For Quick Alerts
ALLOW NOTIFICATIONS  
For Daily Alerts

ಲಿಂಬೆಯಲ್ಲಿ ಎಷ್ಟೊಂದು ಲಾಭಗಳಿವೆ ಗೊತ್ತಾ? ಕೇಳಿದರೆ ಅಚ್ಚರಿ ಪಡುವಿರಿ!

By Manu
|

ಬೀಜವಿಲ್ಲದಿದ್ದರೆ ಲಿಂಬೆಯಂತಹ ಔಷಧಿ ಇನ್ನೊಂದಿರುತ್ತಿರಲಿಲ್ಲ ಎಂದು ಆಯುರ್ವೇದವೇ ಬಣ್ಣಿಸಿದ ಬಳಿಕ ಇದರ ಗುಣಗಳಿಗೆ ಎರಡು ಮಾತನಾಡಲು ಸಾಧ್ಯವಿಲ್ಲ. ಹಲವಾರು ಕಾಯಿಲೆಗಳಿಗೆ ಲಿಂಬೆಯನ್ನು ಔಷಧಿಯ ರೂಪದಲ್ಲಿ ಬಳಸಲಾಗುತ್ತಿದೆ. ಹೃದಯದ ಕ್ಷಮತೆಯನ್ನು ಹೆಚ್ಚಿಸುವ ಈ ಲಿಂಬೆ ತ್ವಚೆಯ ಸ್ಥಿತಿಯನ್ನೂ ಉತ್ತಮಗೊಳಿಸುತ್ತದೆ ಹಾಗೂ ಬ್ಯಾಕ್ಟೀರಿಯಾ ಮತ್ತು ಇತರ ಕ್ರಿಮಿಗಳಿಂದ ಆವರಿಸಿದ್ದ ಸೋಂಕನ್ನೂ ನಿವಾರಿಸುತ್ತದೆ.

ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

ಲಿಂಬೆಯ ಗುಣಪಡಿಸುವ, ಬ್ಯಾಕ್ಟೀರಿಯಾ ನಿವಾರಕ ಹಾಗೂ ಆಂಟಿ ಆಕ್ಸಿಡೆಂಟುಗಳಿರುವ ಗುಣಗಳನ್ನು ಹಲವಾರು ಚರ್ಮಸಂಬಂಧಿತ ಚಿಕಿತ್ಸೆಗಳಿಗೆ ಬಳಸಬಹುದು. ಬನ್ನಿ, ಆರು ವಿಧಗಳಲ್ಲಿ ಈ ಲಿಂಬೆಯನ್ನು ಮುಖದ ಸೌಂದರ್ಯ ಹೆಚ್ಚಿಸಲು ಹೇಗೆ ಬಳಸಬಹುದು ಎಂಬುದನ್ನು ನೋಡೋಣ....

ಮೊಡವೆಗಳ ವಿರುದ್ಧ ಹೋರಾಡುತ್ತದೆ

ಮೊಡವೆಗಳ ವಿರುದ್ಧ ಹೋರಾಡುತ್ತದೆ

ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಮೊಡವೆಗಳ ನಿಗ್ರಹಕ್ಕೆ ಅತ್ಯಂತ ಸೂಕ್ತವಾಗಿದೆ. ಇದಕ್ಕಾಗಿ ಒಂದು ಲಿಂಬೆಯನ್ನು ಅಡ್ಡಲಾಗಿ ಕತ್ತರಿಸಿ ನೇರವಾಗಿ ಮೊಡವೆಯ ಮೇಲೆ ಕೊಂಚವೇ ಹಿಂಡುತ್ತಾ ರಸ ಇಳಿಯುವಂತೆ ಹಚ್ಚಿಕೊಳ್ಳಬೇಕು. ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಬೆಳಿಗ್ಗೆದ್ದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು. ಈ ಸುಲಭ ಕ್ರಮದಿಂದ ಮೊಡವೆಗಳು ಶೀಘ್ರವೇ ವಾಸಿಯಾಗುವುದು ಮಾತ್ರವಲ್ಲ ಹೊಸ ಮೊಡವೆಗಳು ಮೂಡುವುದನ್ನೂ ತಡೆಯಬಹುದು.

ಲಿಂಬೆ ರಸ+ ಆಲಿವ್ ಎಣ್ಣೆ

ಲಿಂಬೆ ರಸ+ ಆಲಿವ್ ಎಣ್ಣೆ

ಒಂದು ಲಿಂಬೆಯ ರಸವನ್ನು ಒಂದು ದೊಡ್ಡಚಮಚ ಆಲಿವ್ ಎಣ್ಣೆಯೊಂದಿಗೆ ಬೆರೆಸಿ. ಇದಕ್ಕೆ ಐದು ದೊಡ್ಡಚಮಚ ಸಕ್ಕರೆ ಮತ್ತು ಒಂದು ಚಿಕ್ಕ ಚಮಚ ಜೇನು ಬೆರೆಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮುಖದ ಮೇಲೆ ಚಿಕ್ಕ ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ಹಚ್ಚಿ. ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಎಣ್ಣೆಚರ್ಮದ ಪಸೆಯನ್ನು ನಿವಾರಿಸಲು

ಎಣ್ಣೆಚರ್ಮದ ಪಸೆಯನ್ನು ನಿವಾರಿಸಲು

ಲಿಂಬೆರಸದಲ್ಲಿರುವ ಗುಣಪಡಿಸುವ ಗುಣದಿಂದಾಗಿ ಚರ್ಮದ ಹಿಗ್ಗಿರುವ ಸೂಕ್ಷ್ಮರಂಧ್ರಗಳನ್ನು ಕಿರಿದಾಗಿಸಿ ಈ ಮೂಲಕ ಎಣ್ಣೆಯ ಪಸೆಯನ್ನು ಕನಿಷ್ಟಗೊಳಿಸಬಹುದು. ಎಣ್ಣೆ ಚರ್ಮದ ವ್ಯಕ್ತಿಗಳು ಪ್ರತಿದಿನ ಮನೆಯಿಂದ ಹೊರಡುವ ಮುನ್ನ ಕೊಂಚ ಲಿಂಬೆಯ ಎಣ್ಣೆಯನ್ನು ಎಣ್ಣೆಚರ್ಮಕ್ಕೆ ಹಚ್ಚಿಕೊಂಡು ಹೊರಹೋಗಬೇಕು. ಆದರೆ ಬಿಸಿಲಿಗೆ ಹೋಗುವ ಮುನ್ನ ಉತ್ತಮ ಗುಣಮಟ್ಟದ ಸನ್ ಸ್ಕ್ರೀನ್ ಹಚ್ಚಿಕೊಳ್ಳುವುದನ್ನು ಮರೆಯದಿರಿ. ಏಕೆಂದರೆ ಲಿಂಬೆಯ ಎಣ್ಣೆ ಹಚ್ಚಿಕೊಂಡಿರುವ ಚರ್ಮ ಸೂರ್ಯನ ಬೆಳಕಿನ ಅತಿನೇರಳೆ ಕಿರಣಗಳ ಪ್ರಭಾವಕ್ಕೆ ಸುಲಭವಾಗಿ ಒಳಗಾಗುತ್ತದೆ.

ಕಪ್ಪು ಕಲೆಗಳನನ್ನು ನಿವಾರಿಸಲು

ಕಪ್ಪು ಕಲೆಗಳನನ್ನು ನಿವಾರಿಸಲು

ಹಿಂದೆಂದೋ ಮೊಡವೆ ಒಡೆದ ಬಳಿಕ ಉಳಿದಿದ್ದ ಕಲೆಗಳನ್ನು ಲಿಂಬೆರಸದ ಮೂಲಕ ಸುಲಭವಾಗಿ ನಿವಾರಿಸಬಹುದು. ಲಿಂಬೆರಸ ಉತ್ತಮ ಬಿಳಿಚುಕಾರಕವಾಗಿದೆ ಹಾಗೂ ನಿಧಾನವಾಗಿ ಕಲೆಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕಾಗಿ ಕಲೆಗಳ ಮೇಲೆ ಲಿಂಬೆರಸವನ್ನು ನೇರವಾಗಿ ರಾತ್ರಿ ಮಲಗುವ ಮುನ್ನ ಹಚ್ಚಿ ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ತೇವಕಾರಕವಾಗಿ

ತೇವಕಾರಕವಾಗಿ

ತಲಾ ಒಂದು ದೊಡ್ಡಚಮಚ ಕೊಬ್ಬರಿ ಎಣ್ಣೆ ಮತ್ತು ಜೇನಿಗೆ ಒಂದು ಲಿಂಬೆಯ ರಸವನ್ನು ಬೆರೆಸಿದರೆ ಅಮೋಘವಾದ ತೇವಕಾರಕ ಸಿದ್ಧ. ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ ಹದಿನೈದು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳುವ ಮೂಲಕ ಉತ್ತಮ ಪ್ರಮಾಣದ ಆರ್ದ್ರತೆ ದೊರಕುತ್ತದೆ.

ಚರ್ಮವನ್ನು ಬೆಳ್ಳಗಾಗಿಸಲು

ಚರ್ಮವನ್ನು ಬೆಳ್ಳಗಾಗಿಸಲು

ಲಿಂಬೆರಸದಲ್ಲಿ ಅತಿ ಹೆಚ್ಚಾಗಿರುವ ವಿಟಮಿನ್ ಸಿ ಚರ್ಮದಲ್ಲಿ ಕೊಲ್ಯಾಜೆನ್ ಪ್ರಮಾಣವನ್ನು ಹೆಚ್ಚಿಸುವ ಕ್ಷಮತೆ ಹೊಂದಿದೆ. ಇದರಿಂದ ಚರ್ಮ ಹೆಚ್ಚು ಸೆಳೆತ ಹೊಂದುತ್ತದೆ ಹಾಗೂ ಸಹಜವರ್ಣ ಇನ್ನಷ್ಟು ಪ್ರಕಾಶಮಾನವಾಗುತ್ತದೆ. ಮೊಡವೆಗಳನ್ನು ನಿವಾರಿಸಲು ಉಪಯೋಗಿಸಿದಂತೆಯೇ ರಾತ್ರಿ ಮಲಗುವ ಮುನ್ನ ಲಿಂಬೆರಸವನ್ನು ನೇರವಾಗಿ ಚರ್ಮಕ್ಕೆ ಹಚ್ಚಿ ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ತೊಳೆದುಕೊಂಡರೆ ಸಾಕು.

English summary

Reasons To Use Lemon Juice On Face

Lemons have countless health benefits and numerous beneficial uses. Their citric scent and distinct flavor makes everything taste amazingly refreshing. Moreover, it improves heart health, can effectively treat skin conditions and infections caused by bacteria and germs.
X
Desktop Bottom Promotion