ಸೌಂದರ್ಯ ಹೆಚ್ಚಿಸುವ 'ಎಣ್ಣೆಗಳು'-ಇನ್ನು ಕ್ರೀಮ್-ಪೌಡರ್‌ನ್ನು ಪಕ್ಕಕ್ಕಿಡಿ!

By: Arshad
Subscribe to Boldsky

ಭಾರತೀಯ ಸಂಸ್ಕೃತಿಯಲ್ಲಿ ಎಣ್ಣೆಯನ್ನು ಆರೋಗ್ಯವರ್ಧಕ ಹಾಗೂ ಸೌಂದರ್ಯರೂಪಕವಾಗಿ ಸಾವಿರಾರು ವರ್ಷಗಳಿಂದ ಬಳಸಲ್ಪಡುತ್ತಾ ಬರಲಾಗಿದೆ. ಕೆಲವು ಎಣ್ಣೆಗಳು ಅಡುಗೆಗೆ ಮೀಸಲಾದರೆ ಕೆಲವು ಅಡುಗೆಗಿಂತಲೂ ಸೌಂದರ್ಯವರ್ಧಕವಾಗಿಯೇ ಹೆಚ್ಚಾಗಿ ಬಳಕೆಯಾಗುತ್ತದೆ. ವಿಶೇಷವಾಗಿ ಕೊಬ್ಬರಿ ಎಣ್ಣೆಯನ್ನು ಮಹಿಳೆಯರು ಕೇಶವರ್ಧಕವಾಗಿ ಬಳಸುತ್ತಾ ಬಂದಿದ್ದಾರೆ. ಇದರೊಂದಿಗೆ ಬಾದಾಮಿ ಎಣ್ಣೆ, ಆಲಿವ್ ಎಣ್ಣೆಗಳೂ ಉತ್ತಮವಾದ ಕೇಶವರ್ಧಕವಾಗಿವೆ.

ಇವುಗಳ ಬಳಕೆಯಿಂದ ಕೂದಲು ದೃಢವಾಗುವುದು, ಕಾಂತಿಯನ್ನು ಹೆಚ್ಚಿಸಿಕೊಳ್ಳುವುದು ಹಾಗೂ ಸುಲಭವಾಗಿ ತುಂಡಾಗುವುದರಿಂದ ರಕ್ಷಣೆಯನ್ನೂ ಪಡೆಯುತ್ತವೆ. ಕೆಲವು ಎಣ್ಣೆಗಳನ್ನು ದೇಹಕ್ಕೂ ಲೇಪಿಸಿಕೊಳ್ಳುವ ಮೂಲಕ ಸೌಂದರ್ಯವರ್ಧಕವಾಗಿ ಬಳಸಲಾಗುತ್ತದೆ. ಎಣ್ಣೆಯಲ್ಲಿರುವ ಅದ್ಭುತ ತೇವಕಾರಕ ಗುಣ ಎಣ್ಣೆ ಕಳೆದುಕೊಂಡಿದ್ದ ಆರ್ದ್ರತೆಯನ್ನು ಮರುಪೂರೈಸುತ್ತದೆ. ಎಣ್ಣೆಗಳ ಪ್ರಯೋಜನ ಇಷ್ಟು ಮಾತ್ರವಲ್ಲ, ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಣೆ ಒದಗಿಸುವಲ್ಲಿ ಕ್ರೀಮುಗಳಿಗಿಂತಲೂ ಉತ್ತಮವಾದ ಪರಿಣಾಮವನ್ನು ಒದಗಿಸುತ್ತವೆ. ಇವು ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಇಳಿದು ಒಳಚರ್ಮಕ್ಕೂ ತಲುಪುತ್ತದೆ ಹಾಗೂ ಚರ್ಮದ ಎಲ್ಲಾ ಪದರಗಳಲ್ಲಿ ಎಣ್ಣೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

ಮಸಾಜ್ ಗೆ ಯಾವ ಎಣ್ಣೆ ಸೂಕ್ತ ಗೊತ್ತಾ?

ಸಾಮಾನ್ಯವಾದ ಪ್ರಯೋಜನಗಳಿಗೆ ಹೊರತಾಗಿ ಕೆಲವು ಸೌಂದರ್ಯವರ್ಧಕವಾಗಿಯೂ ಎಣ್ಣೆಯ ಬಳಕೆಯಾಗುತ್ತದೆ. ಉದಾಹರಣೆಗೆ ಎಣ್ಣೆಯನ್ನು ಸನ್ ಸ್ಕ್ರೀನ್‪ನಂತೆ ಬಳಸಬಹುದು. ಹೌದು, ಎಣ್ಣೆಯ ಇದೊಂದೇ ಪ್ರಯೋಜನವಲ್ಲ, ಇನ್ನೂ ಹಲವಾರು ಪ್ರಯೋಜನಗಳಿವೆ. ಬನ್ನಿ, ನಮ್ಮ ನಿತ್ಯದ ಅಗತ್ಯಗಳಲ್ಲಿ ಎಣ್ಣೆಯನ್ನು ಹೇಗೆ ವಿವಿಧ ರೂಪದಲ್ಲಿ ಬಳಸಬಹುದು ಎಂಬುದನ್ನು ನೋಡೋಣ...

ಮುಖದ ಸೂಕ್ಷ್ಮರಂಧ್ರಗಳನ್ನು ಸ್ವಚ್ಛಗೊಳಿಸಲು (Facial Cleanser)

ಮುಖದ ಸೂಕ್ಷ್ಮರಂಧ್ರಗಳನ್ನು ಸ್ವಚ್ಛಗೊಳಿಸಲು (Facial Cleanser)

ಎಣ್ಣೆಯನ್ನು ಈ ಕಾರ್ಯಕ್ಕೂ ಬಳಸಬಹುದು ಎಂದು ನಿಮಗೆ ಇದುವರೆಗೆ ಹೊಳೆದಿತ್ತೇ? ಹೌದು, ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಇಳಿಯುವ ಕಾರಣದಿಂದಾಗಿ ಇವು ಅಲ್ಲಿ ಸಿಲುಕಿಕೊಂಡಿದ್ದ ಕೊಳೆಯನ್ನು ನಿವಾರಿಸಲೂ ಸಮರ್ಥವಾಗಿವೆ. ಈ ಕೆಲಸವನ್ನು ದ್ರಾಕ್ಷಿಬೀಜದ ಎಣ್ಣೆ ಅಥವಾ ಹೋಹೋಬಾ ಎಣ್ಣೆ ( jojoba oil) ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತವೆ. ಈ ಎಣ್ಣೆಯ ಕೆಲವು ಹನಿಗಳನ್ನು ಮುಖಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿ ಸ್ವಚ್ಛವಾದ ಹತ್ತಿಯುಂಡೆಯಿಂದ ಒರೆಸಿಕೊಂಡರೆ ತಕ್ಷಣವೇ ಚರ್ಮದಿಂದ ಕಲ್ಮಶಗಳು ನಿವಾರಣೆಯಾಗಿ ಸ್ವಚ್ಛಗೊಳ್ಳುವುದು ಮಾತ್ರವಲ್ಲ, ಅಚ್ಚರಿ ಎಂಬತೆ ಎಣ್ಣೆಪಸೆಯೂ ಉಳಿಯುವುದಿಲ್ಲ.ಈ ವಿಧಾನ ವಿಶೇಷವಾಗಿ ಮೇಕಪ್ ಅನ್ನು ನಿವಾರಿಸುವಲ್ಲಿಯೂ ಉಪಯುಕ್ತವಾಗಿದೆ.

ಸನ್ ಸ್ಕ್ರೀನ್ ರೂಪದಲ್ಲಿ

ಸನ್ ಸ್ಕ್ರೀನ್ ರೂಪದಲ್ಲಿ

ಕ್ಯಾರೆಟ್ ಬೀಜದ ಎಣ್ಣೆ ಅಥವಾ ಸೋಯಾ ಅವರೆಯ ಎಣ್ಣೆ ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಅತ್ಯಂತ ಅಗತ್ಯವಾದ ರಕ್ಷಣೆಯನ್ನು ನೀಡುತ್ತವೆ. ಈ ಎಣ್ಣೆಯನ್ನು ತೆಳುವಾಗಿ ಹಚ್ಚಿಕೊಳ್ಳುವ ಮೂಲಕ ಸೂರ್ಯನ ಅತಿನೇರಳೆ ಕಿರಣಗಳನ್ನು ಚರ್ಮಕ್ಕೆ ಒಡ್ಡುವುದನ್ನು ತಡೆದು ಚರ್ಮ ಕಪ್ಪಗಾಗುವುದನ್ನು ತಡೆಯುತ್ತದೆ.

ಉಗುರಿನ ಆರೈಕೆಗೆ

ಉಗುರಿನ ಆರೈಕೆಗೆ

ಉಗುರಿನ ಹೊಳಪು ಹೆಚ್ಚಿಸಲು ಹಾಗೂ ದೃಢತೆಯನ್ನು ಹೆಚ್ಚಿಸಲು ಆಲಿವ್ ಎಣ್ಣೆ ಉತ್ತಮವಾಗಿದೆ. ನಿತ್ಯದ ಬಳಕೆಯ ಉಗುರಿನ ಬಣ್ಣ ಹಾಗೂ ಈ ಬಣ್ಣವನ್ನು ನಿವಾರಿಸುವ ನೇಲ್ ಪಾಲಿಶ್ ರಿಮೂವರ್ ಗಳಿಂದ ಉಗುರು ಶಿಥಿಲವಾಗುತ್ತದೆ. ಉಗುರುಬೆಚ್ಚನೆಯ ಆಲಿವ್ ಎಣ್ಣೆಯಲ್ಲಿ ಉಗುರುಗಳನ್ನು ಮುಳುಗಿಸಿಟ್ಟುಕೊಳ್ಳುವ ಮೂಲಕ ಉಗುರಿನ ದೃಢತೆಯನ್ನು ಹೆಚ್ಚಿಸಬಹುದು.

ದೇಹದ ಸ್ಕ್ರಬ್ ರೂಪದಲ್ಲಿ

ದೇಹದ ಸ್ಕ್ರಬ್ ರೂಪದಲ್ಲಿ

ಎಣ್ಣೆಯನ್ನು ದೇಹದ ಸ್ಕ್ರಬ್ ರೂಪದಲ್ಲಿ ಹಾಗೂ ತೇವಕಾರಕದ ರೂಪದಲ್ಲಿಯೂ ಬಳಸಬಹುದು. ಆಲಿವ್ ಎಣ್ಣೆ ಹಾಗೂ ಕೊಂಚ ಎಪ್ಸಮ್ ಉಪ್ಪನ್ನು ಅಥವಾ ಓಟ್ಸ್ ರವೆಯನ್ನು ಬೆರೆಸಿ ದೇಹದ ಸ್ಕ್ರಬ್ ರೂಪದಲ್ಲಿ ಬಳಸಬಹುದು. ಇವುಗಳಿಂದ ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ನಿವಾರಿಸಬಹುದು ಹಾಗೂ ತೇವಕಾರಕವಾಗಿಯೂ ಉಪಯುಕ್ತವಾಗಿದೆ.

ಕೂದಲಿಗೆ ಕಂಡೀಶನರ್ ರೂಪದಲ್ಲಿ

ಕೂದಲಿಗೆ ಕಂಡೀಶನರ್ ರೂಪದಲ್ಲಿ

ಸಾಮಾನ್ಯವಾಗಿ ಶಾಂಪೂ ಬಳಸಿದ ಬಳಿಕ ಕೂದಲು ಆರ್ದ್ರತೆಯನ್ನು ಕಳೆದುಕೊಳ್ಳುತ್ತದೆ. ಆದರೆ ಆಲಿವ್ ಹಾಗೂ ಹರಳೆಣ್ಣೆಗಳು ಕೂದಲಿನಿಂದ ಆರ್ದ್ರತೆ ನಷ್ಟಗೊಳ್ಳುವುದನ್ನು ತಡೆಯುತ್ತವೆ. ಒಂದು ದ್ರವವನ್ನು ಸಿಂಪಡಿಸುವ ಬಾಟಲಿಯಲ್ಲಿ ಸಮಪ್ರಮಾಣದ ಆಲಿವ್ ಎಣ್ಣೆ ಹಾಗೂ ಹರಳೆಣ್ಣೆಯನ್ನು ಮಿಶ್ರಣ ಮಾಡಿ ಕೂದಲಿಗೆ ಸಿಂಪಡಿಸಿ ಬಾಚಣಿಗೆಯಿಂದ ಎಲ್ಲೆಡೆ ಹರಡುವಂತೆ ಮಾಡಿ. ಈ ವಿಧಾನದಿಂದ ಕೂದಲಿಗೆ ಹೊಳಪು ಹಾಗೂ ದೃಢತೆ ಸಿಗುವ ಕಾರಣ ಪ್ರತ್ಯೇಕವಾಗಿ ಹೇರ್ ಸೀರಂ ಬಳಸುವ ಅಗತ್ಯವಿಲ್ಲ.

ಸೌಂದರ್ಯ ದ್ವಿಗುಣಗೊಳಿಸುವಲ್ಲಿ ಆಲಿವ್ ಎಣ್ಣೆಯ ಪಾತ್ರ

ತುಟಿಗಳಿಗೆ ಹೊಳಪು ನೀಡಲು

ತುಟಿಗಳಿಗೆ ಹೊಳಪು ನೀಡಲು

ಕೆಲವು ಅವಶ್ಯಕ ಎಣ್ಣೆಗಳಲ್ಲಿ ತುಟಿಗಳಿಗೆ ಹೊಳಪು ನೀಡಲು ಅವಶ್ಯಕ ಎಣ್ಣೆಗಳಾದ ಲ್ಯಾವೆಂಡರ್ ಅಥವಾ ದ್ರಾಕ್ಷಿ ಬೀಜದ ಎಣ್ಣೆ ಉತ್ತಮವಾಗಿದೆ. ನಿಮ್ಮ ನಿತ್ಯದ ಲಿಪ್ ಸ್ಟಿಕ್ ಹಚ್ಚಿಕೊಂಡ ಬಳಿಕ ಈ ಎಣ್ಣೆಯನ್ನು ತೆಳುವಾಗಿ ಹಚ್ಚಿಕೊಳ್ಳುವ ಮೂಲಕ ತುಟಿಗಳಿಗೆ ಅದ್ಭುತವಾದ 'ಮಂಜಿನ ಹನಿ'ಯಂತಹ ಅದ್ಭುತ ಪರಿಣಾಮವನ್ನು ಪಡೆಯಬಹುದು. ನಿಯಮಿತವಾದ ಬಳಕೆಯಿಂದ ತುಟಿಗಳು ನಿಧಾನವಾಗಿ ಮೃದುವಾಗುತ್ತಾ ಹೋಗುತ್ತವೆ. ಅಲ್ಲದೇ ತುಟಿ ಸಹಿತ ದೇಹದ ಇತರ ಸೂಕ್ಷ್ಮ ಅಂಗಗಳಿಗೆ ಹಾನಿಕರವಾದ ಕೃತಕ ರಾಸಾಯನಿಕಗಳ ಬದಲಿಗೆ ನೈಸರ್ಗಿಕ ಎಣ್ಣೆಗಳ ಬಳಕೆಯೇ ಹೆಚ್ಚು ಸುರಕ್ಷಿತವಾಗಿದೆ.

English summary

Different Ways To Use Oil In Beauty Routine

few oils are used for their beauty benefits. Women use oils essentially for their hair. Coconut oil, almond oil and olive oils are known to strengthen our hair, make them thick and resilient to damage. Some oils are used on our body as well. Oils have amazing moisturizing properties that replenish the lost moisture in our skin and hair.
Subscribe Newsletter