ಕೇಶ ಕಾಂತಿ ಹಾಗೂ ತ್ವಚೆಯ ಆರೈಕೆಗೆ ಸಹಾಯ ಮಾಡುವುದು ಹೆಸರುಬೇಳೆ

By: Divya Pandith
Subscribe to Boldsky

ಹೆಸರು ಬೇಳೆ ಎಂದ ತಕ್ಷಣ ಮೊದಲು ನೆನಪಾಗುವುದು ರುಚಿಕರವಾದ ವಿವಿಧ ಬಗೆಯ ಆಹಾರ ಪದಾರ್ಥಗಳು. ಅಡುಗೆ ತಯಾರಿಸಲು ಉತ್ತಮ ರುಚಿ ಹಾಗೂ ಪರಿಮಳವನ್ನು ನೀಡುವ ಶಕ್ತಿ ಇರುವುದು ಹೆಸರು ಬೇಳೆಯಲ್ಲಿ. ಮಕ್ಕಳಿಂದ ಹಿಡಿದು ಮುದುಕರ ವರೆಗೂ ಆರೋಗ್ಯ ಪಾಲನೆಗೆ ಸಹಾಯ ಮಾಡುವ ಧಾನ್ಯಗಳಲ್ಲಿ ಹೆಸರು ಬೇಳೆಯೂ ಒಂದು. ಸುಲಭವಾಗಿ ಜೀರ್ಣವಾಗಬಲ್ಲ ಹೆಸರು ಬೇಳೆ ಅನೇಕ ಆರೋಗ್ಯಕರ ಗುಣಗಳನ್ನು ಒಳಗೊಂಡಿದೆ.

ಬಯಸಿ ಪಡೆಯಬಹುದಾದ ಸೌಂದರ್ಯ ಹೆಸರುಬೇಳೆಯಲ್ಲಿದೆ

ಇದರಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ. ಇತರ ಸೌಂದರ್ಯ ವರ್ಧಿಸುವ ಉತ್ಕರ್ಷಣ ನಿರೋಧಕಗಳ ಅಸ್ತಿತ್ವವು ಮೊಡವೆ, ಸೂರ್ಯನ ಕಿರಣಗಳಿಂದ ಉಂಟಾದ ಕಂದು ಬಣ್ಣ, ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಉರಿ ಗುಳ್ಳೆಗಳು ಹಾಗೂ ಇನ್ನಿತರ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೆಸರು ಬೇಳೆಯ ಜೊತೆ ಇನ್ನಿತರ ಘಟಕಾಂಶಗಳನ್ನು ಸೇರಿಸುವುದರ ಮೂಲಕ ಇದರ ಶಕ್ತಿಯನ್ನು ಇನ್ನಷ್ಟು ದ್ವಿಗುಣಗೊಳಿಸಬಹುದು. ಹಾಗಾದರೆ ಇನ್ನೇಕೆ ತಡ? ಚರ್ಮ ಮತ್ತು ತ್ವಚೆಯ ಆರೈಕೆಗೆ ಬಳಸುವ ಉತ್ಪನ್ನಗಳು ನಿಮ್ಮ ಚರ್ಮಕ್ಕೆ ಹೊಂದುವುದೆ ಎನ್ನುವುದನ್ನು ಪರಿಶೀಲಿಸಿ. ಬಳಿಕ ಚರ್ಮ ಮತ್ತು ಕೇಶ ರಾಶಿಯ ಆರೈಕೆಯನ್ನು ಪ್ರಾರಂಭಿಸಿ... 

ಚರ್ಮಕ್ಕಾಗಿ

ಚರ್ಮಕ್ಕಾಗಿ

1. ಮಂಕು ತ್ವಚೆ ತೆಗೆಯುವುದು

ಹೆಸರು ಬೇಳೆ ಚರ್ಮದ ಆಧ್ರ್ರಗೊಳಿಸುವಿಕೆಗೆ ಉತ್ತಮವಾದ ಸಾತ್ ನೀಡುವುದು. ಇದರ ಬಳಕೆಯಿಂದ ತ್ವಚೆಯಲ್ಲಿ ಉಂಟಾಗುವ ಮಂಕುತನವನ್ನು ಸುಲಭವಾಗಿ ನಿವಾರಿಸಬಹುದು.

ಬಳಕೆಯ ವಿಧಾನ

1. ಒಂಟು ಟೀ ಚಮಚ ಆಲಿವ್ ಎಣ್ಣೆಗೆ 1/2 ಟೀ ಚಮಚ ಹೆಸರುಬೇಳೆ ಪುಡಿಯನ್ನು ಸೇರಿಸಿ. ಮಿಶ್ರಣ ತಯಾರಿಸಿ.

2. ನಂತರ ನಿಮ್ಮ ಚರ್ಮದ ಮೇಲೆ ಅನ್ವಯಿಸಿ.

3. 10 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಶುಷ್ಕ ನೀರಿನಿಂದ ಸ್ವಚ್ಛಗೊಳಿಸಿ.

ಈ ವಿಧಾನವನ್ನು ಗಣನೀಯವಾಗಿ ಮಾಡುವುದರಿಂದ ತ್ವಚೆಯು ಸದಾ ಬಿಳುಪಿನಿಂದ ಕೂಡಿರುವುದು.

ಮೊಡವೆ ನಿವಾರಣೆಗೆ

ಮೊಡವೆ ನಿವಾರಣೆಗೆ

ತ್ವಚೆಯ ಮೇಲಿರುವ ಕೊಳಕನ್ನು ತೆಗೆದು, ರಂಧ್ರಗಳನ್ನು ತೆರವುಗೊಳಿಸುತ್ತದೆ. ಜೊತೆಗೆ ಮೊಡವೆಗಳನ್ನು ನಿವಾರಿಸಲು ಸಹಾಯ ಮಾಡುವುದು.

ಮಾಡುವ ವಿಧಾನ:

1. ಅರ್ಧ ಟೀ ಚಮಚ ಹೆಸರುಬೇಳೆ ಪುಡಿ ಮತ್ತು 1 ಟೀ ಚಮಚ ಜೇನುತುಪ್ಪವನ್ನು ಸೇರಿಸಿ ಮಿಶ್ರಗೊಳಿಸಿ.

2. ಮಿಶ್ರಣವನ್ನು ತ್ವಚೆಯ ಮೇಲೆ ಅನ್ವಯಿಸಿ, 5-10 ನಿಮಿಷಗಳ ಕಾಲ ಆರಲು ಬಿಡಿ.

3. ನಂತರ ತಣ್ಣೀರಿನಲ್ಲಿ ತೊಳೆಯಿರಿ.

ಮೊಡವೆಯಿಂದ ಮುಕ್ತಿ ಹೊಂದಲು ಈ ವಿಧಾನವನ್ನು ಬಳಸಬಹುದು.

ಸ್ಕಿನ್ ಟೋನ್ ಹೆಚ್ಚಿಸಲು

ಸ್ಕಿನ್ ಟೋನ್ ಹೆಚ್ಚಿಸಲು

ಹೆಸರು ಬೇಳೆ ತ್ವಚೆಯ ಬಿಳುಪನ್ನು ಹೆಚ್ಚಿಸುವುದು. ತ್ವಚೆಯ ಮೇಲಿರುವ ನಿರುಪಯುಕ್ತ ಜೀವಕೋಶಗಳನ್ನು ತೆಗದು, ಸದಾ ಕಾಂತಿಯಿಂದ ಕೂಡಿರುವಂತೆ ಮಾಡುತ್ತದೆ.

ಮಾಡುವ ವಿಧಾನ

1. ಎರಡು ಟೀ ಚಮಚ ನಿಂಬೆ ರಸಕ್ಕೆ 1 ಟೀ ಚಮಚ ಹೆಸರುಬೇಳೆ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.

2. ಮಿಶ್ರಣವನ್ನು ತ್ವಚೆಯ ಮೇಲೆ ಅನ್ವಯಿಸಿ, 10 ನಿಮಿಷಗಳ ಕಾಲ ಆರಲು ಬಿಡಿ.

3. ನಂತರ ಶುಷ್ಕ ನೀರಿನಲ್ಲಿ ತೊಳೆಯಿರಿ.

ಉತ್ತಮ ಫಲಿತಾಂಶ ಪಡೆಯಲು ವಾರೊಕ್ಕೊಮ್ಮೆ ಈ ವಿಧಾನವನ್ನು ಅನ್ವಯಿಸಿ.

ಚರ್ಮವನ್ನು ಮೃದುಗೊಳಿಸುವುದು

ಚರ್ಮವನ್ನು ಮೃದುಗೊಳಿಸುವುದು

ಹೆಸರು ಬೇಳೆಯಲ್ಲಿ ತ್ವಚೆಯನ್ನು ತೇವಾಂಶದಿಂದ ಕೂಡಿರುವಂತೆ ಮಾಡುವ ಶಕ್ತಿಯನ್ನು ಒಳಗೊಂಡಿದೆ.

ಮಾಡುವ ವಿಧಾನ

1. ನಿಮ್ಮ ನೆಚ್ಚಿನ ಲೋಷನ್ ಜೊತೆಗೆ 1 ಟೀ ಚಮಚ ಹೆಸರು ಬೇಳೆ ಹಿಟ್ಟನ್ನು ಸೇರಿಸಿ ಮಿಶ್ರಗೊಳಿಸಿ.

2. ನಂತರ ಮುಖದ ಮೇಲೆ ಅನ್ವಯಿಸಿ. ಸ್ವಲ್ಪ ಸಮಯ ಆರಲು ಬಿಡಿ.

3. ತಣ್ಣೀರಿನಿಂದ ಸ್ವಚ್ಛಗೊಳಿಸಿ.

ವಾರಕ್ಕೊಮ್ಮೆ ಈ ವಿಧಾನವನ್ನು ಅನ್ವಯಿಸುವುದರಿಂದ ತ್ವಚೆಯನ್ನು ಮೃದು ಹಾಗೂ ಕೋಮಲವಾಗಿರುವಂತೆ ಮಾಡಬಹುದು.

ಸುಟ್ಟ ತ್ವಚೆಗೆ

ಸುಟ್ಟ ತ್ವಚೆಗೆ

ಉತ್ತಮ ಔಷಧೀಯ ಗುಣವನ್ನು ಹೊಂದಿರುವ ಹೆಸರುಬೇಳೆಯನ್ನು ಸೂರ್ಯನ ಕಿರಣದಿಂದ ಸುಟ್ಟ ಕಲೆಯನ್ನು ತೆಗೆಯಲು ಬಳಸಬಹುದು.

ಮಾಡುವ ವಿಧಾನ

1. ಅರ್ಧ ಟೀ ಚಮಚ ಹೆಸರುಬೇಳೆ ಹಿಟ್ಟು ಮತ್ತು 2 ಟೀ ಚಮಚ ಅಲೋವೆರಾ ಜೆಲ್ ಸೇರಿಸಿ, ಮಿಶ್ರಗೊಳಿಸಿ.

2. ನಂತರ ಮುಖದ ಮೇಲೆ ಅನ್ವಯಿಸಿ.

3. 10 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

ಗಣನೀಯವಾಗಿ ಈ ವಿಧಾನವನ್ನು ಅನ್ವಯಿಸುವುದರಿಂದ ಸೂರ್ಯನ ಕಿರಣಗಳಿಂದ ಉಂಟಾದ ಹಾನಿಯನ್ನು ಸರಿಪಡಿಸಬಹುದು.

ದಟ್ಟವಾಗಿ ಬೆಳೆಯಲು

ದಟ್ಟವಾಗಿ ಬೆಳೆಯಲು

ಅಧಿಕ ಪ್ರಮಾಣದ ಪ್ರೋಟಿನ್‍ಗಳನ್ನು ಹೆಸರು ಬೇಳೆ ಹೊಂದಿರುವುದರಿಂದ ಕೇಶರಾಶಿಯ ಉತ್ತಮ ಬೆಳವಣಿಗೆಗೆ ಹಾಗೂ ಕೂದಲ ದೃಢತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಾಡುವ ವಿಧಾನ:

1. 1/2 ಟೀ ಚಮಚ ಹೆಸರುಬೇಳೆ ಹಿಟ್ಟಿಗೆ 2 ಟೀ ಚಮಚ ನೆಲ್ಲಿಕಾಯಿ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

2. ನೆತ್ತಿ ಹಾಗೂ ಕೇಶರಾಶಿಗೆ ಅನ್ವಯಿಸಿ.

3. ಸ್ವಲ್ಪ ಸಮಯದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಸ್ವಚ್ಛಗೊಳಿಸುವುದು

ಸ್ವಚ್ಛಗೊಳಿಸುವುದು

ಹೆಸರುಬೇಳೆಯಲ್ಲಿರುವ ಕೆಲವು ಸಂಯುಕ್ತಗಳು ಧೂಳು ಮತ್ತು ನೆತ್ತಿ ಭಾಗದಲ್ಲಿ ಉಂಟಾಗುವ ಸೋಂಕನ್ನು ನಿವಾರಿಸುತ್ತದೆ.

ಮಾಡುವ ವಿಧಾನ

1. ಒಂದು ಟೀ ಚಮಚ ಹೆಸರುಬೇಳೆ ಪುಡಿಗೆ ಒಂದು ಟೀ ಚಮಚ ಗುಲಾಬಿ ನೀರನ್ನು ಬೆರೆಸಿ ಮಿಶ್ರಗೊಳಿಸಿ.

2. ನಂತರ ಪೀಡಿತ ಪ್ರದೇಶಕ್ಕೆ ಮತ್ತು ನೆತ್ತಿ ಭಾಗದಲ್ಲಿ ಅನ್ವಯಿಸಿ.

3. ಒಂದು ಗಂಟೆಯ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಹೊಟ್ಟು ನಿವಾರಣೆಗೆ

ಹೊಟ್ಟು ನಿವಾರಣೆಗೆ

ಹೆಸರು ಬೇಳೆಯಲ್ಲಿ ಆಂಟಿಬ್ಯಾಕ್ಟೀರಿಯಾಗಳನ್ನು ನಿವಾರಿಸುವಂತಹ ಗುಣಗಳನ್ನು ಒಳಗೊಂಡಿದೆ. ಇದು ತಲೆ ಹೊಟ್ಟು ನಿವಾರಣೆ ಮಾಡುವಲ್ಲಿ ಬಹು ಉಪಕಾರಿಯಾಗಿದೆ.

ಮಾಡುವ ವಿಧಾನ

1. ಅರ್ಧ ಟೀ ಚಮಚ ಹೆಸರು ಬೇಳೆ ಪುಡಿಗೆ 2 ಟೀ ಚಮಚ ಬೇವಿನ ರಸವನ್ನು ಸೇರಿಸಿ.

2. ಮಿಶ್ರಣವನ್ನು ನೆತ್ತಿ ಹಾಗೂ ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

3. 20 ನಿಮಿಷಗಳ ಬಳಿಕ ಬೆಚ್ಚಗಿನ ನೀರು ಮತ್ತು ನೆಚ್ಚಿನ ಶಾಂಪು ಬಳಸಿ ತೊಳೆಯಿರಿ.

ಕೇಶರಾಶಿಯ ಹೊಳಪಿಗಾಗಿ

ಕೇಶರಾಶಿಯ ಹೊಳಪಿಗಾಗಿ

ಮಾಡುವ ವಿಧಾನ

1. 1/2 ಟೀ ಚಮಚ ಹೆಸರು ಬೇಳೆ ಪುಡಿಗೆ 1/2 ಟೀ ಚಮಚ ಆಪಲ್ ಸೈಡರ್ ವಿನೆಗರ್ ಮತ್ತು 2 ಟೀ ಚಮಚ ಗುಲಾಬಿ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

2. ನೆತ್ತಿ ಮತ್ತು ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

3. 30 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

English summary

Benefits Of Moong Dal For Skin And Hair

Moong dal, aka green gram, is enriched with protein, vitamins and antioxidants that can do wondrous things for your skin and hair. That is why, since ages this kitchen staple ingredient has been a part of many people's beauty routine. Presence of vitamins A and C as well as other beauty-enhancing antioxidants in moong dal enable it to treat a plethora of unsightly skin conditions such as acne, sun tan, etc. The similar features make moong dal an incredible ingredient for hair care purposes as well.
Subscribe Newsletter