ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುವ ನೈಸರ್ಗಿಕ ಎಣ್ಣೆ-ಪ್ರಯತ್ನಿಸಿ ನೋಡಿ

By: Hemanth
Subscribe to Boldsky

ಚರ್ಮವು ದೇಹದ ಆರೋಗ್ಯವನ್ನು ತೋರಿಸುವುದು ಎನ್ನುವ ಮಾತಿದೆ. ಹಿಂದಿನವರು ತಮ್ಮ ತ್ವಚೆಯ ಆರೈಕೆ ಮಾಡಿಕೊಳ್ಳಲು ಹಲವಾರು ರೀತಿಯ ತೈಲಗಳನ್ನು ಬಳಸಿಕೊಳ್ಳುತ್ತಾ ಇದ್ದರು. ಅದರಲ್ಲೂ ತೆಂಗಿನೆಣ್ಣೆ ಮತ್ತು ಆಲಿವ್ ತೈಲವನ್ನು ಅವರು ಪ್ರಮುಖವಾಗಿ ಬಳಸಿಕೊಳ್ಳುತ್ತಿದ್ದರು.

ಇದರಿಂದ ಚರ್ಮದ ಆರೋಗ್ಯವು ಚೆನ್ನಾಗಿರುತ್ತಾ ಇತ್ತು. ಆದರೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ಕೆಲಸಗಳಲ್ಲಿ ವ್ಯಸ್ತರಾಗಿರುವ ಕಾರಣ ಚರ್ಮದ ಆರೈಕೆ ಮಾಡಲು ಸಮಯವೂ ಇಲ್ಲ ಮತ್ತು ತೈಲವನ್ನು ಬಳಸಿಕೊಳ್ಳಲು ಹಿಂಜರಿಯುತ್ತಾರೆ. ಆದರೆ ಕೆಲವರು ಇಂದಿಗೂ ಚರ್ಮದ ಸಮಸ್ಯೆಗಳಿಗೆ ಎಣ್ಣೆಯನ್ನು ಬಳಸಿಕೊಳ್ಳುತ್ತಿದ್ದಾರೆ.

tamanu-oil-the-lost-secret-tonic-

ಆಲಿವ್ ತೈಲ ಮತ್ತು ತೆಂಗಿನೆಣ್ಣೆಯ ಬದಲಿಗೆ ತಮನು ತೈಲವನ್ನು ಬಳಸಿದರೆ ಅದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ತಮನು ತೈಲವನ್ನು ಹಿಂದಿನಿಂದಲೂ ಬಳಸಿಕೊಳ್ಳಲಾಗುತ್ತಿತ್ತು. ಚರ್ಮಕ್ಕೆ ತಮನು ತೈಲದ ಲಾಭಗಳು ಏನು ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ತಮನು ತೈಲದ ಹಲವಾರು ಲಾಭಗಳು..

1. ಉರಿಯೂತ ಶಮನಕಾರಿಯಾಗಲಿದೆ.

2. ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ ಮತ್ತು ಚರ್ಮದ ಕೋಶಗಳನ್ನು ವೇಗವಾಗಿ ಶಮನಗೊಳಿಸುವುದು.

3. ಮೊಡವೆಗಳಿಂದಾಗಿ ಉಂಟಾದ ಕಲೆಗಳನ್ನು ನಿವಾರಣೆ ಮಾಡುವುದು.

4. ಕೊಬ್ಬಿನಾಮ್ಲಗಳಿಂದ ತುಂಬಿರುವ ಇದು ಚರ್ಮಕ್ಕೆ ಮಾಯಿಶ್ಚರೈಸರ್ ನೀಡುವುದು.

5. ಇದು ಕಲೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸುವುದು.

6. ಬೇರೆ ಯಾವುದೇ ಉತ್ಪನ್ನಕ್ಕಿಂತ ಪರಿಣಾಮಕಾರಿಯಾಗಿ ಗಾಯಗಳನ್ನು ನಿವಾರಣೆ ಮಾಡುವುದು.

7. ವಯಸ್ಸಾಗುವ ಲಕ್ಷಣಗಳನ್ನು ಇದು ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು.

ಪ್ರಕೃತಿ ಮಾತೆಯ ಮಡಿಲಿನಲ್ಲಿ ಸಿಗುವಂತಹ ತಮನು ತೈಲವು ಕ್ಯಾಲೋಫಿಲಿಕ್ ಆಮ್ಲ, ಫಾಸ್ಲೋಲಿಫಿಡ್ಸ್ ಮತ್ತು ಲ್ಯಾಕ್ಟೋನ್ ಎನ್ನುವಂತಹ ಆ್ಯಂಟಿಬಯೋಟಿಕ್ ಅಂಶಗಳು ಇವೆ. ಕೌಮರಿನ್ಸ್ ಎನ್ನುವ ಉರಿಯೂತ ಶಮನಕಾರಿ ಗುಣಗಳು ಇವೆ. ಚರ್ಮದ ಆರೈಕೆಗೆ ತಮನು ತೈಲವನ್ನು ಬಳಸಿಕೊಳ್ಳುವ ವಿಧಾನಗಳು

tamanu-oil-the-lost-secret-tonic-

ಬಿಸಿಲಿನಿಂದ ಸುಟ್ಟ ಚರ್ಮಕ್ಕೆ ಚಿಕಿತ್ಸೆ

ಬಿಸಿಲಿನಲ್ಲಿ ಯಾವಾಗಲೂ ತಿರುಗಾಡುತ್ತಿದ್ದರೆ ಅದರಿಂದ ಚರ್ಮದಲ್ಲಿ ಕಲೆ ಮೂಡುವುದು. ತಮನು ತೈಲಕ್ಕಿಂತ ವೇಗವಾಗಿ ಚರ್ಮವನ್ನು ಬೇರೆ ಯಾವುದೇ ತೈಲವು ಶಮನಗೊಳಿಸದು. ಸುಟ್ಟ ಚರ್ಮವನ್ನು ಇದು ಬೇಗನೆ ನಿವಾರಣೆ ಮಾಡುವುದು. ಪ್ರತೀದಿನ ಇದನ್ನು ಹಲವಾರು ಬಿಸಿಲಿನಿಂದ ಉಂಟಾದ ಕಲೆಗಳ ಮೇಲೆ ಉಜ್ಜಿಕೊಳ್ಳಬೇಕು.

ರಾತ್ರಿ ಶಮನಗೊಳಿಸುವ ಕ್ರೀಮ್

ಬಿಸಿಲಿನಲ್ಲಿ ಹಾನಿಗೊಳಗಾದ ಚರ್ಮವನ್ನು ತಮನು ತೈಲವು ಪರಿಣಾಮಕಾರಿಯಾಗಿ ಸರಿಪಡಿಸುವುದು. ಇದು ಚರ್ಮವನ್ನು ನಯಗೊಳಿಸಿ ಗೆರೆಗಳು ಮೂಡದಂತೆ ತಡೆಯುವುದು. ರಾತ್ರಿ ಮಲಗುವ ಮೊದಲು ಮುಖಕ್ಕೆ ತಮನು ತೈಲವನ್ನು ಹಚ್ಚಿಕೊಳ್ಳಿ. ಬೆಳಿಗ್ಗೆ ಎದ್ದಾಗ ಕಾಂತಿಯುತ ಚರ್ಮವು ನಿಮ್ಮದಾಗುವುದು.

ದೇಹಕ್ಕೆ ಸ್ಕ್ರಬ್

ತಮನು ತೈಲದೊಂದಿಗೆ ಸಮುದ್ರದ ಉಪ್ಪನ್ನು ಹಾಕಿಕೊಂಡು ದೇಹಕ್ಕೆ ಸ್ಕ್ರಬ್ ಮಾಡಿ. ಇದು ಚರ್ಮದ ಸತ್ತ ಕೋಶವನ್ನು ತೆಗೆದುಹಾಕಿ ಮಾಯಿಶ್ಚರೈಸ್ ಮಾಡುವುದು. ಚರ್ಮವು ಮಗುವಿನಂತಹ ಚರ್ಮವನ್ನು ಪಡೆಯುವುದು.

tamanu-oil-the-lost-secret-tonic-

ಮೊಡವೆಯಿಂದಾದ ಕಲೆಗಳಿಗೆ

ಮೊಡವೆಗಳಿಂದ ಮೂಡಿದಂತಹ ಕಲೆಗಳನ್ನು ನಿವಾರಣೆ ಮಾಡಲು ತಮನು ತೈಲವನ್ನು ಬಳಸಿಕೊಳ್ಳಿ. ತಮನು ತೈಲವನ್ನು ನೇರವಾಗಿ ಮೊಡವೆಗಳ ಮೇಲೆ ಹಚ್ಚಿಕೊಳ್ಳಿ. ದಿನದಲ್ಲಿ ಎಷ್ಟು ಸಲ ಸಾಧ್ಯವೋ ಅಷ್ಟು ಸಲ ಈ ತೈಲವನ್ನು ಮೊಡವೆಗಳ ಮೇಲೆ ಹಚ್ಚಿಕೊಳ್ಳಿ.

English summary

tamanu-oil-the-lost-secret-tonic-to-get-rid-of-all-your-skin-problem

Ancient people knew how to harness the power of nature. They have left behind a legacy of natural remedies, which have been lost through time and generations. But there are some people in the world who still swear by these ancient remedies to get rid of all their skin problems.
Story first published: Wednesday, August 16, 2017, 23:31 [IST]
Subscribe Newsletter