Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆಯಲ್ಲೇ ತಯಾರಿಸಬಹುದಾದ 'ಸನ್ ಸ್ಕ್ರೀನ್' ಪ್ರಯತ್ನಿಸಿ ನೋಡಿ
ಬಿಸಿಲಿನಲ್ಲಿ ಹೊರಗಡೆ ಸುತ್ತಾಡಲು ಹೋಗುವಾಗ ಹೆಚ್ಚಿನವರು ಮುಖಕ್ಕೆ ಸನ್ ಸ್ಕ್ರೀನ್ ಹಚ್ಚಿಕೊಳ್ಳುವರು. ಬಿಸಿಲಿನಿಂದ ಉಂಟಾಗುವಂತ ಕಲೆ ಹಾಗೂ ತುರಿಕೆಯಂತಹ ಸಮಸ್ಯೆ ನಿವಾರಣೆ ಮಾಡಲು ಬಿಸಿಲಿಗೆ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಬಳಸುವುದು ಸಾಮಾನ್ಯ. ಅದರಲ್ಲೂ ಒಣ ಚರ್ಮವಿರುವವರು ಹೊರಗಡೆ ಹೋದರೆ ಆಗ ಅವರಿಗೆ ಬಿಸಿಲಿನಲ್ಲಿ ಹೆಚ್ಚಿನ ಸಮಸ್ಯೆಯಾಗುವುದು. ಚರ್ಮದಲ್ಲಿ ಹೆಚ್ಚಿನ ಮೊಶ್ಚಿರೈಸರ್ ಇಲ್ಲದೆ ಇರುವುದೇ ಇದಕ್ಕೆ ಕಾರಣವಾಗಿದೆ. ಒಣ ಚರ್ಮವನ್ನು ತೊಳೆದ ಬಳಿಕವೂ ಅದು ತುಂಬಾ ಬಿಗಿಯಾಗಿಯೇ ಇರುವುದು. ಚರ್ಮದಲ್ಲಿನ ನೀರಿನಾಂಶ ಮತ್ತು ನೈಸರ್ಗಿಕ ತೈಲವು ಬಿಸಿಲಿಗೆ ಕಳೆದುಹೋದ ಪರಿಣಾಮವಿದು.
ಸನ್ ಸ್ಕ್ರೀನ್ ಗೆ ಹಲವಾರು ರೀತಿಯ ರಾಸಾಯನಿಕಗಳನ್ನು ಬಳಕೆ ಮಾಡಿಕೊಂಡಿರುತ್ತಾರೆ. ಇದರಿಂದ ಪದೇ ಪದೇ ಸನ್ ಸ್ಕ್ರೀನ್ ಬಳಸುವುದರಿಂದ ಚರ್ಮಕ್ಕೆ ಹಾನಿಯಾಗಬಹುದು. ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳಲ್ಲಿ ಎಷ್ಟೇ ಅಡ್ಡಪರಿಣಾಮಗಳು ಇಲ್ಲವೆಂದು ಹೇಳಿದರೂ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುವುದು ಖಚಿತ.
ಆದರೆ ಮನೆಯಲ್ಲೇ ತಯಾರಿಸಿದ ಸನ್ ಸ್ಕ್ರೀನ್ ಬಳಸುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮವು ಇರುವುದಿಲ್ಲ ಮತ್ತು ಮುಖದಲ್ಲಿ ಬಿಸಿಲಿನಿಂದ ಆಗುವ ಕಲೆಗಳು ಮೂಡುವುದಿಲ್ಲ. ಈ ಲೇಖನದಲ್ಲಿ ಬೋಲ್ಡ್ ಸ್ಕೈ ಮನೆಯಲ್ಲೇ ತಯಾರಿಸಬಹುದಾದ ಕೆಲವೊಂದು ಸನ್ ಸ್ಕ್ರೀನ್ ಗಳ ಬಗ್ಗೆ ತಿಳಿಸಿಕೊಡಲಿದೆ. ಇದನ್ನು ಓದುತ್ತಾ ಬಳಸಿಕೊಳ್ಳಿ...

ಪುದೀನಾದ ಸನ್ ಸ್ಕ್ರೀನ್ ಲೋಷನ್
ನಾಲ್ಕು ಔನ್ಸ್ ನಷ್ಟು ಶುದ್ಧೀಕರಿಸಿದ ನೀರು, 12 ಹನಿಯಷ್ಟು ಶುದ್ಧ ಲ್ಯಾವೆಂಡರ್ ತೈಲ, 4-6 ಸ್ಪಿರಿಮಿಂಟ್ ತೈಲ ಮತ್ತು 4-6 ಹನಿ ಪುದೀನಾ ತೈಲ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಒಂದು ಬಾಟಲಿಗೆ ಹಾಕಿ ಮುಚ್ಚಳ ಮುಚ್ಚಿ ಫ್ರಿಡ್ಜ್ ನಲ್ಲಿಡಿ. ಈ ಸನ್ ಸ್ಕ್ರೀನ್ ಅನ್ನು 2-4 ತಿಂಗಳ ಕಾಲ ಬಳಕೆ ಮಾಡಬಹುದು.

ಅಲೋವೆರಾ ಸನ್ ಸ್ಕ್ರೀನ್ ಲೋಷನ್
ನಿಮಗೆ ಇಷ್ಟವಿರುವಂತಹ ಯಾವುದೇ ರೀತಿಯ ಸುಗಂಧಿತ ಬಾಡಿ ಲೋಷನ್ ನ 10 ಔನ್ಸ್ ತೆಗೆದುಕೊಳ್ಳಿ. 4-5 ಹನಿಯಷ್ಟು ಆಲಿವ್ ತೈಲ, 7-8 ಹನಿಯಷ್ಟು ಪುದೀನಾ ತೈಲ ಮತ್ತು 10-15 ಹನಿಯಷ್ಟು ಅಲೋವೆರಾ ಜೆಲ್. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ನಯವಾಗುವ ತನಕ ಕುದಿಸಿ. ಇದನ್ನು ಒಂದು ಬಾಟಲಿಗೆ ಹಾಕಿ ಮುಚ್ಚಳ ಮುಚ್ಚಿಡಿ. ಇದನ್ನು ಫ್ರಿಡ್ಜ್ ನಲ್ಲಿ ಇಟ್ಟು ಬೇಕಾದಾಗ ಬಳಸಿಕೊಳ್ಳಿ.

ಬಾದಾಮಿ ಮತ್ತು ಆಲಿವ್ ತೈಲ
ಇವೆರಡೂ ವಿಟಮಿನ್ ಇ ಯಿಂದ ಸಮೃದ್ಧವಾಗಿರುವ ತೈಲ. ½ ಕಪ್ ನಷ್ಟು ಆಲಿವ್ ತೈಲ ಮತ್ತು ಬಾದಾಮಿ ತೈಲ, ¼ ಕಪ್ ತೆಂಗಿನೆಣ್ಣೆ, 1/ 4ಕಪ್ ಜೇನಿನ ಮೇಣ, 2 ಚಮಚ ಝಿಂಕ್ ಆಕ್ಸೈಡ್ ಮತ್ತು ಒಂದು ಚಮಚ ವಿಟಮಿನ್ ಇ ತೈಲ. ಝಿಂಕ್ ಆಕ್ಸೈಡ್ ಅನ್ನು ಬಿಟ್ಟು ಎಲ್ಲವನ್ನು ಕುದಿಯುವ ನೀರಿಗೆ ಹಾಕಿ. ಎಲ್ಲವೂ ಕರಗಿದ ಬಳಿಕ ಇದಕ್ಕೆ ಝಿಂಕ್ ಆಕ್ಸೈಡ್ ಸೇರಿಸಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಒಂದು ಬಾಟಲಿಯಲ್ಲಿ ಹಾಕಿಡಿ. ಇದು ಒಣ ಚರ್ಮಕ್ಕೆ ಅತ್ಯುತ್ತಮ ಸನ್ ಸ್ಕ್ರೀನ್ ಆಗಿದೆ.

ಬಾಡಿ ಲೋಷನ್ ಮತ್ತು ಝಿಂಕ್ ಆಕ್ಸೈಡ್
ಇದು ಒಣ ಹಾಗೂ ಎಣ್ಣೆಯಂಶವಿರುವ ಚರ್ಮಕ್ಕೆ ಒಳ್ಳೆಯ ರೀತಿಯಿಂದ ಕೆಲಸ ಮಾಡುವುದು. ಬಾಡಿ ಲೋಷನ್ ತೆಗೆದುಕೊಂಡು ಅದಕ್ಕೆ ಎರಡು ಚಮಚ ಝಿಂಕ್ ಆಕ್ಸೈಡ್ ಮಿಶ್ರಣ ಮಾಡಿಕೊಳ್ಳಿ. ಇದು ಒಣಚರ್ಮಕ್ಕೆ ಹೇಳಿಮಾಡಿಸಿರುವ ಸನ್ ಸ್ಕ್ರೀನ್.



Click it and Unblock the Notifications
