For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕಾಡುವ ತ್ವಚೆಯ ಸಮಸ್ಯೆಗಳಿಗೆ ಇಲ್ಲಿದೆ ಸರಳ ಪರಿಹಾರಗಳು

By Deepu
|

ಒಂದೊಂದು ಋತುವಿನಲ್ಲಿ ಒಂದೊಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೇವಲ ಆರೋಗ್ಯ ಮಾತ್ರವಲ್ಲ, ನಮ್ಮ ತ್ವಚೆಯ ಕಡೆ ಕೂಡ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಯಾಕೆಂದರೆ ಚಳಿಗಾಲದಲ್ಲಿ ಚರ್ಮವು ಒಡೆದು ನೋವು ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಚರ್ಮದ ಆರೈಕೆ ಬಗ್ಗೆ ಎಷ್ಟೇ ಮುತುವರ್ಜಿ ವಹಿಸಿದರೂ ಸಮಸ್ಯೆಯಿಂದ ಪಾರಾಗುವುದು ತುಂಬಾ ಕಷ್ಟವೆನಿಸುತ್ತದೆ

ಅದರಲ್ಲೂ ಒಣಚರ್ಮವನ್ನು ಹೊಂದಿರುವವರಿಗೆ ಇದು ತೀರ ಸಾಮಾನ್ಯವಾಗಿರುತ್ತದೆ. ಒಣಚರ್ಮ ಮಾತ್ರವಲ್ಲದೆ ಎಣ್ಣೆಯಾಂಶವುಳ್ಳ ಚರ್ಮದವರಿಗೂ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಪ್ರತಿಯೊಬ್ಬರು ಇದರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿಕೊಳ್ಳಬೇಕು. ಈ ಲೇಖನದಲ್ಲಿ ನೀಡಿರುವ ಕೆಲವೊಂದು ಸಲಹೆಗಳನ್ನು ಬಳಸಿಕೊಂಡು ನೀವು ಚಳಿಗಾಲದಲ್ಲಿ ಚರ್ಮ ಒಡೆಯುವ ಸಮಸ್ಯೆಯಿಂದ ಪಾರಾಗಬಹುದು.

ಇದಕ್ಕೆ ತಾಳ್ಮೆ ಹಾಗೂ ಸಮಯ ನೀಡಿದರೆ ನೀವು ಸಮಸ್ಯೆಯಿಂದ ಪಾರಾಗಬಹುದು. ಯಾರೂ ಕೂಡ ಚಳಿಗಾಲದಲ್ಲಿ ನೋವಿನ ತ್ವಚೆಯನ್ನು ಬಯಸುವುದಿಲ್ಲ. ಚರ್ಮವು ಒಡೆಯುವುದರಿಂದ ಕಾಂತಿಯುವ ತ್ವಚೆಯು ಸೌಂದರ್ಯವನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ ನೋವನ್ನು ನೀಡುವುದು. ಚಳಿಗಾಲದಲ್ಲಿ ಇಲ್ಲಿ ಕೊಟ್ಟಿರುವ ಕೆಲವೊಂದು ಸಲಹೆಗಳನ್ನು ಕಟ್ಟುನಿಟ್ಟಾಗಿ ನಿಯಮಿತವಾಗಿ ಪಾಲಿಸಿಕೊಂಡು ಹೋದರೆ ಒಡೆದ ಚರ್ಮದ ಸಮಸ್ಯೆಯಿಂದ ದೂರ ಉಳಿಯಬಹುದು....

ಆದಷ್ಟು ಉಗುರುಬೆಚ್ಚನೆಯ ನೀರು ಬಳಸಿ

ಆದಷ್ಟು ಉಗುರುಬೆಚ್ಚನೆಯ ನೀರು ಬಳಸಿ

ಉಗುರುಬೆಚ್ಚನೆಯ ನೀರು ಚಳಿಗಾಲದಲ್ಲಿ ಬಿಸಿನೀರು ಬಳಸುವುದು ಎಲ್ಲರಿಗೂ ಇಷ್ಟ. ಆದರೆ ದೇಹದ ಚರ್ಮಕ್ಕೆ, ಅದರಲ್ಲೂ ಮುಖದ ಚರ್ಮಕ್ಕೆ ಅತಿ ಬಿಸಿಯಾದ ನೀರನ್ನು ಬಳಸುವ ಮೂಲಕ ಚರ್ಮದ ಸೂಕ್ಷ್ಮ ರಂಧ್ರಗಳ ಮೂಲಕ ಚರ್ಮದ ಕೆಳಪದರಲ್ಲಿರುವ ನೈಸರ್ಗಿಕ ತೈಲಗಳೂ ಬಿಸಿಯ ಕಾರಣ ಹೊರಸೂಸಿ ನಷ್ಟವಾಗುತ್ತವೆ. ಇದು ಚರ್ಮವನ್ನು ಆಪಾರವಾಗಿ ಘಾಸಿಗೊಳಿಸುತ್ತದೆ. ಇದನ್ನು ತಡೆಯಲು ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡುವುದೇ ಉತ್ತಮ.

ಹಸಿರು ತರಕಾರಿಗಳು, ಮೀನು, ಮೊಟ್ಟೆಗಳನ್ನು ಹೆಚ್ಚು ಸೇವಿಸಿರಿ

ಹಸಿರು ತರಕಾರಿಗಳು, ಮೀನು, ಮೊಟ್ಟೆಗಳನ್ನು ಹೆಚ್ಚು ಸೇವಿಸಿರಿ

ಚರ್ಮದ ಆರೈಕೆಗೆ ನಾವು ಸೇವಿಸುವ ಆಹಾರವೂ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆಹಾರದಲ್ಲಿ ಒಮೆಗಾ 3 ಕೊಬ್ಬಿನ ಆಮ್ಲದ ಪ್ರಮಾಣ ಹೆಚ್ಚಿರುವ ಆಹಾರವನ್ನು ಸೇವಿಸುವುದು ಉತ್ತಮ ಕ್ರಮವಾಗಿದೆ. ಚಳಿಗಾಲದಲ್ಲಿ ಲಭ್ಯವಿರುವ ಹಸಿರು ತರಕಾರಿಗಳು, ಮೀನು, ಮೊಟ್ಟೆಗಳನ್ನು ಸೇವಿಸಬೇಕು. ಅಲ್ಲದೇ ಈ ಸಮಯದಲ್ಲಿ ಆದಷ್ಟು ಕಡಿಮೆ ಸಕ್ಕರೆ ಸೇವಿಸಬೇಕು. ಏಕೆಂದರೆ ಸಕ್ಕರೆ ಚರ್ಮದ ಅಡಿಯಲ್ಲಿ ಸೋಂಕು ಉಂಟುಮಾಡಲು ಸಹಕರಿಸಿ ಮೊಡವೆಗೆ ಕಾರಣವಾಗುತ್ತದೆ. ಅಂತೆಯೇ ಎಣ್ಣೆಯ ಸೇವನೆಯನ್ನೂ ಕಡಿಮೆ ಮಾಡಬೇಕು.

ತೇವಕಾರಕ(ಮಾಯಿಶ್ಚರೈಸರ್) ಬಳಸಿ

ತೇವಕಾರಕ(ಮಾಯಿಶ್ಚರೈಸರ್) ಬಳಸಿ

ಚರ್ಮಕ್ಕೆ ತೇವಾಂಶ ಅಥವಾ ಆರ್ದ್ರತೆ ನಿಸರ್ಗದ ಮೂಲಕ ಸಿಗದ ಕಾರಣ ಇದನ್ನು ನಾವೇ ವ್ಯವಸ್ಥೆ ಮಾಡಿಕೊಳ್ಳಬೇಕು. ಇಂದು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ತೇವಕಾರಕ ಅಥವಾ ಮಾಯಿಶ್ಚರೈಸರ್ ಗಳಿವೆ. ಇವುಗಳಲ್ಲಿ ಸೂಕ್ತವಾದುದನ್ನು ಬಳಸಬೇಕು. ಆದರೆ ಇದರ ಪ್ರಮಾಣ ಅತ್ಯಂತ ತೆಳುವಾಗಿರಬೇಕು ಅಂದರೆ ಚರ್ಮದ ಸೂಕ್ಷ್ಮರಂಧ್ರಗಳು ಮುಚ್ಚಬಾರದು. ಜೆಲ್ ಅಥವಾ ಕ್ರೀಂ ರೂಪದ ತೇವಕಾರಕ ಎಲ್ಲರಿಗೂ ಸೂಕ್ತವಾಗಿದ್ದು ಇದನ್ನು ತೆಳ್ಳಗೆ ಹಚ್ಚಿಕೊಳ್ಳುವ ಮೂಲಕ ಚರ್ಮ ಆರ್ದ್ರತೆಯ ಕೊರತೆಯನ್ನು ಎದುರಿಸಬಹುದು.

ಮಸಾಜ್ ತೈಲ

ಮಸಾಜ್ ತೈಲ

ವಾರದಲ್ಲಿ ಒಂದು ಸಲ ಮಲಗುವ ಮೊದಲು ಮಸಾಜ್ ತೈಲದಿಂದ ದೇಹವನ್ನು ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ವಾರದಲ್ಲಿ ಒಂದು ಸಲಕ್ಕಿಂತ ಹೆಚ್ಚು ಮಾಡಿದರೆ ಅದರಿಂದ ತುಂಬಾ ಒಳ್ಳೆಯದು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸಿ ಚರ್ಮದಲ್ಲಿ ತೇವಾಂಶವು ಉಳಿದುಕೊಳ್ಳುವಂತೆ ಮಾಡುತ್ತದೆ.

ಹಾಲಿನ ಪುಡಿಯ ಫೇಸ್ ಪ್ಯಾಕ್‌ ಪ್ರಯತ್ನಿಸಿ ನೋಡಿ...

ಹಾಲಿನ ಪುಡಿಯ ಫೇಸ್ ಪ್ಯಾಕ್‌ ಪ್ರಯತ್ನಿಸಿ ನೋಡಿ...

ಎರಡು ಟೇಬಲ್ ಚಮಚಗಳಷ್ಟು ಹಾಲಿನ ಪುಡಿ, ಎರಡು ಟೇಬಲ್ ಚಮಚಗಳಷ್ಟು ಕಡ್ಲೆಹಿಟ್ಟು, ಹಾಗೂ ಎರಡು ಟೇಬಲ್ ಚಮಚಗಳಷ್ಟು ಬಾದಾಮಿ ಪುಡಿಗಳನ್ನು ಮಿಶ್ರಗೊಳಿಸಿರಿ. ಈಗ ಒ೦ದು ಟೇಬಲ್ ಚಮಚದಷ್ಟು ಹಾಲಿನ ಕೆನೆ ಹಾಗೂ ಒ೦ದು ಟೇಬಲ್ ಚಮಚದಷ್ಟು ಲಿ೦ಬೆಯ ರಸಗಳನ್ನು ಈ ಮಿಶ್ರಣಕ್ಕೆ ಸೇರಿಸಿರಿ ಹಾಗೂ ಜೊತೆಗೆ ಕೆಲವು ಹನಿಗಳಷ್ಟು ಪನ್ನೀರು ಹಾಗೂ ಆಲಿವ್ ಎಣ್ಣೆಯನ್ನೂ ಸೇರಿಸಿರಿ. ಈ ಮಿಶ್ರಣವನ್ನು ಒ೦ದು ಪೇಸ್ಟ್‌ನ ರೂಪಕ್ಕೆ ತ೦ದು, ಅದನ್ನು ನಿಮ್ಮ ಮುಖ ಹಾಗೂ ನಿಮ್ಮ ಮೈಮೇಲೆಲ್ಲಾ ಹದವಾದ ಮಾಲೀಸಿನೊ೦ದಿಗೆ ಲೇಪಿಸಿಕೊಳ್ಳಿರಿ. ಈ ಪ್ಯಾಕ್ ಅನ್ನು ಮೈಮೇಲೆ ಹಾಗೆಯೇ ಕೆಲಕಾಲ ಒಣಗಲು ಬಿಡಿರಿ ಹಾಗೂ ತದನ೦ತರ ಉಗುರುಬೆಚ್ಚಗಿನ ನೀರಿನಿ೦ದ ಅದನ್ನು ತೊಳೆದು ತೆಗೆಯಿರಿ. ಈ ಪ್ಯಾಕ್‌ನ ಗರಿಷ್ಠ ಲಾಭವನ್ನು ಪಡೆದುಕೊಳ್ಳುವ೦ತಾಗಲು ಈ ನೈಸರ್ಗಿಕವಾದ "ಸೌ೦ದರ್ಯ ಮಿಶ್ರಣ" ವನ್ನು ವಾರಕ್ಕೆ ಕನಿಷ್ಠ ಮೂರು ಬಾರಿಯಾದರೂ ಹಚ್ಚಿಕೊಳ್ಳಿರಿ.

ಅರಿಶಿನ ಪುಡಿ

ಅರಿಶಿನ ಪುಡಿ

ಕೊಂಚ ಹಳದಿ ಪುಡಿಯನ್ನು ಹಸಿಹಾಲಿನಲ್ಲಿ (ಕುದಿಸಿದಬಾರದು) ಬೆರೆಸಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖ, ಕುತ್ತಿಗೆಯ ಮೇಲೆ ತೆಳುವಾಗಿ ಹಚ್ಚಿ ಒಣಗಲು ಬಿಡಿ. ಬಳಿಕ ಕೇವಲ ಉಗುರುಬೆಚ್ಚನೆಯ ನೀರನ್ನು ಬಳಸಿ ಈ ಲೇಪನವನ್ನು ತೊಳೆದುಕೊಳ್ಳಿ. ಅರಿಶಿನ ಪುಡಿಯನ್ನು ಶತಮಾನಗಳಿಂದ ಭಾರತದಲ್ಲಿ ಸೌಂದರ್ಯ ಪ್ರಸಾದನವಾಗಿ ಬಲಸಲ್ಪಡುತ್ತಾ ಬಂದಿದೆ. ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಚರ್ಮದ ಸೂಕ್ಷ್ಮರಂಧ್ರಗಳಲ್ಲಿದ್ದ ಕಲ್ಮಶ ಮತ್ತು ಕ್ರಿಮಿಗಳನ್ನು ನಿವಾರಿಸಿ ಚರ್ಮ ಸಹಜ ಸೌಂದರ್ಯ ಮತ್ತು ಸೌಮ್ಯತೆ ಪಡೆಯಲು ನೆರವಾಗುತ್ತದೆ.

ಕಡಲೆಹಿಟ್ಟು

ಕಡಲೆಹಿಟ್ಟು

ಕೊಂಚ ಕಡಲೆಹಿಟ್ಟು ಮತ್ತು ಕೊಂಚ ಗುಲಾಬಿ ನೀರನ್ನು ಬೆರೆಸಿ ದಪ್ಪನೆಯ ಲೇಪನ ತಯಾರಿಸಿ. ಈಲೇಪನವನ್ನು ಈಗತಾನೇ ತೊಳೆದುಕೊಂಡ ಮುಖ, ಕುತ್ತಿಗೆಯ ಮೇಲೆ ತೆಳುವಾಗಿ ಹಚ್ಚಿಕೊಂಡು ನಯವಾಗಿ ಉಜ್ಜಿಕೊಳ್ಳಿ. ಈ ಉಜ್ಜುವಿಕೆಯಿಂದ ಚರ್ಮದ ಸತ್ತ ಜೀವಕೋಶಗಳು ಸುಲಭವಾಗಿ ಸಡಿಲಗೊಂಡು ಹೊರಬರುತ್ತವೆ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಕ್ರಮ ಎಣ್ಣೆಚರ್ಮದವರಿಗೆ ಹೆಚ್ಚು ಅನುಕೂಲಕರವಾಗಿದೆ.

ಲಿಂಬೆರಸ

ಲಿಂಬೆರಸ

ಚರ್ಮವನ್ನು ಬಿಳಿಚಿಸುವಲ್ಲಿ ನಿಸರ್ಗ ನೀಡಿದ ಅತ್ಯಂತ ಪ್ರಬಲ ಮಾಧ್ಯಮವೆಂದರೆ ಲಿಂಬೆರಸ. ಇದರಲ್ಲಿರುವ ಸಿಟ್ರಿಕ್ ಆಮ್ಲ ಚರ್ಮದ ವರ್ಣವನ್ನು ಮತ್ತೆ ಸಹಜ ವರ್ಣದತ್ತ ತರಲು ಅತ್ಯುತ್ತಮವಾಗಿದೆ. ಆದರೆ ಈ ರಸ ಪ್ರಬಲವಾಗಿರುವ ಕಾರಣ ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಬಿಸಿಲಿಗೆ ಕಪ್ಪಾಗಿದ್ದ ಭಾಗಗಳಿಗೆ ಹತ್ತಿಯುಂಡೆಯಿಂದ ಹಚ್ಚಿ ಒಣಗಲು ಬಿಡಿ. ಕನಿಷ್ಠ ಹತ್ತು ನಿಮಿಷವಾದರೂ ಒಣಗಲಿ. ಈ ಸಮಯದಲ್ಲಿ ಚರ್ಮ ಕೊಂಚ ಉರಿ ಅನ್ನಿಸಬಹುದು, ಅನ್ನಿಸಬೇಕು ಕೂಡಾ. ಏಕೆಂದರೆ ಉರಿಯಾದರೆ ಲಿಂಬೆರಸ ಚರ್ಮದ ಆಳಕ್ಕೆ ಇಳಿಯುತ್ತಿದೆ ಎನ್ನುವ ಸೂಚನೆಯಾಗಿದ್ದು ಶೀಘ್ರವೇ ಚರ್ಮದ ಬಣ್ಣ ಸಹಜವರ್ಣದತ್ತ ತಿರುಗುತ್ತದೆ.

ಕಾಫಿ ಪುಡಿಯ ಸ್ಕ್ರಬ್‌ ಪ್ರಯತ್ನಿಸಿ ನೋಡಿ...

ಕಾಫಿ ಪುಡಿಯ ಸ್ಕ್ರಬ್‌ ಪ್ರಯತ್ನಿಸಿ ನೋಡಿ...

ಚಳಿಗಾಲದಲ್ಲಿ ಚರ್ಮದ ಹೊರಭಾಗದಲ್ಲಿ ಸಂಗ್ರಹವಾಗಿರುವ ಸತ್ತ ಜೀವಕೋಶಗಳನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಸೋಪು ಹಾಕಿ ಎಷ್ಟು ಉಜ್ಜಿದರೂ ಬಾರದ ಈ ಜೀವಕೋಶಗಳು ಹಳೆಯ ಕಾಫಿಬೀಜದ ಪುಡಿಯನ್ನು ಉಜ್ಜಿಕೊಳ್ಳುವ ಮೂಲಕ ಈ ಜೀವಕೋಶಗಳು ಸುಲಭವಾಗಿ ಹೊರಬರುತ್ತವೆ. ಇದಕ್ಕಾಗಿ ಕಾಫಿಬೀಜಗಳನ್ನು ನುಣ್ಣಗೆ ಪುಡಿಮಾಡಿ ಬಿಸಿ ನೀರಿನಲ್ಲಿ ನೆನೆಸಿ. ಬಿಸಿನೀರಿನ ಸ್ನಾನದ ಬಳಿಕ ಕಾಫಿಯ ಲೇಪನವನ್ನು ಇಡಿಯ ದೇಹಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ನಂತರ ಮೈಯುಜ್ಜುವ ಬ್ರಶ್ ಉಪಯೋಗಿಸಿ ಉಜ್ಜಿಕೊಳ್ಳಿ. ಚರ್ಮದ ಕಾಂತಿ ಹೆಚ್ಚಿರುವುದನ್ನು ನೋಡಿ ದಂಗಾಗುತ್ತೀರಿ

English summary

Effective Home Remedies For Winter Skin Care

During these months, our skin tends to get dry, itchy, and dull due to lack of moisture. We usually look around for good cold creams and body butters to moisturize dry skin. In our search for the best solution, we often overlook things available at our home that can enhance our skin care routine.Here is a list of top home remedies for skin care in winter. Use them, and you will fall in love with your skin all over again!
X
Desktop Bottom Promotion