ರಿ ಮಲಗುವ ಮೊದಲು ಎಲ್ಲಾ ರೀತಿಯ ಮೇಕಪ್ ನ್ನು ತೆಗೆಯಬೇಕು. ಮೇಕಪ್ ನ್ನು ಹಾಗೆ ಬಿಟ್ಟರೆ ಅದರಿಂದ ಚರ್ಮಕ್ಕೆ ಹಾನಿಯಾಗಬಹುದು ಮತ್ತು ರಾತ್ರಿ ವೇಳೆ ಅದು ದುರಸ್ತಿಯಾಗದು. ಮೇಕಪ್ ನಿಂದ ಚರ್ಮಕ್ಕೆ ಉಸಿರಾಡಲು ಸಾಧ್ಯವಾಗದು ಮತ್ತು ರಂಧ್ರ ತುಂಬಿಕೊಂಡಿರುವ ಕಾರಣ ಮೊಡವೆ ಹಾಗೂ ಬೊಕ್ಕೆಗಳು ಮೂಡಬಹುದು. ರಾತ್ರಿ ವೇಳೆ ಪಾಲಿಸಬೇಕಾದ ಕೆಲವೊಂದು ಕ್ರಮಗಳನ್ನು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದನ್ನು ಪಾಲಿಸಿ ನಿಮ್ಮ ಸೌಂದರ್ಯ ಕಾಪಾಡಿ.... 

 ನೀರು ತುಂಬಿರುವ ಕಣ್ಣುಗಳು

ನೀರು ತುಂಬಿರುವ ಕಣ್ಣುಗಳು

ಬೆಳಿಗ್ಗೆ ಎದ್ದಾಗ ಕಣ್ಣುಗಳು ಊದಿಕೊಳ್ಳದಂತೆ ಮಾಡಲು ಸರಳವಾದ ಸಲಹೆಗಳಿವೆ. ತುಂಬಾ ಮೃಧುವಾಗಿರುವ ತಲೆದಿಂಬನ್ನು ತಲೆಯ ಕೆಳಗೆ ಹಾಕಿಕೊಂಡು ಬೆನ್ನ ಮೇಲೆ ಮಲಗಿ. ತಲೆಯು ಮೇಲಿನ ಭಾಗದಲ್ಲಿ ಇರುವ ಕಾರಣದಿಂದ ಕಣ್ಣಿನ ಕೆಳಗಿನ ಭಾಗದಲ್ಲಿನ ನೀರಿನಾಂಶವು ಒಣಗುವುದು.

ಕಣ್ಣಿನ ರೆಪ್ಪೆಗಳಿಗೆ ಹರಳೆಣ್ಣೆ ಹಚ್ಚಿ

ಕಣ್ಣಿನ ರೆಪ್ಪೆಗಳಿಗೆ ಹರಳೆಣ್ಣೆ ಹಚ್ಚಿ

ರಾತ್ರಿ ಮಲಗುವ ಮೊದಲು ಕಣ್ಣಿನ ರೆಪ್ಪೆಗಳಿಗೆ ಹರಳೆಣ್ಣೆ ಹಚ್ಚಿಕೊಂಡರೆ ಅದರಿಂದ ಕಣ್ಣಿನ ರೆಪ್ಪೆಗಳು ದಪ್ಪವಾಗುವುದು. ಹರಳೆಣ್ಣೆಯಲ್ಲಿರುವ ಒಮೆಗಾ3 ಕೊಬ್ಬಿನಾಮ್ಲವು ಕಣ್ಣಿನ ರೆಪ್ಪೆಗಳಿಗೆ ಪೋಷಣೆ ನೀಡುವುದು ಮತ್ತು ಹಾನಿ ತಪ್ಪಿಸುವುದು.

ಕಾಂತಿಯುತ ಕೂದಲು ಪಡೆಯಿರಿ

ಕಾಂತಿಯುತ ಕೂದಲು ಪಡೆಯಿರಿ

ರಾತ್ರಿ ಮಲಗುವ ಮೊದಲು ತಲೆಗೆ ತೆಂಗಿನೆಣ್ಣೆ ಹಚ್ಚಿಕೊಂಡು ರಾತ್ರಿಯಿಡಿ ಹಾಗೆ ಬಿಡಿ. ಮಲಗುವ ಮೊದಲು ಒಣ ಕೂದಲಿಗೆ ಕಂಡೀಷನರ್ ಹಚ್ಚಿಕೊಳ್ಳಬಹುದು. ಕೂದಲಿಗೆ ಶವರ್ ಕ್ಯಾಪ್ ಹಾಕಿಕೊಳ್ಳಿ. ಬೆಳಿಗ್ಗೆ ಎದ್ದು ಶಾಂಪೂವಿನಿಂದ ಕೂದಲು ತೊಳೆಯಿರಿ. ಇದರಿಂದ ಕೂದಲು ಕಾಂತಿಯುತ ಹಾಗೂ ಮೃಧುವಾಗುವುದು.

ಸುಂದರ ತುಟಿಗಳು

ಸುಂದರ ತುಟಿಗಳು

ಮಲಗುವ ಮೊದಲು ತುಟಿಗಳಿಗೆ ಬೆಣ್ಣೆ ಹಚ್ಚಿಕೊಳ್ಳಿ. ಇದರಿಂದ ತುಟಿಗಳು ತುಂಬಾ ಮೃಧುವಾಗುವುದು ಮತ್ತು ದೀರ್ಘಕಾಲದ ತನಕ ತುಟಿಗಳಲ್ಲಿ ತೇವಾಂಶವಿರುವುದು. ಬೆಣ್ಣೆಗೆ ಕೆಲವು ಹನಿ ಗುಲಾಬಿಯ ಸಾರಭೂತ ತೈಲ ಹಾಕಿಕೊಂಡು ಹಚ್ಚಿಕೊಂಡರೆ ತುಟಿಗಳು ಮತ್ತಷ್ಟು ಮೃಧುವಾಗುವುದು.

ಹಲ್ಲುಗಳು ಬಿಳಿಯಾಗಲು

ಹಲ್ಲುಗಳು ಬಿಳಿಯಾಗಲು

ನಗುವಾಗ ಬಿಳಿಯಾದ ಸುಂದರ ಹಲ್ಲುಗಳು ಕಾಣಬೇಕೆಂದರೆ ಒಂದು ಚಿಟಿಕೆ ಅಡುಗೆ ಸೋಡಾದಿಂದ ಹಲ್ಲುಗಳಿಗೆ ಕೆಲವು ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ. ಮಲಗುವ ಮೊದಲು ಪ್ರತೀದಿನ ಹೀಗೆ ಮಾಡಿದರೆ ಹಲ್ಲುಗಳು ಫಲಫಲ ಹೊಳೆಯುವುದು.

English summary

Tips To Get Beautiful Skin Overnight

Night is a time when your skin is repaired and rejuvenated. This is the reason it is said to have a beauty sleep for at least eight hours during night. People who don't get proper sleep have dull and sagged skin. Sleep is also important for your hair and generally speaking for your overall health.
Subscribe Newsletter