For Quick Alerts
ALLOW NOTIFICATIONS  
For Daily Alerts

ಮನೆ ಔಷಧಿ: ಮುಖದ ಮೊಡವೆಯ ಸಮಸ್ಯೆಗೆ ಸರಳ ಚಿಕಿತ್ಸೆ!

By Hemanth
|

ಮುಖದ ಮೇಲೆ ಮೊಡವೆಗಳು ಮೂಡಿದರೆ ಅದಕ್ಕಿಂತ ದೊಡ್ಡ ಸಮಸ್ಯೆ ಮತ್ತೊಂದು ಬೇಕಿಲ್ಲ. ಇದು ಸೌಂದರ್ಯವನ್ನು ಕೆಡಿಸುವದರೊಂದಿಗೆ ಕಿರಿಕಿರಿ ಹಾಗೂ ನೋವುಂಟು ಮಾಡುವುದು. ಇಂತಹ ಸಮಯದಲ್ಲಿ ನಾವು ಮಾರುಕಟ್ಟೆಯಲ್ಲಿ ಸಿಗುವ ಕೆಲವೊಂದು ಕ್ರೀಮ್ ಗಳನ್ನು ಹಾಗೂ ಇಂಟರ್ನೆಟ್ ನಲ್ಲಿ ಹರಿದಾಡುವಂತಹ ಕೆಲವು ಮನೆಮದ್ದುಗಳನ್ನು ಬಳಸಿಕೊಳ್ಳುತ್ತೇವೆ. ಆದರೆ ಇಂತಹ ಮನೆಮದ್ದುಗಳಿಂದ ಸರಿಯಾದ ಫಲಿತಾಂಶ ಪಡೆಯಬೇಕಾದರೆ ತ್ವಚೆಯ ಬಗ್ಗೆ ಸರಿಯಾಗಿ ತಿಳಿದಿರಬೇಕು.


ಮುಖದ ಕಲೆ ಹೋಗಲಾಡಿಸಬೇಕೆ? ಈ ರೀತಿ ಮಾಡಿ

ನಮ್ಮ ತ್ವಚೆಯು ಯಾವ ವಿಧದ್ದು ಎಂದು ಅರ್ಥ ಮಾಡಿಕೊಂಡರೆ ಅದಕ್ಕೆ ಅನುಸಾರವಾಗಿ ಮನೆಮದ್ದನ್ನು ಬಳಸಬಹುದು. ಯಾವುದೇ ಮನೆಮದ್ದನ್ನು ಬಳಸುವ ಮೊದಲು ನಿಮ್ಮ ಚರ್ಮವು ಯಾವ ವಿಧದ್ದು ಎಂದು ತಿಳಿದರೆ ಉತ್ತಮ. ಮತ್ತೆ ಮನೆಮದ್ದು ಕೇವಲ ಒಂದು ರಾತ್ರಿಯಲ್ಲಿ ಫಲಿತಾಂಶ ನೀಡಲ್ಲ.

ಇನ್ನು ಮುಂದೆ, ಮೊಡವೆಗೆ ಸೋಲುವ ಪ್ರಶ್ನೆಯೇ ಇಲ್ಲ..!

ಕೆಲವು ದಿನಗಳವರೆಗೆ ನಿಯಮಿತವಾಗಿ ಬಳಸಿದರೆ ಖಂಡಿತವಾಗಿಯೂ ಇದು ಪರಿಣಾಮಕಾರಿಯಾಗಲಿದೆ. ಬೋಲ್ಡ್ ಸ್ಕೈ ಇಲ್ಲಿ ಹೇಳಿರುವ ಮನೆಮದ್ದುಗಳಲ್ಲಿ ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲ. ಇದನ್ನು ಸುಲಭವಾಗಿ ತಯಾರಿಸಿ ಬಳಸಿಕೊಳ್ಳಬಹುದು....

ಒಣಚರ್ಮದ ಮೊಡವೆಗೆ ಮನೆಮದ್ದು

ಒಣಚರ್ಮದ ಮೊಡವೆಗೆ ಮನೆಮದ್ದು

ಒಣ ಚರ್ಮದಲ್ಲಿ ಮೊಡವೆಗಳು ಮೂಡುತ್ತಾ ಇದ್ದರೆ ನಿಮಗೆ ನೈಸರ್ಗಿಕವಾಗಿರುವಂತಹ ಮಾಯಿಶ್ಚರೈಸರ್ ಬೇಕಾಗಿದೆ.

ಮಜ್ಜಿಗೆ

ಮನೆಯಲ್ಲಿ ತುಂಬಾ ಸುಲಭವಾಗಿ ಸಿಗುವಂತಹ ಮನೆಮದ್ದು ಎಂದರೆ ಅದು ಮಜ್ಜಿಗೆ. ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಇದು ಹಾನಿಗೊಳಗಾದ ಕೋಶಗಳನ್ನು ಸರಿಪಡಿಸುವುದು ಮತ್ತು ಹೊಸ ಕೋಶಗಳು ಬೆಳೆಯಲು ನೆರವಾಗುವುದು. ದಿನದಲ್ಲಿ ಮೂರು ಸಲ ಮಜ್ಜಿಗೆಯಿಂದ ಮುಖ ತೊಳೆದರೆ ಮೊಡವೆ ಸಮಸ್ಯೆ ನಿವಾರಣೆಯಾಗುವುದು.

ಜೇನುತುಪ್ಪ

ಜೇನುತುಪ್ಪ

ಜೇನುತುಪ್ಪ ಬಳಸುವ ವೇಳೆ ಎಚ್ಚರಿಕೆ ವಹಿಸಿಕೊಳ್ಳಬೇಕಾದ ವಿಷಯವೆಂದರೆ ಸಾವಯವವಾಗಿರುವಂತಹ ಜೇನುತುಪ್ಪವನ್ನು ಬಳಸಿಕೊಳ್ಳಬೇಕು. ಮೊಡವೆಯ ತುದಿಗೆ ಒಂದು ಹನಿಯಷ್ಟು ಜೇನುತುಪ್ಪ ಹಾಕಿಬಿಡಿ. ಮುಖದ ಹೆಚ್ಚಿನ ಭಾಗದಲ್ಲಿ ಮೊಡವೆಗಳು ಇದ್ದರೆ ಜೇನುತುಪ್ಪನ್ನು ಹಚ್ಚಿ ಮಸಾಜ್ ಮಾಡಿ.

ಎಣ್ಣೆಯಂಶವಿರುವ ತ್ವಚೆಯ ಮೊಡವೆಗೆ ಮನೆಮದ್ದು

ಎಣ್ಣೆಯಂಶವಿರುವ ತ್ವಚೆಯ ಮೊಡವೆಗೆ ಮನೆಮದ್ದು

ತ್ವಚೆಯು ಎಣ್ಣೆಯಂಶದಿಂದ ಕೂಡಿದ್ದು, ಇದರಲ್ಲಿ ಮೊಡವೆಗಳು ಮೂಡುತ್ತಾ ಇದ್ದರೆ ಚರ್ಮದಲ್ಲಿರುವ ಹೆಚ್ಚಿನ ಎಣ್ಣೆಯಂಶ ತೆಗೆಯಬೇಕು.

ಅಡುಗೆ ಸೋಡಾ

ತ್ವಚೆಯು ಎಣ್ಣೆಯಂಶದಿಂದ ಕೂಡಿದ್ದರೆ ಆಗ ನೈಸರ್ಗಿಕವಾಗಿರುವ ಮೊಡವೆಯ ಮನೆಮದ್ದನ್ನು ಬಳಸಿಕೊಳ್ಳಬೇಕು. ತ್ವಚೆಯಲ್ಲಿರುವ ಹೆಚ್ಚಿನ ಎಣ್ಣೆಯಂಶ ತೆಗೆದುಹಾಕಬೇಕು. ಅಡುಗೆ ಸೋಡಾವು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಒಂದು ಚಿಟಿಕೆ ಅಡುಗೆ ಸೋಡಾವನ್ನು ಸ್ವಲ್ಪ ನೀರಿಗೆ ಹಾಕಿ ಮತ್ತು ಅದನ್ನು ಮೊಡವೆಗೆ ಹಚ್ಚಿಕೊಳ್ಳಿ. ಕೆಲವೇ ಸಮಯದಲ್ಲಿ ಫಲಿತಾಂಶ ಕಂಡುಬರುವುದು.

ಮೊಟ್ಟೆಯ ಲೋಳೆ

ಮೊಟ್ಟೆಯ ಲೋಳೆ

ಚರ್ಮದಲ್ಲಿರುವ ಹೆಚ್ಚುವರಿ ತೈಲದ ಅಂಶವನ್ನು ತೆಗೆಯಲು ಮಾಸ್ಕ್ ಮಾಡಬೇಕಾಗುತ್ತದೆ. ತ್ವಚೆಗೆ ಸುಲಭ ಹಾಗೂ ನೈಸರ್ಗಿಕವಾದ ಮಾಸ್ಕ್ ಎಂದರೆ ಮೊಟ್ಟೆ. ಎಣ್ಣೆಯಂಶವಿರುವ ತ್ವಚೆಯಾಗಿದ್ದರೆ ಮೊಟ್ಟೆಯ ಬಿಳಿ ಭಾಗ ಮಾತ್ರ ತೆಗೆದುಕೊಳ್ಳಿ. ಇದನ್ನು ಕಲಸಬೇಡಿ. ಮೊಟ್ಟೆಯ ಬಿಳಿ ಲೋಳೆಯನ್ನು ಚಮಚದಲ್ಲಿ ಸ್ವಲ್ಪ ತಿರುಗಿಸಿ ಮೊಡವೆ ಇರುವ ಜಾಗಕ್ಕೆ ಅದನ್ನು ಹಚ್ಚಿಕೊಳ್ಳಿ. ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ.

ಸೂಕ್ಷ್ಮ ಚರ್ಮದಲ್ಲಿ ಕಾಣಿಸುವ ಮೊಡವೆಗೆ ಚಿಕಿತ್ಸೆ

ಸೂಕ್ಷ್ಮ ಚರ್ಮದಲ್ಲಿ ಕಾಣಿಸುವ ಮೊಡವೆಗೆ ಚಿಕಿತ್ಸೆ

ಚರ್ಮವು ತುಂಬಾ ಸೂಕ್ಷ್ಮವಾಗಿದ್ದರೆ ಇಂತಹ ಸಮಯದಲ್ಲಿ ಮನೆಮದ್ದನ್ನು ಆಯ್ಕೆ ಮಾಡುವಲ್ಲಿ ತುಂಬಾ ಎಚ್ಚರಿಕೆ ವಹಿಸಿಕೊಳ್ಳಬೇಕಾಗುತ್ತದೆ.ಯಾಕೆಂದರೆ ಚರ್ಮವು ತುಂಬಾ ಬೇಗ ಪ್ರತಿಕ್ರಿಯೆ ನೀಡುತ್ತದೆ. ಬೋಲ್ಡ್ ಸ್ಕೈ ಹೇಳಿರುವಂತಹ ಮನೆಮದ್ದಿನಿಂದ ಯಾವುದೇ ರೀತಿಯ ಅಡ್ಡಪರಿಣಾಮವಿಲ್ಲ.

ಗಂಧದ ಹುಡಿ

ಸೂಕ್ಷ್ಮ ಚರ್ಮವು ಅತಿಯಾದ ಉಷ್ಣಾಂಶದಿಂದಾಗಿ ಮೊಡವೆಗಳನ್ನು ಪಡೆಯುತ್ತದೆ. ಇದಕ್ಕಾಗಿ ಚರ್ಮವನ್ನು ತಂಪಾಗಿಸುವುದು ಅತೀ ಅಗತ್ಯ. ಇದಕ್ಕೆ ಗಂಧದ ಹುಡಿಯನ್ನು ನೀರಿಗೆ ಹಾಕಿ ಪೇಸ್ಟ್ ಮಾಡಿಕೊಂಡು ಹಚ್ಚಿಕೊಳ್ಳಬೇಕು. ಮೊಡವೆ ಇರುವ ಭಾಗಕ್ಕೆ ಹಚ್ಚಿಕೊಂಡು ಒಣಗಲು ಬಿಡಿ. ದಿನದಲ್ಲಿ ಮೂರು ಸಲ ಬಳಸಿಕೊಳ್ಳಿ.

ತುಂಡರಿಸಿದ ಪಪ್ಪಾಯಿ

ತುಂಡರಿಸಿದ ಪಪ್ಪಾಯಿ

ತಾಜಾ ಪಪ್ಪಾಯಿಯ ತುಂಡನ್ನು ತೆಗೆದುಕೊಳ್ಳಿ ಮತ್ತು ಇದನ್ನು ಮೊಡವೆ ಇರುವ ಭಾಗಕ್ಕೆ ಉಜ್ಜಿರಿ. ಹೀಗೆ ಮಾಡಲು ಮೊದಲು ಪಪ್ಪಾಯಿ ತುಂಡನ್ನು ಫ್ರಿಡ್ಜ್ ನಲ್ಲಿ ಇಡಬಹುದು. ಪಪ್ಪಾಯಿಯನ್ನು ಉಜ್ಜಿಕೊಳ್ಳುವಾಗ ಅದರ ರಸವು ಚರ್ಮದೊಳಗೆ ಹೋಗಬೇಕು.

ಸಾಮಾನ್ಯ ಚರ್ಮದ ಮೊಡವೆಗೆ ಚಿಕಿತ್ಸೆ

ಸಾಮಾನ್ಯ ಚರ್ಮದ ಮೊಡವೆಗೆ ಚಿಕಿತ್ಸೆ

ಸಾಮಾನ್ಯ ಚರ್ಮದಲ್ಲಿ ಕಾಣಿಸಿಕೊಳ್ಳುವ ಮೊಡವೆಗೆ ತಯಾರಿಸುವ ಮನೆಮದ್ದಿಗೆ ದಾಲ್ಚಿನಿ ಹುಡಿ, ಜಾಯಿಕಾಯಿ ಹುಡಿ ಮತ್ತು ಜೇನುತುಪ್ಪ ಬೇಕು. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮೊಡವೆ ಇರುವ ಜಾಗಕ್ಕೆ ಇದನ್ನು ಹಚ್ಚಿಕೊಳ್ಳಬೇಕು. ಒಂದು ವಾರ ಕಾಲ ಇದನ್ನು ಬಳಸಿದರೆ ಫಲಿತಾಂಶ ನಿಮ್ಮ ಕಣ್ಣ ಮುಂದಿರುವುದು.

English summary

Home Remedies For Acne (Based On Skin Types)

Actually, acne remedies only work on the skin when you know your right skin type. Based on your skin type, you have to pick the right acne remedy for yourself. To clear the doubt, we bring to you acne remedies based on different skin types. All these acne remedies are home based and do not require chemical products whatsoever. Check out this list of home-based acne remedies that you can try, based on your skin type.
X
Desktop Bottom Promotion