ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸುವ ಸರಳ ಮನೆಮದ್ದುಗಳು

By: Hemanth
Subscribe to Boldsky

ಪ್ರತಿಯೊಬ್ಬರಿಗೂ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕೆಂಬ ಹಂಬಲ ಇದ್ದೇ ಇರುತ್ತದೆ. ಇದನ್ನು ಈಡೇರಿಸಿಕೊಳ್ಳಲು ಹಲವಾರು ಪ್ರಯತ್ನ ಮಾಡಿದರೂ ಮುಖದ ಮೇಲಿನ ಕೆಂಪು ಅಥವಾ ಕಪ್ಪು ಕಲೆಗಳು, ಮೊಡವೆಯ ಕಲೆಗಳು ಮಾತ್ರ ಮುಖದ ಸೌಂದರ್ಯವನ್ನು ಹಾಳು ಮಾಡುತ್ತಾ ಇದೆಯಾ? ಸಾಮಾನ್ಯವಾಗಿ ಕೆಂಪು ಕಲೆಗಳು ಹಾರ್ಮೋನು ಅಸಮತೋಲನ, ಕೀಟಗಳ ಕಡಿತ ಮತ್ತು ರಕ್ತದಲ್ಲಿನ ವ್ಯತ್ಯಾಸದಿಂದ ಉಂಟಾಗಬಹುದು. ರಾಸಾಯನಿಕ ಮತ್ತು ಚರ್ಮದ ಸೋಂಕಿನಿಂದಲೂ ಇದು ಉಂಟಾಗಬಹುದು. ಒಂದೇ ತಿಂಗಳಲ್ಲಿ ಮಾಯವಾಗುವ ತ್ವಚೆಯ ಕಪ್ಪು ಕಲೆ!

ಆದರೆ ಇವುಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಇಲ್ಲವಾದಲ್ಲಿ ಇದು ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಮುಖದಲ್ಲಿ ಕೆಂಪು ಕಲೆಗಳಿಂದ ನಿಮಗೆ ಸಮಸ್ಯೆಯಾಗುತ್ತಾ ಇದ್ದರೆ ಕೆಲವೊಂದು ಮನೆಮದ್ದುಗಳನ್ನು ಪರೀಕ್ಷಿಸಬಹುದು.....  

ತುಳಸಿ ರಸ

ತುಳಸಿ ರಸ

ತುಳಸಿ ರಸಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಹಚ್ಚಿದರೆ ರೀತಿಯ ಕಲೆಗಳು ಸಂಪೂರ್ಣವಾಗಿ ಮಾಯವಾಗುವುದು ಹಾಗೂ ಮುಂದಕ್ಕೆ ಈ ರೀತಿಯ ಕಲೆಗಳು ಮತ್ತೆ ಮುಖದಲ್ಲಿ ಕಾಣಿಸಿಕೊಳ್ಳುವುದಿಲ್ಲ. ತ್ವಚೆಯ ಅಂದ-ಚಂದಕ್ಕೆ ಮನೆಯಂಗಳದ 'ತುಳಸಿ'

ಜೀರಿಗೆ

ಜೀರಿಗೆ

ಜೀರಿಗೆ ನೀರನ್ನು ಮಾಡಿ ಅದರಿಂದ ಮುಖ ತೊಳೆಯಿರಿ. ಈ ರೀತಿ ಸ್ವಲ್ಪ ದಿನಗಳವರೆಗೆ ಮಾಡುತ್ತಾ ಬನ್ನಿ, ನಿಮ್ಮ ಮುಖದಲ್ಲಿರುವ ಕಲೆಗಳು ಮಾಯವಾಗುವುದು ನಿಮ್ಮ ಗಮನಕ್ಕೆ ಬರುತ್ತದೆ.

ಸೀಬೆಕಾಯಿ ಮತ್ತು ಬಾಳೆ ಹಣ್ಣು

ಸೀಬೆಕಾಯಿ ಮತ್ತು ಬಾಳೆ ಹಣ್ಣು

ಸೀಬೆಕಾಯಿ ಮತ್ತು ಬಾಳೆ ಹಣ್ಣನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ಕಲೆಗಳು ಮಾಯವಾಗಿ ನಿಮ್ಮ ಮುಖದ ಅಂದ ಹೆಚ್ಚುವುದು (1 ಬಾಳೆ ಹಣ್ಣು, 1 ಸೀಬೆಕಾಯಿ ಪೇಸ್ಟ್ ಮಾಡಿ ಫ್ರಿಜ್ ನಲ್ಲಿಟ್ಟರೆ 1 ವಾರ ಹಚ್ಚಬಹುದು) ಮುಖದ ಅಂದಕ್ಕೆ- ಬಾಳೆ ಹಣ್ಣಿನ ಫೇಸ್ ಪ್ಯಾಕ್...

ಅಡುಗೆ ಸೋಡಾ

ಅಡುಗೆ ಸೋಡಾ

ಐದರಿಂದ ಆರು ಚಮಚದಷ್ಟು ಅಡುಗೆ ಸೋಡಾಕ್ಕೆ ತೆಂಗಿನ ಎಣ್ಣೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಂಡು, ಕೆಂಪು ಕಲೆಗಳ ಮೇಲೆ ಚೆನ್ನಾಗಿ ಹಚ್ಚಿಕೊಳ್ಳಿ ಹಾಗೂ 15 ನಿಮಿಷ ಬಿಟ್ಟು ತೊಳೆಯಿರಿ. ಈ ಮಿಶ್ರಣವನ್ನು ದಿನದಲ್ಲಿ ಒಂದು ಸಲ ಬಳಸಿದರೆ ಕೆಂಪು ಕಲೆಗಳು ಮಾಯವಾಗುವುದು.

ನಿಂಬೆರಸ

ನಿಂಬೆರಸ

ಒಂದು ಲಿಂಬೆಯಿಂದ ಅದರ ರಸವನ್ನು ತೆಗೆಯಿರಿ. ಹತ್ತಿಯ ಉಂಡೆಯನ್ನು ಬಳಸಿ ಕೆಂಪು ಕಲೆಗಳ ಮೇಲೆ ನಿಂಬೆರಸ ಹಚ್ಚಿ. 15 ನಿಮಿಷ ಬಿಟ್ಟು ತೊಳೆಯಿರಿ. ತಂಪಾದ ನೀರಿನಿಂದ ಮುಖವನ್ನು ತೊಳೆಯಿರಿ. ದಿನದಲ್ಲಿ ಒಂದು ಸಲ ನಿಂಬೆರಸವನ್ನು ಹಚ್ಚಿದರೆ ಕೆಂಪು ಕಲೆಗಳು ಮಾಯವಾಗುವುದು.

ಗಂಧದ ಹುಡಿ

ಗಂಧದ ಹುಡಿ

ಎರಡು ಚಮಚ ಗಂಧದ ಹುಡಿ ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಾಲು ಮಿಶ್ರಣ ಮಾಡಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿ ಕೊಂಡು, ಕೆಂಪು ಕಲೆಗಳ ಮೇಲೆ ಹಚ್ಚಿಕೊಳ್ಳಿ. ತದನಂತರ ಸ್ವಲ್ಪ ಸಮಯ ಬಿಟ್ಟು ತಂಪಾದ ನೀರಿನಿಂದ ತೊಳೆದು, ಬಟ್ಟೆಯಿಂದ ಒರೆಸಿಕೊಳ್ಳಿ.

ಟೊಮೆಟೋ ರಸ

ಟೊಮೆಟೋ ರಸ

ಒಂದು ಚಮಚ ಲಿಂಬೆರಸವನ್ನು ಟೊಮೆಟೋ ಜ್ಯೂಸ್‌ಗೆ ಹಾಕಿಕೊಂಡು ಚೆನ್ನಾಗಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ತದಂತರ ತಣ್ಣೀರಿನಿಂದ ತೊಳೆಯಿರಿ. ನಿಯಮಿತವಾಗಿ ಟೊಮೆಟೋ ಜ್ಯೂಸ್‌ನಿಂದ ಮುಖ ತೊಳೆದರೆ ಸುಲಭವಾಗಿ ಕೆಂಪು ಕಲೆಗಳಿಂದ ಮುಕ್ತಿಯನ್ನು ಪಡೆಯಬಹುದು. ಮೊಡವೆ ಕಾಟಕ್ಕೆ, ಟೊಮೆಟೊ ಹಣ್ಣಿನ ಫೇಸ್ ಪ್ಯಾಕ್

ಕಿತ್ತಳೆ ಸಿಪ್ಪೆ

ಕಿತ್ತಳೆ ಸಿಪ್ಪೆ

ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದನ್ನು ನೀರಿನಲ್ಲಿ ಕಲೆಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಈ ರೀತಿ ಮಾಡಿದರೆ ಪಿಗ್ ಮೆಂಟೇಷನ್ (pigmentation) ಮಾತ್ರವಲ್ಲ ಮೊಡವೆ ಕೂಡ ಮಾಯವಾಗುವುದು.

English summary

How To Get Rid Of The Red Spots On The Face

Are red spots all over your skin and ruining your look? Well, red spots can be as annoying as pimples or acne on the face. Red spots may be common for people with sensitive and acne-prone skin. These spots are not easily visible, but itching, inflammation and slight redness on the face are the initial symptoms of one suffering from red spots on the face. Red spots may occur due to hormonal imbalance, insect bites, blood spots, birth marks or due to chemical or skin reactions.
Subscribe Newsletter