ತ್ವಚೆಯ ಅಂದ ಚಂದ ಹೆಚ್ಚಿಸುವ, ಸಿಹಿ-ಜೇನಿನ ಫೇಶಿಯಲ್...

By: Jaya subramanya
Subscribe to Boldsky

ನಿಮ್ಮ ಎಲ್ಲಾ ಸೌಂದರ್ಯ ಸಮಸ್ಯೆಗಳಿಗೆ ಅಡುಗೆ ಮನೆಯಲ್ಲಿ ದೊರೆಯುವ ಗೃಹಪಯೋಗಿ ವಸ್ತುಗಳನ್ನು ಬಳಸಿಕೊಂಡು ಪರಿಹಾರವನ್ನು ಪಡೆದುಕೊಳ್ಳಬಹುದು ಎಂಬುದು ಚೆನ್ನಾಗಿ ತಿಳಿದಿರುವ ಸಂಗತಿಯಾಗಿದೆ. ಅದರಲ್ಲೂ ಜೇನು ನಿಮ್ಮ ಸಂಪೂರ್ಣ ದೇಹದ ಜೊತೆಗೆ ನಿಮ್ಮ ಸೌಂದರ್ಯವನ್ನು ಅತ್ಯುತ್ತಮಗೊಳಿಸುವಲ್ಲಿ ಸಹಕಾರಿಯಾಗಿದೆ ಎಂಬ ಅಂಶವನ್ನು ನೀವು ಮನದಟ್ಟು ಮಾಡಿಕೊಳ್ಳಲೇಬೇಕು. ನಿಮ್ಮ ಒಣ ತ್ವಚೆಯನ್ನು ಇದು ಹೊಳೆಯಿಸುವಲ್ಲಿ ಎತ್ತಿದ ಕೈಯಾಗಿದ್ದು ಇಂದಿನ ಲೇಖನದಲ್ಲಿ ಇದು ನಿಮ್ಮ ಸೌಂದರ್ಯವನ್ನು ಹೇಗೆ ಕಾಪಾಡುತ್ತದೆ ಎಂಬುದನ್ನು ಅರಿತುಕೊಳ್ಳೋಣ.

ದೇಹದಲ್ಲಿ ಹೆಚ್ಚುವರಿ ಕೊಬ್ಬು ಸೇರಿಕೊಂಡಿದ್ದರೂ ಬಿಸಿ ನೀರಿಗೆ ಲಿಂಬೆ ಮತ್ತು ಜೇನು ಸೇರಿಸಿದ ದ್ರಾವಣವನ್ನು ಸೇವಿಸಲು ಸೂಚಿಸುತ್ತಾರೆ. ಇದು ಬರಿಯ ದೇಹವನ್ನು ಶುದ್ಧಮಾಡುವುದಲ್ಲದೆ, ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ ಎಂಬುದಾಗಿ ಆಯುರ್ವೇದ ತಿಳಿಸುತ್ತದೆ. ಈ ಕೆಳಗೆ ನಾವು ಜೇನು ಬಳಸಿಕೊಂಡು ನಿಮ್ಮ ಸೌಂದರ್ಯವನ್ನು ಹೇಗೆ ಇಮ್ಮಡಿಗೊಳಿಸಬಹುದು ಎಂಬುದನ್ನು ಕೆಲವು ಅಂಶಗಳ ಮೂಲಕ ವಿವರಿಸಿದ್ದೇವೆ....ಮುಂದೆ ಓದಿ..

ವಿಟಮಿನ್ ಅಂಶ

ವಿಟಮಿನ್ ಅಂಶ

ನಿಮ್ಮ ಸೌಂದರ್ಯವನ್ನು ಸಂರಕ್ಷಿಸುವಲ್ಲಿ ಸಿದ್ಧಹಸ್ತ ಎಂದೆನಿಸಿರುವ ಜೇನು ವಿಟಮಿನ್ ಅಂಶಗಳನ್ನು ಒಳಗೊಂಡಿದೆ. ವಿಟಮಿನ್ ಬಿ6, ಫೋಲೆಟ್, ವಿಟಮಿನ್ ಸಿ, ರಿಬೊಫ್ಲೇವನ್, ನಿಯಾಸಿನ್ ಅಂಶಗಳನ್ನು ಜೇನು ಒಳಗೊಂಡಿದೆ.

ತ್ವಚೆಗೆ ರಕ್ಷಣೆ

ತ್ವಚೆಗೆ ರಕ್ಷಣೆ

ಜೇನಿನಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಅಂಶವು ನಿಮ್ಮ ತ್ವಚೆಯನ್ನು ಬ್ಯಾಕ್ಟೀರಿಯಾಗಳಿಂದ ಸಂರಕ್ಷಿಸುತ್ತದೆ ಮತ್ತು ಇದು ಆಂಟಿಫಂಗಲ್ ಮತ್ತು ಆಂಟಿವೈರಸ್ ಅಂಶಗಳನ್ನು ಪಡೆದುಕೊಂಡಿದೆ.

ಜೇನಿನಲ್ಲಿ ಮಿನರಲ್ ಅಂಶಗಳಿವೆ

ಜೇನಿನಲ್ಲಿ ಮಿನರಲ್ ಅಂಶಗಳಿವೆ

ಡ್ರೈ ಸ್ಕಿನ್‌ಗೆ ಮಿನರಲ್ ಅಂಶವು ಮುಖ್ಯವಾಗಿದ್ದು ಇದು ಜಿಂಕ್ ಮತ್ತು ಸೆಲೇನಿಯಮ್‌ ಅಂಶದಲ್ಲಿದೆ. ನಿಮ್ಮ ತ್ವಚೆಗೆ ಇದು ಉತ್ತಮ ಎಂದೆನಿಸಿದರೆ ಇದನ್ನು ಬಳಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ನಿಮ್ಮ ತ್ವಚೆಯನ್ನು ಮೃದುವಾಗಿಸುವ ಅಂಶವನ್ನು ಜೇನು ಒಳಗೊಂಡಿದ್ದರೂ ಇದನ್ನು ನಿಮ್ಮ ತ್ವಚೆಗೆ ಬಳಸುವುದು ಹೇಗೆ ಎಂಬುದನ್ನು ನೀವು ಅರಿತುಕೊಂಡಿರಬೇಕು.

ಜೇನಿನ ಸ್ನಾನ

ಜೇನಿನ ಸ್ನಾನ

ನಿಮ್ಮನ್ನು ತಾಜಾ ಆಗಿರುವ ಜೇನಿನ ಸ್ನಾನವನ್ನು ನೀವು ಟ್ರೈ ಮಾಡಬಹುದಾಗಿದೆ. ಉಗುರು ಬೆಚ್ಚಗಿನ ನೀರಿಗೆ ಎರಡು ಚಮಚದಷ್ಟು ಜೇನು ಸೇರಿಸಿಕೊಳ್ಳಿ ಮತ್ತು ಬೇಕಿಂಗ್ ಸೋಡಾವನ್ನು ಇದಕ್ಕೆ ಹಾಕಿ. ಈ ಮಿಶ್ರಣ ನಿಮ್ಮ ತ್ವಚೆಯನ್ನು ತಾಜಾ ಆಗಿರಿಸುತ್ತದೆ.

ಮೊಡವೆ ಗುರುತನ್ನು ನಿವಾರಿಸಲು

ಮೊಡವೆ ಗುರುತನ್ನು ನಿವಾರಿಸಲು

ಒಣ ತ್ವಚೆಯಲ್ಲಿ ಮೊಡವೆಯು ಕಲೆಗಳನ್ನು ಉಂಟುಮಾಡುತ್ತದೆ. ಆದರೆ ಇವುಗಳನ್ನು ನೀವು ಸ್ಪರ್ಶಿಸುವುದರಿಂದ ಕಲೆಯಾಗಿ ಮಾರ್ಪಡುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಜೊಜೊಬೊ ಎಣ್ಣೆಯನ್ನು ಬಳಸಿಕೊಂಡು ಅದಕ್ಕೆ ಜೇನು ಸೇರಿಸಿ. ನಿಮ್ಮಬ ಬಳಿ ಜೊಜೊಬೊ ಎಣ್ಣೆ ಇಲ್ಲ ಎಂದಾದಲ್ಲಿ ಅದಕ್ಕೆ ತೆಂಗಿನ ಎಣ್ಣೆಯನ್ನು ಬಳಸಿ ಜೇನು ಸೇರಿಸಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ವೃತ್ತಾಕಾರವಾಗಿ ಈ ಮಿಶ್ರಣವನ್ನು ಮಸಾಜ್ ಮಾಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಮೊಡವೆಗಾಗಿ ಜೇನಿನ ಚಿಕಿತ್ಸೆ

ಮೊಡವೆಗಾಗಿ ಜೇನಿನ ಚಿಕಿತ್ಸೆ

ತ್ವಚೆಯ ಮುಖ್ಯ ಸಮಸ್ಯೆಗಳಲ್ಲಿ ಒಂದಾಗಿರುವ ಮೊಡವೆಯನ್ನು ಜೇನು ಬಳಸಿಕೊಂಡು ಉಪಚರಿಸಬಹುದಾಗಿದೆ. ಇದಕ್ಕಾಗಿ ನಿಮ್ಮ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ಈಗ ಹತ್ತಿಯ ಸಹಾಯದಿಂದ ಜೇನಿನಲ್ಲಿ ಅದ್ದಿಕೊಂಡು ಮೊಡವೆ ಇರುವ ಭಾಗಕ್ಕೆ ಹಚ್ಚಿಕೊಳ್ಳಿ. ಹತ್ತಿಯನ್ನು ಮೊಡವೆಯ ಮೇಲೆ 15 ನಿಮಿಷ ಇಡಿ. ಮೊಡವೆಯು ಸಂಪೂರ್ಣವಾಗಿ ಜೇನಿನಲ್ಲಿ ನೆನೆಯಲಿ. ನಂತರ ಇದನ್ನು ತೊಳೆದುಕೊಳ್ಳಿ.

ಮೇಕಪ್ ರಿಮೂವರ್

ಮೇಕಪ್ ರಿಮೂವರ್

ನಿಮ್ಮ ಮುಖದಲ್ಲಿರುವ ಮೇಕಪ್ ಅನ್ನು ತೊಡೆಯಲು ಜೇನು ಬಳಸಿಕೊಂಡು ಮೇಕಪ್ ರಿಮೂವರ್ ಅನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ನೀವು ಜೇನನ್ನು ಜೊಜೊಬೊ ಆಯಿಲ್/ತೆಂಗಿನೆಣ್ಣೆಯಲ್ಲಿ ಮಿಶ್ರ ಮಾಡಿಕೊಳ್ಳಿ ಇದಕ್ಕೆ ಸ್ವಲ್ಪ ದಾಲ್ಚಿನ್ನಿಯನ್ನು ಸೇರಿಸಿಕೊಳ್ಳಿ ಮತ್ತು ಚಿಟಿಕೆ ಅರಶಿನ ಹಾಗೂ ಜಾಯಿಕಾಯಿ ಹುಡಿಯನ್ನು ಮಿಶ್ರ ಮಾಡಿಕೊಳ್ಳಿ. ಆದರೆ ಈ ಮಿಶ್ರಣವನ್ನು ಏಳು ದಿನಗಳಿಗಿಂತ ಹೆಚ್ಚು ಕಾಲ ಸಂರಕ್ಷಿಸಿ ಬಳಸಲು ಹೋಗದಿರಿ.

ಸ್ಕಿನ್ ಫೇಶಿಯಲ್ ಮಾಸ್ಕ್

ಸ್ಕಿನ್ ಫೇಶಿಯಲ್ ಮಾಸ್ಕ್

ನಿಮ್ಮ ಮುಖಕ್ಕೆ ಫೇಶಿಯಲ್ ಹೆಚ್ಚು ಮುಖ್ಯವಾಗಿದ್ದು ಅಲೊವೇರಾ ಮತ್ತು ಜೇನು ಬಳಸಿಕೊಂಡು ಈ ಫೇಶಿಯಲ್ ಅನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಒಂದು ಚಮಚ ಜೇನಿಗೆ ಅಷ್ಟೇ ಪ್ರಮಾಣದ ಅಲೊವೇರಾ ಜೆಲ್ ಮಿಶ್ರ ಮಾಡಿ ನಿಮ್ಮ ಫೇಶಿಯಲ್ ಮಾಸ್ಕ್ ಸಿದ್ಧಗೊಂಡಂತೆಯೇ. ಬೇಕಿದ್ದರೆ ರೋಸ್ ವಾಟರ್ ಅನ್ನು ಇದಕ್ಕೆ ಬಳಸಿಕೊಳ್ಳಬಹುದಾಗಿದೆ.

English summary

How To Use Honey For Dry Skin And Related Problems

By now, we all know that among the kitchen ingredients that work like wonder on dry skin, honey is a must try. So, what makes honey so perfect for dry skin? Take a look! Honey is a humectant. It draws moisture from the air and traps it in the skin. Moisture is, of course, a primary requisite for anyone with dry skin.
Story first published: Thursday, September 14, 2017, 23:31 [IST]
Subscribe Newsletter