ಬ್ಯೂಟಿ ಟಿಪ್ಸ್: ಮುಖಕ್ಕೆ ಹುಣಸೆ ಹಣ್ಣಿನ ಪೇಸ್ಟ್ ಹಚ್ಚಿ ನೋಡಿ!

Posted By: Lekhaka
Subscribe to Boldsky

ಸುಂದರವಾಗಿರುವಂತಹ ಮುಖ ಯಾವ ಮಹಿಳೆಗೆ ತಾನೆ ಇಷ್ಟವಿರಲ್ಲ ಹೇಳಿ. ಪ್ರತಿಯೊಬ್ಬ ಮಹಿಳೆ ಕೂಡ ಬಯಸುವುದು ತನ್ನ ಸೌಂದರ್ಯವನ್ನು. ಆದರೆ ಇಂದಿನ ವ್ಯಸ್ತ ಹಾಗೂ ವೇಗದ ಜೀವನದಲ್ಲಿ ಸೌಂದರ್ಯ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಕಠಿಣವಾಗುತ್ತಿದೆ. ಹೊರಗಡೆ ಹೋದರೆ ಧೂಳು, ಕಲ್ಮಶ, ಕೆಟ್ಟ ಆಹಾರ ಇತ್ಯಾದಿಗಳಿಂದಾಗಿ ಚರ್ಮವು ಕೂಡ ತೊಂದರೆಗೆ ಸಿಲುಕುವುದು. ಆದರೆ ನಿಮ್ಮ ನೈಸರ್ಗಿಕ ಸೌಂದರ್ಯ ಮರಳಿ ಪಡೆಯುವುದು ದೊಡ್ಡ ವಿಷಯವೇನಲ್ಲ.

ಇದಕ್ಕೆ ಬೇಕಾಗಿರುವುದು ಯಾವುದೇ ಅಡ್ಡಪರಿಣಾಮ ಬೀರದ ನಿಮ್ಮ ಅಡುಗೆ ಮನೆಯಲ್ಲೇ ಲಭ್ಯವಿರುವಂತಹ ಹುಣಸೆ ಹುಳಿ. ಆಹಾರ ಪದಾರ್ಥಗಳಲ್ಲಿ ಬಳಸುವಂತಹ ಹುಣಸೆ ಹುಳಿಯಲ್ಲಿ ಹಲವಾರು ರೀತಿಯ ಅರೋಗ್ಯ ಲಾಭಗಳು ಇವೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಮೈಕ್ರೋನ್ಯೂಟ್ರಿಯೆಂಟ್ಸ್ ಗಳಿವೆ. ಹುಣಸೆ ಹುಳಿಯಲ್ಲಿರುವ ಆರೋಗ್ಯ ಲಾಭದ ಬಗ್ಗೆ ಹೆಚ್ಚಿನವರಿಗೆ ತಿಳಿದಿರಬಹುದು. ಆದರೆ ಅದರಲ್ಲಿರುವ ಸೌಂದರ್ಯವರ್ಧಕ ಗುಣಗಳು ಯಾವುದು ಎಂದು ಇನ್ನು ಕೂಡ ಹೆಚ್ಚಿನವರಿಗೆ ತಿಳಿದಿಲ್ಲ.

ಆರೋಗ್ಯ ಟಿಪ್ಸ್: ಹುಣಸೆಹುಳಿಯ ರಸ ಮತ್ತು ಬೀಜ, ಎಲ್ಲವೂ ಆರೋಗ್ಯಕರ

ಹುಣಸೆ ಹಣ್ಣಿನಲ್ಲಿ ಅಲ್ಫಾ ಹೈಡ್ರೊಕ್ಸಿ ಆಮ್ಲ ಅಥವಾ ಎಎಚ್ ಎ ಸಮೃದ್ಧವಾಗಿದೆ. ಇದು ಹಲವಾರು ರೀತಿಯ ಹಣ್ಣುಗಳಲ್ಲಿ ಲಭ್ಯವಿದೆ. ಅಲ್ಫಾ ಹೈಡ್ರೊಕ್ಸಿ ಆಮ್ಲವು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಸತ್ತ ಚರ್ಮವನ್ನು ತೆಗೆದುಹಾಕಿ ಹೊಸ, ಸ್ವಚ್ಛ ಮತ್ತು ಕಾಂತಿಯುತ ಚರ್ಮ ನೀಡುವುದು. ಇದರಿಂದಾಗಿ ಹೆಚ್ಚಿನ ಚರ್ಮದ ಲೋಷನ್ ಮತ್ತು ಕ್ರೀಮ್ ಗಳಲ್ಲಿ ಹುಣಸೆ ಹಣ್ಣಿನ ಅಂಶವಿರುವುದು. ನಿಮ್ಮ ಚರ್ಮವು ತುಂಬಾ ನಿಸ್ತೇಜವಾಗಿ ಕಾಣಿಸುತ್ತಿದ್ದರೆ ಮನೆಯಲ್ಲಿ ತಯಾರಿಸುವ ಈ ಮೂರು ಮಾಸ್ಕ್ ಗಳನ್ನು ಬಳಸಿಕೊಳ್ಳಿ.

ಬಳಸುವ ಮೊದಲು ಎಚ್ಚರಿಕೆ: ಹುಣಸೆ ಹುಳಿಯಲ್ಲಿ ಆಮ್ಲೀಯ ಗುಣವು ಹೆಚ್ಚಾಗಿದೆ. ಇದು ಕೆಲವೊಂದು ಸೂಕ್ಷ್ಮ ಚರ್ಮಕ್ಕೆ ಹೊಂದಿಕೊಳ್ಳದೆ ಇರಬಹುದು. ಇದರಿಂದಾಗಿ ನಿಮ್ಮ ಚರ್ಮವು ಸಹಿಸಿಕೊಳ್ಳದೆ ಇದ್ದರೆ ಆಗ ನೀವು ಹುಣಸೆ ಹುಳಿಯ ತಿರುಳನ್ನು ಚರ್ಮಕ್ಕೆ ಹಾಕಬೇಡಿ. ಹುಣಸೆ ಹುಳಿ ಜತೆಗೆ ಕಡಲೆ ಹಿಟ್ಟು ಅಥವಾ ಅಕ್ಕಿ ಹಿಟ್ಟು ಹಾಕಿ ಬಳಸಿ. ಮುಖಕ್ಕೆ ಹಚ್ಚುವ ಮೊದಲು ದೇಹದ ಬೇರೆ ಭಾಗಕ್ಕೆ ಸ್ವಲ್ಪ ಹಚ್ಚಿ ನೋಡಿ. ಉರಿಯುತ್ತಿದ್ದರೆ ತಕ್ಷಣ ತೊಳೆಯಿರಿ.

ವಿಧಾನ

ಹುಣಸೆ ಹಣ್ಣಿನ ತಿರುಳು ತೆಗೆಯುವುದು ತುಂಬಾ ಸುಲಭ. ಉಗುರುಬೆಚ್ಚಗಿನ ನೀರಿನಲ್ಲಿ ಕೆಲವು ಹುಣಸೆ ಹಣ್ಣುಗಳನ್ನು ಹಾಕಿಕೊಂಡು 10-15 ನಿಮಿಷ ಹಾಗೆ ಬಿಡಿ. ನೀರು ಕಂದು ಬಣ್ಣಕ್ಕೆ ತಿರುಗುವುದು ಮತ್ತು ತಿರುಳು ಹಣ್ಣಿನಿಂದ ಬೇರ್ಪಟ್ಟಿರುವುದು. ಕೈಯನ್ನು ಬಳಸಿಕೊಂಡು ತಿರುಳನ್ನು ಹಿಚುಕಿದರೆ ನೀರಿನ ಬಣ್ಣ ಬದಲಾಗುವುದು ಮತ್ತು ದಪ್ಪವಾಗುವುದು. ಇದನ್ನು ಫ್ರಿಡ್ಜ್ ನಲ್ಲಿಟ್ಟು ನಿಮಗೆ ಬೇಕೆಂದಾಗ ಬಳಸಿಕೊಳ್ಳಿ....  

ಕಡಲೆ ಹಿಟ್ಟು ಮತ್ತು ಹುಣಸೆ ಹಣ್ಣಿನ ತಿರುಳು

ಕಡಲೆ ಹಿಟ್ಟು ಮತ್ತು ಹುಣಸೆ ಹಣ್ಣಿನ ತಿರುಳು

ಒಂದುವರೆ ಚಮಚದಷ್ಟು ಕಡಲೆಹಿಟ್ಟನ್ನು ತೆಗೆದುಕೊಂಡು ಅದನ್ನು ಅಷ್ಟೇ ಪ್ರಮಾಣದ ಹುಣಸೆ ಹಣ್ಣಿನ ತಿರುಳಿನ ಜತೆಗೆ ಮಿಶ್ರಣ ಮಾಡಿಕೊಂಡು ದಪ್ಪ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. 15-20 ನಿಮಿಷ ಕಾಲ ಹಾಗೆ ಬಿಟ್ಟು ಒಣಗಲು ಬಿಡಿ. ಎಣ್ಣೆಯಂಶವಿರುವ ಚರ್ಮಕ್ಕೆ ಇದು ತುಂಬಾ ಒಳ್ಳೆಯದು.

ಮುಲ್ತಾನಿ ಮಿಟ್ಟಿ ಮತ್ತು ಹುಣಸೆ ಹಣ್ಣಿನ ತಿರುಳು

ಮುಲ್ತಾನಿ ಮಿಟ್ಟಿ ಮತ್ತು ಹುಣಸೆ ಹಣ್ಣಿನ ತಿರುಳು

ಒಂದುವರೆ ಚಮಚ ಮುಲ್ತಾನಿ ಮಿಟ್ಟಿ ಮತ್ತು ಅಷ್ಟೇ ಪ್ರಮಾಣದ ಹುಣಸೆ ಹಣ್ಣಿನ ತಿರುಳನ್ನು ಬಳಸಿ ಪೇಸ್ಟ್ ಮಾಡಿಕೊಳ್ಳಿ. ಮೊಡವೆ ಮತ್ತು ಕಪ್ಪು ಕಲೆಗಳು ಇರುವ ಭಾಗಕ್ಕೆ ಹಚ್ಚಿಕೊಳ್ಳಿ. ಇದು ಬೇಗನೆ ಒಣಗುವ ಕಾರಣ ಆಗಾಗ ನೀರು ಹಾಕಿ ಒದ್ದೆ ಮಾಡಿ.

ಓಟ್ಸ್ ಮತ್ತು ಹುಣಸೆ ಹಣ್ಣಿನ ತಿರುಳು

ಓಟ್ಸ್ ಮತ್ತು ಹುಣಸೆ ಹಣ್ಣಿನ ತಿರುಳು

ಒಂದು ಚಮಚ ಓಟ್ಸ್ ನ್ನು ನುಣ್ಣಗೆ ಹುಡಿ ಮಾಡಿಕೊಂಡು ಅದನ್ನು ಹುಣಸೆ ಹಣ್ಣಿನ ತಿರುಳಿನೊಂದಿಗೆ ಬೆರೆಸಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಿದ ಬಳಿಕ ತೊಳೆಯಿರಿ. ಹುಣಸೆ ಹಣ್ಣಿನ ತಿರುಳಿಗೆ ನೀವು ಅರಿಶಿನ, ಮೊಸರು ಅಥವಾ ಅಕ್ಕಿಹಿಟ್ಟನ್ನು ಬಳಸಬಹುದು. ಆದರೆ ವಾರದಲ್ಲಿ ಒಂದು ಅಥವಾ ಎರಡು ಸಲ ಮಾತ್ರ ಬಳಸಿ. ನಿಮ್ಮ ಚರ್ಮದಲ್ಲಿ ಉರಿ ಕಾಣಿಸಿಕೊಂಡರೆ ತಕ್ಷಣ ತಣ್ಣೀರಿನಿಂದ ತೊಳೆಯಿರಿ.

ಕೂದಲುದುರುವಿಕೆಯನ್ನು ತಡೆಯಲು

ಕೂದಲುದುರುವಿಕೆಯನ್ನು ತಡೆಯಲು

ಕೂದಲ ಉದುರುವಿಕೆಗೆ ಕೂದಲ ಬುಡ ಶಿಥಿಲವಾಗುವುದೇ ಪ್ರಮುಖ ಕಾರಣ. ಇದನ್ನು ಗಟ್ಟಿಗೊಳಿಸಲು ಹುಣಸೆ ಹುಳಿಯ ತಿರುಳಿನಿಂದ ತಲೆಗೂದಲ ಬುಡವನ್ನು ನಯವಾಗಿ ಮಸಾಜ್ ಮಾಡಿ ಬಳಿಕ ಬಿಸಿನೀರಿನಲ್ಲಿ ಅದ್ದಿರುವ ಸ್ವಚ್ಛ ಟವೆಲ್ ಅಥವಾ ದಪ್ಪನಾದ ಬಣ್ಣೆಯನ್ನು ಸುತ್ತಿ. ಸುಮಾರು ಹದಿನೈದು ನಿಮಿಷಗಳ ಬಳಿಕ ಸೌಮ್ಯ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿರಿ.

ಕುತ್ತಿಗೆಯ ಸುತ್ತ ಕಪ್ಪಗಾಗಿದ್ದರೆ

ಕುತ್ತಿಗೆಯ ಸುತ್ತ ಕಪ್ಪಗಾಗಿದ್ದರೆ

ಕೆಲವರಿಗೆ ಕುತ್ತಿಗೆಯ ಕೆಳಭಾಗ ಮತ್ತು ಭುಜದ ಮೇಲ್ಭಾಗದಲ್ಲಿ ಕೊಂಚ ಕಪ್ಪಗಾಗಿರುತ್ತದೆ. ಇದನ್ನು ನಿವಾರಿಸಲು ಸಮಪ್ರಮಾಣದಲ್ಲಿ ಗುಲಾಬಿ ನೀರು ಮತು ಜೇನುತುಪ್ಪ ಮತ್ತು ಹುಣಸೆಹಣ್ಣು ಕಿವುಚಿದ ತಿರುಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಪ್ಪಗಾಗಿರುವ ಭಾಗದ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಚರ್ಮದ ನೆರಿಗೆ ನಿವಾರಿಸಲು

ಚರ್ಮದ ನೆರಿಗೆ ನಿವಾರಿಸಲು

ಹುಳಿಯಲ್ಲಿರುವ ವಿಟಮಿನ್, ಕರಗದ ನಾರು, ಟಾರ್ಟಾರಿಕ್ ಆಮ್ಲ, ಮತ್ತು ಇತರ ಆಂಟಿ ಆಕ್ಸಿಡೆಂಟುಗಳು ಚರ್ಮಕ್ಕೆ ವಿಶೇಷವಾದ ಆರೈಕೆ ನೀಡುತ್ತದೆ ಹಾಗೂ ವೃದ್ಧಾಪ್ಯದಿಂದ ದೂರವಿರಿಸುತ್ತದೆ.ಇದಕ್ಕಾಗಿ ಸಮಪ್ರಮಾಣದಲ್ಲಿ ಹುಣಸೆಹಣ್ಣು ಕಿವುಚಿದ ತಿರುಳು, ಜೇನುತುಪ್ಪ ಮತ್ತು ಕಡಲೆಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ. ಪ್ರತಿದಿನ ರಾತ್ರಿ ನೆರಿಗೆಗಳಿರುವಲ್ಲಿ ತೆಳುವಾಗಿ ಹಚ್ಚುವ ಮೂಲಕ ನೆರಿಗೆಗಳು ದೂರವಾಗುತ್ತವೆ. ಪರಿಣಾಮವಾಗಿ ವೃದ್ಧಾಪ್ಯವೂ ದೂರವೇ ಉಳಿಯುತ್ತದೆ.

 ಸತ್ತ ಚರ್ಮದ ಜೀವಕೋಶಗಳನ್ನು ನಿವಾರಿಸಲು

ಸತ್ತ ಚರ್ಮದ ಜೀವಕೋಶಗಳನ್ನು ನಿವಾರಿಸಲು

ಸಾಮಾನ್ಯವಾಗಿ ನಿತ್ಯವೂ ನಮ್ಮ ಚರ್ಮದ ಜೀವಕೋಶಗಳು ಸತ್ತು ಆ ಜಾಗದಲ್ಲಿ ಹೊಸ ಜೀವಕೋಶಗಳು ಹುಟ್ಟುತ್ತವೆ. ಇವು ಹೊರಚರ್ಮಕ್ಕೆ ತೆಳುವಾಗಿ ಅಂಟಿಕೊಂಡಿರುತ್ತವೆ. ಆದರೆ ಬೆವರು ಮತ್ತು ಇತರ ಕಾರಣಗಳಿಂದ ಚರ್ಮಕ್ಕೆ ಅಂಟಿಕೊಂಡೇ ಇರುತ್ತದೆ. ಇದನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಆದರೆ ಹುಣಸೆಹುಳಿಯಲ್ಲಿರುವ ಆಲ್ಫಾ-ಹೈಡ್ರಾಕ್ಸಿ-ಆಮ್ಲ ಈ ಪದರವನ್ನು ಸಡಿಲಗೊಳಿಸುವ ಕ್ಷಮತೆ ಹೊಂದಿದೆ. ಇದಕ್ಕಾಗಿ ತಣ್ಣೀರಿನಲ್ಲಿ ನೆನೆಸಿ ಹಿಚುಕಿದ ಕೊಂಚ ಹುಣಸೆ ಹುಳಿ, ಒಂದು ಚಕ್ಕ ಚಮಚ ಮೊಸರು ಮತ್ತು ಒಂದು ಚಮದ ಕಲ್ಲುಪ್ಪು ಸೇರಿಸಿ ಚೆನ್ನಾಗಿ ಕಲಕಿ. ಈ ದ್ರವವನ್ನು ತೆಳುವಾಗಿ ಮುಖದ ಮೇಲೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಕೆಲವು ನಿಮಿಷಗಳ ಬಳಿಕ ಎಲ್ಲಾ ಸತ್ತ ಜೀವಕೋಶಗಳು ಮತ್ತು ಸೂಕ್ಷ್ಮರಂಧ್ರಗಳ ಒಳಗಿದ್ದ ಕೊಳೆ ಸಹಾ ಕರಗಿ ಹೊರಬರುತ್ತದೆ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

English summary

diy-tamarind-face-packs-for-getting-rid-of-dull-skin

Tamarind is rich in alpha hydroxy acids or AHAs, which are naturally-occurring acids present in certain fruits.2 Alpha hydroxy acids are excellent for skin health, mainly because it helps in sloughing off dead cells, revealing clear, bright skin underneath. That’s why many skincare lotions and creams contain tamarind extracts. If your skin has been looking dull lately, you should definitely try brightening it with these three DIY, tried-and-tested tamarind face masks.