ಚಿಂತೆಯಿಲ್ಲದೆ ಈ 'ಫೇಸ್ ಮಾಸ್ಕ್' ಹಚ್ಚಿ, ಖುಷಿ ಖುಷಿಯಾಗಿರಿ!

By: Divya
Subscribe to Boldsky

ತ್ವಚೆಯು ನಮ್ಮ ಸೌಂದರ್ಯಕ್ಕೆ ಕನ್ನಡಿ ಹಿಡಿಯುತ್ತದೆ ಎಂದರೆ ತಪ್ಪಾಗಲಾರದು. ಮುಖದ ಮೇಲಿರುವ ಕಲೆ ಹಾಗೂ ಸುಕ್ಕು ನಮ್ಮ ಆಯಸ್ಸು ಹೆಚ್ಚಾದಂತೆ ತೋರಿಸುತ್ತವೆ. ಸಾಮಾನ್ಯವಾಗಿ 35 ವರ್ಷದ ನಂತರ ಮುಖದ ಚರ್ಮಗಳು ಗಡುಸಾಗಿ, ತೇವಾಂಶ ಕಳೆದುಕೊಳ್ಳುವುದು. ಈ ಬಗೆಯ ಸಮಸ್ಯೆಗೆ ಅನೇಕರು ದುಬಾರಿ ಬೆಲೆಯ ಸೌಂದರ್ಯ ಚಿಕಿತ್ಸೆಗೆ, ವಿಟಮಿನ್ ಮಾತ್ರೆಗಳ ಸೇವನೆಗೆ ಮೊರೆಹೋಗುತ್ತಾರೆ.

ಯಾವುದೇ ಅಡ್ಡ ಪರಿಣಾಮ ಬೀರದ ಕೆಲವು ನೈಸರ್ಗಿಕ ಉತ್ಪನ್ನಗಳ ಬಳಕೆಯಿಂದ ಮುಖದ ಮಾಸ್ಕ್‍ಗಳನ್ನು ತಯಾರಿಸಬಹುದು. ಸುಲಭವಾಗಿ ಸಿಗುವ ಈ ಉತ್ಪನ್ನಗಳ ಗಣನೀಯ ಬಳಕೆಯಿಂದ ತ್ವಚೆಯ ಆರೋಗ್ಯವನ್ನು ಕಾಪಾಡಬಹುದು. ಬೆರಳೆಣಿಕೆಯಷ್ಟು ಮಂದಿಯಲ್ಲಿ ಕೆಲವು ಉತ್ಪನ್ನಗಳು ಅಲರ್ಜಿ ಉಂಟು ಮಾಡಬಹುದು. 

ಮುಖದ ಕಂದು ಕಲೆಗಳನ್ನು ಹೋಗಲಾಡಿಸಬೇಕೆ?

ಅದಕ್ಕಾಗಿ ಮೊದಲು ಮನೆಯಲ್ಲಿ ತಯಾರಿಸಿದ ಮಾಸ್ಕ್ ಮಿಶ್ರಣವನ್ನು ಕೈಮೇಲೆ ಹಚ್ಚಿಕೊಂಡು ಪರೀಕ್ಷಿಸಿಕೊಳ್ಳಬೇಕು. ಯಾವುದೇ ತೊಂದರೆ ಇಲ್ಲ ಎನ್ನುವುದು ಅರಿವಾದ ನಂತರ ಮುಖದ ಮೇಲೆ ಲೇಪಿಸಿಕೊಳ್ಳಬಹುದು. ಈ ಲೇಪನಗಳನ್ನು ಹೇಗೆ ತಯಾರಿಸುವುದು? ಅವುಗಳ ಪರಿಣಾಮ ಮತ್ತು ಉಪಯೋಗಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.... 

ಅನಾನಸ್, ಮೊಟ್ಟೆ ಮತ್ತು ಜೇನುತುಪ್ಪ

ಅನಾನಸ್, ಮೊಟ್ಟೆ ಮತ್ತು ಜೇನುತುಪ್ಪ

ಈ ಮೂರು ಉತ್ಪನ್ನಗಳಲ್ಲಿ ಅಂಟಿಆಕ್ಸಿಡೆಂಟ್ (ಉತ್ಕರ್ಷಣ ನಿರೋಧಕ) ಶಕ್ತಿ ಸಮೃದ್ಧವಾಗಿದೆ. ಇವುಗಳ ಮಿಶ್ರಣದಿಂದ ಮುಖದ ಮಾಸ್ಕ್ ಹಾಕಿಕೊಂಡರೆ ತ್ವಚೆಯ ಮೇಲಿರುವ ಕಪ್ಪು ಕಲೆ, ಸುಕ್ಕುಗಟ್ಟುವುದನ್ನು ತಡೆಯಬಹುದು.

ವಿಧಾನ:

*2-3 ಅನಾನಸ್ ಹೋಳುಗಳನ್ನು ಮೊಟ್ಟೆಯ ಬಿಳಿ ಭಾಗದೊಂದಿಗೆ ರುಬ್ಬಿಕೊಳ್ಳಬೇಕು.

*ನಂತರ ಒಂದು ಚಮಚ ಜೇನುತುಪ್ಪವನ್ನು ಆ ಮಿಶ್ರಣಕ್ಕೆ ಸೇರಿಸಿ. ನಂತರ ಮುಖದ *ಲೇಪನ ಮಾಡಿಕೊಂಡು 15 ನಿಮಿಷ ಬಿಡಬೇಕು.

*ತದನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.

ಅರಿಶಿನ ಪುಡಿ ಮತ್ತು ತೆಂಗಿನ ಎಣ್ಣೆ

ಅರಿಶಿನ ಪುಡಿ ಮತ್ತು ತೆಂಗಿನ ಎಣ್ಣೆ

ಈ ಎರಡು ಉತ್ಪನ್ನವನ್ನು ಸಾಂಪ್ರದಾಯಿಕ ಉತ್ಪನ್ನ ಎಂದು ಕರೆಯುತ್ತಾರೆ. ಇವು ತ್ವಚೆಯ ಸ್ಥಿರತೆಯನ್ನು ಕಾಪಾಡುವುದಲ್ಲದೆ ತ್ವಚೆಯ ಮೇಲಿರುವ ಕಪ್ಪು ಕಲೆಗಳನ್ನು ನಿವಾರಿಸುತ್ತವೆ.

ವಿಧಾನ:

*ಒಂದು ಚಮಚ ತೆಂಗಿನ ಎಣ್ಣೆಗೆ ಅರ್ಧ ಚಮಚ ಅರಿಶಿನ ಪುಡಿಯನ್ನು ಸೇರಿಸಿ, ಒಂದು ಮಿಶ್ರಣವನ್ನು ತಯಾರಿಸಬೇಕು.

*ನಂತರ ಅದನ್ನು ಮುಖಕ್ಕೆ ಲೇಪಿಸಿ 15 ನಿಮಿಷ ಬಿಡಬೇಕು.

*ಬಳಿಕ ತಂಪಾದ ನೀರಿನಲ್ಲಿ ತೊಳೆದರೆ ಒಳ್ಳೆಯ ಪರಿಣಾಮ ಪಡೆಯಬಹುದು.

ತ್ವಚೆಯ ಆರೋಗ್ಯಕ್ಕೆ ಅರಿಶಿನದ ಮೊರೆ ಹೋಗಬೇಕು

ಸೇಬು ಸೈಡರ್ ವಿನೆಗರ್, ಜೇನುತುಪ್ಪ ಮತ್ತು ಈರುಳ್ಳಿಯ ರಸ

ಸೇಬು ಸೈಡರ್ ವಿನೆಗರ್, ಜೇನುತುಪ್ಪ ಮತ್ತು ಈರುಳ್ಳಿಯ ರಸ

ಇವು ಉತ್ತಮ ಆರೋಗ್ಯ ಪೂರ್ಣ ಉತ್ಪನ್ನವಾಗಿದ್ದು, ಇವುಗಳ ಮಿಶ್ರಣದಿಂದ ಕಣ್ಣಿನ ಸುತ್ತಲು ಕಾಣಿಸಿಕೊಳ್ಳುವ ಕಪ್ಪು ಕಲೆ ಹಾಗೂ ಎಲ್ಲಾ ಬಗೆಯ ತ್ವಚೆಯ ಸಮಸ್ಯೆಗಳು ಗುಣಮುಖ ವಾಗುವವು.

ವಿಧಾನ:

*ಒಂದು ಚಮಚ ಜೇನುತುಪ್ಪ ಮತ್ತು ಈರುಳ್ಳಿ ರಸಕ್ಕೆ ಅರ್ಧ ಮಚಚ ಸೇಬು ಸೈಡರ್ ವಿನೆಗರ್‍ಅನ್ನು ಸೇರಿಸಿ ಒಂದು ಮಿಶ್ರಣ ತಯಾರಿಸಬೇಕು.

*ಈ ಮಿಶ್ರಣ ಮುಖದ ಮೇಲೆ 10 ನಿಮಿಷ ಇರುವಂತೆ ಲೇಪಿಸಿಕೊಳ್ಳಬೇಕು. ನಂತರ ತೊಳೆಯಬೇಕು.

*ಹೀಗೆ ಗಣನೀಯವಾಗಿ ಮಾಡಿದರೆ ಉತ್ತಮ ತ್ವಚೆಯನ್ನು ಪಡೆಯಬಹುದು.

ಕಡಲೆ ಹಿಟ್ಟು ಮತ್ತು ಟೊಮೆಟೋ

ಕಡಲೆ ಹಿಟ್ಟು ಮತ್ತು ಟೊಮೆಟೋ

ಇವುಗಳಲ್ಲಿರುವ ಜೀವಸತ್ವಗಳು ತ್ವಚೆಯ ಸ್ಥಿರತೆಯನ್ನು ಕಾಪಾಡಿ ಕಪ್ಪುಕಲೆಯನ್ನು ಹೋಗಲಾಡಿಸುತ್ತವೆ.

ವಿಧಾನ:

*ಒಂದು ಚಮಚ ಕಡಲೆ ಹಿಟ್ಟು ಮತ್ತು ಟೊಮೇಟೋ ರಸವನ್ನು ಸೇರಿಸಿ ಒಂದು ಪೇಸ್ಟ್ ತಯಾರಿಸಿಕೊಳ್ಳಬೇಕು.

*ನಂತರ ಮುಖಕ್ಕೆ ಅನ್ವಯಿಸಿ 20 ನಿಮಿಷ ಬಿಡಬೇಕು. ಕನಿಷ್ಠವೆಂದರೂ ವಾರಕ್ಕೊಮ್ಮೆ ಈ ಮಾಸ್ಕ್ ಧರಿಸಿದರೆ ತ್ವಚೆಯು ಆರೋಗ್ಯ ನೈಸರ್ಗಿಕವಾಗಿ ಕಂಗೊಳಿಸುವುದು.

ಕಡಲೆ ಹಿಟ್ಟು ಬಳಸಿ, ತ್ವಚೆಯ ಕಾಂತಿ ವೃದ್ಧಿಸಿ

ಬಾದಾಮಿ ಎಣ್ಣೆ ಮತ್ತು ಬಾಳೆಹಣ್ಣು

ಬಾದಾಮಿ ಎಣ್ಣೆ ಮತ್ತು ಬಾಳೆಹಣ್ಣು

ಈ ಎರಡು ಉತ್ಪನ್ನಗಳು ತ್ವಚೆಯ ಆಯುಷ್ಯವನ್ನು ಹೆಚ್ಚಿಸುತ್ತದೆ. ಚರ್ಮದ ತೇವಾಂಶವನ್ನು ಕಾಪಾಡಿ ಕಪ್ಪು ಕಲೆಯಿಂದ ದೂರ ಇರುವಂತೆ ಮಾಡುವುದು.

ವಿಧಾನ:

*ಒಂದು ಅಳಿತ ಬಾಳೆಹಣ್ಣಿಗೆ ಒಂದು ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಬೇಕು.

*ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 15 ನಿಮಿಷ ಬಿಡಬೇಕು.

*ಹೀಗೆ ತಿಂಗಳಿಗೆ ಎರಡುಬಾರಿ ಮಾಡಿಕೊಂಡರೆ ತ್ವಚೆಯ ಆರೋಗ್ಯ ವೃದ್ಧಿಸುವುದು.

ಸಕ್ಕರೆ, ಅರಿಶಿನ ಪುಡಿ ಮತ್ತು ನಿಂಬೆ ರಸ

ಸಕ್ಕರೆ, ಅರಿಶಿನ ಪುಡಿ ಮತ್ತು ನಿಂಬೆ ರಸ

ಈ ಮೂರು ಉತ್ಪನ್ನಗಳು ಸಮೃದ್ಧವಾದ ವಿಟಮಿನ್ಸ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಒಳಗೊಂಡಿವೆ. ಇವು ತ್ವಚೆ ಸುಕ್ಕುಗಟ್ಟುವುದು ಮತ್ತು ಕಪ್ಪು ಕಲೆಗಳನ್ನು ನಿವಾರಿಸುವವು.

ವಿಧಾನ:

*ಒಂದು ಚಮಚ ನಿಂಬೆ ರಸ ಮತ್ತು ಅರಿಶಿನ ಪುಡಿಗೆ ಅರ್ಧ ಚಮಚ ಸಕ್ಕರೆ ಪುಡಿಯನ್ನು ಸೇರಿಸಿ, ಮಿಶ್ರಣ ತಯಾರಿಸಬೇಕು.

*ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷದ ಬಳಿಕ ತೊಳೆಯಬೇಕು. ಇದು ಉತ್ತಮ ಪರಿಣಾಮ ನೀಡುವುದು.

ಓಟ್‍ಮೀಲ್, ನಿಂಬೆ ರಸ ಮತ್ತು ಅಲೋವೆರಾ ಜೆಲ್

ಓಟ್‍ಮೀಲ್, ನಿಂಬೆ ರಸ ಮತ್ತು ಅಲೋವೆರಾ ಜೆಲ್

ಇವುಗಳಲ್ಲಿ ವಿಟಮಿನ್ ಮತ್ತು ಉತ್ಕರ್ಷಣ ಗುಣವು ಸಮೃದ್ಧವಾಗಿವೆ. ಇವು ತ್ವಚೆಯ ಮೇಲಿರುವ ಕಪ್ಪುಕಲೆಗಳನ್ನು ಹೋಗಲಾಡಿಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

ವಿಧಾನ:

ಒಂದು ಚಮಚ ಓಟ್‍ಮೀಲ್, ನಿಂಬೆ ರಸ ಮತ್ತು ಅಲೋವೆರಾ ಜೆಲ್ ಸೇರಿಸಿ, ಪೇಸ್ಟ್ ತಯಾರಿಸಬೇಕು. ಈ ಮಿಶ್ರಣವನ್ನು ಎರಡುವಾರಕ್ಕೊಮ್ಮೆ ಅನ್ವಯಿಸುತ್ತಾ ಬರಬೇಕು

ಮೊಟ್ಟೆ ಮತ್ತು ಪೀಚ್ ಹಣ್ಣು

ಮೊಟ್ಟೆ ಮತ್ತು ಪೀಚ್ ಹಣ್ಣು

ಇವೆರಡರಲ್ಲೂ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿವೆ. ಇವು ತ್ವಚೆಯ ಎಲ್ಲಾತರಹದ ಆರೋಗ್ಯವನ್ನು ಕಾಪಾಡುತ್ತವೆ.

ವಿಧಾನ:

*ಪೀಚ್ ಹಣ್ಣಿನ ತಿರುಳಿಗೆ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ, ಒಂದು ಮಿಶ್ರಣ ತಯಾರಿಸಬೇಕು.

*ಮುಖಕ್ಕೆ ಅನ್ವಯಿಸಿ, 20 ನಿಮಿಷಗಳ ಕಾಲ ಬಿಟ್ಟರೆ, ಮುಖವನ್ನು ಸ್ವಚ್ಛಗೊಳಿಸಿ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

ಮೊಟ್ಟೆಯ ಹಳದಿ ಲೋಳೆಯಲ್ಲಿದೆ ಸೌಂದರ್ಯ ರಹಸ್ಯ..!

English summary

Best Homemade Face Masks To Get Rid Of Wrinkles And Dark Spots

These easy-to-make and economical homemade face masks can effectively suppress the outward signs of ageing, such as wrinkles, and help fade away stubborn dark spots that make your skin tone look uneven. Try these homemade face masks and get youthful and healthy-looking skin.
Story first published: Wednesday, May 31, 2017, 8:31 [IST]
Subscribe Newsletter