ಬ್ಯೂಟಿ ಟಿಪ್ಸ್: ಮೂವತ್ತರ ಪ್ರಾಯದಲ್ಲೂ 16ರ ಸೌಂದರ್ಯ!

By Arshad

'ನಿಮ್ಮ ಬದುಕನ್ನು ಬದುಕಿ, ವಯಸ್ಸನ್ನು ಮರೆತುಬಿಡಿ' - ಇದು ಅಮೇರಿಕಾದ ಲೇಖಕ ನಾರ್ಮನ್ ವಿನ್ಸೆಂಟ್ ಪೀಲೆಯವರ ನುಡಿಗಳು. ಆದರೆ ಇದು ಹೇಳುವಷ್ಟು ಸುಲಭವಲ್ಲ ಎಂದು ಎಲ್ಲರಿಗೂ ಗೊತ್ತು. ತಾರುಣ್ಯವನ್ನು ಬಹಳ ಹೆಚ್ಚಿನ ಕಾಲ ಉಳಿಸಿಕೊಳ್ಳುವಲ್ಲಿ ಕಾಳಜಿ ವಹಿಸದೇ ಇದ್ದರೆ ವಯಸ್ಸನ್ನು ಮರೆಯುವುದು ಕಷ್ಟವಾಗುತ್ತದೆ. ಪ್ರತಿಯೊಬ್ಬರಿಗೂ ತಮಗಾಗುತ್ತಿರುವ ವಯಸ್ಸಿನ ಬಗ್ಗೆ ಅರಿವು ಇರುತ್ತದೆ.

ಅಂತೆಯೇ ಅನಿವಾರ್ಯವಾದ ವಯೋಸಹಜ ಚಿಹ್ನೆಗಳಾದ ನೆರಿಗೆ, ಸೂಕ್ಷ್ಮ ಗೆರೆಗಳು, ಕಲೆಗಳು, ಮಚ್ಚೆಗಳು, ಬಿಳಿಯ ಕಲೆ ಇತ್ಯಾದಿಗಳು ಚರ್ಮದ ಮೇಲೆ ಮೂಡುತ್ತಾ ಹೋದಂತೆ ತಾನೇಕೆ ಈ ಬಗ್ಗೆ ಕಾಳಜಿ ತೆಗೆದುಕೊಂಡಿಲ್ಲ, ಕೊಂಚ ಎಚ್ಚರಿಕೆ ವಹಿಸಿದ್ದಿದ್ದರೆ ಈ ಚಿಹ್ನೆಗಳನ್ನು ಕೊಂಚ ತಡವಾಗಿಸಬಹುದಿತ್ತೋ ಎನೋ ಎಂದು ಹೆಚ್ಚಿನವರು ಇಂದು ಅವಲತ್ತುಕೊಳ್ಳುತ್ತಿದ್ದಾರೆ. ನಿರಂತರ ಯೌವನದ ಚೆಲುವಿಗೆ ಈ ಮೇಕಪ್

ಇನ್ನೊಂದೆಡೆ ಉತ್ತಮವಾದ ಆರೈಕೆಯನ್ನು ಪಡೆದವರು ಅರವತ್ತಾದರೂ ಮೂವತ್ತರ ಹರೆಯದಲ್ಲಿರುವಂತೆ ಚಟುವಟಿಕೆಯಿಂದ ಓಡಾಡುತ್ತಾರೆ. ವಾಸ್ತವವಾಗಿ ಈ ಚಿಹ್ನೆಗಳು ಸುಮಾರಾಗಿ ಮೂವತ್ತರಲ್ಲಿಯೇ ಪ್ರಾರಂಭವಾಗಲು ತೊಡಗುತ್ತವೆ. ತಕ್ಷಣವೇ ಇದರ ಬಗ್ಗೆ ಕಾಳಜಿ ವಹಿಸಿದರೆ ಈ ಚಿಹ್ನೆಗಳು ಮೂಡುವ ಪ್ರಕ್ರಿಯೆಯನ್ನು ಸಾಕಷ್ಟು ಮುಂದೆ ಹಾಕಬಹುದು. ಇಂದು ತಾರುಣ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ತಂಡ ಹಲವು ಅಮೂಲ್ಯ ಮಾಹಿತಿಗಳನ್ನು ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸ ಪಡುತ್ತಿದೆ. ಚರ್ಮದ ಕಾಂತಿ, ಕೋಮಲತೆಗಾಗಿ ಒಂದಿಷ್ಟು ಸರಳೋಪಾಯ

ವಿಷೇಷವಾಗಿ ಮೂವತ್ತು ತುಂಬಿದ ಮಹಿಳೆಯರು ಈ ಸೂಚನೆಗಳನ್ನು ಪಾಲಿಸುವ ಮೂಲಕ ನಿಮ್ಮ ಚರ್ಮ ಮತ್ತು ಒಟ್ಟಾರೆ ಸೌಂದರ್ಯ ಹೆಚ್ಚಿನ ಕಾಂತಿ ಮತ್ತು ಆರೋಗ್ಯಕರವಾಗಿರಲು ಸಾಧ್ಯವಾಗುತ್ತದೆ. ಇವುಗಳನ್ನು ಸರಿಯಾಗಿ ಪಾಲಿಸಿದರೆ "ಇಂದಿನ ಮೂವತ್ತು ಹೊಸ ಇಪ್ಪತ್ತು" ಎಂಬ ಸೌಂದರ್ಯವಾಕ್ಯವನ್ನೇ ಹುಟ್ಟುಹಾಕಬಹುದು.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಸೌಂದರ್ಯಕ್ಕೂ ನೀರಿಗೂ ಎತ್ತಣ ಸಂಬಂಧ ಎಂದು ಕೇಳಿದವರಿಗೆ ಗಾಢವಾದ ಸಂಬಂಧ ಇದೆ ಎಂಬ ಉತ್ತರ ದೊರಕುತ್ತದೆ. ಚರ್ಮಕ್ಕೆ ಸದಾ ಆರ್ದ್ರತೆ ಮತ್ತು ಸೂಕ್ಷ್ಮರಂಧ್ರಗಳಿಂದ ಹೊರಹರಿಯಲು ನೀರಿನ ಅಗತ್ಯ ಇರುತ್ತದೆ. ಅದರಲ್ಲೂ ಮೂವತ್ತರ ಬಳಿಕ ಈ ಅಗತ್ಯತೆ ಹೆಚ್ಚಾಗುತ್ತಾ ಹೋಗುತ್ತದೆ. ಒಂದು ವೇಳೆ ನೀರುಕುಡಿಯಲು ಸೋಮಾರಿತನ ತೋರಿದರೆ ಚರ್ಮದ ಅಡಿಯಲ್ಲಿ ಸಾಕಷ್ಟು ನೀರು ಲಭಿಸದೇ ನೆರಿಗೆಗಳು ಮೂಡಲು ಉತ್ತಮವಾದ ವಾತಾವರಣವನ್ನು ನಾವೇ ಹಾಕಿಕೊಟ್ಟಂತಾಗುತ್ತದೆ. ತಜ್ಞರ ಪ್ರಕಾರ ಮೂವತ್ತು ದಾಟಿದವರು ನಿತ್ಯವೂ ಕುಡಿಯುವ ಪ್ರಮಾಣವನ್ನು ಸಾಧ್ಯವಾದಷ್ಟು ಹೆಚ್ಚಿಸುವುದೇ ಉತ್ತಮ ಪರಿಹಾರವಾಗಿದೆ. ಸೌಂದರ್ಯಕ್ಕೆ ಮಾತ್ರವಲ್ಲ, ದೇಹದ ಇತರ ಚಟುವಟಿಕೆಗಳಿಗೂ ನೀರು ಅತ್ಯುತ್ತಮವಾದ ಪೋಷಣೆ ನೀಡುತ್ತದೆ.

ವೃದ್ಧಾಪ್ಯ ದೂರಾಗಿಸುವ ಮುಖಲೇಪಗಳನ್ನು ಯತ್ನಿಸಿ

ವೃದ್ಧಾಪ್ಯ ದೂರಾಗಿಸುವ ಮುಖಲೇಪಗಳನ್ನು ಯತ್ನಿಸಿ

ಇಂದು ಮನೆಯಲ್ಲಿಯೇ ತಯಾರಿಸಬಹುದಾದ ಹಲವು ಮುಖಲೇಪಗಳು ಲಭ್ಯವಿದ್ದು ನಿಮಗೆ ಸೂಕ್ತವಾದುದನ್ನು ಯತ್ನಿಸಿ. ನಿಯಮಿತವಾಗಿ ಬಳಸುವ ಮೂಲಕ ಈ ಪೋಷಣೆ ಅದ್ಭುತವಾದ ಪರಿಣಾಮಗಳನ್ನೇ ಉಂಟುಮಾಡಬಹುದು. ಉತ್ತಮ ಪರಿಣಾಮ ಪಡೆಯಲು ವಾರಕ್ಕೆ ಎರಡರಿಂದ ಮೂರು ಬಾರಿಯಾದರೂ ಹಚ್ಚಿಕೊಳ್ಳಬೇಕು. ಇದರಿಂದ ಚರ್ಮದ ಮೇಲ್ಪದರ ಹೆಚ್ಚು ಸೆಳೆತ ಪಡೆದು ಕಾಂತಿ ಹೆಚ್ಚಿಸುತ್ತದೆ ಹಾಗೂ ನೆರಿಗೆಗಳಾಗದಂತೆ ನೋಡಿಕೊಳ್ಳುತ್ತದೆ.

ನಿಯಮಿತವಾಗಿ ಸತ್ತ ಜೀವಕೋಶಗಳನ್ನು ನಿವಾರಿಸಿ

ನಿಯಮಿತವಾಗಿ ಸತ್ತ ಜೀವಕೋಶಗಳನ್ನು ನಿವಾರಿಸಿ

ನಮ್ಮ ಚರ್ಮದ ಹೊರಪದರದ ಜೀವಕೋಶಗಳು ಸತ್ತು ಹೊಸ ಜೀವಕೋಶಗಳು ಹುಟ್ಟಿದ್ದರೂ ಹಳೆಯ ಜೀವಕೋಶಗಳು ಅಂಟಿಕೊಂಡೇ ಇರುತ್ತವೆ. ಇವು ಚರ್ಮದ ಸೂಕ್ಷ್ಮರಂಧ್ರಗಳನ್ನು ಮುಚ್ಚಿ ಚರ್ಮ ಉಸಿರಾಡಲು ಕಷ್ಟಕರವಾಗುತ್ತದೆ. ಅಲ್ಲದೇ ಕೆಳಚರ್ಮದಲ್ಲಿ ಎಣ್ಣೆ, ಜಿಡ್ಡುಗಳು ಸಂಗ್ರಹಗೊಂಡು ಮೊಡವೆ, ಬ್ಲಾಕ್ ಹೆಡ್ ಮೊದಲಾದ ಕುಂದುಗಳು ಎದುರಾಗುತ್ತವೆ. ಇದಕ್ಕಾಗಿ ಕಾಫಿಪುಡಿ+ಜೇನು, ಸಕ್ಕರೆ, ಲಿಂಬೆ ಅಥವಾ ಬರೆಯ ಜೇನು ಉಪಯೋಗಿಸಿ ಸ್ಕ್ರಬರ್ ಒಂದರಿಂದ ಚರ್ಮವನ್ನು ನಯವಾಗಿ ತಿಕ್ಕಿಕೊಳ್ಳಿ. ಅಥವಾ ಪ್ರಮಾಣಿತ ನೈಸರ್ಗಿಕ ಎಕ್ಸ್ಫೋಲಿಯೇಟಿಂಗ್ ಕ್ರೀಮ್ ಬಳಸಿ.

ಬಿಸಿಲಿಗೆ ಹೋಗುವಾಗ ತಪ್ಪದೇ ಸನ್ ಸ್ಕ್ರೀನ್ ಹಚ್ಚಿ

ಬಿಸಿಲಿಗೆ ಹೋಗುವಾಗ ತಪ್ಪದೇ ಸನ್ ಸ್ಕ್ರೀನ್ ಹಚ್ಚಿ

ಬಿಸಿಲಿನ ಝಳಕ್ಕೆ ಮೂವತ್ತರ ಬಳಿಕ ಚರ್ಮ ಕೊಂಚ ಹೆಚ್ಚೇ ಬಳಲುತ್ತದೆ. ಆದ್ದರಿಂದ ಪ್ರತಿಬಾರಿ ಬಿಸಿಲಿಗೆ ಹೋಗುವಾಗಲೂ ಸನ್ ಸ್ಕ್ರೀನ್ ಹಚ್ಚಿಕೊಳ್ಳಲು ಮರೆಯದಿರಿ. ಏಕೆಂದರೆ ಈ ವಯಸ್ಸಿನಲ್ಲಿ ಸೂರ್ಯನ ಆವೆನೇರಳೆ ಕಿರಣಗಳ ಪರಿಣಾಮ ಇತರರಿಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿದ್ದು ಇದರಿಂದ ಕಪ್ಪಾಗುವ ಚರ್ಮ ಮತ್ತೆ ಸಹಜವರ್ಣದತ್ತ ತಿರುಗಳು ಬಹಳ ಶ್ರಮಪಡಬೇಕಾಗುತ್ತದೆ.

ಫ್ರೂಟ್ಸ್ ಆಫ್ ಏಂಜೆಲ್ಸ್ -ಪಪ್ಪಾಯಿ ಹಣ್ಣು

ಫ್ರೂಟ್ಸ್ ಆಫ್ ಏಂಜೆಲ್ಸ್ -ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣಿನಲ್ಲಿರುವ ಸುವಾಸನೆಯ ರುಚಿ, ಮೃದು ಬೆಣ್ಣೆಯಂತಿರುವ ಸಾಂದ್ರತೆ ಮತ್ತು ಉತ್ಕೃಷ್ಟ ರಚನೆ ಇವುಗಳನ್ನು ಕಂಡುಕೊಂಡ ಕ್ರಿಸ್ಟೋಫರ್ ಕೊಲಂಬಸ್ ಈ ಹಣ್ಣಿಗೆ "ದೇವತೆಗಳ ಹಣ್ಣು - ಫ್ರೂಟ್ಸ್ ಆಫ್ ಏಂಜೆಲ್ಸ್" ಎಂದು ಅಡ್ಡ ಹೆಸರಿಟ್ಟನು. ಇದು ಆರೋಗ್ಯ ಮತ್ತು ಸೌಂದರ್ಯದ ಪ್ರಯೋಜನಗಳನ್ನು ದೇಹಕ್ಕೆ ನೀಡುವಲ್ಲಿ ಪ್ರಮುಖ ಪಾತ್ರವಿಸುತ್ತದೆ.

*ಅರ್ಧ ಕಪ್ ಮಾಗಿದ ಪಪ್ಪಾಯಿ ಹಣ್ಣನ್ನು ಪೇಸ್ಟ್ ಆಗುವ ಹಾಗೆ ಹದಗೂಡಿಸಿ. ಜೊತೆಗೆ ಸ್ವಲ್ಪ ಕಚ್ಚಾ ಜೇನುತುಪ್ಪವನ್ನು ಸೇರಿಸಬಹುದು.

*ಇದನ್ನು ಚೆನ್ನಾಗಿ ಹದಮಾಡಿ ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕತ್ತಿನ ಮೇಲೆ ಲೇಪಿಸಿ.

*15 ನಿಮಿಷಗಳ ಸಮಯ ಬಿಟ್ಟ ನಂತರ ಎಚ್ಚರಿಕೆಯಿಂದ ತಣ್ಣೀರು ಬಳಸಿ ತೊಳೆದುಕೊಂಡು ಚರ್ಮದ ಮೇಲ್ಭಾಗವನ್ನು ಮೆಲ್ಲ ಮೆಲ್ಲಗೆ ತಟ್ಟಿಕೊಳ್ಳಿ.

English summary

Must-Follow Beauty Tips For Women Over 30

Today we're sharing some of the most amazing and useful beauty tips that you must follow if you're in your 30s. These tips might strike as generic, but incorporating them in your beauty regimen will make a huge difference to your skin's health and appearance. Follow these tips to make the phrase "30 is the new 20" come true and amp up your beauty quotient. Take a look at these.
Story first published: Wednesday, June 15, 2016, 17:31 [IST]
X
Desktop Bottom Promotion