ಮಳೆಗಾಲದಲ್ಲಿ ತ್ವಚೆಯ ಕಾಂತಿಗೆ ನೈಸರ್ಗಿಕ ಫೇಸ್ ಮಾಸ್ಕ್

By: Hemanth
Subscribe to Boldsky

ಬಿರು ಬೇಸಿಗೆ ಕಳೆದು ಮಳೆಗಾಲ ಕಾಲಿಡುತ್ತಿದ್ದಂತೆ ನಮ್ಮ ಜೀವನದಲ್ಲೂ ಹಲವಾರು ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ಅದರಲ್ಲೂ ದೇಹದ ಆರೈಕೆ ಹಾಗೂ ಸೌಂದರ್ಯ ಕಾಪಾಡಿಕೊಳ್ಳಲು ಮಳೆಗಾಲದಲ್ಲಿ ಕಷ್ಟಪಡಬೇಕಾಗುತ್ತದೆ. ಯಾಕೆಂದರೆ ಮಳೆಗಾಲದಲ್ಲಿ ತಾಪಮಾನ ಕಡಿಮೆಯಿರುತ್ತದೆ ಮತ್ತು ಇದರಿಂದ ಹಲವಾರು ಬದಲಾವಣೆಗಳು ಆಗುತ್ತದೆ.

ದೇಹದ ಆರೋಗ್ಯವು ಆಗಾಗ ಕೈಕೊಡುವುದು ಮಳೆಗಾಲದಲ್ಲಿ ಸಾಮಾನ್ಯ. ಆರೋಗ್ಯದೊಂದಿಗೆ ಮಳೆಗಾಲದಲ್ಲಿ ತ್ವಚೆಯ ಆರೈಕೆ ಮಾಡಲು ಹಲವಾರು ಫೇಸ್ ಮಾಸ್ಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಮನೆಯಲ್ಲೇ ತಯಾರಿಸಿದ ಮಾಸ್ಕ್ ನಿಂದ ತ್ವಚೆಯ ಆರೈಕೆ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಯಾವುದೇ ಅಡ್ಡಪರಿಣಾಮ ಉಂಟಾಗದೆ ತ್ವಚೆಯು ಕಾಂತಿಯುತವಾಗುವುದು....  

ಮುಲ್ತಾನಿ ಮಿಟ್ಟಿ ಪ್ಯಾಕ್

ಮುಲ್ತಾನಿ ಮಿಟ್ಟಿ ಪ್ಯಾಕ್

ಮಳೆಗಾಲದಲ್ಲಿ ತ್ವಚೆಗೆ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಬಳಸುವುದರಿಂದ ಚರ್ಮದಲ್ಲಿರುವ ಧೂಳು ಹಾಗೂ ಕೊಳೆ ದೂರವಾಗಿ ಚರ್ಮವನ್ನು ತೇವಾಂಶದಿಂದ ಇಡುವುದು. 5-6 ಚಮಚ ಮುಲ್ತಾನಿ ಮಿಟ್ಟಿಗೆ ಸ್ವಲ್ಪ ರೋಸ್ ವಾಟರ್ ಹಾಕಿಕೊಳ್ಳಿ. ಈ ಮಾಸ್ಕ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಒಣಗಲು ಬಿಡಿ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಒಣ ಚರ್ಮದವರು ಈ ಮಾಸ್ಕ್ ನಿಂದ ದೂರ ಉಳಿಯಬೇಕು.

ಓಟ್ ಮೀಲ್ ಮತ್ತು ಮೊಟ್ಟೆಯ ಮಾಸ್ಕ್

ಓಟ್ ಮೀಲ್ ಮತ್ತು ಮೊಟ್ಟೆಯ ಮಾಸ್ಕ್

ಓಟ್ ಮೀಲ್ ಮತ್ತು ಮೊಟ್ಟೆಯ ಮಾಸ್ಕ್ ಚರ್ಮದ ಸತ್ತಕೋಶಗಳನ್ನು ತೆಗೆದುಹಾಕಿ ಚರ್ಮವನ್ನು ತೇವಾಂಶದಿಂದ ಇಡುತ್ತದೆ. ಮಳೆಗಾಲದಲ್ಲಿ ಬಳಸಬಹುದಾದ ಅತೀ ಉಪಯುಕ್ತ ಫೇಸ್ ಮಾಸ್ಕ್ ಇದಾಗಿದೆ. ತ್ವಚೆಯು ಅತಿಯಾಗಿ ಒಣಗುವುದನ್ನು ಇದು ತಡೆಯುವುದು. 2-3 ಮೂರು ಚಮಚ ಓಟ್ಸ್ ಗೆ ಒಂದು ಮೊಟ್ಟೆಯ ಲೋಳೆ ಸೇರಿಸಿಕೊಳ್ಳಿ. ಇದನ್ನು ಸರಿಯಾಗಿ ರುಬ್ಬಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಮಾಸ್ಕ್ ನ್ನು ಮುಖದಲ್ಲೇ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಪುದೀನಾ ಮತ್ತು ಬಾಳೆಹಣ್ಣಿನ ಮಾಸ್ಕ್

ಪುದೀನಾ ಮತ್ತು ಬಾಳೆಹಣ್ಣಿನ ಮಾಸ್ಕ್

ತಾಜಾ ಪುದೀನಾ ಎಲೆಗಳು, ಅರ್ಧ ಬಾಳೆಹಣ್ಣು, ಒಂದು ಚಮಚ ಮೊಸರು ಮತ್ತು ಒಂದು ಚಮಚ ಲಿಂಬೆರಸ ಜತೆಯಾಗಿ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಪುದೀನಾ ಎಲೆಗಳು ಮತ್ತು ಬಾಳೆಹಣ್ಣನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ರುಬ್ಬಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಅದು ಒಣಗಲು ಬಿಡಿ. ಹತ್ತು ನಿಮಿಷ ಬಿಟ್ಟು ಬಿಸಿ ನೀರಿನಿಂದ ಮುಖ ತೊಳೆಯಿರಿ. ಮಳೆಗಾಲದಲ್ಲಿ ಇದು ಚರ್ಮಕ್ಕೆ ತುಂಬಾ ಪರಿಣಾಮಕಾರಿ ಫೇಸ್ ಮಾಸ್ಕ್ ಆಗಿದೆ.

ಸ್ಟ್ರಾಬೆರಿ ಮಾಸ್ಕ್

ಸ್ಟ್ರಾಬೆರಿ ಮಾಸ್ಕ್

ಸಾಮಾನ್ಯ ಅಥವಾ ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ ಸ್ಟ್ರಾಬೆರಿ ಮಾಸ್ಕ್ ಉಪಯುಕ್ತ. ಎರಡು ಸ್ಟ್ರಾಬೆರಿ ತೆಗೆದುಕೊಂಡು ಅದನ್ನು ತುಂಡು ಮಾಡಿಕೊಳ್ಳಿ. ಇದಕ್ಕೆ ಒಂದು ಚಮಚ ಬ್ರಾಂಡಿ, ಎರಡು ಚಮಚ ಬ್ರೆಡ್ ಚೂರು ಮತ್ತು ಎರಡು ಚಮಚ ರೋಸ್ ವಾಟರ್ ಹಾಕಿಕೊಳ್ಳಿ. 20 ನಿಮಿಷ ಬಿಟ್ಟು ಫೇಸ್ ವಾಶ್ ಬಳಸಿ ಮುಖ ತೊಳೆಯಿರಿ,. ಸ್ಟ್ರಾಬೆರಿ ಅಲರ್ಜಿ ಇರುವವರು ಇದರಿಂದ ದೂರವಿರಿ.

ಹಣ್ಣುಗಳ ಫೇಸ್ ಮಾಸ್ಕ್

ಹಣ್ಣುಗಳ ಫೇಸ್ ಮಾಸ್ಕ್

1-2 ಬಾಳೆಹಣ್ಣಿನ ತುಂಡು, 1-2 ಕಲ್ಲಂಗಡಿ ಹಣ್ಣು, 1-2 ತುಂಡು ಸೇಬು ಮತ್ತು ಒಂದು ಸ್ಟ್ರಾಬೆರಿ. ಎಲ್ಲವನ್ನು ಜತೆಯಾಗಿ ಹಾಕಿಕೊಂಡು ರುಬ್ಬಿ ದಪ್ಪಗಿನ ಪೇಸ್ಟ್ ಮಾಡಿ. ಈ ಪೇಸ್ಟ್ ಗೆ ಎರಡು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಮಚ ಮೊಸರು ಹಾಕಿ ಮಿಶ್ರಣ ಮಾಡಿ. ಈ ಫೇಸ್ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಮಸಾಜ್ ಮಾಡಿ ಒಣಗಲು ಬಿಡಿ. ತಣ್ಣೀರಿನಿಂದ ತೊಳೆಯಿರಿ ಮತ್ತು ಒಣಗಲು ಬಿಡಿ. ಎಲ್ಲಾ ವಿಧದ ಚರ್ಮಕ್ಕೆ ಈ ಫೇಸ್ ಮಾಸ್ಕ್ ತುಂಬಾ ಒಳ್ಳೆಯದು.

English summary

Homemade Face Masks To Be Used During The Monsoon Days

Rainy days are the most unpredictable days when the weather is gloomy and dry at the same time. Monsoon days are generally a combination of sweat, humidity, grime, dampness, and moisture in the atmosphere. And hence the need for some best Indian face masks to go with the monsoon dilemma. With the constant change in the atmosphere, your skin and hair may get affected adversely. So, it is our sincere advice for you to opt for these homemade face masks for rainy days. Take a look.
Story first published: Saturday, June 10, 2017, 8:01 [IST]
Subscribe Newsletter