For Quick Alerts
ALLOW NOTIFICATIONS  
For Daily Alerts

  ಕುತ್ತಿಗೆಯಲ್ಲಿ ಮೂಡುವ ನೆರಿಗೆ ಸಮಸ್ಯೆ! ಇಲ್ಲಿದೆ ನೋಡಿ ಸರಳೋಪಾಯ....

  By Arshad
  |

  ತ್ವಚೆಯ ಆರೈಕೆಯ ವಿಷಯ ಬಂದಾಗ ನಾವೆಲ್ಲಾ ಮುಖದ ಚರ್ಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ. ಆದರೆ ಮುಖದ ಸುತ್ತಲ ಇತರ ಭಾಗಗಳಾದ ಕುತ್ತಿಗೆ, ಕಿವಿಯ ಕೆಳಭಾಗ, ಎದೆಯ ಮೇಲುಭಾಗದ ತ್ವಚೆಗಳಿಗೆ ಕಡಿಮೆ ಪ್ರಾಮುಖ್ಯತೆ ನೀಡುತ್ತೇವೆ ಅಥವಾ ಅಲಕ್ಷಿಸಿಬಿಡುತ್ತೇವೆ. ಅದರಲ್ಲೂ ಕುತ್ತಿಗೆಯ ಚರ್ಮಕ್ಕೆ ಅತಿ ಕಡಿಮೆ ಗಮನ ನೀಡುತ್ತೇವೆ.

  ನಮ್ಮ ದೇಹದ ಅತಿಹೆಚ್ಚು ಸೂರ್ಯನ ಬೆಳಕಿಗೆ ಒಡ್ಡುವ ಚರ್ಮವೆಂದರೆ ಕುತ್ತಿಗೆ. ಅಲ್ಲದೇ ಕುತ್ತಿಗೆಯನ್ನು ಬಗ್ಗಿಸುವಾಗ ಅಥವಾ ಎತ್ತುವಾಗ ಅನುಕೂಲವಾಗುವಂತೆ ಈ ಚರ್ಮ ತೆಳ್ಳಗಿನ ಪದರಗಳನ್ನು ಹೊಂದಿದ್ದು ಮುಖದ ಚರ್ಮಕ್ಕಿಂತ ಭಿನ್ನವಾಗಿದೆ. ಆದ್ದರಿಂದ ಕುತ್ತಿಗೆ ಕೆಳಬೆ ಬಗ್ಗಿಸುವಾಗ ಈ ಚರ್ಮ ಹಲವಾರು ಮಡಿಕೆಗಳನ್ನು ಪಡೆಯುತ್ತದೆ. ಇದೇ ಕಾರಣಕ್ಕೆ ಈ ಚರ್ಮದಲ್ಲಿ ನೂರಾರು ಅಡ್ಡಗೆರೆಗಳಿರುತ್ತವೆ. ಎಲ್ಲಿಯವರೆಗೆ ಈ ಗೆರೆಗಳು ಗಾಢವಾಗಿರುವುದಿಲ್ಲವೋ, ಅಲ್ಲಿಯವರೆಗೆ ಎಲ್ಲವೂ ಹೆಚ್ಚಿನವರು ಈ ಬಗ್ಗೆ ಗಮನ ಹರಿಸುವುದೇ ಇಲ್ಲ.

  ಆದರೆ ಬಿಸಿಲಿಗೆ ಹೆಚ್ಚು ಒಡ್ಡಿದ ಚರ್ಮದಲ್ಲಿ ಈ ನೆರಿಗೆಗಳ ಗೆರೆಗಳು ಗಾಢಕಪ್ಪು ಬಣ್ಣ ಪಡೆದಿರುತ್ತವೆ. ಒಂದು ವೇಳೆ ನಿಮ್ಮ ಕುತ್ತಿಗೆಯಲ್ಲಿಯೂ ಈ ಪ್ರಕಾರದ ಗೆರೆಗಳು ಮೂಡಿದ್ದು ಇವುಗಳನ್ನು ನಿವಾರಿಸಿ ಸಹಜಸೌಂದರ್ಯ ಪಡೆಯುವುದು ನಿಮ್ಮ ಉದ್ದೇಶವಾಗಿದ್ದರೆ ಇಂದು ಕೆಲವು ಸುಲಭ ವಿಧಾನಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ಇವುಗಳಲ್ಲಿ ಸೂಕ್ತವಾದುದನ್ನು ಆರಿಸಿ ಅನುಸರಿಸುವ ಮೂಲಕ ನಿಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು...... 

  ನೈಸರ್ಗಿಕ ಮಾಯಿಶ್ಚರೈಸರ್ ಬಳಸಿ

  ನೈಸರ್ಗಿಕ ಮಾಯಿಶ್ಚರೈಸರ್ ಬಳಸಿ

  ಉತ್ತಮ ಗುಣಮಟ್ಟದ ತೇವಕಾರಕ ಅಥವಾ ಮಾಯಿಶ್ಚರೈಸರ್ ಬಳಸುವ ಮೂಲಕ ಈ ಚರ್ಮದಲ್ಲಿ ಉಂಟಾಗಿದ್ದ ಒಣಗುವಿಕೆಯನ್ನು ನಿವಾರಿಸಿ ಚರ್ಮದ ಸೆಳೆತ ಹೆಚ್ಚಿಸಬಹುದು. ಆದ್ದರಿಂದ ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಕೊಂಚ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳುವುದನ್ನು ಮರೆಯದಿರಿ.

  ಸೂಕ್ತವಾದ ಪ್ರಸಾಧನಗಳನ್ನೇ ಬಳಸಿ

  ಸೂಕ್ತವಾದ ಪ್ರಸಾಧನಗಳನ್ನೇ ಬಳಸಿ

  ಇಂದು ಮಾರುಕಟ್ಟೆಯಲ್ಲಿ ಕುತ್ತಿಗೆಯ ನೆರಿಗೆ ನಿವಾರಿಸುವ ನೂರಾರು ಪ್ರಕಾರದ ಕ್ರೀಮ್ ಮತ್ತು ಲೋಷನ್ ಗಳು ಲಭ್ಯವಿವೆ. ಇವುಗಳಲ್ಲಿ ಕುತ್ತಿಗೆಯ ಚರ್ಮದ ಅಗತ್ಯತೆಗೆ ಅನುಗುಣವಾಗಿಯೇ ಪೋಷಕಾಂಶಗಳನ್ನು ಸೇರಿಸಿರಲಾಗಿರುತ್ತದೆ. ಇವು ಚರ್ಮದ ಸೆಳೆತೆ ಹೆಚ್ಚಿಸಿ ಚರ್ಮ ಸಡಿಲವಾಗಿ ಜೋತುಬೀಳುವುದನ್ನು ತಡೆಯುತ್ತವೆ. ಸಾಮಾನ್ಯವಾಗಿ ಕುತ್ತಿಗೆಯ ಚರ್ಮದ ಕ್ರೀಮುಗಳು ಮುಖದ ಕ್ರೀಮ್‌ಗಿಂತಲೂ ಹೆಚ್ಚು ಗಾಢವಾಗಿದ್ದು ಹೆಚ್ಚು ಪೋಷಕಾಂಶಗಳಿಂದ ಕೂಡಿರುತ್ತವೆ, ಹಾಗೂ ಚರ್ಮದಲ್ಲಿ ಕೊಲ್ಯಾಜೆನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತವೆ. ಆದ್ದರಿಂದ ಫೇಸ್ ಕ್ರೀಮ್ ಅನ್ನು ಕುತ್ತಿಗೆಗೆ ಹಾಗೂ ಕುತ್ತಿಗೆಯ ಕ್ರೀಂ ಅನ್ನು ಮುಖಕ್ಕೆ ಹಚ್ಚಬಾರದು. ಕುತ್ತಿಗೆಯ ಕ್ರೀಂ ಅನ್ನು ನಿಯಮಿತವಾಗಿ ಬಳಸುವ ಮೂಲಕ ಶೀಘ್ರವೇ ನೆರಿಗೆಗಳು ಇಲ್ಲವಾಗುತ್ತವೆ.

  ಸನ್ ಸ್ಕ್ರೀನ್ ಬಳಸಿ

  ಸನ್ ಸ್ಕ್ರೀನ್ ಬಳಸಿ

  ಕುತ್ತಿಗೆಯ ನೆರಿಗೆಗಳಿಗೆ ಮತ್ತು ಬಣ್ಣ ಗಾಢವಾಗಲು ಸೂರ್ಯನ ಕಿರಣಗಳು ಪ್ರಮುಖ ಕಾರಣವಾಗಿವೆ. ಆದ್ದರಿಂದ ಪ್ರತಿ ಬಾರಿ ಬಿಸಿಲಿಗೆ ಹೋಗುವಾಗಲೂ ಉತ್ತಮ ಗುಣಮಟ್ಟದ ಸನ್ ಸ್ಕ್ರೀನ್ ಒಂದನ್ನು ಮುಖ, ಕುತ್ತಿಗೆ ಹಾಗೂ ಬಿಸಿಲಿಗೆ ಒಡ್ಡುವ ಕೈಗಳ ಭಾಗಗಳಿಗೆ ಹಚ್ಚಿಕೊಂಡು ಹೋಗಬೇಕು. ಇದಕ್ಕಾಗಿ SPF 20 ಎಂಬ ಮಾಪನವಿರುವ ಸನ್ ಸ್ಕ್ರೀನ್ ಅನ್ನೇ ಬಳಸಿ

  ನೆಕ್ ಮಾಸ್ಕ್ ಅಥವಾ ಇತರ ಮನೆಮದ್ದು ಉಪಯೋಗಿಸಿ

  ನೆಕ್ ಮಾಸ್ಕ್ ಅಥವಾ ಇತರ ಮನೆಮದ್ದು ಉಪಯೋಗಿಸಿ

  ಕುತ್ತಿಗೆಗಾಗಿಯೇ ಇರುವ ಕ್ರೀಂ ಮತು ಲೋಶನ್ ಗಳ ಜೊತೆಗೇ ಕುತ್ತಿಗೆಗಾಗಿ ವಿಶೇಷ ಮಾಸ್ಕ್ ಗಳು ದೊರಕುತ್ತವೆ. ಇವುಗಳು ಸಹಾ ಚರ್ಮದ ನೆರಿಗೆ ಮತ್ತು ಜೋತುಬೀಳುವುದನ್ನು ತಡೆಯಲು ಸಮರ್ಥವಾಗಿವೆ. ಸಾಮಾನ್ಯವಾಗಿ ಈ ಮಾಸ್ಕ್ ಗಳಲ್ಲಿ ಚರ್ಮದ ನೆರಿಗೆಗಟ್ಟುವುದನ್ನು ನಿಧಾನಗೊಳಿಸುವ ಅಂಶಗಳಿದ್ದು ವಯಸ್ಸಾಗುವ ಲಕ್ಷಣಗಳನ್ನು ತಡವಾಗಿಸುವ ಗುಣವಿದೆ.

  ಎಣ್ಣೆಗಳಿಂದ ಮಸಾಜ್ ಮಾಡಿ

  ಎಣ್ಣೆಗಳಿಂದ ಮಸಾಜ್ ಮಾಡಿ

  ಆಲಿವ್ ಎಣ್ಣೆ, ಕೊಬ್ಬರಿ ಎಣ್ಣೆ ಮೊದಲಾದ ಎಣ್ಣೆಗಳಲ್ಲಿ ನೆರಿಗೆಗಳನ್ನು ನಿವಾರಿಸುವ ಗುಣವಿದೆ. ಇವು ಚರ್ಮದ ಸೂಕ್ಷ್ಮರಂಧ್ರದಿಂದ ಒಳಪದರದ ಆಳದವರೆಗೂ ಇಳಿಯುವ ಗುಣ ಹೊಂದಿದ್ದು ಚರ್ಮದ ಆರೋಗ್ಯ ಹೆಚ್ಚಿಸುತ್ತವೆ. ಸೂಕ್ತ ಲೋಷನ್ ಅಥವಾ ಕ್ರೀಂ ಲಭ್ಯವಿಲ್ಲದಿದ್ದರೆ ಇವೆರಡರಲ್ಲೊಂದು ಎಣ್ಣೆಯಿಂದ ನಿತ್ಯವೂ ಎರಡು ಬಾರಿ ಕುತ್ತಿಗೆಯ ಕೆಳಗಿನಿಂದ ಮೇಲೆ ಬರುವಂತೆ ನಯವಾಗಿ ಮಸಾಜ್ ಮಾಡಿಕೊಳ್ಳುವ ಮೂಲಕವೂ ಮನೆಯಲ್ಲಿಯೇ ಉತ್ತಮ ಆರೈಕೆ ಪಡೆಯಬಹುದು.

  English summary

  How To Treat Neck Wrinkles At Home

  Neck is the most sun-exposed part of our body, which has a thinner skin layer as compared to the face. Because the neck skin is usually thin and delicate, the chances of appearance of wrinkles on the neck is quite high. Well, if you are the one who wants to reduce neck wrinkles at home, here we mention to you some of the easy ways to treat neck wrinkles. Take a look.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more