ಸಿಗರೇಟ್‌ನಿಂದ ಸೌಂದರ್ಯವೂ ಸುಟ್ಟು ಬೂದಿಯಾದೀತು! ಜೋಕೆ!

By: manu
Subscribe to Boldsky

ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಸಿಗರೇಟು ಪ್ಯಾಕೆಟ್ ಮೇಲೆಯೇ ಮುದ್ರಿಸಿದ್ದರೂ, ಧೂಮಪಾನ ತಮ್ಮ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಉಪೇಕ್ಷಿಸಿ ಹೊಗೆಬಿಡುವ ಧೂಮಪಾನಿಗಳು ನಮ್ಮ ನಡುವೆ ಬಹಳಷ್ಟಿದ್ದಾರೆ. ತಮ್ಮ ಹಿರಿಯರು, ಸ್ನೇಹಿತರು ಹೊಗೆ ಸೇದುವುದನ್ನು ನೋಡಿ ತಾವು ನೋಡಿಯೇ ಬಿಡುವಾ ಎಂದು ಪ್ರಾರಂಭವಾದ ಒಂದು ಸಿಗರೇಟು ಅಥವಾ ಬೀಡಿ ಇಡಿಯ ಜೀವಮಾನವನ್ನು ಆವರಿಸಿಕೊಳ್ಳುವುದು ಈ ವ್ಯಸನದ ಪರಿಣಾಮ.

ಎಷ್ಟೋ ಜನರು ಈ ಕೆಟ್ಟಚಾಳಿಯಿಂದ ಬಿಡುಗಡೆ ಹೊಂದಲು ಪ್ರಯತ್ನಿಸಿದರೂ ಬಿಡುಗಡೆ ಮಾತ್ರ ಅಷ್ಟು ಸುಲಭವಲ್ಲ. "ಈಗೊಂದು ಸೇದಿದರಾಯಿತು, ನಾಳೆ ನೋಡುವಾ, ಅಂತದ್ದೇನಾಗಿದೆ ಈಗ" ಎಂಬ ಪಲಾಯನವಾದದಲ್ಲಿ ಮತ್ತೊಂದು ಸಿಗರೇಟು ಅಂಟಿಸುವವರೇ ಹೆಚ್ಚು...

ಸಿಗರೇಟ್‌ ಚಟಕ್ಕೆ ಚಟ್ಟ ಕಟ್ಟುವ ಪವರ್ ಫುಲ್ 'ಆಹಾರ ಪಥ್ಯ'...

ಆದರೆ ಧೂಮಪಾನ ಆರೋಗ್ಯದ ಮೇಲೆ ಮಾತ್ರವಲ್ಲ, ಸೇದುವವರ ಚೆಲುವಿನ ಮೇಲೂ ಪರಿಣಾಮ ಬೀರುತ್ತದೆ. ಚೆಲುವನ್ನು ಕುಂಠಿತಗೊಳಿಸುವ ಪರಿಣಾಮಗಳಲ್ಲಿ ಪ್ರಮುಖವಾದವು ಈ ಕೆಳಗಿನಂತಿವೆ, ಮುಂದೆ ಓದಿ...

ಹಳದಿಯಾದ ಹಲ್ಲುಗಳು

ಹಳದಿಯಾದ ಹಲ್ಲುಗಳು

ಸಿಗರೇಟಿನ ಹೊಗೆಯಲ್ಲಿರುವ ಪ್ರಮುಖ ಹಾನಿಕಾರಕ ಅಂಶವೆಂದರೆ ನಿಕೋಟಿನ್. ಒಂದು ಬಿಳಿಯ ಬಟ್ಟೆಯ ಮೂಲಕ ಸಿಗರೇಟು ಹೊಗೆಯನ್ನು ಸೋಸಿದರೆ ಸೋಸಿದ ಕೇಂದ್ರಭಾಗದಲ್ಲಿ ಕಪ್ಪು ಟಾರಿನಂತಹ ದ್ರವ ಕಂಡುಬರುತ್ತದೆ. ಈ ದ್ರವದಲ್ಲಿರುವ ಪ್ರಮುಖ ಅಂಶವೇ ನಿಕೋಟಿನ್. ಈ ನಿಕೋಟಿನ್ ಹೀರಿದ ಬಿಳಿಬಟ್ಟೆ ಹಳದಿಯಾಗಿರುವುದನ್ನು ಗಮನಿಸಬಹುದು. ಇದೇ ಪರಿಣಾಮ ಹೊಗೆಯ ಸಂಪರ್ಕಕ್ಕೆ ಬರುವ ಹಲ್ಲುಗಳಿಗೂ ಆಗುತ್ತದೆ. ಸಿಗರೇಟ್ ಸೇವನೆ ಬಿಟ್ಟರೂ ಒಮ್ಮೆ ಹಳದಿಯಾದ ಹಲ್ಲು ಮತ್ತೆ ಬಿಳಿಯಾಗುವುದೇ ಇಲ್ಲ, ದಂತವೈದ್ಯರು ಈ ಹಳದಿಯಾದ ಹಲ್ಲುಗಳಿಗೆ ಪಾಲಿಷ್ ಮಾಡಿ ಕೊಂಚ ಹೊಳಪು ಬರುಸುತ್ತಾರೆಯೇ ವಿನಃ ಹಲ್ಲಿನ ನೈಸರ್ಗಿಕ ಬಿಳಿಬಣ್ಣವನ್ನು ತಂದುಕೊಡಲು ಸಾಧ್ಯವಾಗದು.

ಸ್ಮೋಕರ್ಸ್ ಫೇಸ್

ಸ್ಮೋಕರ್ಸ್ ಫೇಸ್

ಸಿಗರೇಟಿನ ಹೊಗೆಯಲ್ಲಿರುವ ಇನ್ನೊಂದು ಪ್ರಮುಖ ಹಾನಿಕಾರಕ ರಾಸಾಯನಿಕ ವಸ್ತುವೆಂದರೆ ಕಾರ್ಬನ್ ಮೋನಾಕ್ಸೈಡ್. ನಿಜವಾಗಿ ನೋಡಿದರೆ ಇದು ಒಂದು ಪ್ರಬಲ ವಿಷ. ಈ ರಾಸಾಯನ ರಕ್ತದಲ್ಲಿರುವ ಆಮ್ಲಜನಕವನ್ನು ತೆಗೆದು ಅದರ ಜಾಗದಲ್ಲಿ ತಾನು ಕುಳಿತುಕೊಳ್ಳುತ್ತದೆ. ಅಲ್ಲದೇ ನಿಕೋಟಿನ್ ಪರಿಣಾಮವಾಗಿ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಈ ಎರಡು ಕೈಗಳು ಜೋಡಿದ ಬಳಿಕ ಸರಬರಾಜಾದ ರಕ್ತದಲ್ಲಿ ಶಕ್ತಿಯೇ ಇರುವುದಿಲ್ಲ. ಹೀಗಿದ್ದಾಗ ಆರೋಗ್ಯ ಎಲ್ಲಿಂದ ಬರಬೇಕು? ಪರಿಣಾಮವಾಗಿ ಜೋಲುಬಿದ್ದ, ಒಣಗಿದ, ಸುಕ್ಕುಭರಿತ, ಹೊಳಪು ಕಳೆದುಕೊಂಡ ಚರ್ಮದಿಂದಾಗಿ ಮುಖ ಬೇರೆಯೇ ಚಹರೆ ಪಡೆಯುತ್ತದೆ. ವೈದ್ಯರು ಈ ಚಹರೆಯನ್ನು ಸ್ಮೋಕರ್ಸ್ ಫೇಸ್ ಎಂದು ಕರೆಯುತ್ತಾರೆ.

ಉದುರುವ ಹಲ್ಲು

ಉದುರುವ ಹಲ್ಲು

ಸಾಧಾರಣ ಪ್ರಮಾಣದಲ್ಲಿ ಧೂಮಪಾನ ಮಾಡುವವರ ಹಲ್ಲುಗಳು ಹಳದಿಯಾಗಿದ್ದರೂ ಆಹಾರ ಅರೆಯಲು ಸಮರ್ಥವಾಗಿರುತ್ತವೆ. ಆದರೆ ಅತಿಹೆಚ್ಚು ಪ್ರಮಾಣದಲ್ಲಿ ಧೂಮಪಾನ ಮಾಡುವವರ ಹಲ್ಲುಗಳು ಹಳದಿಯಾಗಿರುವುದು ಮಾತ್ರವಲ್ಲ, ತಮ್ಮ ಸಾಮರ್ಥ್ಯವನ್ನೂ ಕಳೆದುಕೊಂಡಿರುತ್ತವೆ. ಒಸಡುಗಳು ದುರ್ಬಲವಾಗಿ ಹಲ್ಲುಗಳ ಬೇರನ್ನು ಹಿಡಿದಿಟ್ಟುಕೊಳ್ಳಲು ಅಸಮರ್ಥವಾಗುತ್ತವೆ. ಈ ಅವಕಾಶವನ್ನೇ ಕಾಯುತ್ತಿದ್ದ ಬ್ಯಾಕ್ಟೀರಿಯಾಗಳು ಒಸಡಿನ ಒಳಗೆ, ಹಲ್ಲುಗಳ ಬೇರುಗಳ ನಡುವೆ ತಮ್ಮ ಕಾಲೋನಿಯನ್ನು ವೃದ್ಧಿಸಿಕೊಳ್ಳುತ್ತವೆ. ಅನಿವಾರ್ಯವಾಗಿ ವೈದ್ಯರು ಈ ಹಲ್ಲುಗಳನ್ನು ಕಿತ್ತು ಹಾಕಬೇಕಾಗುತ್ತದೆ. ದುರ್ಬಲವಾದ ಒಸಡುಗಳ ಮೇಲೆ ಕೃತಕ ಹಲ್ಲುಗಳನ್ನು ನೆಡುವುದೂ ಅಸಂಭವವಾಗುತ್ತದೆ. ಉದುರುವ ಮೊದಲು ಅತಿಹೆಚ್ಚು ಸಂವೇದನೆಯನ್ನು ತೋರುವ ಹಲ್ಲು ಕೊಂಚ ಬಿಸಿ ಅಥವಾ ಕೊಂಚ ತಣ್ಣನೆಯ ಆಹಾರವನ್ನು ಸ್ವೀಕರಿಸಲೂ ನಿರಾಕರಿಸಿಬಿಡುತ್ತವೆ.

ಸಿಗರೇಟ್ ಸೇದಿದರೆ ತಲೆ ಬೋಳಾಗುತ್ತೆ, ಹುಷಾರ್!

ತಲೆಕೂದಲು ಉದುರುವ ಸಮಸ್ಯೆ

ತಲೆಕೂದಲು ಉದುರುವ ಸಮಸ್ಯೆ

ತಲೆಗೂದಲ ವಿಷಯ ಬಂದಾಗ ಧೂಮಪಾನಿಗಳು ಎದುರಿಸುವಷ್ಟು ತೊಂದರೆಯನ್ನು ಇನ್ಯಾರೂ ಅನುಭವಿಸಿರಲಾರರು. ಧೂಮಪಾನದ ಕಾರಣ ಕೂದಲ ಬುಡಕ್ಕೆ ಹರಿಯುವ ರಕ್ತವೂ ಕಲುಷಿತಗೊಂಡು ಕೂದಲ ಬುಡ ಶಿಥಿಲಗೊಳ್ಳುತ್ತದೆ. ಪರಿಣಾಮವಾಗಿ ಕಳೆಗುಂದಿದ, ಸುಲಭವಾಗಿ ತುಂಡಾಗುವಂತಿರುತ್ತದೆ. ಕಾಲಕ್ರಮೇಣ ಕೂದಲು ಸುಲಭವಾಗಿ ಬುಡದಿಂದ ಕಿತ್ತು ಬರುತ್ತದೆ. ಅಷ್ಟೇ ಅಲ್ಲ, ಚಿಕ್ಕವಯಸ್ಸಿಗೇ ಕೂದಲು ಹಣ್ಣಾಗುವುದು, ಪುರುಷರಂತೆ ಬಕ್ಕತಲೆಯಾಗುವುದು ಮೊದಲಾದವು ಕಾಣಿಸಿಕೊಳ್ಳುತ್ತದೆ.

ಕಣ್ಣುಗಳ ಸುತ್ತ ಕಲೆ...

ಕಣ್ಣುಗಳ ಸುತ್ತ ಕಲೆ...

ಧೂಮಪಾನದ ಪರಿಣಾಮವಾಗಿ ನಿಮ್ಮ ಕಣ್ಣುಗಳ ಸುತ್ತ ಕಪ್ಪು ವರ್ತುಲಗಳು ಮೂಡುತ್ತವೆ. ಏಕೆಂದರೆ ಈ ಭಾಗದಲ್ಲಿ ಚರ್ಮದ ಪದರಗಳು ತೀರಾ ತೆಳುವಾಗಿದ್ದು ಜೀವಕೋಶಗಳನ್ನು ಧೂಮಪಾನ ಹಾನಿಗೊಳಿಸುವ ಕಾರಣ ಹೆಚ್ಚು ಕಪ್ಪಗಾಗಿಸುತ್ತದೆ.

ದೇಹದಿಂದ ಹೊರ ಸೂಸುವ ಧೂಮಪಾನದ ವಾಸನೆ!

ದೇಹದಿಂದ ಹೊರ ಸೂಸುವ ಧೂಮಪಾನದ ವಾಸನೆ!

ನಿಮ್ಮ ದೇಹಕ್ಕೆ ಪೂಸಿಕೊಳ್ಳುವ ಸುಗಂಧ ಅಥವಾ ಬಾಡಿ ಸ್ಪ್ರೇ ಎಷ್ಟೇ ಪ್ರಬಲವಿರಲಿ, ನಿಮ್ಮ ದೇಹದಿಂದ ಸೂಸುವ ಧೂಮಪಾನದ ವಾಸನೆ ಎಂದೂ ಹೋಗದು. ಅಷ್ಟೇ ಅಲ್ಲ, ಇವರ ದೇಹದಿಂದ ಸದಾ ತಂಬಾಕಿನ ವಾಸನೆ ಇರುತ್ತದೆ ಮತ್ತು ಇವರು ತೊಡುವ ಬಟ್ಟೆ, ವಸ್ತುಗಳೆಲ್ಲಾ ತಂಬಾಕಿನ ವಾಸನೆಯಿಂದ ಕೂಡಿರುತ್ತವೆ.

ಧೂಮಪಾನದ ಹೊಗೆ, ಮಕ್ಕಳ ಆರೋಗ್ಯಕ್ಕೆ ಬಲು ಅಪಾಯಕಾರಿ

English summary

Harmful effects of smoking on beauty

Smoking is injurious to health as it is to the way you look. Smoking causes a lot of harm to the body. It is the reason for mouth and lung cancer resulting to a number of deaths. When you smoke, your skin will tend to sag, wrinkle and your lips loose their lovely pinkish colour.
Subscribe Newsletter