For Quick Alerts
ALLOW NOTIFICATIONS  
For Daily Alerts

ಕಣ್ಣಿನ ಕೆಳಗಿನ 'ಡಾರ್ಕ್ ಸರ್ಕಲ್' ಮಾಯ ಮಾಡುವ ಮನೆಮದ್ದುಗಳು

ಸುರಕ್ಷಿತವಾದ ಮನೆಮದ್ದುಗಳನ್ನು ಅನುಸರಿಸುವ ಮೂಲಕ ಎರಡೇ ದಿನಗಳಲ್ಲಿ ಈ ಕಪ್ಪುವರ್ತುಲಗಳನ್ನು ಸಾಕಷ್ಟು ಮಟ್ಟಿಗೆ ಕಡಿಮೆಗೊಳಿಸಬಹುದು.....ಅಂತಹ ಫಲಪ್ರದ ಮನೆಮದ್ದನ್ನು ನೀಡಿದ್ದೇವೆ ಮುಂದೆ ಓದಿ...

By Hemanth
|

ಸೌಂದರ್ಯದ ಕಾಳಜಿ ಇರುವವರಿಗೆ ಕಣ್ಣಿನ ಕೆಳಗಡೆ ಮೂಡುವಂತಹ ಕಪ್ಪು ವೃತ್ತವು ತುಂಬಾ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಕಣ್ಣಿನ ಕೆಳಗಡೆ ಕಪ್ಪು ವೃತ್ತವು (ಡಾರ್ಕ್ ಸರ್ಕಲ್) ಮೂಡಿದರೆ ಅದಕ್ಕೆ ಹಾರ್ಮೋನು ಬದಲಾವಣೆ, ನಿದ್ರಾಹೀನತೆ, ಜೀವನಶೈಲಿಯಲ್ಲಿ ತೊಂದರೆ ಹಾಗೂ ಇತರ ಹಲವಾರು ಕಾರಣಗಳು ಇರಬಹುದು. ಇಂತಹ ಕಲೆಗಳನ್ನು ನಿವಾರಿಸಲು ಹಲವಾರು ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಡಾರ್ಕ್ ಸರ್ಕಲ್ ನಿವಾರಣೆಗೆ 14 ಮನೆ ಮದ್ದುಗಳು
ರಾಸಾಯನಿಕಯುಕ್ತ ಕ್ರೀಮ್ ಗಳಿಂದ ಕೆಟ್ಟ ಪರಿಣಾಮಗಳು ನಿಮ್ಮ ಮೇಲಾಗಬಹುದು. ಇಂತಹ ಕಪ್ಪು ಕಲೆಗಳನ್ನು ನಿವಾರಣೆ ಮಾಡಲು ಹಲವಾರು ರೀತಿಯ ನೈಸರ್ಗಿಕ ಮದ್ದುಗಳು ಲಭ್ಯವಿದೆ. ಇದನ್ನು ಬಳಸಿಕೊಂಡರೆ ಕಪ್ಪು ಕಲೆಗಳನ್ನು ನಿವಾರಿಸಬಹುದು. ಇದು ಹೇಗೆಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ....

ಟೊಮೆಟೊ

ಟೊಮೆಟೊ

ಒಂದು ಚಿಕ್ಕಚಮಚ ಟೊಮೆಟೊ ಜ್ಯೂಸ್ ಮತ್ತು ಒಂದು ಚಿಕ್ಕಚಮಚ ಲಿಂಬೆರಸ ಬೆರೆಸಿ ಕಪ್ಪು ವರ್ತುಲಗಳ ಮೇಲೆ ಹಚ್ಚಿಕೊಳ್ಳಿ. ಸುಮಾರು ಹತ್ತು ನಿಮಿಷ ಹಾಗೇ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ದಿನಕ್ಕೆ ಕನಿಷ್ಟ ಎರಡು ಬಾರಿಯಾದರೂ ಪುನರಾವರ್ತಿಸಿ. ಈ ಮಿಶ್ರಣದೊಂದಿಗೆ ಕೊಂಚ ಪುದೀನಾ ಎಲೆಗಳನ್ನು ಅರೆದು ನಿಯಮಿತವಾಗಿ ಹಚ್ಚಿಕೊಳ್ಳುವ ಮೂಲಕವೂ ಕಪ್ಪುವರ್ತುಲಗಳು ಕಡಿಮೆಯಾಗುತ್ತವೆ ಹಾಗೂ ಮುಂದೆ ಬರುವುದರಿಂದ ತಪ್ಪಿಸುತ್ತದೆ.

ಹಸಿ ಆಲೂಗಡ್ಡೆಯ ರಸ

ಹಸಿ ಆಲೂಗಡ್ಡೆಯ ರಸ

ಒಂದು ಹಸಿ ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದು ಇದರಿಂದ ರಸವನ್ನು ಹಿಂಡಿ. ಒಂದು ಹತ್ತಿಯುಂಡೆಯನ್ನು ಈ ರಸದಲ್ಲಿ ಅದ್ದಿ ಕಣ್ಣುಗಳನ್ನು ಮುಚ್ಚಿಕೊಂಡು ಈ ಹತ್ತಿಯುಂಡೆಯನ್ನು ಕಪ್ಪು ವರ್ತುಲ, ಕಣ್ಣಿನ ರೆಪ್ಪೆ, ಹುಬ್ಬುಗಳವರೆಗೆ ವ್ಯಾಪಿಸುವಂತೆ ಇರಿಸಿ. ನಿಮ್ಮ ಕಣ್ಣುಗಳ ವರ್ತುಲಗಳು ಎಷ್ಟು ದೊಡ್ಡದಿರುತ್ತದೆಯೋ ಅದಕ್ಕಿಂತಲೂ ಕೊಂಚ ದೊಡ್ಡದೇ ಇರುವ ಹತ್ತಿಯುಂಡೆಯನ್ನು ತಯಾರಿಸಿಟ್ಟುಕೊಳ್ಳಿ. ಈ ಉಂಡೆಗಳು ಸುಮಾರು ಹತ್ತು ನಿಮಿಷವಾದರೂ ಹಾಗೇ ಇರಲಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ನಿಂದ ಸಮೃದ್ಧವಾಗಿದೆ. ಇದರಿಂದ ಚರ್ಮವು ಹೊಳೆಯುತ್ತದೆ. ಒಂದೇ ವಾರದಲ್ಲಿ ಕಪ್ಪು ಕಲೆಗಳನ್ನು ನಿವಾರಣೆ ಮಾಡಲು ಇದು ತುಂಬಾ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಬಾದಾಮಿ ಎಣ್ಣೆಯಲ್ಲಿ ಕಪ್ಪು ವೃತ್ತಗಳ ಮೇಲೆ ಹಾಕಿಕೊಂಡು ಮಸಾಜ್ ಮಾಡಿ. ರಾತ್ರಿಯಿಡಿ ಹಾಗೆ ಬಿಡಿ ಮರುದಿನ ಬೆಳಿಗ್ಗೆ ತೊಳೆಯಿರಿ.

ಹಾಲು

ಹಾಲು

ನಿಯಮಿತವಾಗಿ ತಣ್ಣಗಿನ ಹಾಲು ಬಳಸುವುದರಿಂದ ಕಪ್ಪು ಕಲೆಗಳು ನಿವಾರಣೆಯಾಗಿ ಕಣ್ಣು ಹಾಗೂ ಚರ್ಮವು ನಯವಾಗುವುದು. ಒಂದು ಹತ್ತಿಯ ಉಂಡೆ ತೆಗೆದುಕೊಂಡು ಅದನ್ನು ತಣ್ಣಗಿನ ಹಾಲು ಅಥವಾ ಮಂಜಿನ ನೀರಿನಲ್ಲಿ ಹಾಕಿ. ಹತ್ತಿ ಉಂಡೆಯನ್ನು ತೆಗೆದು ಕಣ್ಣಿಗೆ ಹಾಗೂ ಭಾದಿತ ಪ್ರದೇಶಕ್ಕೆ ಹಚ್ಚಿ. ಇದನ್ನು ಸ್ವಲ್ಪ ಸಮಯ ಹಾಗೆ ಬಿಡಿ. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ.

ಟೀ ಬ್ಯಾಗ್

ಟೀ ಬ್ಯಾಗ್

ಡಾರ್ಕ್ ಸರ್ಕಲ್ ಹೋಗಲಾಡಿಸಲು ಇದು ಮತ್ತೊಂದು ಪರಿಣಾಮಕಾರಿ ವಿಧಾನ. ಬೆಳಗ್ಗಿನ ಟೀ ಕುಡಿದ ಬಳಿಕ ಟೀ ಬ್ಯಾಗ್ ಅನ್ನು ಉಪಯೋಗಿಸಲು ಅದನ್ನು ಪ್ರಿಡ್ಜ್ ನಲ್ಲಿಡಿ. ನಿಮಗೆ ಸಮಯ ಸಿಕ್ಕಿದಾಗ ಟೀ ಬ್ಯಾಗ್ ಅನ್ನು ಹೊರಗಿಡಿ, ಅದು ಕೋಣೆಯ ತಾಪಮಾನಕ್ಕೆ ಸರಿಹೊಂದಲಿ ಮತ್ತು ಇದರ ಬಳಿಕ ಅದನ್ನು ಕಣ್ಣಿನ ಮೇಲಿಡಿ.

ಪುದೀನಾ ಎಲೆಗಳು

ಪುದೀನಾ ಎಲೆಗಳು

ಸ್ವಲ್ಪ ನೀರು ಹಾಕಿ ಪುದೀನಾ ಎಲೆಗಳನ್ನು ಜಜ್ಜಿಕೊಂಡು ಪೇಸ್ಟ್ ಮಾಡಿ. ಇದನ್ನು ಕಪ್ಪು ಕಲೆಗಳ ಮೇಲೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ಹಾಗೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಒಳ್ಳೆಯ ಫಲಿತಾಂಶಕ್ಕಾಗಿ ಒಂದು ವಾರ ಕಾಲ ಇದನ್ನು ಪ್ರತೀ ರಾತ್ರಿ ಹಚ್ಚಿಕೊಳ್ಳಿ.

ಪುದೀನಾ ಎಲೆಗಳು

ಪುದೀನಾ ಎಲೆಗಳು

ಎಳೆಯ ಸೌತೆಕಾಯಿಯನ್ನು ಅಡ್ಡಲಾಗಿ ಕತ್ತರಿಸಿದಾಗ ಒಸರುವ ರಸದಲ್ಲಿ ಸಂಕೋಚಕ (astringent) ಗುಣವಿದೆ. ಇದು ನಿಮ್ಮ ಚರ್ಮವನ್ನು ಸಂಕುಚಿಸಲು ನೆರವಾಗುತ್ತದೆ. ಈ ರಸವನ್ನು ತೆಗೆಯುವ ಅತ್ಯುತ್ತಮ ವಿಧಾನವೆಂದರೆ ಸೌತೆಯ ತುದಿಯಲ್ಲಿ ಅಡ್ಡಲಾಗಿ ಬಿಲ್ಲೆಯೊಂದನ್ನು ಕತ್ತರಿಸಿ ಕತ್ತರಿಸಿದ ಭಾಗಕ್ಕೇ ಮತ್ತೆ ಅಂಟಿಸಿ ನಯವಾಗಿ ಉಜ್ಜಿ, ಸ್ವಲ್ಪ ಸಮಯದ ಬಳಿಕ ಎರಡೂ ಬದಿಗಳಿಂದ ಚಮಚದಿಂದ ರಸವನ್ನು ಕೆರೆದು ತೆಗೆಯಿರಿ. ಇದೇ ರೀತಿ ನಾಲ್ಕಾರು ಬಿಲ್ಲೆಗಳನ್ನು ಉಜ್ಜುತ್ತಾ ಬಂದರೆ ಒಂದು ಚಮಚದಷ್ಟು ರಸ ಸಂಗ್ರಹವಾಗುತ್ತದೆ. ಈ ರಸವನ್ನು ಮಲಗಿಕೊಂಡು ಕಣ್ಣುಗಳ ವರ್ತುಲಗಳ ಮೇಲೆ ದಪ್ಪನಾಗಿ ಹಚ್ಚಿ. ಸುಮಾರು ಹತ್ತು ಅಥವಾ ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೌತೆಯನ್ನು ಜ್ಯೂಸರಿನಲ್ಲಿ ಕಡೆದು ರಸ ಹಿಂಡಿಯೂ ಬಳಸಬಹುದು, ಆದರೆ ಇದರ ಪರಿಣಾಮ ನಿಧಾನವಾಗಿರುತ್ತದೆ.

English summary

Easy home remedies to get rid of dark circles

There are many who have an extremely sensitive skin and only pure home remedies can help them. We list down some easy and doable home remedies to make your 'how to get rid of dark circles in 2 days....
X
Desktop Bottom Promotion