ತ್ವಚೆಯನ್ನು ತಂಪಾಗಿಸುವ 'ಸೌತೆಕಾಯಿ' ಫೇಸ್​ಪ್ಯಾಕ್

By: Arshad
Subscribe to Boldsky

ಬೇಸಿಗೆಯಲ್ಲಿ ಅತಿ ಹೆಚ್ಚು ಬಳಸಲ್ಪಡುವ ಉತ್ಪನ್ನಗಳಲ್ಲಿ ಸೌತೆಕಾಯಿ ಒಂದು. ಬಾಯಾರಿಕೆಗೇ ಆಗಲಿ, ಚರ್ಮಕ್ಕೆ ಆಗಲಿ, ಸೌತೆಕಾಯಿಯಲ್ಲಿರುವ ಅತಿ ಹೆಚ್ಚಿನ ಪ್ರಮಾಣದ ನೀರು ದೇಹವನ್ನು ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಎದುರಾಗುವ ತೊಂದರೆಗಳಿಗೆ ಸೂಕ್ತ ಪೋಷಣೆ ನೀಡುತ್ತದೆ.  ನಿತ್ಯವೂ ಹಸಿ ಸೌತೆಕಾಯಿ ತಿನ್ನಿ, ಆರೋಗ್ಯಕ್ಕೆ ಬಹಳ ಒಳ್ಳೆಯದು....

ಈ ಅಗ್ಗವಾಗಿ ದೊರಕುವ ಮತ್ತು ಸುಲಭವಾಗಿ ಎಲ್ಲೆಡೆ ಬೆಳೆಯುವ ತರಕಾರಿಯಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು, ವಿಟಮಿನ್ ಸಿ, ವಿಟಮಿನ್ ಎ, ಕ್ಯಾರೋಟೀನ್ ಮೊದಲಾದವುಗಳಿದ್ದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಸಹಕಾರಿಯಾಗಿವೆ. ಸೌತೆಕಾಯಿ: ಆರೋಗ್ಯಕ್ಕೂ ಸೈ, ಸೌಂದರ್ಯದ ವಿಷಯದಲ್ಲೂ ಜೈ!

ಸೌತೆಕಾಯಿಯನ್ನು ಬೇಸಿಗೆಯಲ್ಲಿ ಹಸಿಯಾಗಿ ತಿನ್ನುವ ಮೂಲಕ ಬಾಯಾರಿಕೆಗೆ ಉತ್ತಮ ಪರಿಹಾರ ಕಂಡುಕೊಳ್ಳಬಹುದು. ಅಂತೆಯೇ ಚರ್ಮದ ಆರೈಕೆಗೂ ಸೌತೆಯಲ್ಲಿರುವ ಗುಣಗಳು ಉತ್ತಮವಾಗಿವೆ. ಆದರೆ ಇದನ್ನು ನಿತ್ಯದ ಸೌಂದರ್ಯಕ್ಕಾಗಿ ಬಳಸುವುದು ಹೇಗೆ? ಕೆಲವು ಸುಲಭವಾದ ಮುಖಲೇಪಗಳನ್ನು ಮನೆಯಲ್ಲಿಯೇ ಹೇಗೆ ತಯಾರಿಸಿಕೊಳ್ಳಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ....  

ಸೌತೆಕಾಯಿ ಮತ್ತು ಮೊಸರು

ಸೌತೆಕಾಯಿ ಮತ್ತು ಮೊಸರು

ಈ ಮುಖಲೇಪ ಒಣಚರ್ಮಕ್ಕೆ ಅತಿ ಸೂಕ್ತವಾಗಿದೆ. ಒಂದು ಚಿಕ್ಕ ಸೌತೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಮಿಕ್ಸಿಯಲ್ಲಿ ನುಣ್ಣನೆ ಕಡೆಯಿರಿ. ಇದಕ್ಕೆ ಕೊಂಚವೇ ಮೊಸರು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣ ಸಾಧ್ಯವಾದಷ್ಟು ದಪ್ಪನೇ ಇರಬೇಕು. ಈ ಲೇಪನವನ್ನು ಈಗತಾನೇ ತೊಳೆದ ಮುಖಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ ಕೊಂಚ ಕಾಲ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಮೊಸರಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ

ಮೊಸರಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ

ಮೊಸರಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಚರ್ಮದಲ್ಲಿ ಮೊಡವೆಗಳಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಹಾಗೂ ಬೇಸಿಗೆಯಲ್ಲಿ ಚರ್ಮ ಕಳೆದುಕೊಂಡಿದ್ದ ಆರ್ದ್ರತೆಯನ್ನು ಪೂರೈಸಿ ಒಣಚರ್ಮ ಆರೋಗ್ಯದಿಂದಿರುವಂತೆ ಕಾಪಾಡುತ್ತದೆ.

ಸೌತೆಕಾಯಿಯ ಫೇಸ್ ಪ್ಯಾಕ್

ಸೌತೆಕಾಯಿಯ ಫೇಸ್ ಪ್ಯಾಕ್

ಸೌತೆಕಾಯಿಯ ಫೇಸ್ ಪ್ಯಾಕ್ ಅನ್ನು ತಯಾರಿಸಿಕೊಂಡು, ವಾರಕ್ಕೆ ಎರಡು ಬಾರಿ ತ್ವಚೆಯ ಮೇಲೆ ಹಚ್ಚಿಕೊಂಡರೆ, ಚರ್ಮದ ಚಿಕ್ಕ ಚಿಕ್ಕ ರಂಧ್ರಗಳನ್ನು ಪೂರ್ಣವಾಗಿ ಸ್ವಚ್ಛಗೊಳ್ಳುತ್ತದೆ. ಅದರ ರಸವು ತ್ವಚೆಯನ್ನು ಕಾಂತಿಯುತಗೊಳಿಸಿ ಕೋಮಲತೆಯನ್ನು ನೀಡುತ್ತದೆ. ನೀವು ಸೌತೆಕಾಯಿಯ ಫೇಸ್ ಪ್ಯಾಕ್ ಪದ್ಧತಿಯನ್ನು ಅನುಸರಿಸುತ್ತಿದ್ದರೆ, ವಾರಕ್ಕೆ 2 ರಿಂದ 3 ಬಾರಿ ಹಚ್ಚಿಕೊಂಡರೆ ಉತ್ತಮ ಹಾಗೂ ಶೀಘ್ರವಾದ ಫಲಿತಾಂಶ ದೊರೆಯುತ್ತದೆ

ಸೌತೆ ಮತ್ತು ಲೋಳೆಸರ

ಸೌತೆ ಮತ್ತು ಲೋಳೆಸರ

ಇವೆರಡೂ ಸಾಮಾಗ್ರಿಗಳು ಉತ್ತಮ ಪೋಷಣೆ ಒದಗಿಸುವ ಮೂಲಕ ಚರ್ಮದ ಸೆಳೆತ ಹೆಚ್ಚಿಸಿ ವೃದ್ದಾಪ್ಯದ ಗುರುತುಗಳನ್ನು ನಿವಾರಿಸಲು ಸಕ್ಷಮವಾಗಿವೆ. ಒಂದು ಸೌತೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ಕಡೆದು ಇದಕ್ಕೆ ಒಂದು ಚಮಚ ಲೋಳೆಸರದ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಒಂದು ಚಿಕ್ಕಚಮಚ ಲಿಂಬೆರಸ ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹೆಚ್ಚಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸೌತೆ ಮತ್ತು ಓಟ್ಸ್

ಸೌತೆ ಮತ್ತು ಓಟ್ಸ್

ಒಂದು ವೇಳೆ ನಿಮ್ಮ ಚರ್ಮದಲ್ಲಿ ಅತಿ ಹೆಚ್ಚಾಗಿ ಸತ್ತ ಜೀವಕೋಶಗಳು ಸಂಗ್ರವಾಗಿದ್ದು ನಿವಾರಿಸುವುದು ಕಷ್ಟಕರವಾಗಿದ್ದರೆ ಈ ಮಿಶ್ರಣ ಉತ್ತಮ ಆಯ್ಕೆಯಾಗಿದೆ. ಒಂದು ಸೌತೆಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಇದಕ್ಕೆ ಕೊಂಚ ಓಟ್ಸ್ ರವೆಯನ್ನು ಮಿಶ್ರಣ ಮಾಡಿ. ಅಗತ್ಯವೆನಿಸಿದರೆ ಚಿಟಿಕೆಯಷ್ಟು ಅರಿಶಿನವನ್ನೂ ಬೆರೆಸಬಹುದು. ಓಟ್ಸ್ ಚೆನ್ನಾಗಿ ನೆನೆದ ಬಳಿಕ ಮಿಕ್ಸಿಯಲ್ಲಿ ಹಾಕಿ ಕಡೆಯಿರಿ. ಈ ಲೇಪವನ್ನು ಮುಖಕ್ಕೆ ಹಚ್ಚಿ ಕೊಂಚಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸೌತೆ ಮತ್ತು ಕಡ್ಲೆಹಿಟ್ಟು

ಸೌತೆ ಮತ್ತು ಕಡ್ಲೆಹಿಟ್ಟು

ಅರ್ಧ ಸೌತೆಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಮಿಕ್ಸಿಯಲ್ಲಿ ಕಡೆಯಿರಿ. ಬಳಿಕ ಎರಡು ಚಿಕ್ಕಚಮಚ ಕಡ್ಲೆಹಿಟ್ಟು ಮತ್ತು ಒಂದು ಚಮಚ ಲಿಂಬೆರಸ ಬೆರೆಸಿ ಮಿಶ್ರಣ ಮಾಡಿ. ಈ ಲೇಪವನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಒಣಗಿ ಬಿರುಕು ಬೀಳಲು ಪ್ರಾರಂಭವಾಗುವಾಗ ತಣ್ಣೀರಿನಿಂದ ತೊಳೆದುಕೊಳ್ಳಿ. ಬೇಸಿಗೆಗೆ ಬಳಲಿದ ಚರ್ಮಕ್ಕೆ ಈ ವಿಧಾನ ಹೆಚ್ಚು ಸೂಕ್ತವಾಗಿದ್ದು ಚರ್ಮದ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಬ್ಲ್ಯೂಬೆರ್ರಿ, ಓಟ್ ಮತ್ತು ಸೌತೆಕಾಯಿ ಮಾಸ್ಕ್

ಬ್ಲ್ಯೂಬೆರ್ರಿ, ಓಟ್ ಮತ್ತು ಸೌತೆಕಾಯಿ ಮಾಸ್ಕ್

ಅರ್ಧ ಸೌತೆಕಾಯಿಯನ್ನು ಬ್ಲೆಂಡ್ ಮಾಡಿ ಇದಕ್ಕೆ ಎರಡು ಚಮಚದಷ್ಟು ಓಟ್ಸ್ ಸೇರಿಸಿ ಮತ್ತು ಮುಷ್ಟಿಯಷ್ಟು ಬ್ಲ್ಯೂಬೆರ್ರಿಯನ್ನು ಮಿಶ್ರ ಮಾಡಿಕೊಳ್ಳಿ ನುಣ್ಣನೆಯ ಪೇಸ್ಟ್ ಸಿದ್ಧಪಡಿಸಿ. ನಿಮ್ಮ ಮುಖಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ ನಂತರ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದನ್ನು ತೊಳೆದುಕೊಳ್ಳಿ. ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!

 
English summary

Refreshing Cucumber Face Mask To Use This Summer

Cucumber is also used in several hydrating, herbal or summer skin care products, thanks to its skin benefiting properties. Well, if you are wondering about how to include cucumber in your summer skin care routine, here are some easy face masks to try at home.
Please Wait while comments are loading...
Subscribe Newsletter