Latest Updates
-
ಡೇಟಿಂಗ್ ಆಪ್ ಬಳಸುವ ಮುನ್ನ ಎಚ್ಚರ: ನಿಮ್ಮನ್ನು ಬಲಿಪಶು ಮಾಡುವ ಹನಿಟ್ರ್ಯಾಪ್ ಜಾಲದ ಅಸಲಿ ಮುಖ ಇಲ್ಲಿದೆ! -
ಬಿಸಿಲ ಬೇಗೆಯಿಂದ ಮನೆ ಮತ್ತು ಗಿಡಗಳನ್ನು ರಕ್ಷಿಸುವುದು ಹೇಗೆ? ತಾಪಮಾನ ಏರಿಕೆಯ ನಡುವೆ ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಉಪ್ಪಿನಕಾಯಿ, ಹಪ್ಪಳ ಇಷ್ಟನಾ? ಎಚ್ಚರ! ಹೃದಯದ ಆರೋಗ್ಯಕ್ಕಾಗಿ ಅಡುಗೆಯಲ್ಲಿ ಈ ಬದಲಾವಣೆ ಮಾಡಲೇಬೇಕು -
ಅಮೆಜಾನ್ ಸೇಲ್ ಮುಗಿಯಲು ಕೆಲವೇ ಗಂಟೆ ಬಾಕಿ: ಈ ಬ್ಯೂಟಿ ಮತ್ತು ಫ್ಯಾಷನ್ ಡೀಲ್ಸ್ ಮಿಸ್ ಮಾಡ್ಬೇಡಿ! -
ತೀವ್ರ ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಆರೋಗ್ಯವಾಗಿರಲು ಈ ಸುರಕ್ಷತಾ ಕ್ರಮಗಳನ್ನು ಮಿಸ್ ಮಾಡ್ಬೇಡಿ! -
ಲಿವ್-ಇನ್ ಸಂಬಂಧದಲ್ಲಿರುವ ಯುವ ಜೋಡಿಗಳಿಗೆ ಶಾಕ್: ಹೈಕೋರ್ಟ್ನಿಂದ ಹೊಸ ಆದೇಶ, ಇನ್ನು ರಕ್ಷಣೆ ಸಿಗಲ್ಲ! -
ಬಿಸಿಲಿಗೆ ಬಾಲ್ಕನಿ ಗಿಡಗಳು ಬಾಡುತ್ತಿವೆಯೇ? ಈ 5 ಸರಳ ಟ್ರಿಕ್ಸ್ ಬಳಸಿ ಗಿಡಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಿ! -
ಹಾಲಿನ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಹಾಳಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಈ ಪರ್ಯಾಯ ಆಹಾರಗಳೇ ದಾರಿ! -
ರೆಡ್ ಕಾರ್ಪೆಟ್ ಮೇಲೆ ಸದ್ದು ಮಾಡುತ್ತಿರುವ 'ಸೀರೆ-ಗೌನ್' ಮ್ಯಾಜಿಕ್: 2026ರ ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ಆರೋಗ್ಯ ಹಾಳಾಗದಂತೆ ವರ್ಕೌಟ್ ಮಾಡಲು ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದರೆ ಅಪಾಯ!
ಸ್ಟ್ರೆಚ್ ಮಾರ್ಕ್‌ನಿಂದ ಮುಕ್ತಿ ಹೊಂದಲು ಆಲೀವ್ ಎಣ್ಣೆಯ ಮಸಾಜ್
ಹೆರಿಗೆಯ ನಂತರ ಹೊಟ್ಟೆಯ ಭಾಗದಲ್ಲಿ ಕಾಣಿಸಿಕೊಳ್ಳುವ ಸ್ಟ್ರೆಚ ಮಾರ್ಕ್ ಒಮ್ಮೊಮ್ಮೆ ಮುಜುಗರವನ್ನುಂಟು ಮಾಡುತ್ತದೆ. ಹೆರಿಗೆಯಾದ ನಂತರ ಈ ಸ್ಟ್ರೆಚ್ ಮಾರ್ಕ್‌ಗಳು ನಿಮ್ಮ ಹೊಟ್ಟೆಯ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಅಂತೆಯೇ ನೀವು ಹೆಚ್ಚಿನ ಕೊಬ್ಬನ್ನು ಹೊಂದಿದ್ದು ನಂತರ ಅದನ್ನು ಕಳೆದುಕೊಳ್ಳುವ ಸಮಯದಲ್ಲಿ ಕೂಡ ಈ ಗುರುತು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಂತೆಯೇ ನೀವು ಬಳಸುವ ಹೆಚ್ಚಿನ ರಾಸಾಯನಿಕ ಅಂಶವನ್ನು ಒಳಗೊಂಡಿರುವ ಕ್ರೀಮ್‌ನಿಂದ ಕೂಡ ಈ ಗುರುತು ಕಾಣಿಸಿಕೊಳ್ಳಬಹುದು.
ಈ ಗುರುತುಗಳನ್ನು ನೀಗಿಸಿಕೊಳ್ಳುವ ಸಲುವಾಗಿ ನೀವು ದುಬಾರಿ ಕ್ರೀಮ್‌ಗಳು ಮತ್ತು ಪೌಡರ್‌ಗಳನ್ನು ಬಳಸುತ್ತಿದ್ದೀರಿ ಹಾಗೂ ಇದರಿಂದ ಯಾವುದೇ ಪರಿಣಾಮ ನಿಮಗೆ ದೊರೆಯುತ್ತಿಲ್ಲ ಎಂದಾದಲ್ಲಿ ಇಂದಿನ ಲೇಖನದಲ್ಲಿ ಕೆಲವೊಂದು ಉಪಯುಕ್ತ ಸಲಹೆಗಳನ್ನು ನೀಡಲು ನಾವು ಬಯಸುತ್ತಿದ್ದೇವೆ. ಬರಿಯ ಆಲೀವ್ ಆಯಿಲ್‌ನಿಂದಲೇ ಈ ಕಲೆಗಳನ್ನು ನೀವು ನೀಗಿಸಿಕೊಳ್ಳಬಹುದು. ಇದು ಉತ್ತಮ ಪೋಷಕ ಅಂಶಗಳನ್ನು ಒಳಗೊಂಡಿದ್ದು ಉತ್ಕರ್ಷಣ ನಿರೋಧಿ ಉತ್ಪನ್ನಗಳಿಂದ ಹೇರಳವಾಗಿದೆ. ಆಲೀವ್ ಎಣ್ಣೆಯನ್ನು ಇತರ ಉತ್ಪನ್ನಗಳೊಂದಿಗೆ ಬಳಸಿಕೊಂಡು ನಿಮ್ಮ ಹೊಟ್ಟೆಯ ಭಾಗದಲ್ಲಿರುವ ಕಲೆಗಳನ್ನು ನೀಗಿಸಿಕೊಳ್ಳಬಹುದಾಗಿದೆ.

ನೇರ ಹಚ್ಚುವಿಕೆ
*2-3 ಚಮಚಗಳಷ್ಟು ಆಲೀವ್ ಎಣ್ಣೆಯನ್ನು 30-40 ಸೆಕೆಂಡ್ ಬಿಸಿ ಮಾಡಿಕೊಳ್ಳಿ
*ನಿಮ್ಮ ಕಲೆ ಇರುವ ಭಾಗದಲ್ಲಿ ಇದನ್ನು ಹಚ್ಚಿಕೊಳ್ಳಿ
*ನಿತ್ಯವೂ ಇದೇ ರೀತಿಯಲ್ಲಿ ಆಲೀವ್ ಎಣ್ಣೆಯನ್ನು ಬಳಸಿಕೊಂಡು ಕಲೆಗಳನ್ನು ಹೋಗಲಾಡಿಸಿ

ಆಲೀವ್ ಆಯಿಲ್, ಬ್ರೌನ್ ಶುಗರ್ ಮತ್ತು ಲಿಂಬೆ ರಸ
2 ಚಮಚಗಳಷ್ಟು ಆಲೀವ್ ಎಣ್ಣೆ, 2 ಚಮಚ ಬ್ರೌನ್ ಶುಗರ್ ಮತ್ತು 1 ಚಮಚ ಲಿಂಬೆ ರಸವನ್ನು ತೆಗೆದುಕೊಳ್ಳಿ
ಕಲೆ ಇರುವ ಭಾಗಕ್ಕೆ ಇದನ್ನು ಹಚ್ಚಿ
5-10 ನಿಮಿಷ ಮಸಾಜ್ ಮಾಡಿಕೊಳ್ಳಿ ಮತ್ತು 30 ನಿಮಿಷ ಹಾಗೆಯೇ ಬಿಡಿ
ತಣ್ಣೀರಿನಿಂದ ಎಣ್ಣೆಯನ್ನು ತೆಗೆಯಿರಿ
ನಿತ್ಯವೂ ಇದನ್ನು ಬಳಸಿಕೊಂಡು ಕಲೆ ಹೋಗಲಾಡಿಸಿ.

ಆಲೀವ್ ಆಯಿಲ್, ವಿಟಮಿನ್ ಇ ಎಣ್ಣೆ ಮತ್ತು ಕಿತ್ತಳೆ ಸಿಪ್ಪೆ ಪೌಡರ್
2 ಚಮಚ ಆಲೀವ್ ಎಣ್ಣೆಯನ್ನು ವಿಟಮಿನ್ ಇ ಮಾತ್ರೆಯ ಜೆಲ್ ಬಳಸಿಕೊಂಡು ಮಿಶ್ರ ಮಾಡಿಕೊಳ್ಳಿ ಇದಕ್ಕೆ ಕಿತ್ತಳೆ ಸಿಪ್ಪೆ ಹುಡಿಯನ್ನು ಸೇರಿಸಿ. ಇದನ್ನು ನಿಮ್ಮ ಕಲೆ ಮತ್ತು ಗುರುತು ಇರುವ ಭಾಗಕ್ಕೆ ಹಚ್ಚಿಕೊಳ್ಳಿ.
10 ನಿಮಿಷ ಇದನ್ನು ಮಸಾಜ್ ಮಾಡಿ 30 ನಿಮಿಷ ಹಾಗೆಯೇ ಬಿಡಿ.
3-4 ವಾರಗಳ ಕಾಲ ನಿರಂತರವಾಗಿ ಇದನ್ನು ಬಳಸಿ ಉತ್ತಮ ಫಲ ಪಡೆಯಿರಿ.

ಆಲೀವ್ ಆಯಿಲ್, ಕೊಕೊ ಬಟರ್ ಮತ್ತು ಆರ್ಗನ್ ಆಯಿಲ್
2 ಚಮಚಗಳಷ್ಟು ಆಲೀವ್ ಎಣ್ಣೆಯನ್ನು 1 ಚಮಚ ಆರ್ಗನ್ ಆಯಿಲ್ ಮತ್ತು 1 ಚಮಚ ಕೊಕೊ ಬಟರ್‌ನೊಂದಿಗೆ ಮಿಶ್ರ ಮಾಡಿ. ಇದನ್ನು ಪರಿಣಾಮವಿರುವ ಭಾಗಕ್ಕೆ ಹಚ್ಚಿ ಮತ್ತು ಮಸಾಜ್ ಮಾಡಿಕೊಳ್ಳಿ. 30 ನಿಮಿಷ ಹಾಗೆಯೇ ಬಿಡಿ.
ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ
3-4 ವಾರ ನಿಯಮಿತವಾಗಿ ಇದನ್ನು ಬಳಸಿ.

ಆಲೀವ್ ಆಯಿಲ್ ಆಪಲ್ ಸೀಡರ್ ವಿನೇಗರ್
2 ಚಮಚ ಆಲೀವ್ ಆಯಿಲ್ ಅನ್ನು 1 ಚಮಚ ಆಪಲ್ ಸೀಡರ್ ವಿನೇಗರ್‌ನೊಂದಿಗೆ ಮಿಶ್ರ ಮಾಡಿ
ನಿಮ್ಮ ತ್ವಚೆಯ ಹಾನಿಗೊಳಗಾದ ಭಾಗದ ಮೇಲೆ ಇದನ್ನು ಹಚ್ಚಿ
30 ನಿಮಿಷ ಹಾಗೆಯೇ ಬಿಡುವ ಮುಂಚೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ
2-3 ವಾರಗಳ ಕಾಲ ನಿಯಮಿತವಾಗಿ ಇದನ್ನು ಬಳಸಿ

ಆಲೀವ್ ಆಯಿಲ್ ಮತ್ತು ಬಾದಾಮಿ ಹುಡಿ
1 ಚಮಚ ಬಾದಾಮಿ ಹುಡಿಯನ್ನು 2 ಚಮಚಗಳಷ್ಟು ಆಲೀವ್ ಎಣ್ಣೆಯೊಂದಿಗೆ ಮಿಶ್ರ ಮಾಡಿ
ಇದನ್ನು ಕಲೆ ಇರುವ ಭಾಗಕ್ಕೆ ಹಚ್ಚಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ
ನಿತ್ಯವೂ ಈ ಕ್ರಿಯೆಯನ್ನು ಮಾಡಿ ಧನಾತ್ಮಕ ಪರಿಣಾಮವನ್ನು ಪಡೆದುಕೊಳ್ಳಿ.

ಆಲೀವ್ ಆಯಿಲ್ ಮತ್ತು ಕಾಫಿ ಹುಡಿ
2 ಚಮಚ ಆಲೀವ್ ಎಣ್ಣೆಯನ್ನು 1 ಚಮಚ ಕಾಫಿ ಹುಡಿಯೊಂದಿಗೆ ಮಿಶ್ರ ಮಾಡಿ'
ಇದನ್ನು ಹೊಟ್ಟೆಯ ಭಾಗಕ್ಕೆ ಹಚ್ಚಿ ಮತ್ತು 30-35 ನಿಮಿಷ ಹಾಗೆಯೇ ಬಿಡಿ.
ಈ ಗುರುತುಗಳನ್ನು ಹೋಗಲಾಡಿಸಲು ನಿಯಮಿತವಾಗಿ ಇದನ್ನು ಮಾಡಿ ನೋಡಿ.

ಆಲೀವ್ ಆಯಿಲ್ ಮತ್ತು ಬೇಕಿಂಗ್ ಸೋಡಾ
2 ಚಮಚ ಆಲೀವ್ ಆಯಿಲ್ ಅನ್ನು 1/2 ಚಮಚ ಬೇಕಿಂಗ್ ಸೋಡಾದೊಂದಿಗೆ ಮಿಶ್ರ ಮಾಡಿ
ಕಲೆ ಇರುವ ಭಾಗಕ್ಕೆ ಇದನ್ನು ಹಚ್ಚಿ
10 ನಿಮಿಷ ಮಸಾಜ್ ಮಾಡಿ ಹಾಗೆಯೇ ಬಿಡಿ ನಂತರ 30 ನಿಮಿಷಗಳು ಕಳೆದ ಬಳಿಕ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ

ಆಲೀವ್ ಆಯಿಲ್ ಮತ್ತು ಅರಿಶಿನ ಹುಡಿ
2 ಚಮಚ ಆಲೀವ್ ಎಣ್ಣೆಯನ್ನು 1/2 ಚಮಚ ಅರಶಿನ ಹುಡಿಯೊಂದಿಗೆ ಬೆರೆಸಿಕೊಳ್ಳಿ
ಇದನ್ನು ಕಲೆ ಮತ್ತು ಪರಿಣಾಮವಿರುವ ಭಾಗಕ್ಕೆ ಹಚ್ಚಿ ಮತ್ತು 10 ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಿ.
ದಿನಕ್ಕೆ 3-4 ಬಾರಿ ಈ ಪ್ರಕ್ರಿಯೆಯನ್ನು ಅನುಸರಿಸಿ.

ಆಲೀವ್ ಆಯಿಲ್ ಮತ್ತು ಅಲೊವೇರಾ ಜೆಲ್
2 ಚಮಚಗಳಷ್ಟು ಆಲೀವ್ ಎಣ್ಣೆಯನ್ನು 2 ಚಮಚ ಆಲೊವೇರಾ ಜೆಲ್‌ನೊಂದಿಗೆ ಮಿಶ್ರ ಮಾಡಿ.
ಇದನ್ನು ಕಲೆ ಇರುವ ಭಾಗಕ್ಕೆ ಹಚ್ಚಿ ಮತ್ತು 5 ನಿಮಿಷ ಮಸಾಜ್ ಮಾಡಿಕೊಳ್ಳಿ
30 ನಿಮಿಷ ಇದನ್ನು ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ.

ಗೋಧಿ ಎಣ್ಣೆ
ಗೋಧಿ ಎಣ್ಣೆಯನ್ನು ರೋಸ್ ಆಯಿಲ್ ಜೊತೆ ಮಿಕ್ಸ್ ಮಾಡಿ ಅದನ್ನು ಸ್ಟ್ರೆಚ್ ಮಾರ್ಕ್ಸ್ ಮೇಲೆ ಹಚ್ಚಿ ಮಸಾಜ್. ಈ ರೀತಿ ವಾರದಲ್ಲಿ 3 ಬಾರಿ ಮಾಡಿ. ಸ್ಟ್ರೆಚ್ ಮಾರ್ಕ್ಸ್ ಬೀಳುತ್ತಿರುವಾಗಲೇ ಈ ಎಣ್ಣೆ ಬಳಸಿದರೆ ಮಾತ್ರ ನಿಮಗೆ ಉತ್ತಮ ಫಲಿತಾಂಶ ದೊರೆಯುವುದು.

ಲ್ಯಾವೆಂಡರ್ ಎಣ್ಣೆ
5 ಹನಿ ಲ್ಯಾವೆಂಡರ್ ಎಣ್ಣೆಯನ್ನು 2 ಹನಿ ಆಲೀವ್ ಎಣ್ಣೆ ಜೊತೆ ಮಿಕ್ಸ್ ಮಾಡಿ ಸ್ಟ್ರೆಚ್ ಮಾರ್ಕ್ಸ್ ಬಿದ್ದ ಕಡೆ ಹಚ್ಚುವುದರಿಂದ ಸ್ಟ್ರೆಚ್ ಮಾರ್ಕ್ಸ್ ನ ಕಲೆಯನ್ನು ಕಡಿಮೆ ಮಾಡಬಹುದು.

ರೋಸ್ ಮೆರಿ ಮತ್ತು ಬಾದಾಮಿ ಎಣ್ಣೆ
ಈ ಎರಡು ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಸ್ಟ್ರೆಚ್ ಮಾರ್ಕ್ಸ್ ನ ಮೇಲೆ ಮಸಾಜ್ ಮಾಡಿ 20 ನಿಮಿಷ ಬಿಡಿ. ಈ ವಿಧಾನವನ್ನು ಪ್ರತೀದಿನ ಅನುಸರಿಸಿದರೆ ಸ್ಟ್ರೆಚ್ ಮಾರ್ಕ್ಸ್ ಎದ್ದು ಕಾಣುವುದಿಲ್ಲ.



Click it and Unblock the Notifications