ಹೀರೋ-ಹೀರೋಯಿನ್ ರೀತಿ ಕಾಣಿಸಿಕೊಳ್ಳಬೇಕೇ?-ಈ ತಪ್ಪುಗಳನ್ನು ಮಾಡದಿರಿ!

By: Hemanth
Subscribe to Boldsky

ಚರ್ಮದ ಕಾಳಜಿ ಪ್ರತಿಯೊಬ್ಬರಿಗೂ ಇರುವುದು. ಯಾಕೆಂದರೆ ಚರ್ಮವು ಕಾಂತಿ ಕಳಕೊಂಡರೆ ಅದು ದೇಹದ ಸೌಂದರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಇಂತಹ ಸಮಯದಲ್ಲಿ ಚರ್ಮವನ್ನು ವಿವಿಧ ರೀತಿಯಿಂದ ಆರೈಕೆ ಮಾಡುವರು. ಇದರಲ್ಲಿ ಪುರುಷರು ಹಾಗೂ ಮಹಿಳೆಯರೆಂಬ ಭೇದವಿಲ್ಲ. ಪ್ರತಿಯೊಬ್ಬರಿಗೂ ಸುಂದರ ಚರ್ಮ ಬೇಕೇಬೇಕು. ಆದರೆ ಚರ್ಮದ ಆರೈಕೆಯಲ್ಲಿ ಕೆಲವೊಂದು ತಪ್ಪುಗಳು ನಡೆಯುತ್ತಿದೆ. ಇದು ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ತಪ್ಪುಗಳು ಆಗುತ್ತದೆ. 

ಈ ಬ್ಯೂಟಿ ಟಿಪ್ಸ್ ಅನುಸರಿಸಿ-ಇನ್ನಷ್ಟು ಸುಂದರವಾಗಿ ಕಾಣುವಿರಿ!

ಚರ್ಮದ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆದುಕೊಂಡರೆ ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು. ಆದರೆ ಮಹಿಳೆಯರು ಹಾಗೂ ಪುರುಷರು ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಆಗಾಗ ಮಾಡುತ್ತಿರುವರು. ನಮಗೆ ತಿಳಿದೋ ಅಥವಾ ತಿಳಿಯದೆಯೋ ಇಂತಹ ತಪ್ಪುಗಳು ಆಗುತ್ತಿದೆ. ಚರ್ಮದ ಆರೈಕೆಯಲ್ಲಿ ಆಗುವಂತಹ ಐದು ಸಾಮಾನ್ಯ ತಪ್ಪುಗಳು ಯಾವುದು ಎಂದು ತಿಳಿದುಕೊಂಡು ಮುಂದೆ ಅದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ.... 

ಒಂದನೇ ತಪ್ಪು

ಒಂದನೇ ತಪ್ಪು

ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಹಾಗೂ ಕಲ್ಮಶ ತೆಗೆದುಹಾಕಲು ಪ್ರಮುಖವಾಗಿ ಇರುವಂತಹ ಅಸ್ತ್ರವೆಂದರೆ ಸ್ಕ್ರಬ್ ಮತ್ತು ಸತ್ತ ಚರ್ಮ ಕಿತ್ತೊಗೆಯುವುದು. ಸ್ಕ್ರಬ್ ಮತ್ತು ಸತ್ತ ಚರ್ಮ ಕಿತ್ತೊಗೆಯುವ ಕೆಲಸ ನಿಯಮಿತವಾಗಿ ಮಾಡಬಹುದು. ಆದರೆ ಅತಿಯಾಗಿ ಮಾಡಿದರೆ ಸಮಸ್ಯೆಯಾಗುವುದು. ಅತಿಯಾಗಿ ಸ್ಕ್ರಬ್ ಮಾಡುವುದರಿಂದ ಚರ್ಮದ ನೈಸರ್ಗಿಕ ತೈಲವು ಮಾಯವಾಗಿ ಚರ್ಮವು ಒಣ ಹಾಗೂ ನಿಸ್ತೇಜವಾಗುವುದು.

ಎರಡನೇ ತಪ್ಪು

ಎರಡನೇ ತಪ್ಪು

ಪಾರ್ಟಿ ಅಥವಾ ಕೆಲಸದಿಂದ ಬಂದ ಬಳಿಕ ಮೇಕಪ್ ತೆಗೆಯದೆ ಹಾಗೆ ಮಲಗುವುದರಿಂದ ಚರ್ಮದ ಮೇಲೆ ಪರಿಣಾಮ ಉಂಟಾಗುವುದು. ಇಡೀ ರಾತ್ರಿ ಮೇಕಪ್ ಮುಖದಲ್ಲಿ ಇರುವುದರಿಂದ ಮೇಕಪ್ ಅವಶೇಷವು ಚರ್ಮ ಮತ್ತು ಅದರ ಗೆರೆಗಳ ಮೇಲೆ ಸೇರಿಕೊಳ್ಳುವುದು. ಇದರಿಂದ ಚರ್ಮವು ನಿಸ್ತೇಜ ಹಾಗೂ ಕಳೆಗುಂದಿದಂತೆ ಕಾಣಬಹುದು. ಮೇಕಪ್ ಹಾಕಿಕೊಂಡು ಹೊರಗಡೆ ಹೋಗಿದ್ದರೆ ಮನೆಗೆ ಬಂದ ಬಳಿಕ ಅದನ್ನುಸಂಪೂರ್ಣವಾಗಿ ತೆಗೆಯಲು ಮರೆಯಬೇಡಿ.

ಮೂರನೇ ತಪ್ಪು

ಮೂರನೇ ತಪ್ಪು

ಸಿಟಿಎಂ ಎಂದರೆ ಕ್ಲೆನ್ಸಿಂಗ್, ಟೋನರ್ ಹಾಕಿ ಮೊಶ್ಚಿರೈಸ್ ಮಾಡುವುದು. ಇದನ್ನು ನಿಯಮಿತವಾಗಿ ಮಾಡುತ್ತಾ ಇರಬೇಕು. ವಾರದಲ್ಲಿ ಒಂದು ಸಲ ಟೋನಿಂಗ್ ಮಾಡದೆ ಇರಬಹುದು. ಆದರೆ ಕ್ಲೆನ್ಸಿಂಗ್ ಮತ್ತು ಮೊಶ್ಚಿರೈಸ್ ಪ್ರತಿನಿತ್ಯ ಮಾಡಬೇಕು. ನೀವು ಎಷ್ಟೇ ವ್ಯಸ್ತರಾಗಿದ್ದರೂ ಸಿಟಿಎಂನ್ನು ಮಾಡಲೇಬೇಕು.

ನಾಲ್ಕನೇ ತಪ್ಪು

ನಾಲ್ಕನೇ ತಪ್ಪು

ಸನ್ ಸ್ಕ್ರೀನ್‌ಗಳನ್ನು ಬೇಸಿಗೆಯಲ್ಲಿ ಮಾತ್ರ ಬಳಸಿಕೊಳ್ಳುವರು. ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಯ ಮೇಕಪ್ ಬಾಕ್ಸ್ ನಲ್ಲಿ ಒಳ್ಳೆಯ ಗುಣಮಟ್ಟದ ಸನ್ ಸ್ಕ್ರೀನ್ ಇರುವುದು. ಮಳೆಗಾಲ ಅಥವಾ ಚಳಿಗಾಲ ಬರುತ್ತಿದ್ದಂತೆ ಇದನ್ನು ನಿಲ್ಲಿಸಿಬಿಡಲಾಗುತ್ತದೆ. ಆದರೆ ವರ್ಷದ 365 ದಿನವು ಸನ್ ಸ್ಕ್ರಿನ್ ಬಳಸಿದರೆ ಒಳ್ಳೆಯದು.

ಐದನೇ ತಪ್ಪು

ಐದನೇ ತಪ್ಪು

ಇಂದಿನ ಮಾರುಕಟ್ಟೆಯಲ್ಲಿ ಸೌಂದರ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು ಸಿಗುವಷ್ಟು ಬೇರೆ ಯಾವುದೇ ರೀತಿಯ ಉತ್ಪನ್ನ ಕೂಡ ಸಿಗಲಿಕ್ಕಿಲ್ಲ. ಆದರೆ ಪದೇ ಪದೇ ಉತ್ಪನ್ನ ಬದಲಾಯಿಸುವುದರಿಂದ ಚರ್ಮದ ಮೇಲೆ ಪರಿಣಾಮವಾಗಬಹುದು. ನಿಮ್ಮ ಮುಖವನ್ನು ಯಾವಾಗಲೂ ಸಂಶೋಧನಾ ಕೇಂದ್ರವಾಗಿ ಮಾಡಬೇಡಿ. ಮೇಕಪ್ ಮತ್ತು ಸೌಂದರ್ಯದ ಉತ್ಪನ್ನಗಳು ಒಂದೇ ಕಂಪನಿ ಹಾಗೂ ಗುಣಮಟ್ಟದ್ದಾಗಿರಲಿ. ಚರ್ಮದ ಮೇಲೆ ಹೆಚ್ಚು ಪ್ರಯೋಗ ಮಾಡಿದಷ್ಟು ಅದು ಗೊಂದಲಕ್ಕೆ ಸಿಲುಕಿ ಅಂತಿಮವಾಗಿ ನಿಸ್ತೇಜವಾಗುವುದು. ಒಂದೇ ಕಂಪನಿಯ ಉತ್ಪನ್ನ ಬಳಸುತ್ತಾ ಇರುವುದು ತುಂಬಾ ಒಳ್ಳೆಯದು.

English summary

Major Mistakes Men & Women Are Repeating On Their Skin

Skin care mistakes do happen. It might be unintentional but it happens because you are unaware of it. As skin experts keep enlisting tips for your skin, they miss on the skin mistakes. How about listing all the common skin care mistakes that men and women repeat often? These skin care mistakes are very common and we do it most of the times unknowingly.
Subscribe Newsletter