For Quick Alerts
ALLOW NOTIFICATIONS  
For Daily Alerts

ಸುಟ್ಟ ಚರ್ಮದ ರಕ್ಷಣೆಗೆ 15 ಮನೆ ಪರಿಹಾರಗಳು

By Divya Pandith
|

ದೇಹದ ರಕ್ಷಣೆಗೆ ಸಹಾಯ ಮಾಡುವ ಅತಿದೊಡ್ಡ ಅಂಗ ಚರ್ಮ. ದೇಹಕ್ಕೆ ಅನುಕೂಲವಾಗುವಂತೆ ಅನೇಕ ಕಾರ್ಯಗಳನ್ನು ಇದು ನಿರ್ವಹಿಸುತ್ತದೆ. ಬಾಹ್ಯ ಪರಿಸರದಿಂದ ಉಂಟಾಗುವ ಅಲವು ಬಗೆಯ ಹಾನಿಯನ್ನು ದೇಹದ ಒಳಭಾಗಕ್ಕೆ ಹೋಗದಂತೆ ತಡೆಯುತ್ತದೆ. ಇಂದಿನ ಪರಿಸರ ಮಾಲಿನ್ಯದ ದಟ್ಟಣೆಯಿಂದ ತುಂಬಿಕೊಂಡಿದೆ. ಇದರ ಪರಿಣಾಮವಾಗಿ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಇದರೊಟ್ಟಿಗೆ ಸೂರ್ಯನ ಹಾನಿಕಾರಕ ಕಿರಣಗಳು ನಮ್ಮ ಚರ್ಮದ ಮೇಲೆ ನೇರವಾಗಿ ಬೀಳುತ್ತವೆ.

ಸೂರ್ಯನ ಕಿರಣ, ಮಾಲಿನ್ಯ ಮತ್ತು ಧೂಳಿನ ಕಣಗಳು ಒಟ್ಟಾಗಿ ನಮ್ಮ ತ್ವಚೆಯ ಮೇಲೆ ಪರಿಣಾಮ ಬೀರುತ್ತವೆ. ಸೂಕ್ಷ್ಮ ಮತ್ತು ಮಂದಗತಿಯಲ್ಲಿರುವ ನಮ್ಮ ತ್ವಚೆಯು ಕೆಂಪು ಬಣ್ಣಕ್ಕೆ ತಿರುಗುವುದು ಅಥವಾ ಸುಡುವಂತಹ ಸಂವೇದನೆಯನ್ನು ಅನುಭವಿಸುತ್ತದೆ. ಹೀಗಾದಾಗ ಚರ್ಮದಲ್ಲಿ ಊತ ಉಂಟಾಗುವುದು. ನಿಯಂತ್ರಿತ ದುರ್ಬಲತೆ, ಊತ ಮತ್ತು ನೋವುಗಳು ಕಾಣಿಸಿಕೊಂಡು, ಕಿರಿಕಿರಿಯನ್ನುಂಟು ಮಾಡುತ್ತವೆ. ತ್ವಚೆಯ ಮೇಲೆ ಈ ರೀತಿಯ ಪರಿಣಾಮ ಉಂಟಾಗಲು ಈ ಕಾರಣಗಳು ಹೀಗಿರಬಹುದು...

ಅಲೋವೆರಾ

ಅಲೋವೆರಾ

ಕೆಂಪು ಮತ್ತು ಉರಿಯೂತವನ್ನು ನಿವಾರಿಸಲು ಸಹಾಯ ಮಾಡು ಉತ್ತಮ ಗಿಡಮೂಲಿಕೆ ಎಂದರೆ ಅಲೋವೆರಾ. ಇದು ತ್ವಚೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಸುಲಭವಾಗಿ ಶಮನಗೊಳಿಸುತ್ತದೆ.

ಸಾಮಾಗ್ರಿಗಳು:

ಒಂದು ಟೇಬಲ್ ಚಮಚ ಅಲೋವೆರಾ ಲೋಳೆ.

ವಿಧಾನ:

1. ತಾಜಾ ಅಲೋವೆರಾ ಲೋಳೆಯನ್ನು ತೆಗೆದುಕೊಂಡು ಪೀಡಿತ ಪ್ರದೇಶಕ್ಕೆ ಅನ್ವಯಿಸಿ. ಹಾಗೆಯೇ ಸ್ವಲ್ಪ ಮಸಾಜ್ ಮಾಡಿ.

2. ಸಮಸ್ಯೆ ಪರಿಹಾರ ಕಾಣುವವರೆಗೂ ದಿನಕ್ಕೊಮ್ಮೆ ಈ ಪ್ರಕ್ರಿಯೆಯನ್ನು ಮುಂದುವರಿಸಿ.

ನಿಂಬೆ ರಸ

ನಿಂಬೆ ರಸ

ನಿಂಬೆ ರಸ ಬಹಳ ಪ್ರಯೋಜನಕಾರಿ ನೈಸರ್ಗಿಕ ಉತ್ಪನ್ನ. ಅನೇಕ ರೋಗಲಕ್ಷಣಗಳನ್ನು ಹತ್ತಿಕ್ಕುತ್ತದೆ. ತ್ವಚೆಯ ಮೇಲುಂಟಾಗುವ ಕಲೆ, ಉರಿಯೂತ ಹಾಗೂ ಕಿರಿಕಿರಿಯನ್ನು ಶಮನಗೊಳಿಸುತ್ತದೆ.

ಸಾಮಾಗ್ರಿಗಳು

ಒಂದು ನಿಂಬೆ ಹಣ್ಣು

ಸ್ವಚ್ಛವಾದ ಕರವಸ್ತ್ರ

ವಿಧಾನ

ಸ್ವಚ್ಛವಾದ ಒಂದು ಬೌಲ್‍ನಲ್ಲಿ ಒಂದು ನಿಂಬೆಹಣ್ಣನ್ನು ಹಿಂಡಿ ರಸವನ್ನು ತೆಗೆಯಿರಿ.

ಅದರಲ್ಲಿ ಕರವಸ್ತ್ರವನ್ನು ಅದ್ದಿ, ರಸವನ್ನು ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

ಓಟ್ ಮೀಲ್

ಓಟ್ ಮೀಲ್

ಓಟ್ ಮೀಲ್ ಅತ್ಯುತ್ತಮವಾದ ಮನೆ ಔಷಧಿಯಲ್ಲಿ ಒಂದು. ಇದು ತ್ವಚೆಯ ಮೇಲೆ ಉಂಟಾಗುವ ಶುಷ್ಕತೆ, ನವೆ ಮತ್ತು ತುರಿಕೆಯನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ.

ಸಾಮಾಗ್ರಿಗಳು

ಒಂದು ಕಪ್ ಓಟ್ ಮೀಲ್

2 ಕಪ್ ನೀರು.

ಅರಿಶಿನ

ಅರಿಶಿನ

ಅರಿಶಿನವು ಅದ್ಭುತವಾದ ಆಂಟಿ ಬ್ಯಾಕ್ಟೀರಿಯಲ್ ಮತ್ತು ವಿರೋಧಿ ಉರಿಯೂತವನ್ನು ಒಳಗೊಂಡಿದೆ. ಇದು ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.

ಸಾಮಾಗ್ರಿ

1 ಇಂಚು ಅರಿಶಿನ ಕೊಂಬು/ಬೇರು

1 ಟೇಬಲ್ ಚಮಚ ನೀರು.

ವಿಧಾನ

ಅರಿಶಿನದ ಬೇರನ್ನು ನೀರಲ್ಲಿ ತೇಯ್ದು ಪೇಸ್ಟ್ ಮಾಡಿ, ಇಲ್ಲವಾದರೆ ರುಬ್ಬಿಕೊಂಡು ಪೇಸ್ಟ್ ಮಾಡಿ.

ಅರಿಶಿನದ ಪೇಸ್ಟ್ ಅನ್ನು ಪೀಡಿತ ಪ್ರದೇಶಕ್ಕೆ ಅನ್ವಯಿಸಿ 15 ನಿಮಿಷಗಳ ಕಾಲ ಬಿಡಿ.

ಚಮೋಮೈಲ್ ಟೀ

ಚಮೋಮೈಲ್ ಟೀ

ಈ ಚಹಾವು ಶಿಲೀಂಧ್ರಗಳ ವಿರುದ್ಧ ಹೋರಾಡುತ್ತವೆ.ಇದು ಸೋಂಕಿನ ಉಂಟಾಗುವ ಕಿರಿಕಿರಿಯನ್ನು ತಡೆಯುತ್ತದೆ. ತ್ಚೆಯ ಮೇಲೆ ಉಂಟಾಗುವ ಕೆಂಪು ಬಣ್ಣವನ್ನು ತಗ್ಗಿಸುತ್ತದೆ.

ಸಾಮಾಗ್ರಿ

ಚಮೋಮೈಲ್ ಟೀ ಬ್ಯಾಗ್.

ಒಂದು ಕಪ್ ಬಿಸಿ ನೀರು

ಸ್ವಚ್ಛವಾದ ಒಂದು ಚಿಕ್ಕ ಬಟ್ಟೆ ಚೂರು.

ವಿಧಾನ

ಚಮೋಮೈಲ್ ಟೀ ಬ್ಯಾಗ್ ಅನ್ನು ಬಿಸಿನೀರಿನಲ್ಲಿ ಅದ್ದಿ ಚಹಾ ತಯಾರಿಸಿ. ನಂತರ ತಣಿಯಲು ಬಿಡಿ.

ಸ್ವಚ್ಛವಾದ ಬಟ್ಟೆ ಚೂರನ್ನು ಚಹಾದಲ್ಲಿ ಅದ್ದಿ, ನಂತರ ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ಇದು ತ್ವಚೆಯ ಮೇಲೆ ಉಂಟಾಗುವ ಸುಡುವ ಸಂವೇದನೆ, ತುರಿಕೆ ಹಾಗೂ ಬಣ್ಣ ಬದಲಾವಣೆಗೊಳ್ಳುವುದನ್ನು ನಿವಾರಿಸುತ್ತದೆ.

ಸಾಮಾಗ್ರಿ

ಒಂದು ಟೇಬಲ್ ಚಮಚ ಆಪ್ ಸೈಡರ್ ವಿನೆಗರ್

1 ಕಪ್ ನೀರು

ಸ್ವಚ್ಛವಾದ ಬಟ್ಟೆಯ ತುಂಡು.

ವಿಧಾನ

ವಿನೆಗರ್‍ಅನ್ನು ನೀರಿಗೆ ಸೇರಿಸಿ ಮೃದುಗೊಳಿಸಿ.

ಬಟ್ಟೆ ಚೂರನ್ನು ಅದರಲ್ಲಿ ಅದ್ದಿ, ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

ಲ್ಯಾವೆಂಡರ್ ಎಸೆನ್ಸಿಯಲ್ ಎಣ್ಣೆ

ಲ್ಯಾವೆಂಡರ್ ಎಸೆನ್ಸಿಯಲ್ ಎಣ್ಣೆ

ಲ್ಯಾವೆಂಡರ್ ತಂಪಾಗಿಸುವ ಗುಣಲಕ್ಷಣಗಳನ್ನು ಒಳಗೊಂಡಿದೆ. ತ್ವಚೆಯ ಮೇಲೆ ಉಂಟಾಗುವ ಕಿರಿಕಿರಿಯನ್ನು ಶಮನಗೊಳಿಸುತ್ತದೆ. ಚರ್ಮದ ವಿರೋಧಿ ಗುಣಲಕ್ಷಣಗಳನ್ನು ವೇಗವಾಗಿ ಗುಣಪಡಿಸುತ್ತದೆ.

ಸಾಮಾಗ್ರಿ

ಎರಡು ಹನಿ ಲ್ಯಾವೆಂಡರ್ ಎಣ್ಣೆ

ಒಂದು ಟೇಬಲ್ ಚಮಚ ಆಲಿವ್ ಎಣ್ಣೆ.

ವಿಧಾನ

ಲ್ಯಾವೆಂಡರ್ ಮತ್ತು ಆಲಿವ್ ಎಣ್ಣೆಯನ್ನು ಮಿಶ್ರಗೊಳಿಸಿ.

ಪೀಡಿತ ಪ್ರದೇಶದ ಮೇಲೆ ಅನ್ವಯಿಸಿ, ಮಸಾಜ್ ಮಾಡಿ.

ಕ್ಯಾಲೆಡುಲ್ ಎಸೆನ್ಸಿಯಲ್ ಎಣ್ಣೆ

ಕ್ಯಾಲೆಡುಲ್ ಎಸೆನ್ಸಿಯಲ್ ಎಣ್ಣೆ

ಕ್ಯಾಲೆಡುಲ್ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ತ್ವಚೆಯ ಮೇಲೆ ಉಂಟಾಗುವ ಉರಿಯೂತ ಹಾಗೂ ನೋವನ್ನು ಶಮನಗೊಳಿಸುತ್ತದೆ.

ಸಾಮಾಗ್ರಿ

3-4 ಹನಿ ಎಸೆನ್ಸಿಯಲ್ ಎಣ್ಣೆ

ಒಂದು ಗ್ಲಾಸ್ ನೀರು

ಒಂದು ಸ್ವಚ್ಛವಾದ ಬಟ್ಟೆ.

ವಿಧಾನ:

ಒಂದು ಲೋಹದ ಬಾಣಲಿಯಲ್ಲಿ ಒಂದು ಗ್ಲಾಸ್ ನೀರನ್ನು ಕುದಿಸಿ.

ಅದಕ್ಕೆ ಕ್ಯಾಲೆಡುಲ್ ಎಸೆನ್ಸಿಯಲ್ ಎಣ್ಣೆಯನ್ನು ಸೇರಿಸಿ.

ಒಂದು ಬಟ್ಟೆಯನ್ನು ಅದರಲ್ಲಿ ಅದ್ದಿ, ಪೀಡಿತ ಪ್ರದೇಶಕ್ಕೆ ಅನ್ವಯಿಸಿ. ಸಮಸ್ಯೆ ಪರಿಹಾರವಾಗುವರೆಗೂ ಮುಂದುವರಿಸಿ.

 ಶ್ರೀಗಂಧದ ಪುಡಿ

ಶ್ರೀಗಂಧದ ಪುಡಿ

ಶ್ರೀಗಂಧದ ಪುಡಿ ಬಹಳ ತಂಪಾದ ವಸ್ತು ಎಂದು ಹೇಳಬಹುದು. ಇದನ್ನು ಗುಲಾಬಿ ನೀರಿನೊಂದಿಗೆ ಬೆರೆಸಿ ತ್ವಚೆಗೆ ಅನ್ವಯಿಸಿದರೆ ಅದ್ಭುತ ಪರಿಣಾಮವನ್ನು ಬೀರುತ್ತದೆ. ತ್ವಚೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಸಾಮಾಗ್ರಿ

2 ಟೀ ಚಮಚ ಶ್ರೀಗಂಧದ ಪುಡಿ.

2 ಟೇಬಲ್ ಚಮಚ ಗುಲಾಬಿ ನೀರು.

ವಿಧಾನ

ಎರಡು ಉತ್ಪನ್ನಗಳನ್ನು ಮಿಶ್ರಗೊಳಿಸಿ ಒಂದು ಪೇಸ್ಟ್ ತಯಾರಿಸಿ.

ಇದನ್ನು ಪೀಡಿತ ಪ್ರದೇಶಕ್ಕೆ ಅನ್ವಯಿಸಿ. ಸ್ವಲ್ಪ ಸಮಯ ಆರಲು ಬಿಡಿ.

ನಂತರ ತಣ್ಣೀರಿನಲ್ಲಿ ತೊಳೆಯಿರಿ.

ಹಾಗಲಕಾಯಿ

ಹಾಗಲಕಾಯಿ

ಇದು ರುಚಿಯಲ್ಲಿ ಬಳ ಕಹಿಯಾಗಿ ಇರುತ್ತದೆ. ಇದು ಅನೇಕ ಬಗೆಯ ಔಷಧೀಯ ಗುಣಗಳನ್ನು ಒಳಗೊಂಡಿರುವುದು ವಿಶೇಷ. ಇದು ತುರಿಕೆಯನ್ನನು ನಿವಾರಿಸಿ ತ್ವಚೆಗೆ ತಂಪಾದ ಅನುಭವ ನೀಡುತ್ತದೆ.

ಸಾಮಾಗ್ರಿ

1/2 ಹಾಗಲಕಾಯಿ

ನೀರು

ವಿಧಾನ

ಹಾಗಲಕಾಯಿಯನ್ನು ಹೋಳನ್ನಾಗಿ ಮಾಡಿ ನಿರಿನೊಂದಿಗೆ ಬೇಯಿಸಿ. ಹೋಳು ಚೆನ್ನಾಗಿ ಮೃದುವಾಗಿ ಬೇಯಬೇಕು.

ತಣಿದ ಮೇಲೆ, ಮಿಕ್ಸಿಯಲ್ಲಿ ರುಬ್ಬಿ.

ನಂತರ ತ್ವಚೆಯ ಮೇಲೆ ಅನ್ವಯಿಸಿ 20 ನಿಮಿಷಗಳಕಾಲ ಬಿಡಿ. ನಂತರ ತೊಳೆಯಿರಿ.

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿ ಚಿಕಿತ್ಸೆಯಲ್ಲಿ ಹೆಸರುವಾಸಿಯಾದ ಉತ್ಪನ್ನ. ಇದರ ಪೇಸ್ಟ್‍ಅನ್ನು ಕೆಂಪು ಹಾಗೂ ದದ್ದುಗಳಿಗೆ ಅನ್ವಯಿಸಿದರೆ ಬಹುಬೇಗ ಶಮನ ಹೊಂದುವುದು. ಇದರಲ್ಲಿ ಬ್ಯಾಕ್ಟೀರಿಯಾವನ್ನು ಕೊಲ್ಲುವ ಶಕ್ತಿಯಿದೆ.

ಸಾಮಾಗ್ರಿಗಳು

ಒಂದು ಚಮಚ ದಾಲ್ಚಿನ್ನಿ ಪುಡಿ.

1 ಟೇಬಲ್ ಚಮಚ ನಿಂಬೆ ರಸ.

ವಿಧಾನ

ಎರಡು ಸಾಮಾಗ್ರಿಯನ್ನು ಬೆರೆಸಿ ಮಿಶ್ರಗೊಳಿಸಿ.

ನಂತರ ಪೇಡಿತ ಪ್ರದೇಶಕ್ಕೆ ಅನ್ವಯಿಸಿ, 15 ನಿಮಿಷಗಳ ಕಾಲ ಬಿಡಿ.

ಬಳಿಕ ನೀರಿನಲ್ಲಿ ತೊಳೆಯಿರಿ.

ಟೊಮ್ಯಾಟೋ ಪೇಸ್ಟ್

ಟೊಮ್ಯಾಟೋ ಪೇಸ್ಟ್

ಟೊಮ್ಯಾಟೋದಲ್ಲಿ ಆಕ್ಸಲಿಕ್ ಆಮ್ಲ ಸಮೃದ್ಧವಾಗಿದೆ. ಇದು ಸುಡುವ ಸಂವೇದನೆಯನ್ನು ನಿಯಂತ್ರಿಸುತ್ತದೆ. ಅಲ್ಲದೆ ತ್ವಚೆ ಕೆಂಪಾಗುವುದನ್ನು ತಡೆಯುತ್ತದೆ.

ಸಾಮಾಗ್ರಿಗಳು

ಹಣ್ಣಾದ ಒಂದು ಟೊಮ್ಯಾಟೋ ಹಣ್ಣು.

ವಿಧಾನ

ಟೊಮ್ಯಾಟೋವನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.

ಪೀಡಿತ ಪ್ರದೇಶಕ್ಕೆ ಪೇಸ್ಟ್‍ಅನ್ನು ಅನ್ವಯಿಸಿ.

ಮದರಂಗಿ ಎಲೆ

ಮದರಂಗಿ ಎಲೆ

ಮದರಂಗಿ ಎಲೆಯು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಚರ್ಮದ ಆರೋಗ್ಯವನ್ನು ಕಾಪಾಡುವುದು.

ಸಾಮಾಗ್ರಿ

ಒಂದು ಕಟ್ಟು ಒಣಗಿದ ಮದರಂಗಿ ಎಲೆ.

1 ಟೀ ಚಮಚ ತೆಂಗಿನ ಎಣ್ಣೆ.

ವಿಧಾನ:

ಒಣಗಿದ ಮದರಂಗಿ ಎಲೆಯನ್ನು ರುಬ್ಬಿ ನುಣುಪಾದ ಪುಡಿಯನ್ನಾಗಿ ಮಾಡಿ.

ಸ್ವಲ್ಪ ನೀರಿನೊಂದಿಗೆ ಸೇರಿಸಿ ಪೇಸ್ಟನ್ನಾಗಿ ಮಾಡಿಕೊಳ್ಳಿ.

ಪೀಡಿತ ಪ್ರದೇಶಕ್ಕೆ ತೆಂಗಿನ ಎಣ್ಣೆಯನ್ನು ಅನ್ವಯಿಸಿ. ಬಳಿಕ ಮದರಂಗಿ ಪೇಸ್ಟ್ ಅನ್ವಯಿಸಿ.

15 ನಿಮಿಷಗಳ ಬಳಿಕ ನೀರಿನಿಂದ ತೊಳೆಯಿರಿ.

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ಅನೇಕ ಔಷಧೀಯ ಗುಣವನ್ನು ಒಳಗೊಂಡಿದೆ. ಪವಿತ್ರ ಗಿಡವೆಂದು ಕರೆಯುವ ತುಳಸಿಯು ತ್ವಚೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.

ಸಾಮಾಗ್ರಿಗಳು

ಒಂದು ಕಟ್ಟು ಒಣಗಿದ ತುಳಸಿ ಎಲೆ.

ಸ್ವಲ್ಪ ನೀರು.

ವಿಧಾನ

ಒಣಗಿದ ತುಳಸಿ ಎಲೆಯನ್ನು ಮಿಕ್ಸಿಯಲ್ಲಿ ರುಬ್ಬಿ, ನುಣುಪಾದ ಪುಡಿಮಾಡಿ.

ನಂತರ ಸ್ವಲ್ಪ ನೀರಿನೊಂದಿಗೆ ಪೇಸ್ಟ್ ತಯಾರಿಸಿ. ಇದನ್ನು ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

ನಂತರ ಒಣಗಿದ ನಂತರ ನೀರಿನಿಂದ ತೊಳೆಯಿರಿ.

ಐಸ್ ಕ್ಯೂಬ್

ಐಸ್ ಕ್ಯೂಬ್

ಕೆಂಪು ಮತ್ತು ಉರಿಯೂತ ಚಿಕಿತ್ಸೆಗೆ ಅತ್ಯುತ್ತಮ ಪರಿಹಾರವನ್ನು ನೀಡುತ್ತದೆ. ಅತ್ಯಂತ ಸರಳ ಹಾಘೂ ಪರಿಣಾಮಕಾರಿ ಚಿಕಿತ್ಸೆಯನ್ನು ಐಸ್ ಕ್ಯೂಬ್ ನೀಡುವುದು.

ಸಾಮಾಗ್ರಿಗಳು

ಐಸ್ ಕ್ಯೂಬ್

ಸ್ವಚ್ಛವಾದ ಬಟ್ಟೆ

ವಿಧಾನ

ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಐಸ್ ಕ್ಯೂಬ್‍ಅನ್ನು ಸುತ್ತಿ, ಪೀಡಿತ ಪ್ರದೇಶದ ಮೇಲೆ ಮಸಾಜ್ ಮಾಡಿ. ಐಸ್ ಕರಗುವವರೆಗೂ ಮುಂದುವರಿಸಿ.

ಹೀಗೆ ಮಾಡುವುದರಿಂದ ಉರಿಯೂತ ಹಾಗೂ ನೋವು ಶಮನವಾಗುವುದು.

English summary

Effective Home Remedies For Burning Sensation Of The Skin

Our skin is the largest organ in our body, performing many functions. The most important of it is to protect the inner organs from any damage caused by the elements. The pollution levels are increasing day-by-day and it is causing a lot of health risks for the people around. Due to global warming, temperatures are rising and the harmful rays of the sun do damage our skin. Our skin is very delicate and needs to be protected from the sun. If not, it gets damaged. The sun's rays, pollution and the dust particles all contribute to dull, lifeless and sensitive skin. Sometimes, when the skin just can't take it anymore, it just turns red and you experience a burning sensation.
X
Desktop Bottom Promotion