For Quick Alerts
ALLOW NOTIFICATIONS  
For Daily Alerts

  ಜೇನುತುಪ್ಪ ಮತ್ತು ನಿಂಬೆ ಮಿಶ್ರಿತ ಫೇಸ್ ಫ್ಯಾಕ್ : ಬೇಕಾ? ಬೇಡವಾ?

  By Divya Pandith
  |

  ಅಸಂಖ್ಯಾತ ಸೌಂದರ್ಯವರ್ಧಕ ಉತ್ಪನ್ನಗಳು ಮತ್ತು ಚಿಕಿತ್ಸೆಗಳಿಂದ ನಮ್ಮ ಸೌಂದರ್ಯವನ್ನು ಇನ್ನಷ್ಟು ಸುಂದರವಾಗಿ ಕಾಣಬಹುದು. ಆದರೆ ನಾವು ಬಳಸುವ ಸೌಂದರ್ಯ ವರ್ಧಕ ವಿಧಾನಗಳು ಯಾವ ಬಗೆಯದ್ದು? ಅದನ್ನು ಬಳಸುವುದರಿಂದ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆಯಬಹುದು ಎನ್ನುವುದನ್ನು ನಾವು ಅರಿತಿರಬೇಕಾಗುತ್ತದೆ. ಕೆಲವರು ಇತರರನ್ನು ನೋಡಿ ಅವರಂತೆಯೇ ಅನುಕರಣೆ ಮಾಡಲು ಮುಂದಾಗುತ್ತಾರೆ. ಆದರೆ ಅದು ತಮಗೆ ಹೊಂದುತ್ತದೆಯೇ? ಇಲ್ಲವೇ ಎನ್ನುವುದರ ಕುರಿತು ಚಿಂತಿಸುವುದೇ ಇಲ್ಲ.

  ತ್ವಚೆಯ ಆರೈಕೆ ಮಾಡುವಾಗ ಅಥವಾ ಯಾವುದೇ ಉತ್ಪನ್ನಗಳನ್ನು ಬಳಸುವಾಗ ಅದರ ಪರಿಣಾಮ ನಮ್ಮ ತ್ವಚೆಗೆ ಒಗ್ಗುತ್ತದೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಬೇಕು. ಇಲ್ಲವಾದರೆ ಅಲರ್ಜಿ ಅಥವಾ ಇನ್ಯಾವುದಾದರೂ ಕೆಟ್ಟ ಪರಿಣಾಮ ಉಂಟಾಗಬಹುದು. ತ್ವಚೆಯ ರಕ್ಷಿಸಿ, ಸೌಂದರ್ಯವನ್ನು ಕಾಪಾಡಬಹುದಾದಂತಹ ನೈಸರ್ಗಿಕ ಉತ್ಪನ್ನಗಳು ಹಲವಾರಿವೆ. ಅದರಲ್ಲಿ ನಿಂಬೆ ಮತ್ತು ಜೇನುತುಪ್ಪವೂ ಸೇರಿಕೊಳ್ಳುತ್ತದೆ.

  beauty tips

  ಹೌದು, ಎಲ್ಲಾ ಬಗೆಯ ತ್ವಚೆಗೆಯವರಿಗೂ ಒಗ್ಗುವಂತಹ ಉತ್ತಮ ನೈಸರ್ಗಿಕ ಉತ್ಪನ್ನ ನಿಂಬೆ ಮತ್ತು ಜೇನುತುಪ್ಪ. ಇವೆರಡರ ಮಿಶ್ರಣವನ್ನು ಮುಖವಾಡವನ್ನಾಗಿ ಬಳಸಿಕೊಂಡು ಉತ್ತಮ ಸೌಂದರ್ಯವನ್ನು ಪಡೆದುಕೊಳ್ಳಬಹುದು. ಈ ಉತ್ಪನ್ನಗಳ ಬಳಕೆಯನ್ನು ಶತಮಾನಗಳಷ್ಟು ಹಿಂದಿನಿಂದಲೂ ಬಳಸುತ್ತಾ ಬಂದಿದ್ದಾರೆ. ಇವೆರಡರ ಸಂಯೋಜನೆಯೂ ಉತ್ತಮ ಫಲಿತಾಂಶವನ್ನು ನೀಡುವುದು.

  ನಿಂಬೆ ರಸ ಮತ್ತು ಜೇನುತುಪ್ಪವು ಚರ್ಮದ ಪ್ರಚೋದನಾಕಾರಿ ಗುಣಲಕ್ಷಣಗಳೊಂದಿಗೆ ಭರಿತವಾಗಿದೆ. ಉದಾ: ನಿಂಬೆ ರಸವು ತ್ವಚೆಯನ್ನು ಸ್ವಚ್ಛಗೊಳಿಸುವುದು ಮತ್ತು ಬಿಳಿ ಬಣ್ಣದಿಂದ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಜೇನುತುಪ್ಪವು ಚರ್ಮದಲ್ಲಿರುವ ಆಧ್ರ್ರಕ ಗುಣವು ಹಾಳಾಗದಂತೆ ಕಾಪಾಡುತ್ತದೆ. ತ್ವಚೆಯು ಸದಾ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

  beauty tips

  ಫೇಸ್ ಪ್ಯಾಕ್‍ನಿಂದ ಹೆಚ್ಚು ಪಾಭ ಪಡೆಯಬೇಕು ಹಾಗೂ ಚರ್ಮದ ರಕ್ಷಣೆ ಮತ್ತು ಆರೈಕೆಯೂ ಸಮತೋಲನದಲ್ಲಿ ನಿರ್ವಹಣೆ ಮಾಡಬೇಕೆಂದಾದರೆ ಉತ್ತಮ ಆಯ್ಕೆ ನಿಂಬೆ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್. ಇವೆರಡಿಂದ ಹೇಗೆ ಸುಲಭವಾಗಿ ಫೇಸ್ ಪ್ಯಾಕ್ ಮಾಡಬಹುದು? ಜೊತೆಗೆ ಪರಿಣಾಮ ಹೇಗಿರುತ್ತದೆ ಎನ್ನುವುದರ ಸೂಕ್ತ ವಿವರಣೆಯನ್ನು ಇಂದು ಬೋಲ್ಡ್‍ಸ್ಕೈ ನಿಮಗೆ ನೀಡುತ್ತಿದೆ. ಹಾಗಾದರೆ ಇನ್ನೇಕೆ ತಡ ಮುಂದಿನ ವಿವರಣೆಯನ್ನು ಓದಿ... ಮನೆಯಲ್ಲಿ ನೀವು ಫೇಸ್ ಪ್ಯಾಕ್ ಮಾಡಿ. ಉತ್ತಮ ಫಲಿತಾಂಶವನ್ನು ಪಡೆಯಿರಿ.

  ನಿಂಬೆ ಮತ್ತು ಹನಿ ಫೇಸ್ ಪ್ಯಾಕ್ ಬಳಸುವುದರಿಂದ ಉಂಟಾಗುವ ಪ್ರಯೋಜನಗಳು

  ಇದು ನಿಮ್ಮ ತ್ವಚೆಯು ಮಾಲಿನ್ಯವಾಗಿರುವುದನ್ನು ತಡೆದು ಇನ್ನಷ್ಟು ಬಿಳುಪಿನಿಂದ ಕೂಡಿರುವಂತೆ ಮಾಡುತ್ತದೆ.

  ಮಂಕಾದ ತ್ವಚೆಗೆ ಜೀವ ತುಂಬಿ, ಸದಾ ಕಾಲ ಆಧ್ರ್ರಕದಿಂದ ಕೂಡಿರುವಂತೆ ಮಾಡುತ್ತದೆ

  ಕೊಳೆಗಳನ್ನು ನಿವಾರಿಸಿ ಚರ್ಮವು ಮೃದು ಹಾಗೂ ಕೋಮಲವಾಗಿರುವಂತೆ ಮಾಡುತ್ತದೆ

  ಚರ್ಮದ ಮೇಲಿರುವ ಕಪ್ಪು ಕಲೆಗಳನ್ನು ತಿಳಿಗೊಳಿಸಿ, ಸ್ವಚ್ಛವಾಗಿ ಕಾಣುವಂತೆ ಮಾಡುತ್ತದೆ

  beauty tips

  ಫೇಸ್ ಪ್ಯಾಕ್‍ಗೆ ಏನೆಲ್ಲಾ ಬೇಕು?

  ಒಂದು ಟೇಬಲ್ ಚಮಚ ಜೇನುತುಪ್ಪ

  1/2 ಟೇಬಲ್ ಚಮಚ ನಿಂಬೆ ರಸ

  (ಪ್ರಮಾಣವನ್ನು ತೆಗೆದುಕೊಳ್ಳುವಾಗ ಹೆಬ್ಬೆರಳಿನ ನಿಯಮವಾದ 2:1 ರ ಅನುಪಾತದಲ್ಲಿ ತೆಗೆದುಕೊಳ್ಳಬೇಕು)

  ಬಳಸುವುದು ಹೇಗೆ?

  ಎರಡು ಘಟಕಾಂಶವನ್ನು ಒಂದು ಬೌಲ್‍ನಲ್ಲಿ ಸೇರಿಸಿ, ಮಿಶ್ರಗೊಳಿಸಿ.

  ನಂತರ ಮುಖದ ಭಾಗಕ್ಕೆ ತೆಳುವಾಗಿ ಅನ್ವಯಿಸಿ.

  ಬಳಿಕ 5 ನಿಮಿಷ ಆರಲು ಬಿಡಿ.

  ನಂತರ ಸಾಮಾನ್ಯ ನೀರಿನಿಂದ ಮುಖವನ್ನು ತೊಳೆಯಿರಿ.

  beauty tips

  ಫೇಸ್ ಪ್ಯಾಕ್ ಅನ್ವಯಿಸಿದ ಸಮಯದಲ್ಲಿ ಏನು ಮಾಡಬೇಕು?

  ಈ ಮಿಶ್ರಣದ ಫೇಸ್ ಪ್ಯಾಕ್ ಧರಿಸಿರುವಾಗ ಸೂರ್ಯನ ಬೆಳಕಿಗೆ ಹೋಗಬಾರದು. ಹಾಗಾಗಿಯೇ ಈ ಫೇಸ್ ಪ್ಯಾಕ್‍ಅನ್ನು ರಾತ್ರಿ ವೇಳೆ ಅನ್ವಯಿಸಿಕೊಳ್ಳುವುದು ಉತ್ತಮ. ದಿನದ ವೇಳೆಯಲ್ಲಿ ಅನ್ವಯಿಸಿಕೊಂಡರೆ ಸುಮಾರು 4-5 ಗಂಟೆಗಳ ಬಳಿಕ ಸೂರ್ಯನ ಕಿರಣಕ್ಕೆ ಹೋಗಬೇಕು.

  ನೀವು ಶುಷ್ಕ ತ್ವಚೆಯವರಾಗಿದ್ದರೆ, ಫೇಸ್ ಪ್ಯಾಕ್ ಬಳಸಿದ ನಂತರ ತ್ವಚೆಯ ರಕ್ಷಣೆಗಾಗಿ ಅಲೋವೆರಾ ಜೆಲ್‍ಅನ್ನು ಅನ್ವಯಿಸಿ. ಫೇಸ್ ಪ್ಯಾಕ್ ಬಳಕೆ ಮಾಡಿದ ಅರ್ಧ ಗಂಟೆಯ ನಂತರ ಅಲೋವೆರಾ ಅನ್ವಯಿಸಿಕೊಳ್ಳಬೇಕು.

  ನಿಮ್ಮದು ಸೂಕ್ಷ್ಮ ತ್ವಚೆಯಾಗಿದ್ದರೆ ಈ ಮಿಶ್ರಣದ ಫೇಸ್ ಪ್ಯಾಕ್ ಕಿರಿಕಿರಿ ಉಂಟುಮಾಡಬಹುದು. ತ್ವಚೆಯು ಕೆಂಪು ಬಣ್ಣಕ್ಕೆ ತಿರುಗುವುದು. ಹಾಗಾಗಿ ಸೂಕ್ಷ್ಮ ತ್ವಚೆಯವರು ಇದನ್ನು ಬಳಸದೆ ಇರುವುದು ಸೂಕ್ತ.

  English summary

  Honey Lemon Face Pack: Dos And Don'ts

  It is hard to keep up with the ever-changing trends in skin care routine. However, there are few trends that have managed to stand the test of time. The one we're referring to is a lemon and honey face pack. This specific face pack is a tried-and-tested method that has been used by women since centuries. That is because, the combination of these two kitchen ingredients is known to transform the state of your skin.
  Story first published: Friday, November 10, 2017, 17:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more