Latest Updates
-
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ?
ವಾರದೊಳಗೆ ಮುಖದ ಸೌಂದರ್ಯ ಹೆಚ್ಚಿಸುವ ನೈಸರ್ಗಿಕ ಕ್ರೀಮ್‌ಗಳು
ಪ್ರತಿಯೊಬ್ಬ ಮಹಿಳೆ ಕೂಡ ತಾನು ವಿಶ್ವಸುಂದರಿಯಂತೆ ಕಾಣಿಸಿಕೊಳ್ಳಬೇಕೆಂಬ ಕನಸು ಇದ್ದೇ ಇರುತ್ತದೆ. ಆದರೆ ಇದು ಎಲ್ಲರಿಗೂ ಸಾಧ್ಯವಾಗಲ್ಲ. ಕೆಲವರ ಚರ್ಮದ ವಿಧ ಏನೇ ಆಗಿದ್ದರೂ ಅದು ತುಂಬಾ ನಿಸ್ತೇಜವಾಗಿ ಕಾಣಿಸುತ್ತಾ ಇರುವುದು. ಇದಕ್ಕೆ ಪಾಲಿಸಿಕೊಂಡು ಹೋಗುವ ಆಹಾರಕ್ರಮ, ನಿರ್ಜಲೀಕರಣ, ಕಲುಷಿತ ವಾತಾವರಣ ಇತ್ಯಾದಿ ಕಾರಣವಾಗಿದೆ. ಮುಖ ನಿಸ್ತೇಜವಾಗಿ ಕಾಣುವಂತಹ ಮಹಿಳೆಯರು ಮಾರುಕಟ್ಟೆಗೆ ಹೋಗಿ ಹಲವಾರು ರೀತಿಯ ಕ್ರೀಮ್ ತಂದು ಮುಖಕ್ಕೆ ಹಚ್ಚಿಕೊಳ್ಳುವರು.
ಇದರಿಂದ ಸ್ವಲ್ಪ ದಿನದ ಮಟ್ಟಿಗೆ ನಿಮ್ಮ ಮುಖ ಕಾಂತಿಯುತವಾಗಿ ಕಾಣಿಸಿಕೊಂಡರೂ ಅದರಲ್ಲಿರುವ ರಾಸಾಯನಿಕವು ಶಕ್ತಿ ಕಳಕೊಂಡಾಗ ಮುಖ ಮತ್ತೆ ನಿಸ್ತೇಜವಾಗುವುದು. ಆದರೆ ಅಡ್ಡ ಪರಿಣಾಮ ಬೀರುವಂತಹ ಕ್ರೀಮ್ ಗಳ ಬದಲಿಗೆ ಮನೆಯಲ್ಲೇ ಕೆಲವೊಂದು ಕ್ರೀಮ್ ಗಳನ್ನು ತಯಾರಿಸಿಕೊಂಡರೆ ಅದರಿಂದ ಮುಖದ ಕಾಂತಿ ಹೆಚ್ಚುವುದು ಮಾತ್ರವಲ್ಲದೆ ಚರ್ಮದ ಆರೋಗ್ಯ ಕೂಡ ಚೆನ್ನಾಗಿರುವುದು.
ಈ ಕ್ರೀಮ್ ಗಳು ಚರ್ಮದ ಮೇಲ್ಪದರವನ್ನು ಭೇದಿಸಿ ನಿಸ್ತೇಜಸ್ಸನ್ನು ಹೋಗಲಾಡಿಸುವುದು. ಇವುಗಳನ್ನು ನೈಸರ್ಗಿಕ ಸಾಮಗ್ರಿಗಳಿಂದ ತಯಾರಿಸಲಾಗಿರುವ ಕಾರಣ ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ. ಈ ಕ್ರೀಮ್ ಗಳಲ್ಲಿ ಪ್ರಬಲ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಕಾಂತಿ ನೀಡುವ ಅಂಶಗಳು ಇವೆ. ಈ ಕ್ರೀಮ್ ಗಳನ್ನು ಹೇಗೆ ತಯಾರಿಸುವುದು ಎಂದು ತಿಳಿದುಕೊಳ್ಳಿ...

ರೆಸಿಪಿ-1
ಬೇಕಾಗುವ ಸಾಮಗ್ರಿಗಳು
1 ಚಮಚ ಬಾದಾಮಿ ಹುಡಿ
½ ಚಮಚ ಜೇನುತುಪ್ಪ
½ ಚಮಚ ಮೊಸರು
ತಯಾರಿಸುವುದು ಹೇಗೆ
ಎಲ್ಲವನ್ನು ಜತೆಯಾಗಿ ಸೇರಿಸಿಕೊಂಡು ಕ್ರೀಮ್ ನಂತೆ ಮಾಡಿಕೊಳ್ಳಿ.
ಇದನ್ನು ಚರ್ಮಕ್ಕೆ ಹಚ್ಚಿಕೊಂಡು ಹಾಗೆ ಬಿಡಿ.
ಹೊಳೆಯುವ ಚರ್ಮಕ್ಕಾಗಿ ವಾರದಲ್ಲಿ 3-4 ದಿನ ಕಾಲ ಇದನ್ನು ಬಳಸಿ.

ರೆಸಿಪಿ-2
ಬೇಕಾಗುವ ಸಾಮಗ್ರಿಗಳು
ಒಂದು ಚಿಟಿಕೆ ಅರಶಿನ ಹುಡಿ
½ ಚಮಚ ಕಡಲೆಹಿಟ್ಟು
1 ಚಮಚ ಲಿಂಬೆರಸ
ತಯಾರಿಸುವುದು ಹೇಗೆ
ಎಲ್ಲವನ್ನು ಜತೆಯಾಗಿ ಸೇರಿಕೊಂಡು ಸರಿಯಾಗಿ ಕಲಸಿ ಕ್ರೀಮ್ ಮಾಡಿ.
ಇದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಹಾಗೆ ಬಿಡಿ.
ನಿಸ್ತೇಜವಾಗಿರುವ ಚರ್ಮಕ್ಕೆ ವಾರದಲ್ಲಿ ಒಂದು ಸಲ ಇದನ್ನು ಬಳಸಿ.

ರೆಸಿಪಿ-3
ಬೇಕಾಗುವ ಸಾಮಗ್ರಿಗಳು
½ ಚಮಚ ಕಿತ್ತಳೆ ಸಿಪ್ಪೆಯ ಹುಡಿ
½ ಚಮಚ ಮೊಸರು
½ ಚಮಚ ರೋಸ್ ವಾಟರ್
ಇದನ್ನು ತಯಾರಿಸುವುದು ಹೇಗೆ?
ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಕ್ರೀಮ್ ಆಗಿ ಮಾಡಿಕೊಳ್ಳಿ.
ಇದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಹಾಗೆ ಬಿಡಿ.
ಅರ್ಧ ಗಂಟೆ ಬಳಿಕ ನೀವು ಇದನ್ನು ತೊಳೆಯಬಹುದು.
ವಾರದಲ್ಲಿ ಒಂದು ಸಲ ಇದನ್ನು ಬಳಸಿಕೊಳ್ಳಿ.

ರೆಸಿಪಿ-4
ಬೇಕಾಗುವ ಸಾಮಗ್ರಿಗಳು
½ ಚಮಚ ಪಪ್ಪಾಯ ಹುಡಿ
1 ಚಮಚ ಸೌತೆಕಾಯಿ ಜ್ಯೂಸ್
ಒಂದು ಚಿಟಿಕೆ ಕಡಲೆಹಿಟ್ಟು.
ತಯಾರಿಸುವ ವಿಧಾನ
ಎಲ್ಲಾ ಸಾಮಗ್ರಿಗಳನ್ನು ಜತೆಯಾಗಿಸಿ ಕ್ರೀಮ್ ಮಾಡಿಕೊಳ್ಳಿ.
ಮುಖವನ್ನು ತೊಳೆದುಕೊಂಡು ಬಳಿಕ ಈ ಕ್ರೀಮ್ ಹಚ್ಚಿ ಮತ್ತು ಹಾಗೆ ಬಿಡಿ.
ನಿಮಗೆ ತೊಳೆಯಬೇಕು ಎಂದೆನಿಸಿದಾಗ ಇದನ್ನು ನೀರಿನಿಂದ ತೊಳೆಯಿರಿ.
ಮಲಗುವ ಮೊದಲು ಈ ಕ್ರೀಮ್ ಹಚ್ಚಿಕೊಂಡು ಮಲಗಿದರೆ ತುಂಬಾ ಒಳ್ಳೆಯದು.

ರೆಸಿಪಿ-5
ಬೇಕಾಗುವ ಸಾಮಗ್ರಿಗಳು
ಒಂದು ಚಿಟಿಕೆ ದಾಲ್ಚಿನ್ನಿ ಹುಡಿ
½ ಚಮಚ ಟೊಮೆಟೊ ತಿರುಳು
½ ಚಮಚ ಅಲೋವೆರಾ ಜೆಲ್
ತಯಾರಿಸುವ ವಿಧಾನ
ಎಲ್ಲವನ್ನು ಜತೆಯಾಗಿ ಸೇರಿಸಿಕೊಂಡು ರುಬ್ಬಿಕೊಳ್ಳಿ. ರುಬ್ಬಿಕೊಂಡು ಕ್ರೀಮ್ ಮಾಡಿಕೊಳ್ಳಿ.
ಚರ್ಮದ ಮೇಲೆ ಈ ಕ್ರೀಮ್ ಅನ್ನು ಮಸಾಜ್ ಮಾಡಿಕೊಳ್ಳಿ.
ಒಂದು ಗಂಟೆ ಬಿಟ್ಟು ನೀವು ಇದನ್ನು ತೊಳೆಯಬಹುದು ಅಥವಾ ಹಾಗೆ ಬಿಡಬಹುದು.
ವಾರದಲ್ಲಿ ಒಂದು ಸಲ ಈ ಕ್ರೀಮ್ ಬಳಸಿಕೊಂಡರೆ ಅದರಿಂದ ಒಳ್ಳೆಯ ಫಲಿತಾಂಶ ಸಿಗುವುದು.

ರೆಸಿಪಿ-6
ಬೇಕಾಗುವ ಸಾಮಗ್ರಿಗಳು
½ ಚಮಚ ಶ್ರೀಗಂಧದ ಹುಡಿ
½ ಚಮಚ ಜೇನುತುಪ್ಪ
½ ಚಮಚ ಮೊಸರು
ಹೇಗೆ ತಯಾರಿಸುವುದು
ಎಲ್ಲವನ್ನು ಸರಿಯಾಗಿ ಕಲಸಿಕೊಂಡು ಕ್ರೀಮ್ ಮಾಡಿಕೊಳ್ಳಿ.
ಈ ಕ್ರೀಮ್ ನ್ನು ಮುಖದ ಮೇಲೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ.
ಕ್ರೀಮ್ ನ್ನು ಮುಖದ ಮೇಲೆ ಹೆಚ್ಚು ಹೊತ್ತು ಬಿಟ್ಟರೆ ಒಳ್ಳೆಯದು.

ರೆಸಿಪಿ-7
ಬೇಕಾಗುವ ಸಾಮಗ್ರಿಗಳು
½ ಚಮಚ ಹಾಲಿನ ಹುಡಿ
½ ಹನಿ ಬಾದಾಮಿ ಎಣ್ಣೆ
½ ಚಮಚ ಲಿಂಬೆ ರಸ
ತಯಾರಿಸುವ ವಿಧಾನ
ಎಲ್ಲವನ್ನು ಜತೆಯಾಗಿ ಸೇರಿಸಿ ಕಲಸಿಕೊಳ್ಳಿ.
ಇದನ್ನು ಚರ್ಮಕ್ಕೆ ಹಚ್ಚಿಕೊಳ್ಳಿ. ತಣ್ಣೀರಿನಿಂದ ತೊಳೆಯುವ ಮೊದಲು ಕೆಲವು ಗಂಟೆಗಳ ಕಾಲ ಹಾಗೆ ಇರಲಿ.
ಫಲಿತಾಂಶ ಬೇಕಿದ್ದರೆ ವಾರದಲ್ಲಿ 2-3 ಸಲ ಈ ಕ್ರೀಮ್ ಬಳಸುವುದು ಅಗತ್ಯ.



Click it and Unblock the Notifications











