For Quick Alerts
ALLOW NOTIFICATIONS  
For Daily Alerts

ಈ ನೈಸರ್ಗಿಕ ಉಪಾಯಗಳು ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತವೆ

By Divya Pandith
|

ಚಳಿಗಾಲ ಬಂತೆಂದರೆ ಸಾಮಾನ್ಯವಾಗಿ ತ್ವಚೆಯ ಆರೋಗ್ಯದಲ್ಲೂ ಸ್ವಲ್ಪ ವ್ಯತ್ಯಾಸ ಉಂಟಾಗುತ್ತದೆ. ಶುಷ್ಕವಾಗುವುದು, ತುರಿಕೆ, ಉರಿಯೂತ ಹಾಗೂ ಒಡೆಯುವುದು ಹೀಗೆ ಅನೇಕ ಸಮಸ್ಯೆಗಳು ಕಾಡುತ್ತವೆ. ಬಹುತೇಕರು ಈ ಸಮಸ್ಯೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದೇ ಇಲ್ಲ. ನಿತ್ಯದ ಸಮಸ್ಯೆಯಲ್ಲಿ ಇದೂ ಒಂದು ಸಮಸ್ಯೆಯಾಗಿಯೇ ಉಳಿದು ಬಿಟ್ಟಿರುತ್ತದೆ. ಕೆಲವರು ಆರೈಕೆಗಾಗಿ ಒಂದಿಷ್ಟು ಹಣವನ್ನು ವ್ಯಯಮಾಡುತ್ತಾರೆ.

ಈ ಚಳಿಗಾಲದಲ್ಲಿ ನಿಮ್ಮ ತ್ವಚೆಯ ಆರೋಗ್ಯ ಕಾಪಾಡಲು ಕೆಲವು ಆರೈಕೆ ವಿಧಾನವನ್ನು ಬೋಲ್ಡ್ ಸ್ಕೈ ಪರಿಚಯಿಸುತ್ತದೆ. ಇವು ಸಂಪೂರ್ಣವಾಗಿ ನೈಸರ್ಗಿಕ ವಿಧಾನವಾಗಿರುವುದರಿಂದ ಚರ್ಮದ ಮೇಲೆ ಯಾವುದೇ ಬಗೆಯ ಅಡ್ಡ ಪರಿಣಾಮ ಬೀರದು. ಬದಲಾಗಿ ಚರ್ಮದ ಆರೋಗ್ಯ ಸುಧಾರಿಸುವುದರೊಂದಿಗೆ ಉತ್ತಮ ಗುಣಮಟ್ಟವನ್ನು ಪಡೆದುಕೊಳ್ಳುವುದು.

ಚಳಿಗಾಲದ ತಣ್ಣನೆಯ ಹವೆಗೆ, ಮರುಗದಿರಲಿ ಸೌಂದರ್ಯ

ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಇವು ಪಡೆದುಕೊಂಡಿವೆ. ಚರ್ಮದ ಆಳಕ್ಕೆ ತಲುಪಿ ಸದಾ ತಾಜಾ ಹಾಗೂ ಕಾಂತಿಯುತ ವಾಗಿರುವಂತೆ ಮಾಡುತ್ತದೆ. ಈ ಪರಿಹಾರವು ಸಾಮಾನ್ಯವಾಗಿ ಸುರಕ್ಷಿತವಾಗಿರಿಸುತ್ತದೆ. ಜೊತೆಗೆ ನಿಮಗೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವನ್ನು ಪಡೆಯಬಹುದು. ಹಾಗಾದರೆ ಆ ವಿಧಾನಗಳು ಯಾವವು? ಎನ್ನುವುದರ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ....

ಸೌತೆಕಾಯಿ

ಸೌತೆಕಾಯಿ

ಸೌತೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿನಂಶ ಇರುವುದರಿಂದ ನಿಮ್ಮ ಚರ್ಮವು ರಾತ್ರಿಯಿಂದ ಚೆನ್ನಾಗಿ ಹೈಡ್ರೀಕರಿಸುತ್ತದೆ. ಜೊತೆಗೆ ಮುಂಜಾನೆಯ ಹೊತ್ತಿಗೆ ಹೆಚ್ಚು ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.

ವಿಧಾನ:

ಒಂದೆರಡು ಚೂರು ಸೌತೆಕಾಯಿಯನ್ನು ತುರಿದು, ಪೇಸ್ಟ್‌ನಂತೆ ಮಾಡಿಕೊಳ್ಳಿ.

ಮಲಗುವ ಮುನ್ನ ಮುಖಕ್ಕೆ ಅನ್ವಯಿಸಿ ಮಲಗಿ.

ಮುಂಜಾನೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಟೊಮೆಟೊ

ಟೊಮೆಟೊ

ಟೊಮೆಟೊ ನಿಮ್ಮ ಚರ್ಮದ ವಿನ್ಯಾಸವನ್ನು ರಾತ್ರಿಯಿಡೀ ಪುನಶ್ಚೇತನಗೊಳಿಸಲು, ಪುನರ್ಯೌವನಗೊಳಿಸುವುದಕ್ಕೆ ಮತ್ತು ಬೆಳಿಗ್ಗೆ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.

ವಿಧಾನ:

ಒಂದು ಟೊಮೆಟೊ ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ.

ಮಲಗುವ ಮುನ್ನ ಮುಖಕ್ಕೆ ಅನ್ವಯಿಸಿ ಮಲಗಿ.

ಮುಂಜಾನೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಅಲೋವೆರಾ

ಅಲೋವೆರಾ

ಅಲೋವೆರಾ ತಿರುಳನ್ನು ರಾತ್ರಿಹೊತ್ತು ತ್ವಚೆಯ ಮೇಲೆ ಅನ್ವಯಿಸಿಕೊಂಡು ಮಲಗುವುದರಿಂದ ನೈಸರ್ಗಿಕವಾಗಿ ತೇವಾಂಶ ಹೆಚ್ಚುವುದು ಹಾಗೂ ಹೊಳಪನ್ನು ನೀಡುವುದು.

ವಿಧಾನ:

ಅಲೋವೆರಾ ತಿರುಳನ್ನು ತೆಗೆದುಕೊಳ್ಳಿ.

ಮಲಗುವ ಮುನ್ನ ಮುಖಕ್ಕೆ ಅನ್ವಯಿಸಿ ಮಲಗಿ.

ಮುಂಜಾನೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಸ್ಟ್ರಾಬೆರಿ

ಸ್ಟ್ರಾಬೆರಿ

ತ್ವಚೆಯ ಆರೋಗ್ಯವನ್ನು ಕಾಪಾಡುವ ಒಂದು ಅತ್ಯುತ್ತಮವಾದ ನೈಸರ್ಗಿಕ ಉತ್ಪನ್ನ ಸ್ಟ್ರಾಬೆರಿ. ಇದರಲ್ಲಿ ಗ್ಲೋ ಬೋಸ್ಟಿಂಗ್ ಹಾಗೂ ಕಂಪೌಂಡ್ ಗುಣವನ್ನು ಒಳಗೊಂಡಿರುವುದರಿಂದ ತ್ವಚೆಯನ್ನು ಸದಾ ರಕ್ಷಿಸುತ್ತದೆ.

ವಿಧಾನ:

ಹೆಚ್ಚು ಹಣ್ಣಾಗಿರುವ ಸ್ಟ್ರಾಬೆರ್ರಿ ಹಣ್ಣನ್ನು ಕಿವುಚಿ, ಪೇಸ್ಟ್‌ನಂತೆ ಮಾಡಿ.

ನಂತರ ಮುಖದ ಮೇಲೆ ಅನ್ವಯಿಸಿ, ಮಲಗಿ.

ಮುಂಜಾನೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ತ್ವಚೆಯು ಸುಂದರವಾದ ಕಾಂತಿಯನ್ನು ಪಡೆದುಕೊಳ್ಳುವುದು.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ ಚರ್ಮಕ್ಕೆ ಉತ್ತಮವಾದ ಆರೈಕೆಯನ್ನು ನೀಡುತ್ತದೆ. ಅಲ್ಲದೆ ಅನೇಕ ತ್ವಚೆಯ ಸಮಸ್ಯೆಯನ್ನು ನಿವಾರಿಸುತ್ತದೆ.

ವಿಧಾನ:

ಒಂದಿಷ್ಟು ಬಾದಾಮಿ ಎಣ್ಣೆಯನ್ನು ತೆಗೆದುಕೊಳ್ಳಿ

ನಂತರ ಮುಖದ ಮೇಲೆ ಅನ್ವಯಿಸಿ ಮಲಗಿ

ಮುಂಜಾನೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ತ್ವಚೆಯನ್ನು ಶುದ್ಧೀಕರಿಸಿ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

ಹಾಲಿನ ಕೆನೆ

ಹಾಲಿನ ಕೆನೆ

ತಾಜಾವಾಗಿ ಕಾಣುವ ಮತ್ತು ಸುಂದರವಾದ ಚರ್ಮದೊಂದಿಗೆ ಎಚ್ಚರಗೊಳ್ಳಲು ಸಹಾಯ ಮಾಡುವ ನೈಸರ್ಗಿಕ ಘಟಕ ಹಾಲಿನ ಕೆನೆ. ಇದು ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಎದುರಿಸಲು ಮತ್ತು ನಿಮ್ಮ ಚರ್ಮ ಒಣಗುವುದನ್ನು ತಡೆ ತಡೆಯುವುದು.

ವಿಧಾನ:

3-4 ಹನಿ ನಿಂಬೆ ರಸದೊಂದಿಗೆ ½ ಟೀಚಮಚ ಹಾಲಿನ ಕೆನೆ ಸೇರಿಸಿ.

ಮಲಗುವ ಮುನ್ನ ಮುಖಕ್ಕೆ ಅನ್ವಯಿಸಿ ಮಲಗಿ.

ಮುಂಜಾನೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಸೇಬು

ಸೇಬು

ಚರ್ಮದ ಪೋಷಣೆಯ ವಿಚಾರದಲ್ಲಿ ಅತ್ಯುತ್ತಮ ಸಹಕಾರ ನೀಡುವ ಘಟಕಾಂಶವೆಂದರೆ ಸೇಬು. ಇದು ತ್ವಚೆಯ ಆಳಕ್ಕೆ ಇಳಿದು, ಪೋಷಣೆಯನ್ನು ಪಾಡುವುದು. ಅಲ್ಲದೆ ಚರ್ಮದ ಮೇಲಿರುವ ಕೊಳೆಯನ್ನು ನಿವಾರಿಸಿ,ತಾಜಾ ಹಾಗೂ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

ವಿಧಾನ

ಸ್ವಲ್ಪ ಸೇಬು ಹಣ್ಣಿನ ತುಂಡನ್ನು ಚೆನ್ನಾಗಿ ಪೇಸ್ಟ್ ಮಾಡಿ ಅದರೊಂದಿಗೆ 1/2 ಟೀ ಚಮಚ ಜೇನುತುಪ್ಪವನ್ನು ಮಿಶ್ರಮಾಡಿ.

ಮಲಗುವ ಮುನ್ನ ಮುಖಕ್ಕೆ ಅನ್ವಯಿಸಿ.

ರಾತ್ರಿಯಿಡೀ ಒಣಗಲು ಬಿಡಿ. ಮುಂಜಾನೆ ತಣ್ಣೀರಿನಲ್ಲಿ ಸ್ವಚ್ಛಗೊಳಿಸಿ.

ವಿಟಮಿನ್ ಇ ಎಣ್ಣೆ

ವಿಟಮಿನ್ ಇ ಎಣ್ಣೆ

ವಿಟಮಿನ್ ಇ ಎಣ್ಣೆ ಚರ್ಮದ ಒಟ್ಟಾರೆ ಸ್ಥಿತಿಯನ್ನು ಸುಧಾರಿಸುವ ಘಟಕಾಂಶವಾಗಿದೆ. ಇದು ಸುಲಭವಾಗಿ ನಿಮ್ಮ ಚರ್ಮದ ಮೇಲ್ಮೈಗೆ ಹೀರಲ್ಪಡುತ್ತದೆ. ನಿದ್ದೆ ಮಾಡುವಾಗ ಚರ್ಮದ-ದುರಸ್ತಿ ಘಟಕವಾಗಿ ಕಾರ್ಯನಿರ್ವಹಿಸುತ್ತದೆ.

ವಿಧಾನ

ವಿಟಮಿನ್ ಇ ಕ್ಯಾಪ್ಸುಲ್ ನಿಂದ ಎಣ್ಣೆಯನ್ನು ಹೊರತೆಗೆಯಿರಿ

ಅದನ್ನು ಮಲಗುವ ಮುನ್ನ ಮುಖಕ್ಕೆ ಅನ್ವಯಿಸಿ.

ರಾತ್ರಿಯಿಡೀ ಒಣಗಲು ಬಿಡಿ. ಮುಂಜಾನೆ ತಣ್ಣೀರಿನಲ್ಲಿ ತೊಳೆಯಿರಿ.

English summary

Natural Remedies That Can Make Your Facial Skin Look Better

As today, at Boldsky, we've compiled a list of remedies that can help you wake up with a better-looking skin. These remedies have been around for ages and are known to be highly effective in transforming the state of your skin.
Story first published: Tuesday, November 21, 2017, 20:18 [IST]
X
Desktop Bottom Promotion