For Quick Alerts
ALLOW NOTIFICATIONS  
For Daily Alerts

  ಮೊಡವೆಯ ಕಾಟ ನಿಯಂತ್ರಿಸುವ ಕೆಮಿಕಲ್‌ ಫ್ರೀ ಫೇಶಿಯಲ್

  |

  ಹದಿಹರೆಯದವರ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ವಯಸ್ಸಿನ ಪ್ರಭಾವದಿಂದ ಎನ್ನಬಹುದು. ಕೆಲವರಲ್ಲಿ ಹದಿಹರೆಯ ದಾಟಿದ ಬಳಿಕವೂ ಮೊಡವೆಗಳು ಕಾಣಿಸಿಕೊಳ್ಳುತ್ತಾ ಇರುತ್ತದೆ. ಇಂತಹವರ ತ್ವಚೆಯು ತುಂಬಾ ಸೂಕ್ಷ್ಮವಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು.

  ಮೊಡವೆಗಳು ಇರುವಾಗ ಯಾವುದೇ ಬ್ಯೂಟಿ ಸಲೂನಿಗೆ ಹೋದರೂ ಫೇಶಿಯಲ್ ಮಾಡಿಕೊಳ್ಳಿ, ಮುಖದ ಮೇಲಿನ ಮೊಡವೆಗಳು ಹೋಗುತ್ತದೆ ಎಂದು ಹೇಳುತ್ತಾರೆ. ಪ್ರತಿಯೊಬ್ಬರ ಚರ್ಮವು ಒಂದೇ ರೀತಿಯಾಗಿ ಇರದೆ ಇರುವ ಕಾರಣದಿಂದ ಹಲವಾರು ರೀತಿಯ ಫೇಶಿಯಲ್‌ಗಳು ಮಾರುಕಟ್ಟೆಗೆ ಬಂದಿದೆ. 

  Facial At Home

  ಆದರೆ ನಮ್ಮ ಚರ್ಮ ಯಾವ ವರ್ಗಕ್ಕೆ ಸೇರಿದ್ದು ಮತ್ತು ಇದಕ್ಕೆ ಯಾವ ಫೇಶಿಯಲ್ ಅಗತ್ಯವೆಂದು ನಮಗೆ ತಿಳಿದಿದ್ದರೆ ಒಳ್ಳೆಯದು. ಒಂದು ವೇಳೆ ನಿಮ್ಮ ಚರ್ಮ ಯಾವ ವರ್ಗಕ್ಕೆ ಸೇರಿದ್ದು ಎಂದು ತಿಳಿಯದೇ ಇದ್ದರೆ ತಜ್ಞರನ್ನು ಭೇಟಿಯಾಗಿ ಅವರಿಂದ ಮಾಹಿತಿ ಪಡೆದು ಯಾವ ರೀತಿಯ ಫೇಶಿಯಲ್ ಬಳಸಬಹುದು ಎಂದು ತಿಳಿಯಬಹುದು. 

  ಆದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಫೇಶಿಯಲ್ ಗಳು ಮೊಡವೆಗಳನ್ನು ನಿವಾರಣೆ ಮಾಡುವಲ್ಲಿ ಶೇಕಡಾ ನೂರರಷ್ಟು ಪರಿಣಾಮಕಾರಿಯಾಗಿ ಇರುವುದಿಲ್ಲ. ನಿಮಗೆ ಬೇಕಾದಂತೆ ಮನೆಯಲ್ಲೇ ಕೆಲವೊಂದು ಫೇಶಿಯಲ್ ನ್ನು ತಯಾರಿಸಿಕೊಂಡು ಬಳಸಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲ. ಮುಖದ ಮೇಲಿನ ಮೊಡವೆಗಳಿಗೆ ಯಾವ ರೀತಿಯ ಫೇಶಿಯಲ್ ಬಳಸಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ಈ ಲೇಖನ ಮೂಲಕ ತಿಳಿಸಿಕೊಡಲಿದೆ.

  * ಫೇಶಿಯಲ್ ಹಾಕಿಕೊಳ್ಳುವ ಮುನ್ನ ಮುಖದ ಮೇಲಿನ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ ಹೋಗಲಾಡಿಸಬೇಕು. ಇವುಗಳೇ ಮುಖದಲ್ಲಿ ಮೊಡವೆ ಮೂಡಲು ಕಾರಣವಾಗಿರುತ್ತವೆ. 

  home remedies for skincare

  * ಇದಕ್ಕೆ ಬಿಸಿ ನೀರನ್ನು ಕಾಯಿಸಿ ಅದರಿಂದ ಮುಖಕ್ಕೆ ಹಬೆಯನ್ನು ತೆಗೆದುಕೊಳ್ಳಬೇಕು. 5-7 ನಿಮಿಷ ಹಬೆ ತೆಗೆದುಕೊಂಡ ನಂತರ ಚರ್ಮದ ರಂಧ್ರಗಳು ತೆರೆದುಕೊಂಡಿರುತ್ತವೆ. ನಂತರ ಬೆರಳಿನ ಸಹಾಯದಿಂದ ಬ್ಲಾಕ್ ಹೆಡ್ ತೆಗೆಯಬಹುದು. 

  * ಇನ್ನೊಂದು ವಿಧಾನವೆಂದರೆ ಬರೆಯ ಹಬೆಗಿಂತಲೂ ಕುದಿಯುತ್ತಿರುವ ನೀರಿನಲ್ಲಿ ಲ್ಯಾವೆಂಡರ್ ಹೂವು, ಲಿಂಬೆಯ ಸಿಪ್ಪೆ ಅಥವಾ ಪುದಿನಾ ಎಲೆಗಳನ್ನು ಸೇರಿಸಿ ಈಗ ಬರುವ ಹಬೆಯಲ್ಲಿ ಮುಖವನ್ನು ಒಡ್ಡುವುದರಿಂದ ಬ್ಲಾಕ್ ಹೆಡ್ ಗಳು ಶೀಘ್ರವಾಗಿ ಹೊರಬರುತ್ತವೆ. 

  facial

  *ಎರಡು ಚಮಚ ಓಟ್ ಮೀಲ್, ಒಂದು ಚಮಚ ಜೇನು ತುಪ್ಪ ಮತ್ತು ಒಂದು ಚಮಚ ರೋಸ್ ವಾಟರ್ ಮಿಶ್ರಣ ಮಾಡಿಕೊಂಡು ಅದನ್ನು ನಿಮ್ಮ ಮುಖದ ಮೇಲೆ ಚೆನ್ನಾಗಿ ಹಚ್ಚಿಕೊಂಡು, ಸುಮಾರು 15 ನಿಮಿಷಗಳ ಕಾಲ ಒಣಗಲು ಬಿಡಿ, ಬಳಿಕ ಮುಖವನ್ನು ತಣ್ಣಿರಿನಿಂದ ತೊಳೆದು ನಯವಾದ ಟವೆಲ್ ನಿಂದ ಮುಖವನ್ನು ಒರೆಸಿಕೊಳ್ಳಿ.

  ಈ ಮ್ಯಾಜಿಕ್ ಫೇಶಿಯಲ್ ಬಗ್ಗೆ ನಿಮಗೆ ಗೊತ್ತೇ?

  *ಸಣ್ಣ ಪ್ರಮಾಣದ ಮೊಡವೆಗಳ ಸಮಸ್ಯೆಗೆ ಮೊಟ್ಟೆಯ ಬಿಳಿ ಲೋಳೆಯು ತುಂಬಾ ಪರಿಣಾಮಕಾರಿಯಾಗಿದೆ. ಸಲೂನಿಗೆ ಹೋಗಬಾರದು ಎಂದು ನೀವು ನಿರ್ಧರಿಸಿದ್ದರೆ ಎರಡು ಮೊಟ್ಟೆಯ ಬಿಳಿಯ ಲೋಳೆ ತೆಗೆದುಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಮುಖಕ್ಕೆ ಇದನ್ನು ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. 

  facial

  *ಅಡುಗೆ ಸೋಡಾ ಬಳಸಿ ಫೇಶಿಯಲ್ ತಯಾರಿಸಬಹುದು. ಮೊಡವೆಗಳ ಒಳಗೆ ಇರುವಂತಹ ನೀರಿನಾಂಶ ತೆಗೆದು ಹಾಕುವ ಅಡುಗೆ ಸೋಡಾ ಮೊಡವೆಗಳು ಒಣಗುವಂತೆ ಮಾಡುತ್ತದೆ. ಮೂರರಿಂದ ನಾಲ್ಕು ಚಮಚ ಅಡುಗೆ ಸೋಡಾಕ್ಕೆ ನೀರು ಹಾಕಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.

  facial

  *ಮೊಡವೆಗಳಿಂದ ಕಂಗೆಟ್ಟು ಹೋಗಿದ್ದರೆ ಮತ್ತು ಅದನ್ನು ಸಂಪೂರ್ಣವಗಿ ಕಿತ್ತು ಹಾಕಬೇಕೆಂದು ನೀವು ಬಯಸುವುದೇ ಆದರೆ ಓಟ್ ಮೀಲ್ ಹುಡಿಯಿಂದ ಮಾಡುವಂತಹ ಫೇಶಿಯಲ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಇದಕ್ಕೆ ಈರುಳ್ಳಿ ರಸ ಮತ್ತು ಜೇನುತುಪ್ಪ ಸೇರಿಸಿಕೊಳ್ಳಬೇಕು. ಒಂದು ಈರುಳ್ಳಿಯ ರಸ ತೆಗೆಯಿರಿ ಮತ್ತು ಇದನ್ನು ಓಟ್ ಮೀಲ್ ಹುಡಿಗೆ ಹಾಕಿ. ಅದಕ್ಕೆ ಜೇನುತುಪ್ಪ ಕೂಡ ಬೆರೆಸಿ. ಮೊಡವೆಗಳ ನಿವಾರಣೆಗೆ ಈ ನೈಸರ್ಗಿಕ ಫೇಶಿಯಲ್ ನ್ನು ಬಳಸಿಕೊಳ್ಳಿ.

  English summary

  How to Do An Acne Facial At Home

  Facials for acne are not so easy to come by. You may have heard about many types of facials like pearl facial, golf facial, etc but none of these are a direct solution for your acne. This particular problem exists because acne is mostly a skin problem in adolescence whereas the ideal age for having any type facial done for the first time is definitely post 25 years.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more